ಪ್ರಧಾನ ಮಂತ್ರಿಯವರ ಕಛೇರಿ

2 ಕೋಟಿ ಲಕ್ಷಾಧಿಪತಿ ಮಹಿಳೆಯರನ್ನುಸೃಷ್ಟಿಸುವುದು ನಮ್ಮ ಗುರಿಯಾಗಿದೆ; ಡ್ರೋನ್‌ ಹಾರಾಟಕ್ಕೆ (ಡ್ರೋನ್  ಕಿ ಉಡಾನ್‌) ಮಹಿಳಾ ಸ್ವಸಹಾಯ ಗುಂಪುಗಳು ಶಕ್ತಿ ತುಂಬುತ್ತಿವೆ: ಪ್ರಧಾನಮಂತ್ರಿ

Posted On: 15 AUG 2023 12:42PM by PIB Bengaluru

“ಗ್ರಾಮಗಳಲ್ಲಿ ʼ2 ಕೋಟಿ ಲಕ್ಷಾಧಿಪತಿ ಮಹಿಳೆಯರನ್ನು(ಲಖ್‌ ಪತಿ ದೀದಿಯರನ್ನು)ʼ ಸೃಷ್ಟಿಸುವ ಗುರಿಯೊಂದಿಗೆ ಮಹಿಳಾ ಸ್ವಸಹಾಯ ಗುಂಪುಗಳೊಂದಿಗೆ (ಎಸ್.ಎಸ್.ಜಿ) ಕೇಂದ್ರ ಸರ್ಕಾರವು ಕೆಲಸ ಮಾಡುತ್ತಿದೆ” ಎಂದು 77 ನೇ ಸ್ವಾತಂತ್ರ್ಯ ದಿನದದಂದು ದೆಹಲಿಯ ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಇಂದು 10 ಕೋಟಿ ಮಹಿಳೆಯರು ಮಹಿಳಾ ಸ್ವ-ಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಇಂದು ಹಳ್ಳಿಗಳಲ್ಲಿ ಕೂಡಾ ಬ್ಯಾಂಕ್‌ ಗಳಲ್ಲಿ ಮತ್ತು ಅಂಗನವಾಡಿಯಲ್ಲಿ ಮಹಿಳಾ ಸಿಬ್ಬಂದಿಗಳನ್ನು ನಾವು ಕಾಣಬಹುದು ಮತ್ತು ಮಹಿಳೆಯರು ಔಷಧಿಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತಿರುವುದನ್ನೂ ನಾವು ಕಾಣಬಹುದು."

ಕೃಷಿ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಲಹೆ ನೀಡಿದರು. “ಸುಮಾರು 15,000 ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಡ್ರೋನ್ ಕಾರ್ಯಾಚರಣೆ ಮತ್ತು ದುರಸ್ತಿಗಾಗಿ ಸಾಲ ಮತ್ತು ತರಬೇತಿ ನೀಡಲಾಗುತ್ತಿದೆ. ಈ ಮಹಿಳಾ ಸ್ವ-ಸಹಾಯ ಗುಂಪುಗಳು "ಡ್ರೋನ್ ಹಾರಾಟದ (ಡ್ರೋನ್ ಕಿ ಉಡಾನ್)" ಕಾರ್ಯಾಚರಣೆಗಳನ್ನು ನಡೆಸುತ್ತಿವೆ” ಎಂದು ಪ್ರಧಾನಮಂತ್ರಿಯವರು  ಹೇಳಿದರು.  

** **



(Release ID: 1949134) Visitor Counter : 102