ವಾರ್ತಾ ಮತ್ತು ಪ್ರಸಾರ ಸಚಿವಾಲಯ

2023 ರ ಸ್ವಾತಂತ್ರ್ಯ ದಿನಾಚರಣೆಯ ನೇರ ಪ್ರಸಾರಕ್ಕಾಗಿ ಪ್ರಸಾರ ಭಾರತಿ ಸಿದ್ಧವಾಗಿದೆ


ಉತ್ಸವದ ಪ್ರತಿಯೊಂದು ಕೋನವನ್ನು ಒಳಗೊಳ್ಳಲು ಒಟ್ಟು 40 ಮತ್ತು 2 360 ಡಿಗ್ರಿ ಕ್ಯಾಮೆರಾಗಳಲ್ಲಿ 5 ರೊಬೊಟಿಕ್ ಕ್ಯಾಮೆರಾಗಳು

ಆಗಸ್ಟ್ 15 ರಂದು ಬೆಳಿಗ್ಗೆ 6:15 ಕ್ಕೆ ನೇರ ಪ್ರಸಾರ ಪ್ರಾರಂಭವಾಗಲಿದೆ

Posted On: 14 AUG 2023 3:39PM by PIB Bengaluru

77 ನೇ ಸ್ವಾತಂತ್ರ್ಯ ದಿನಾಚರಣೆಯ ಮೊದಲು, ಪ್ರಸಾರ ಭಾರತಿ ಕೆಂಪು ಕೋಟೆಯಿಂದ ಉತ್ಸವಗಳ ನೇರ ಪ್ರಸಾರಕ್ಕಾಗಿ ವಿಸ್ತಾರವಾದ ಪೂರ್ವಭಾವಿ ವ್ಯವಸ್ಥೆಗಳನ್ನು ಮಾಡಿದೆ. ಆಗಸ್ಟ್ 15, 2023 ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ. ಅವರು ರಾಷ್ಟ್ರೀಯ ಧ್ವಜಾರೋಹಣವನ್ನು ಮಾಡಲಿದ್ದಾರೆ ಮತ್ತು ಐತಿಹಾಸಿಕ ಹೆಮ್ಮೆಯ ಸ್ಮಾರಕ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮಾರ್ಚ್ 12, 2021 ರಂದು ಗುಜರಾತ್ ನ ಅಹಮದಾಬಾದ್ ನಲ್ಲಿರುವ ಸಬರಮತಿ ಆಶ್ರಮದಿಂದ ಪ್ರಧಾನಮಂತ್ರಿಯವರು ಪ್ರಾರಂಭಿಸಿದ 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಯನ್ನು ಈ ವರ್ಷದ ಸ್ವಾತಂತ್ರ್ಯ ದಿನವು ಮುಕ್ತಾಯಗೊಳಿಸುತ್ತದೆ ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಶ್ರೀ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು ಹುರುಪು ಉತ್ಸಾಹಗಳೊಂದಿಗೆ ಮತ್ತೊಮ್ಮೆ, ದೇಶವನ್ನು 'ಅಮೃತ್ ಕಾಲ್' ಆಗಿ ನವೀಕರಿಸುವುದರೊಂದಿಗೆ ಪರಿಚಯಿಸಲಾಗುತ್ತದೆ. 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಹಲವಾರು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ.  

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು , ಅಂದರೆ ಆಗಸ್ಟ್ 14 2023 ರಂದು ಸಂಜೆ 7 ಗಂಟೆಗೆ ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಕ್ಕೆ ನೀಡುವ ಸಂದೇಶದ ನೇರ ಪ್ರಸಾರದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ದೂರದರ್ಶನ ಮತ್ತು ಏರ್ ಪ್ರಸಾರ ಪ್ರಾರಂಭವಾಗುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಐತಿಹಾಸಿಕ ಕ್ಷಣಗಳಿಗೆ ಶ್ರೀಮಂತ ಮತ್ತು ವಿಶಾಲ ದೃಷ್ಟಿಕೋನವನ್ನು ನೀಡಲು , ಹಾಗೂ ಈ ಆಗಸ್ಟ್ 15, 2023 ರ ಸ್ವಾತಂತ್ರ್ಯ ದಿನಾಚರಣೆಯ ನೇರ ಪ್ರಸಾರ ಮತ್ತು ವೀಕ್ಷಣೆ ಮಾಡಲು, ದೂರದರ್ಶನವು 40 ಕ್ಕೂ ಹೆಚ್ಚು ಅತ್ಯಾದುನಿಕ ಕ್ಯಾಮೆರಾಳನ್ನು ಅಳವಡಿಸಿದೆ.

ಸಮ್ಮೋಹನಗೊಳಿಸುವ ಚೇತೋಹಾರಿ ಅನುಭವವನ್ನು ನಿಮ್ಮೆದುರು ತರಲು ದೂರದರ್ಶನವು 41 ಕ್ಯಾಮೆರಾಗಳನ್ನು ನಿಯೋಜಿಸಿದೆ. ಈ ಪೈಕಿ 36 ಮಂದಿಯನ್ನು ಕೆಂಪು ಕೋಟೆಯಲ್ಲಿ ಮತ್ತು 5 ಮಂದಿಯನ್ನು ರಾಜ್ಘಾಟ್ ನಲ್ಲಿ ನಿಯೋಜಿಸಲಾಗಿದೆ. ಇದು 5 ರೋಬೋಟಿಕ್ ಮಾನವರಹಿತ ಕ್ಯಾಮೆರಾಗಳನ್ನು ಒಳಗೊಂಡಿದೆ. ಸಂಕೀರ್ಣವಾದ ಸೆಟಪ್ ಹೆಚ್ಚುವರಿಯಾಗಿ ಎರಡು 360-ಡಿಗ್ರಿ ವ್ಯೂ ಕ್ಯಾಮೆರಾಗಳನ್ನು ಹೊಂದಿದೆ. ಈವೆಂಟ್ ಗೆ ಡೈನಾಮಿಕ್ ಕ್ಯಾಮೆರಾ ವೀಕ್ಷಣಾ ಕೋನಗಳನ್ನು ನೀಡಲು ಜಿಮ್ಮಿ ಜಿಬ್ಸ್ನಲ್ಲಿ 4 ಕ್ಯಾಮೆರಾಗಳನ್ನು ಮತ್ತು 1 ಸಿಸರ್ ಕ್ರೇನ್ನಲ್ಲಿ ಅಳವಡಿಸಲಾಗಿದೆ.

ಆಗಸ್ಟ್ 15 ರಂದು ಪ್ರಧಾನಮಂತ್ರಿಯವರ ಭಾಷಣದ ನೇರ ಪ್ರಸಾರಕ್ಕಾಗಿ ಪ್ರಬಲ ಮತ್ತು ಅನುಭವಿ ತಂಡವನ್ನು ನಿಯೋಜಿಸಲಾಗಿದೆ, ನೇರ ಪ್ರಸಾರವು ಬೆಳಿಗ್ಗೆ 6:15 ಕ್ಕೆ ಪ್ರಾರಂಭವಾಗಲಿದೆ. ನಿಯೋಜಿಸಲಾದ ಕ್ಯಾಮರಾ ತಂಡದಲ್ಲಿ ಇಬ್ಬರು ಮಹಿಳಾ ಛಾಯಾಚಿತ್ರಗಾರರು (ಫಿಮೇಲ್ ಕ್ಯಾಮರಾಪರ್ಸನ್) ಇದ್ದಾರೆ. ನೇರ ಪ್ರಸಾರವನ್ನು ದೂರದರ್ಶನದ ಎಲ್ಲಾ ನೆಟ್ವರ್ಕ್ನಾದ್ಯಂತ ಜೊತೆಗೆ, ದೂರದರ್ಶನ ನ್ಯೂಸ್ ನಲ್ಲಿ ಸಂಕೇತ ಭಾಷೆಯ ಅನುವಾದದೊಂದಿಗೆ ಪ್ರಸಾರ ಮಾಡಲಾಗುತ್ತದೆ. ಯ್ಯೂಟ್ಯೂಬ್  ನಲ್ಲಿ ಏಕಕಾಲಿಕ ಲೈವ್ ಸ್ಟ್ರೀಮ್ ಜೊತೆಗೆ ವಿಶೇಷ ಪ್ರಸಾರ (ಕವರೇಜ್) ಕೂಡಾ ಇರುತ್ತದೆ.

ಆಲ್ ಇಂಡಿಯಾ ರೇಡಿಯೋದ ರಾಷ್ಟ್ರೀಯ ಚಾನೆಲ್ ಗಳು 77 ನೇ ಸ್ವಾತಂತ್ರ್ಯ ದಿನಾಚರಣೆಯ ಇಡೀ ಕಾರ್ಯಕ್ರಮಗನ್ನು ಇಂಗ್ಲಿಷ್ ಮತ್ತು ಹಿಂದಿ ಕಾಮೆಂಟರಿಯಲ್ಲಿ ನೇರ ಪ್ರಸಾರ ಮಾಡುತ್ತವೆ. ಆಕಾಶವಾಣಿಯು ದಿನವಿಡೀ ವಿವಿಧ ದೇಶಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿವೆ.

ವಿವಿಧ ರಾಜ್ಯಗಳ ದೂರದರ್ಶನ ಮತ್ತು ಆಕಾಶವಾಣಿಯ ಪ್ರಾದೇಶಿಕ ಕೇಂದ್ರಗಳು ಆಯಾ ರಾಜ್ಯಗಳಲ್ಲಿನ ಸ್ಥಳೀಯ ಸ್ವಾತಂತ್ರ್ಯ ದಿನಾಚರಣೆಯನ್ನು ಕೂಡಾ ಪ್ರಸಾರ ಮಾಡುತ್ತವೆ.

*****



(Release ID: 1948551) Visitor Counter : 130