ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಲಿಂಫಟಿಕ್ (ದುಗ್ಧರಸ) ಫೈಲೇರಿಯಾಸಿಸ್ ಗಾಗಿ ವಾರ್ಷಿಕ ರಾಷ್ಟ್ರವ್ಯಾಪಿ ಸಾಮೂಹಿಕ ಔಷಧ ನಿರ್ವಹಣಾ (ಎಂ.ಡಿ.ಎ) ಉಪಕ್ರಮದ ಎರಡನೇ ಹಂತವನ್ನು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಉದ್ಘಾಟಿಸಿದರು


ಸಂಕಲ್ಪ ಯೋಜನೆ ರೀತಿಯಲ್ಲಿ,  ಬಹು ಪಾಲುದಾರರ, ಬಹು ವಲಯದ ಉದ್ದೇಶಿತ ಅನುಷ್ಠಾನ ಯೋಜನೆ ಮೂಲಕ ಜಾಗತಿಕ ಗುರಿಗಿಂತ ಮೂರು ವರ್ಷಗಳ ಮುಂಚಿತವಾಗಿ, 2027 ರ ವೇಳೆಗೆ ಲಿಂಫಟಿಕ್ (ದುಗ್ಧರಸ) ಫೈಲೇರಿಯಾಸಿಸ್ ಅನ್ನು ನಿರ್ಮೂಲನೆ ಮಾಡಲು ಭಾರತ ಬದ್ಧವಾಗಿದೆ : ಡಾ. ಮನ್ಸುಖ್ ಮಾಂಡವಿಯಾ

"ಜಾಗೃತಿ ಉತ್ಪಾದನೆಯನ್ನು ಸಂಯೋಜಿಸುವುದು ಮತ್ತು ಹಳ್ಳಿಗಳು, ಪಂಚಾಯತುಗಳಲ್ಲಿ ಸಂವಹನ ಅಭಿಯಾನಗಳನ್ನು ಖಚಿತಪಡಿಸಿಕೊಳ್ಳುವುದು, ರಾಷ್ಟ್ರದಾದ್ಯಂತ ವ್ಯಾಪಕವಾಗಿ ತಲುಪಲು ಕಾರಣವಾಗುವ ಚಳುವಳಿಯನ್ನು ಉತ್ತೇಜಿಸುತ್ತದೆ"

"ಜನ ಪಾಲ್ಗೊಳ್ಳುವಿಕೆ( ಭಾಗಿದಾರಿ) ಮತ್ತು 'ಸಂಪೂರ್ಣ ಸರ್ಕಾರ' ಮತ್ತು 'ಇಡೀ ಸಮಾಜ' ವಿಧಾನದ ಮೂಲಕ, ನಾವು ಈ ರೋಗವನ್ನು ದೇಶದಿಂದ ತೊಡೆದುಹಾಕಲು ಸಾಧ್ಯವಾಗುತ್ತದೆ"

Posted On: 10 AUG 2023 2:21PM by PIB Bengaluru

"ಮಿಷನ್ ಮೋಡ್, ಬಹು ಪಾಲುದಾರ, ಬಹು ವಲಯದ ಉದ್ದೇಶಿತ ಯೋಜನೆಯ ಅನುಷ್ಠಾನ ಮೂಲಕ ಜಾಗತಿಕ ಗುರಿಗಿಂತ ಮೂರು ವರ್ಷಗಳ ಮುಂಚಿತವಾಗಿ 2027 ರ ವೇಳೆಗೆ ಲಿಂಫಟಿಕ್ (ದುಗ್ಧರಸ) ಫೈಲೇರಿಯಾಸಿಸ್ ಅನ್ನು ಸಂಪೂರ್ಣವಾಗಿ ತೊಡೆದುಹಾಕಲು ಭಾರತ ಬದ್ಧವಾಗಿದೆ." ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಹೇಳಿದರು. ಇಂದು ನಡೆದ ವಾರ್ಷಿಕ ರಾಷ್ಟ್ರವ್ಯಾಪಿ ಸಾಮೂಹಿಕ ಔಷಧ ನಿರ್ವಹಣಾ (ಎಂ.ಡಿ.ಎ.) ಉಪಕ್ರಮದ ಎರಡನೇ ಹಂತವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಡಾ. ಭಾರತಿ ಪ್ರವೀಣ್ ಪವಾರ್ ಮತ್ತು ಪ್ರೊ. ಎಸ್.ಪಿ. ಸಿಂಗ್ ಭಾಗೇಲ್ ಅವರ ಉಪಸ್ಥಿತಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಉದ್ಘಾಟಿಸಿದರು.  

"ಜನ ಪಾಲುದಾರಿಕೆ (ಭಾಗಿದಾರಿ) ಮತ್ತು 'ಸಂಪೂರ್ಣ ಸರ್ಕಾರ' ಮತ್ತು 'ಸಂಪೂರ್ಣ ಸಮಾಜ' ವಿಧಾನದ ಮೂಲಕ, ಈ ರೋಗವನ್ನು ದೇಶದಿಂದ ತೊಡೆದುಹಾಕಲು ನಮಗೆ ಸಾಧ್ಯವಾಗುತ್ತದೆ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ 9 ತೀವ್ರ ಭಾದಿತ ರಾಜ್ಯಗಳ 81 ಜಿಲ್ಲೆಗಳನ್ನು ಆಗಸ್ಟ್ 10, 2023 ರಂದು ಪ್ರಾರಂಭವಾಗುವ ಎರಡನೇ ಹಂತವು ಒಳಗೊಂಡಿರುತ್ತದೆ. " ಎಂದು ಕೇಂದ್ರ ಸಚಿವರು ಹೇಳಿದರು.  

ಛತ್ತೀಸ್ಗಢದ ಉಪ ಮುಖ್ಯಮಂತ್ರಿ ಶ್ರೀ. ಟಿ.ಎಸ್. ಸಿಂಗ್ ದೇವ್, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಶ್ರೀ ಬ್ರಿಜೇಶ್ ಪಾಠಕ್, ಒಡಿಶಾದ ಆರೋಗ್ಯ ಸಚಿವ ಶ್ರೀ ನಿರಂಜನ್ ಪೂಜಾರಿ, ಅಸ್ಸಾಂ ಆರೋಗ್ಯ ಸಚಿವ ಶ್ರೀ ಕೇಶಬ್ ಮಹಂತ ಮತ್ತು ಜಾರ್ಖಂಡ್ ಆರೋಗ್ಯ ಸಚಿವ ಶ್ರೀ ಬನ್ನಾ ಗುಪ್ತಾ ಅವರು ಈ ವಿಡಿಯೊ ಸಮಾವೇಶ ಮೂಲಕ ನಡೆದ  ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.

                    

"ಪ್ರಯತ್ನಗಳು ಔಷಧಗಳನ್ನು ತೆಗೆದುಕೊಳ್ಳುವುದಕ್ಕೆ ಸೀಮಿತವಾಗಿರಬಾರದು, ಜೊತೆಗೆ, ಸೊಳ್ಳೆಗಳ ಮೂಲಕ ಹರಡುವ ರೋಗಗಳನ್ನು ತೊಡೆದುಹಾಕಲು ಸಹಾಯ ಮಾಡಬೇಕು, ಇಲ್ಲದಿದ್ದರೆ ನಮ್ಮ ಗುರಿಯನ್ನು ಸಾಧಿಸುವ ಪ್ರಗತಿಯ ಹಂತಗಳಲ್ಲಿ ಗಮನಾರ್ಹವಾಗಿ ನಿರ್ಬಂಧಗಳು, ಅಡತಡೆಗಳು ಬರಬಹುದು" ಎಂದು ಕೇಂದ್ರ ಸಚಿವ ಡಾ. ಮಾಂಡವೀಯ ಅವರು ಹೇಳಿದರು.

ಎಲ್ಲರಿಗೂ ಆರೋಗ್ಯ ಮೂಲಕ ಆರೋಗ್ಯಕರ ರಾಷ್ಟ್ರವನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಯೋಜನೆ ಹಾಗೂ ವಿಧಾನಗಳನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಸಭಿಕರಿಗೆ ತಿಳಿಸಿದರು. “ನಿ-ಕ್ಷಯ ಮಿತ್ರ”ದ ಉದಾಹರಣೆಯನ್ನು ಉಲ್ಲೇಖಿಸುತ್ತಾ, ಆರೋಗ್ಯದಲ್ಲಿ ಜನ ಆಂದೋಲನಗಳ ಯಶಸ್ಸನ್ನು ಡಾ. ಮಾಂಡವೀಯ ಅವರು ವಿವರಿಸಿದರು, ಸಾಮೂಹಿಕ ಆಂದೋಲನದ ವ್ಯಾಪಕ ವ್ಯಾಪ್ತಿಯನ್ನು ಒತ್ತಿಹೇಳುತ್ತಾ, "ಸಮುದಾಯ ತೊಡಗಿಸಿಕೊಳ್ಳುವಿಕೆಯು ತಳಮಟ್ಟದಿಂದ ಪ್ರಾರಂಭವಾಗುವ ಎಲ್ಲಾ ಮಧ್ಯಸ್ಥಗಾರರ ಪಾಲ್ಗೊಳ್ಳುವಿಕೆಯಿಂದ ಈ ಕಾರ್ಯಾಚರಣೆಯಲ್ಲಿ ಯಶಸ್ಸನ್ನು ಗಳಿಸುವಲ್ಲಿ ಗಣನೀಯ ಕೊಡುಗೆ ನೀಡುತ್ತದೆ. ಜಾಗೃತಿ ಮೂಡಿಸುವಿಕೆಯನ್ನು ಸಂಯೋಜಿಸುವುದು ಮತ್ತು ಹಳ್ಳಿಗಳು, ಪಂಚಾಯತ್ ಗಳಲ್ಲಿ ಸಂವಹನ ಅಭಿಯಾನಗಳನ್ನು ಖಚಿತಪಡಿಸಿಕೊಳ್ಳುವುದು ರಾಷ್ಟ್ರದಾದ್ಯಂತ ವ್ಯಾಪಕವಾಗಿ ತಲುಪಲು ಕಾರಣವಾಗುತ್ತದೆ, ಹಾಗೂ ಈ ಚಳುವಳಿಯನ್ನು ಉತ್ತೇಜಿಸುತ್ತದೆ. ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು, ಈ ರೋಗವನ್ನು ನಿರ್ಮೂಲನೆ ಮಾಡುವ ಕ್ರಮವಾಗಿ ಆರೋಗ್ಯ ಕಾರ್ಯಕರ್ತರು ಅಥವಾ ವೃತ್ತಿಪರರ ಮುಂದೆ ಔಷಧಿ ಸೇವನೆಗೆ ಹೆಚ್ಚಿನ ಒತ್ತು ನೀಡಬೇಕು " ಎಂದು ಡಾ. ಮಾಂಡವಿಯಾ ಅವರು ಹೇಳಿದರು.

ಡೆಂಗ್ಯೂ ಜ್ವರ 2023 ಮತ್ತು ಚಿಕೂನ್ಗುನ್ಯಾ ಜ್ವರದ ಕ್ಲಿನಿಕಲ್ ನಿರ್ವಹಣೆಗಾಗಿ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಈ ಸಂದರ್ಭದಲ್ಲಿ ಡಾ ಮಾಂಡವಿಯಾ ಅವರಿಂದ  ಬಿಡುಗಡೆ ಮಾಡಲಾಯಿತು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶ್ ಪಂತ್, "ಫೈಲೇರಿಯಾಸಿಸ್ ವಿರುದ್ಧ ಸಾಮೂಹಿಕ ಔಷಧ ಆಡಳಿತ ಅಭಿಯಾನದ ಪ್ರಾರಂಭವು ನಮ್ಮ ರಾಷ್ಟ್ರದ ಆರೋಗ್ಯ ಕಾರ್ಯಸೂಚಿಯಲ್ಲಿ ಪ್ರಮುಖ ಕ್ಷಣವಾಗಿದೆ. ಫೈಲೇರಿಯಾಸಿಸ್ ಅನ್ನು ತೊಡೆದುಹಾಕಲು ನಮ್ಮ ಅನ್ವೇಷಣೆಯಲ್ಲಿ, ಪೀಡಿತ ಸ್ಥಳೀಯ ಜಿಲ್ಲೆಗಳಿಗೆ ಇದು ಅತ್ಯಗತ್ಯ. ನಮ್ಮ ಸಾಮೂಹಿಕ ನಿರ್ಣಯ ಹಾಗೂ ಅಭಿಯಾನಗಳು  ಫೈಲೇರಿಯಾಸಿಸ್ ಅನ್ನು ನಿರ್ಮೂಲನೆ ಮಾಡುವ ಮೂಲಕ ಪೀಡಿತ ಸ್ಥಳೀಯ ಪ್ರದೇಶಗಳಲ್ಲಿ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ.

ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಈ 9 ರಾಜ್ಯಗಳ ಮಿಷನ್ ನಿರ್ದೇಶಕರು ಆಗಿರುವ ಡಾ. ಅತುಲ್ ಗೋಯೆಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಲ್ಯಾಮ್ಚೊಂಘೋಯ್ ಸ್ವೀಟಿ ಚಾಂಗ್ಸನ್, ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ, ಮಿಷನ್ ನಿರ್ದೇಶಕ  ಶ್ರೀ ರಾಜೀವ್ ಮಾಂಝಿ, ಸಂಬಂಧಿತ ಸಚಿವಾಲಯಗಳ ಜಂಟಿ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ತನು ಜೈನ್, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕಿ ಡಾ. ಎಂ. ಇಂದುಮತಿ ಸೇರಿದಂತೆ 9 ರಾಜ್ಯಗಳ ಹಿರಿಯ ಪ್ರಾದೇಶಿಕ ನಿರ್ದೇಶಕರು ಮತ್ತು ಪ್ರಾದೇಶಿಕ ನಿರ್ದೇಶಕರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

****



(Release ID: 1947531) Visitor Counter : 109