ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಬ್ರಿಕ್ಸ್ ಕೈಗಾರಿಕಾ ಸಚಿವರ 7ನೇ ಸಭೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಭಾಗವಹಿಸಿದರು


ಸ್ಟಾರ್ಟ್ಅಪ್ಗಳು, ಹೂಡಿಕೆದಾರರು, ಇನ್ ಕ್ಯುಬೇಟರ್ಗಳು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳ ನಡುವೆ ಸಹಯೋಗ ವ್ಯವಸ್ಥೆಯನ್ನು ಸುಲಭಗೊಳಿಸಲು ಭಾರತವು 2023 ರಲ್ಲಿ ಬ್ರಿಕ್ಸ್ ಸ್ಟಾರ್ಟ್ಅಪ್ ಫೋರಮ್ ಅನ್ನು ಪ್ರಾರಂಭಿಸಲಿದೆ: ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್

ಜವಾಬ್ದಾರಿಯುತ ಜಾಗತಿಕ ಪ್ರಜೆಯಾಗಿ ಭಾರತದ "ವಸುಧೈವ ಕುಟುಂಬಕಂ" ಬದ್ಧತೆಯನ್ನು ಪುನರುಚ್ಚರಿಸಿದ ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್

ಬ್ರಿಕ್ಸ್ ದೇಶಗಳ ನಡುವೆ ಡಿಜಿಟಲೀಕರಣ, ಕೈಗಾರಿಕೀಕರಣ, ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ಹೂಡಿಕೆಯ ಅಗತ್ಯವನ್ನು ಬ್ರಿಕ್ಸ್ ಕೈಗಾರಿಕೆ ಸಚಿವರುಗಳು ಪುನಃ ಒತ್ತಿ ಹೇಳಿದರು

Posted On: 08 AUG 2023 12:19PM by PIB Bengaluru

ದಕ್ಷಿಣ ಆಫ್ರಿಕಾದ ಅಧ್ಯಕ್ಷರು ವಿಡಿಯೊ ಸಮಾವೇಶ ಮೂಲಕ ನಿನ್ನೆ ಆಯೋಜಿಸಿದ “ಬ್ರಿಕ್ಸ್ ಕೈಗಾರಿಕಾ ಸಚಿವರುಗಳ 7 ನೇ ಸಭೆ” ಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಭಾಗವಹಿಸಿದರು. ಸ್ಟಾರ್ಟ್ಅಪ್ಗಳು, ಹೂಡಿಕೆದಾರರು, ಇನ್ಕ್ಯುಬೇಟರ್ಗಳು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳ ನಡುವೆ ಸಹಯೋಗವನ್ನು ಸುಲಭಗೊಳಿಸುವ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಗುರಿಯೊಂದಿಗೆ ಭಾರತವು 2023 ರಲ್ಲಿ ನೂತನ ಬ್ರಿಕ್ಸ್ ಸ್ಟಾರ್ಟ್ಅಪ್ ಫೋರಮ್ ಅನ್ನು ಪ್ರಾರಂಭಿಸಲಿದೆ ಎಂದು ಶ್ರೀ ಗೋಯಲ್ ಅವರು ಈ ಸಂದರ್ಭದಲ್ಲಿ ಘೋಷಿಸಿದರು.

ಭಾರತದಲ್ಲಿ ಆಗಿರುವ ಪರಿವರ್ತನೆಯನ್ನು ವಿವರಿಸುತ್ತಾ, ದೇಶದಲ್ಲಿ ಸುಮಾರು 100,000 ಸ್ಟಾರ್ಟ್ಅಪ್ಗಳ ಸೃಷ್ಟಿಗೆ ಕಾರಣವಾದ ಕೇಂದ್ರ ಸರ್ಕಾರದ ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ವಿಸ್ತರಣೆಯ ಬಗ್ಗೆ ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಮಾಹಿತಿ ನೀಡುತ್ತಾ, "ಉತ್ಪಾದನಾ ವ್ಯವಸ್ಥೆಗಳನ್ನು ಪರಿವರ್ತಿಸುವುದು" ಮತ್ತು ಇತರ ಬ್ರಿಕ್ಸ್ ಸದಸ್ಯರಿಗೆ ಮತ್ತು ವ್ಯಾಪಕ ಅಂತಾರಾಷ್ಟ್ರೀಯ ಸಮುದಾಯಕ್ಕೆ “ಭಾರತ ನೀಡಬಹುದಾದ ಬೆಂಬಲ”ದ ಮೇಲೆ ತನ್ನ ಭಾಷಣದ ವಿಷಯವನ್ನು ಕೇಂದ್ರೀಕರಿಸಿದರು. 

ಹೆಚ್ಚು ಒಳಗೊಳ್ಳುವ, ಸಹಿಷ್ಣು ಮತ್ತು ಅಂತರ್ಸಂಪರ್ಕಿತ ಜಗತ್ತಿಗೆ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಒತ್ತಿಹೇಳುವ "ವಸುಧೈವ ಕುಟುಂಬಕಂ" ('ಇಡೀ ಜಗತ್ತೇ ಒಂದು ಕುಟುಂಬ') ಎಂಬ ಸಂಕಲ್ಪವಾಕ್ಯವನ್ನು ಜವಾಬ್ದಾರಿಯುತ ಜಾಗತಿಕ ಪ್ರಜೆಯಾಗಿ, ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

ಇತರ ಬ್ರಿಕ್ಸ್ ದೇಶಗಳ (ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಎಲ್ಲಾ ಕೈಗಾರಿಕಾ ಸಚಿವರುಗಳೂ ಈ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಸಭೆಯಲ್ಲಿ ಜಂಟಿ ಘೋಷಣೆಯನ್ನು ಅಂಗೀಕರಿಸಲಾಯಿತು.

ಬ್ರಿಕ್ಸ್ ದೇಶಗಳ ನಡುವೆ ಡಿಜಿಟಲೀಕರಣ, ಕೈಗಾರಿಕೀಕರಣ, ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ಹೂಡಿಕೆಯ ಅಗತ್ಯದ ಬಗ್ಗೆ ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಮತ್ತೊಮ್ಮೆ ಒತ್ತು ನೀಡಿದರು. ಎಲ್ಲಾ ಆರ್ಥಿಕ ವಲಯಗಳ ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವಲ್ಲಿ ಉದ್ಯಮ 4.0 ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಭಾರತವು ಗುರುತಿಸಿದೆ. ನೂತನ ಘೋಷಣೆಯ ಮೂಲಕ, ಬ್ರಿಕ್ಸ್ ಸದಸ್ಯರು ಮಾನವ ಸಂಪನ್ಮೂಲ ಅಭಿವೃದ್ಧಿಯ ಅಗತ್ಯವನ್ನು ಒಪ್ಪಿಕೊಂಡರು ಮತ್ತು ಕೌಶಲ್ಯ ಮತ್ತು ಮರುಕಳಿಸುವ ಕಾರ್ಯಕ್ರಮಗಳಲ್ಲಿ ಸಹಕಾರಕ್ಕಾಗಿ ಅವಕಾಶಗಳನ್ನು ಅನ್ವೇಷಿಸಿದರು. 

ಮುಕ್ತ, ನ್ಯಾಯೋಚಿತ, ವೈವಿಧ್ಯಮಯ, ಸ್ಥಿತಿಸ್ಥಾಪಕ ಮತ್ತು ತಾರತಮ್ಯರಹಿತ ವಾತಾವರಣವನ್ನು ಜಂಟಿಯಾಗಿ ರಚಿಸುವ ಮೂಲಕ ಕೈಗಾರಿಕಾ ಸಹಕಾರವನ್ನು ಗಾಢವಾಗಿಸಲು ಮತ್ತು ಕೈಗಾರಿಕಾ ಆರ್ಥಿಕತೆಯ ಚೇತರಿಕೆ ಮತ್ತು ಬೆಳವಣಿಗೆಯನ್ನು ತ್ವರಿತಗೊಳಿಸಲು ಬ್ರಿಕ್ಸ್ ದೇಶಗಳ ಸಚಿವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ.ಎಸ್.ಎಂ.ಇ.) ಪ್ರಮುಖ ಪಾತ್ರವನ್ನು ಮತ್ತು ಜಾಗತಿಕ ಕೈಗಾರಿಕಾ ವ್ಯವಸ್ಥೆ(ಸರಪಳಿ)ಗಳು, ಪೂರೈಕೆ ಸರಪಳಿಗಳು ಮತ್ತು ಮೌಲ್ಯ ಸರಪಳಿಗಳಲ್ಲಿ, ಅವುಗಳ ಏಕೀಕರಣ ಮತ್ತು ವೈವಿಧ್ಯತೆಯ ಪ್ರಾಮುಖ್ಯತೆಯನ್ನು ವಿವರಿಸಿದರು, ಹಾಗೂ ಮಹಿಳೆಯರು, ಯುವಕರು ಮತ್ತು ಅನನುಕೂಲಕರ ಗುಂಪುಗಳ ಒಡೆತನದ /ನಿರ್ವಹಣೆಯಲ್ಲಿರುವ ಹಲವಾರು ಯೋಜನೆಗಳ ಸಮಗ್ರ ಬೆಳವಣಿಗೆಗಾಗಿ ಬ್ರಿಕ್ಸ್ ದೇಶಗಳಲ್ಲಿ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವನ್ನು ಕೇಂದ್ರ ಸಚಿವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

  *** ***


(Release ID: 1946698) Visitor Counter : 138