ಸಹಕಾರ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಆಗಸ್ಟ್ 6ರಂದು, ಭಾನುವಾರ ಪುಣೆಯಲ್ಲಿ ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಛೇರಿಯ (ಸಿಆರ್ ಸಿಎಸ್) ಡಿಜಿಟಲ್ ಪೋರ್ಟಲ್ ಅನ್ನು ಉದ್ಘಾಟಿಸಲಿದ್ದಾರೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಹಕಾರದಿಂದ ಸಮೃದ್ಧಿ" ಎಂಬ ದೃಷ್ಟಿಕೋನದಲ್ಲಿ ದೃಢವಾದ ನಂಬಿಕೆಯುಳ್ಳ ಸಹಕಾರ ಸಚಿವಾಲಯವು ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.

ಈ ನಿಟ್ಟಿನಲ್ಲಿ, ಸಹಕಾರಿ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸುವ ಸಲುವಾಗಿ ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಛೇರಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ.

ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಛೇರಿಯ ಗಣಕೀಕರಣದ ಮುಖ್ಯ ಉದ್ದೇಶಗಳೆಂದರೆ ಸಂಪೂರ್ಣವಾಗಿ ಕಾಗದರಹಿತ ಅರ್ಜಿ, ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ (ಎಂಎಸ್ ಸಿಎಸ್ ಕಾಯ್ದೆ) ಮತ್ತು ನಿಯಮಗಳ ಸ್ವಯಂಚಾಲಿತ ಅನುಸರಣೆ, ವ್ಯವಹಾರ ಸುಲಭಗೊಳಿಸುವಿಕೆ, ಡಿಜಿಟಲ್ ಸಂವಹನ ಮತ್ತು ಪಾರದರ್ಶಕ ಪ್ರಕ್ರಿಯೆ

ಈ ಗಣಕೀಕರಣ ಯೋಜನೆಯು ಹೊಸ ಬಹು ರಾಜ್ಯ ಸಹಕಾರಿ ಸಂಘ ಕಾಯ್ದೆಗಳ ನೋಂದಣಿಗೆ ಸಹಾಯಕವಾಗಿದ್ದು, ಅವುಗಳ ಕಾರ್ಯನಿರ್ವಹಣೆಯನ್ನು ಸುಲಭಗೊಳಿಸುತ್ತದೆ.

Posted On: 05 AUG 2023 12:26PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಆಗಸ್ಟ್ 6ರ ಭಾನುವಾರದಂದು ಪುಣೆಯಲ್ಲಿ ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯ ಡಿಜಿಟಲ್ ಪೋರ್ಟಲ್ ಅನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಹಕಾರದಿಂದ ಸಮೃದ್ಧಿ" ಎಂಬ ದೃಷ್ಟಿಕೋನದಲ್ಲಿ ದೃಢವಾದ ನಂಬಿಕೆಯನ್ನಿಟ್ಟು ಸಹಕಾರ ಸಚಿವಾಲಯವು ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ, ಸಹಕಾರಿ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಕೇಂದ್ರ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಕಚೇರಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ.

ಕೇಂದ್ರ ರಿಜಿಸ್ಟ್ರಾರ್ ಕಚೇರಿಯ ಗಣಕೀಕರಣದ ಮುಖ್ಯ ಉದ್ದೇಶಗಳು ಹೀಗಿವೆ:

i. ಸಂಪೂರ್ಣವಾಗಿ ಕಾಗದರಹಿತ ಅರ್ಜಿ ಮತ್ತು ಪ್ರಕ್ರಿಯೆ
ii. ಸಾಫ್ಟ್ ವೇರ್ ಮೂಲಕ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ಸ್ವಯಂಚಾಲಿತ ಪಾಲನೆ
iii. ಸುಗಮ ವಾಣಿಜ್ಯ ನಿರ್ವಹಣೆಯ ಹೆಚ್ಚಳ
iv. ಡಿಜಿಟಲ್ ಸಂವಹನ
v. ಪಾರದರ್ಶಕ ಪ್ರಕ್ರಿಯೆ
vi. ಸುಧಾರಿತ ವಿಶ್ಲೇಷಣೆ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಗಳು (ಎಂಐಎಸ್)

ಈ ಕೆಳಗಿನ ಮಾಡ್ಯೂಲ್ ಗಳನ್ನು ಕೇಂದ್ರ ರಿಜಿಸ್ಟ್ರಾರ್ ಪೋರ್ಟಲ್ ನಲ್ಲಿ ಸೇರಿಸಲಾಗುವುದು:

i. ನೋಂದಣಿ
ii. ಉಪವಿಧಿಗಳ ತಿದ್ದುಪಡಿ
iii. ವಾರ್ಷಿಕ ರಿಟರ್ನ್ ಫೈಲಿಂಗ್
iv. ಮೇಲ್ಮನವಿ
v. ಲೆಕ್ಕಪರಿಶೋಧನೆ
vi. ತಪಾಸಣೆ
vii. ವಿಚಾರಣೆ
viii. ಮಧ್ಯಸ್ಥಿಕೆ
ix. ಮುಕ್ತಾಯ ಮತ್ತು ದಿವಾಳಿತನ
x. ಓಂಬುಡ್ಸ್ ಮನ್
xi. ಚುನಾವಣೆ

ಈ ಹೊಸ ಪೋರ್ಟಲ್ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ, 2002 ಮತ್ತು ಅದರ ನಿಯಮಗಳ ನವೀನ ಅಂಗೀಕೃತ ತಿದ್ದುಪಡಿಗಳನ್ನು ಸಹ ಒಳಗೊಂಡಿದೆ. ವಿದ್ಯುನ್ಮಾನ ಕ್ರಿಯೆಯ ಹರಿವಿನ ಮೂಲಕ ಕಾಲಮಿತಿಯೊಳಗೆ ಅರ್ಜಿಗಳು ಮತ್ತು ಸೇವಾ ವಿನಂತಿಗಳನ್ನು ಪೋರ್ಟಲ್ ಪ್ರಕ್ರಿಯೆಗೊಳಿಸುತ್ತದೆ. ಒಟಿಪಿ-ಆಧಾರಿತ ಬಳಕೆದಾರರ ನೋಂದಣಿ, ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ಅನುಸರಣೆಗಾಗಿ ಪ್ರಮಾಣೀಕರಣ ಪರಿಶೀಲನೆ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ, ನೋಂದಣಿ ಪ್ರಮಾಣಪತ್ರ ವಿತರಣೆ ಮತ್ತು ಎಲೆಕ್ಟ್ರಾನಿಕ್ ಸಂವಹನದ ನಿಬಂಧನೆಗಳನ್ನು ಸಹ ಇದು ಹೊಂದಿರುತ್ತದೆ. ಗಣಕೀಕರಣದ ಈ ಯೋಜನೆಯು ಹೊಸ ಬಹು-ರಾಜ್ಯ ಸಹಕಾರ ಸಂಘಗಳ ನೋಂದಣಿಗೆ ಸಹಾಯಕವಾಗಲಿದ್ದು, ಅವುಗಳ ಕಾರ್ಯನಿರ್ವಹಣೆಯನ್ನು ಸುಲಭಗೊಳಿಸುತ್ತದೆ.

ನಮ್ಮ ದೇಶದಲ್ಲಿ 1550ಕ್ಕೂ ಹೆಚ್ಚು ಬಹು-ರಾಜ್ಯ ಸಹಕಾರಿ ಸಂಘಗಳು ನೋಂದಾಯಿಸಲ್ಪಟ್ಟಿವೆ. ಕೇಂದ್ರ ರಿಜಿಸ್ಟ್ರಾರ್ ಕಚೇರಿಯು ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ, 2002ನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿದೆ. ಬಹು-ರಾಜ್ಯ ಸಹಕಾರಿ ಸಂಸ್ಥೆಗಳ ಎಲ್ಲಾ ಚಟುವಟಿಕೆಗಳನ್ನು ಸುಲಭಗೊಳಿಸಿ, ಹೊಸ ಬಹು-ರಾಜ್ಯ ಸಹಕಾರಿ ಸಂಘಗಳ ನೋಂದಣಿ ಸೇರಿದಂತೆ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಚಿಸಲು ಕೇಂದ್ರ ರಿಜಿಸ್ಟ್ರಾರ್ ಕಚೇರಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ.

ಹೊಸದಾಗಿ ಅಭಿವೃದ್ಧಿಪಡಿಸಿದ ಕೇಂದ್ರ ರಿಜಿಸ್ಟ್ರಾರ್ ಕಚೇರಿ ಪೋರ್ಟಲ್ ಡ್ಯಾಶ್ ಬೋರ್ಡ್ ಅನ್ನು ನಿರ್ಮಿಸಲು ಯುವಕರನ್ನು ಸೆಳೆಯುವ ಸಲುವಾಗಿ ಮತ್ತು ಅವರ ಆಲೋಚನೆಗಳನ್ನು ಮನ್ನಿಸಲು 'ಹ್ಯಾಕಥಾನ್' ಸ್ಪರ್ಧೆಯನ್ನು ಕೂಡಾ ಆಯೋಜಿಸಲಾಗಿತ್ತು. ಇದಲ್ಲದೆ, ಹೊಸ ಕೇಂದ್ರ ರಿಜಿಸ್ಟ್ರಾರ್ ಕಚೇರಿ ಪೋರ್ಟಲ್ ಗಾಗಿ ಎಲ್ಲಾ ರಾಷ್ಟ್ರೀಯ ಸಹಕಾರಿ ಸಂಘಗಳು ಮತ್ತು ಬಹು ರಾಜ್ಯ ಸಹಕಾರಿ ಸಂಘಗಳ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.

****



(Release ID: 1946068) Visitor Counter : 137