ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಬೆಲೆಯಲ್ಲಿ ಗಣನೀಯ ಇಳಿಕೆ; ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕ 33.8% ರಷ್ಟು ಕುಸಿತ


ಸಮೃದ್ಧ ಕಲ್ಲಿದ್ದಲು ಸಂಗ್ರಹಣೆಯು ವಿವಿಧ ವಲಯಗಳಿಗೆ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸುತ್ತದೆ

Posted On: 26 JUL 2023 11:20AM by PIB Bengaluru

ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕವು (ಎನ್.ಸಿ.ಐ) 2023 ವರದಿಯಲ್ಲಿ ನಮೂದಿಸಿದ 157.7 ಅಂಕಗಳನ್ನು ಕಳೆದ ಮೇ 2022ರ 238.3 ಅಂಕಕ್ಕೆ ಹೋಲಿಸಿದರೆ ಸಮಾರು 33.8% ರಷ್ಟು ಅಂಕಗಳ ಕುಸಿತ ಕಾಣಿಸುತ್ತದೆ. ಇದು ಮಾರುಕಟ್ಟೆಯಲ್ಲಿ ಕಲ್ಲಿದ್ದಲಿನ ಹೆಚ್ಚುತ್ತಿರುವ ಬೇಡಿಕೆಗಳು ಮತ್ತು ಸಮರ್ಪಕ ಪೂರೈಕೆಯನ್ನು ಸೂಚಿಸುತ್ತದೆ, ಹಾಗೂ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಕಲ್ಲಿದ್ದಲು ಲಭ್ಯತೆಯಿದೆ ಎಂದು ಸೂಚಿಸುತ್ತದೆ. 

ಅದೇ ರೀತಿ, ಕೋಕಿಂಗ್ ರಹಿತ ಕಲ್ಲಿದ್ದಲು ಎನ್.ಸಿ.ಐ. ವರದಿಯಲ್ಲಿ  ಮೇ 2023 ರಲ್ಲಿ 147.5 ಅಂಕ ಹೊಂದಿದೆ, ಇದು ಮೇ 2022 ಕ್ಕೆ ಹೋಲಿಸಿದರೆ 34.3% ರಷ್ಟು ಕುಸಿತವನ್ನು ತೋರಿಸುತ್ತದೆ. ಹಾಗೂ ಕೋಕಿಂಗ್ ಕಲ್ಲಿದ್ದಲು ಸೂಚ್ಯಂಕವು ಮೇ 2023 ರಲ್ಲಿ 187.1 ಅಂಕ ಹೊಂದಿದ್ದು, ಈ ಪ್ರವರ್ಗದಲ್ಲಿ 32.6% ನಷ್ಟು ಇಳಿಕೆಯಾಗಿದೆ. ಜೂನ್ 2022 ರಲ್ಲಿ ಸೂಚ್ಯಂಕವು 238.8 ಅಂಕಗಳನ್ನು ತಲುಪಿದಾಗ ವೃದ್ಧಿಯಲ್ಲಿ ಎನ್.ಸಿ.ಐ. ಸೂಚ್ಯಂಕವು ಉತ್ತುಂಗವನ್ನು ಕಂಡಿತು. ನಂತರದ ತಿಂಗಳುಗಳಲ್ಲಿ ಕುಸಿತ ಕಂಡಿತು, ಇದು ಭಾರತೀಯ ಮಾರುಕಟ್ಟೆಯಲ್ಲಿ ಹೇರಳವಾದ ಕಲ್ಲಿದ್ದಲು ಲಭ್ಯತೆಯ ಸೂಚಕವಾಗಿದೆ.  

ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕವು (ಎನ್.ಸಿ.ಐ.) ಅಧಿಸೂಚಿತ ಬೆಲೆಗಳು, ಹರಾಜು ಬೆಲೆಗಳು ಮತ್ತು ಆಮದು ಬೆಲೆಗಳು ಸೇರಿದಂತೆ ಎಲ್ಲಾ ಮಾರಾಟ ಮಾರ್ಗಗಳಿಂದ ಕಲ್ಲಿದ್ದಲು ಬೆಲೆಗಳನ್ನು ಸಂಯೋಜಿಸುವ ಬೆಲೆ ಸೂಚ್ಯಂಕ ಇದಾಗಿದೆ. 2017-18 ರ ಆರ್ಥಿಕ ವರ್ಷವನ್ನು ಮೂಲ ವರ್ಷವಾಗಿ ಪರಿಗಣಿಸಿ ಈ ಕಲ್ಲಿದ್ದಲು ಬೆಲೆಗಳನ್ನು ಸಂಯೋಜಿಸುವ ಬೆಲೆ ಸೂಚ್ಯಂಕವನ್ನು ಪ್ರಾರಂಭಿಸಿಲಾಗಿದೆ. ಇದು ಮಾರುಕಟ್ಟೆಯ ವೈವಿಧ್ಯತೆಗಳ ವಿಶ್ವಾಸಾರ್ಹ ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ, ದೇಶದ ಕಲ್ಲಿದ್ದಲು ಬೆಲೆ ಏರಿಳಿತಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ.

  

 ಹೆಚ್ಚುವರಿಯಾಗಿ, ಕಲ್ಲಿದ್ದಲು ಹರಾಜಿನ ಮೇಲಿನ ಮೂಲ ಪ್ರೀಮಿಯಂ ಬೆಲೆಯು ಉದ್ಯಮದ ನಾಡಿಮಿಡಿತವನ್ನು ಸೂಚಿಸುತ್ತದೆ ಮತ್ತು ಕಲ್ಲಿದ್ದಲು ಹರಾಜಿನ ಪ್ರೀಮಿಯಂ ಬೆಲೆಗಳಲ್ಲಿನ ತೀವ್ರ ಕುಸಿತವು ಮಾರುಕಟ್ಟೆಯಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯತೆಯನ್ನು ಖಚಿತಪಡಿಸುತ್ತದೆ. ಕಲ್ಲಿದ್ದಲು ಕಂಪನಿಗಳು ಸಾಕಷ್ಟು ಸಂಗ್ರಹಣೆಯನ್ನು ಹೊಂದಿವೆ. ಇದು ಭಾರತದ ಕಲ್ಲಿದ್ದಲು ಉದ್ಯಮವು ಹೊಂದಿರುವ ಗಣನೀಯ ಪ್ರಮಾಣದ ಕಲ್ಲಿದ್ದಲು ಸಂಗ್ರಹವನ್ನು ದೃಢೀಕರಿಸುತ್ತದೆ. ಈ ಲಭ್ಯತೆಯು ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿರುವ ವಿವಿಧ ವಲಯಗಳಿಗೆ ಸ್ಥಿರವಾದ ಪೂರೈಕೆಯನ್ನು ಖಾತ್ರಿಗೊಳಿಸುತ್ತದೆ, ಇದು ರಾಷ್ಟ್ರದ ಒಟ್ಟಾರೆ ಇಂಧನ ಭದ್ರತೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. 

ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕದ (ಎನ್.ಸಿ.ಐ) ಕೆಳಮುಖ ಗತಿಯು ಹೆಚ್ಚು ಸಮತೋಲಿತ ಕಲ್ಲಿದ್ದಲು ಮಾರುಕಟ್ಟೆಯನ್ನು ಸೂಚಿಸುತ್ತದೆ. ಎನ್.ಸಿ.ಐ ಸೂಚ್ಯಂಕವು ಪೂರೈಕೆ ಮತ್ತು ಬೇಡಿಕೆಗಳನ್ನು ಸಮರ್ಪಕವಾಗಿ ಸಮತೋಲನದಿಂದ ಜೋಡಿಸುತ್ತದೆ. ಸಾಕಷ್ಟು ಕಲ್ಲಿದ್ದಲು ಲಭ್ಯತೆಯೊಂದಿಗೆ, ರಾಷ್ಟ್ರವು ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ಮಾತ್ರವಲ್ಲದೆ ದೇಶದ ದೀರ್ಘಾವಧಿಯ ಇಂಧನದ ಅವಶ್ಯಕತೆಗಳನ್ನು ಎನ್.ಸಿ.ಐ ಸೂಚ್ಯಂಕವು ಬೆಂಬಲಿಸುತ್ತದೆ, ಹೀಗಾಗಿ ಹೆಚ್ಚು ಸ್ಥಿತಿಸ್ಥಾಪಕ ಮತ್ತು ಸಮರ್ಥನೀಯ ಕಲ್ಲಿದ್ದಲು ಉದ್ಯಮವನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

***(Release ID: 1942786) Visitor Counter : 91