ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ G20 ವಿಪತ್ತು ಅಪಾಯ ಕಡಿತ ಕಾರ್ಯ ಗುಂಪಿನ ಮೂರನೇ ಸಭೆಯನ್ನು ಉದ್ದೇಶಿಸಿ ಭಾಷಣ
ಹೆಚ್ಚುತ್ತಿರುವ ಬದಲಾವಣೆ ಕಾಲ ಮುಗಿದಿದೆ. ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ವ್ಯವಸ್ಥೆಗಳ ರೂಪಾಂತರದ ಅಗತ್ಯವಿದೆ”
"ಭಾರತದಲ್ಲಿ ನಾವು ವಿಪತ್ತು ಅಪಾಯ ಕಡಿತಕ್ಕೆ ಹಣಕಾಸು ಒದಗಿಸುವ ವಿಧಾನವನ್ನು ಸಂಪೂರ್ಣವಾಗಿ ಮಾರ್ಪಡಿಸಿದ್ದೇವೆ"
"ಪ್ರತಿಕ್ರಿಯೆಗಾಗಿ ಸಿದ್ಧತೆ" ಯಂತೆ, ನಾವು "ಚೇತರಿಕೆಗಾಗಿ ಸಿದ್ಧತೆ" ಗೆ ಒತ್ತು ನೀಡಬೇಕಾಗಿದೆ"
Posted On:
24 JUL 2023 7:03PM by PIB Bengaluru
ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಮೋದ್ ಕುಮಾರ್ ಮಿಶ್ರಾ ಅವರು ಇಂದು ಚೆನ್ನೈನಲ್ಲಿ ನಡೆದ ಜಿ20 ವಿಪತ್ತು ಅಪಾಯ ಕಡಿತ ವರ್ಕಿಂಗ್ ಗ್ರೂಪ್ನ ಮೂರನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ವರ್ಷದ ಮಾರ್ಚ್ನಲ್ಲಿ ಗಾಂಧಿನಗರದಲ್ಲಿ ಮೊದಲ ಬಾರಿಗೆ ನಡೆದ ಸಭೆಯನ್ನು ನೆನಪಿಸಿಕೊಂಡ ಪ್ರಧಾನ ಕಾರ್ಯದರ್ಶಿಗಳು, ಅಂದಿನಿಂದ ಸಂಭವಿಸಿದ ಅಭೂತಪೂರ್ವ ಹವಾಮಾನ ಬದಲಾವಣೆ ಸಂಬಂಧಿತ ವಿಪತ್ತುಗಳ ಬಗ್ಗೆ ವಿವರಿಸಿದರು. ಬೃಹತ್ ಶಾಖದ ಅಲೆಗಳು, ಕೆನಡಾದಲ್ಲಿ ಕಾಡಿನ ಬೆಂಕಿ ಮತ್ತು ಉತ್ತರ ಅಮೆರಿಕಾದ ವಿವಿಧ ನಗರಗಳ ಮೇಲೆ ಪರಿಣಾಮ ಬೀರಿದ ಮಂಜು ಕವಿದ, ಮಬ್ಬು ಕವಿದ ವಾತಾವರಣ ಮತ್ತು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಪ್ರಮುಖ ಚಂಡಮಾರುತ, ದೆಹಲಿಯಲ್ಲಿ 45 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹ ಕಂಡಿದೆ ಎಂದು ತಿಳಿಸಿದರು.
ಹವಾಮಾನ ಬದಲಾವಣೆ-ಸಂಬಂಧಿತ ವಿಪತ್ತುಗಳ ಪರಿಣಾಮಗಳು ಅಗಾಧವಾಗಿವೆ ಮತ್ತು ಪ್ರಕೃತಿಯಲ್ಲಿ ಪರಸ್ಪರ ಸಂಬಂಧ ಹೊಂದಿವೆ. ಜಗತ್ತು ಎದುರಿಸುತ್ತಿರುವ ಸವಾಲುಗಳು ಮತ್ತು ಪ್ರತಿಯೊಬ್ಬರ ಮೇಲೆ ಹವಾಮಾನ ಬದಲಾವಣೆಪರಿಣಾಮ ಬೀರುತ್ತಿದೆ. ವಿಪತ್ತು ಅಪಾಯ ಕಡಿತಮಾಡುವುದು ಈಗಿನ ಪ್ರಮುಖ ಉದ್ದೇಶ ಎಂದು ಹೇಳಿದರು. ಕಾರ್ಯಪಡೆ ಗುಂಪು ಸಾಕಷ್ಟು ಪ್ರಗತಿ ಸಾಧಿಸಿದೆ ಮತ್ತು ಉತ್ತಮ ವೇಗವನ್ನು ಪಡೆದಿದೆ. ನಮ್ಮ ಮಹತ್ವಾಕಾಂಕ್ಷೆಗಳನ್ನು ಪ್ರಪಂಚವು ಎದುರಿಸುತ್ತಿರುವ ಸಮಸ್ಯೆಗಳ ಪ್ರಮಾಣದೊಂದಿಗೆ ಹೊಂದಿಸಬೇಕಾಗಿದೆ ಎಂದು ಹೇಳಿದರು.
ಈಗ ಬದಲಾವಣೆಯ ಕಾಲಕಳೆದಿದೆ ಮತ್ತು ಹೊಸ ವಿಪತ್ತು ಅಪಾಯಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅಸ್ತಿತ್ವದಲ್ಲಿರುವುದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ವ್ಯವಸ್ಥೆಗಳ ರೂಪಾಂತರಕ್ಕೆ ವೇದಿಕೆ ಸಿದ್ಧವಾಗಿದೆ ಎಂದು ಅವರು ಹೇಳಿದರು.
ಸಾಮೂಹಿಕ ಪ್ರಭಾವವನ್ನು ಹೆಚ್ಚಿಸಲು ವಿಭಿನ್ನ ರಾಷ್ಟ್ರೀಯ ಮತ್ತು ಜಾಗತಿಕ ಪ್ರಯತ್ನಗಳ ಒಮ್ಮುಖದ ಅಗತ್ಯವಿದೆ. ಸಂಕುಚಿತ ಸಾಂಸ್ಥಿಕ ದೃಷ್ಟಿಕೋನಗಳಿಂದ ನಡೆಸಲ್ಪಡುವ ವಿಘಟಿತ ಪ್ರಯತ್ನಗಳ ಬದಲಿಗೆ ಸಮಸ್ಯೆ-ಪರಿಹರಿಸುವ ವಿಧಾನವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ನೀಡಿರುವ "ಎಲ್ಲರಿಗೂ ಆರಂಭಿಕ ಎಚ್ಚರಿಕೆ" ಎಂಬ ಸಂದೇಶದ ಬಗ್ಗೆ ನಮಗೆ ಅರಿವಿರಬೇಕು./ "ಮುಂಚಿನ ಎಚ್ಚರಿಕೆ ಮತ್ತು ಆರಂಭಿಕ ಕ್ರಿಯೆ" ಅನ್ನು ಐದು ಆದ್ಯತೆಗಳಲ್ಲಿ ಗುರುತಿಸಲಾಗಿದೆ ಎಂದರು.
ವಿಪತ್ತು ಅಪಾಯ ಕಡಿತದ ಎಲ್ಲಾ ಅಂಶಗಳಿಗೆ ಹಣಕಾಸು ಒದಗಿಸಲು ಎಲ್ಲಾ ಹಂತಗಳಲ್ಲಿ ರಚನಾತ್ಮಕ ಕಾರ್ಯವಿಧಾನಗಳನ್ನು ಅನುಸರಿಸಲು ಕ್ರಮ ಕೈಗೊಳ್ಳಲಾಗಿದೆ. ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ, ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಸಂಪೂರ್ಣವಾಗಿ ರೂಪಾಂತರಗೊಂಡಿದೆ ಮತ್ತು ವಿಪತ್ತು ಪ್ರತಿಕ್ರಿಯೆಗೆ ಮಾತ್ರವಲ್ಲದೆ ವಿಪತ್ತು ತಗ್ಗಿಸುವಿಕೆ, ಸನ್ನದ್ಧತೆ ಮತ್ತು ಚೇತರಿಕೆಗೆ ಹಣಕಾಸು ಒದಗಿಸಲು ಕಾರ್ಯವಿಧಾನವು ಜಾರಿಯಲ್ಲಿದೆ . ನಾವು ಜಾಗತಿಕ ಮಟ್ಟದಲ್ಲಿಯೂ ಇದೇ ರೀತಿಯ ವ್ಯವಸ್ಥೆಗಳನ್ನು ಹೊಂದಬಹುದೇ?" ಎಂದು ಪ್ರಶ್ನಿಸಿದರು.
ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಲಭ್ಯವಿರುವ ಹಣಕಾಸಿನ ವಿವಿಧ ಸ್ಟ್ರೀಮ್ಗಳ ನಡುವೆ ಹೆಚ್ಚಿನ ಒಮ್ಮುಖದ ಅಗತ್ಯವಿದೆ. ಕ್ಲೈಮೇಟ್ ಫೈನಾನ್ಸ್ ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಹಣಕಾಸಿನ ಅವಿಭಾಜ್ಯ ಅಂಗವಾಗಿರಬೇಕು. ವಿಪತ್ತು ಅಪಾಯ ಕಡಿತ ಅಗತ್ಯಗಳಿಗಾಗಿ ಖಾಸಗಿ ಹಣಕಾಸು ಸಜ್ಜುಗೊಳಿಸುವ ಸವಾಲ ಇದೆ. “ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಖಾಸಗಿ ಹಣಕಾಸು ಆಕರ್ಷಿಸಲು ಸರ್ಕಾರಗಳು ಯಾವ ರೀತಿಯ ಸಕ್ರಿಯಗೊಳಿಸುವ ವಾತಾವರಣವನ್ನು ಸೃಷ್ಟಿಸಬೇಕು? G20 ಈ ಸುತ್ತ ವೇಗವನ್ನು ಹೇಗೆ ಉಂಟುಮಾಡುತ್ತದೆ ಮತ್ತು ವಿಪತ್ತು ಅಪಾಯ ಕಡಿತದಲ್ಲಿ ಖಾಸಗಿ ಹೂಡಿಕೆಯು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಅಭಿವ್ಯಕ್ತಿ ಮಾತ್ರವಲ್ಲದೇ ಸಂಸ್ಥೆಗಳ ಪ್ರಮುಖ ವ್ಯವಹಾರದ ಭಾಗವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಹಲವಾರು G20 ರಾಷ್ಟ್ರಗಳು, ವಿಶ್ವಸಂಸ್ಥೆ ಮತ್ತು ಇತರರೊಂದಿಗೆ ಸಹಭಾಗಿತ್ವದಲ್ಲಿ ಕೆಲವು ವರ್ಷಗಳ ಹಿಂದೆ ಸ್ಥಾಪಿಸಲಾದ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟದ ಪ್ರಯೋಜನಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸೇರಿದಂತೆ ದೇಶಗಳಿಗೆ ಉತ್ತಮ ಅಪಾಯದ ಮೌಲ್ಯಮಾಪನಗಳನ್ನು ಮಾಡುವ ಬಗ್ಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೆಚ್ಚಿನ ಅಪಾಯ-ಮಾಹಿತಿ ಹೂಡಿಕೆಗಳನ್ನು ಮಾಡುವಾಗ ಮಾನದಂಡಗಳನ್ನು ನವೀಕರಿಸುವ ಪ್ರಸ್ತಾಪವಿದೆ. ಉಪಕ್ರಮಗಳನ್ನು ರಚಿಸುವಾಗ ಈ ಆಲೋಚನೆಗಳನ್ನು ಹೆಚ್ಚಿಸುವ ಬಗ್ಗೆ ಅವರು ಒತ್ತು ನೀಡಿದರು.
ವಿಪತ್ತುಗಳ ನಂತರ 'ಬಿಲ್ಡಿಂಗ್ ಬ್ಯಾಕ್ ಬೆಟರ್' ನ ಕೆಲವು ಉತ್ತಮ ಅಭ್ಯಾಸಗಳನ್ನು ಸಾಂಸ್ಥಿಕರೀಸುವ ಅಗತ್ಯವಿದೆ. ಆರ್ಥಿಕ ವ್ಯವಸ್ಥೆಗಳು, ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಸಾಮರ್ಥ್ಯಗಳ ಆಧಾರದ ಮೇಲೆ 'ಪ್ರತಿಕ್ರಿಯೆಗೆ ಸಿದ್ಧತೆ' ಯಂತೆಯೇ 'ಚೇತರಿಸಿಕೊಳ್ಳಲು ಸಿದ್ಧತೆ' ಅಳವಡಿಸಿಕೊಳ್ಳಬೇಕು. ಕಾರ್ಯನಿರತ ಗುಂಪು ಅನುಸರಿಸಿದ ಎಲ್ಲಾ ಐದು ಆದ್ಯತೆಗಳಲ್ಲಿ ಗಮನಾರ್ಹ ಪ್ರಗತಿಯ ಬಗ್ಗೆ ತೃಪ್ತಿ ಇದೆ ಎಂದು ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು.
G20 ರಾಷ್ಟ್ರಗಳಿಗೆ ವಿಪತ್ತು ಅಪಾಯವನ್ನು ಕಡಿಮೆ ಮಾಡುವ ಬಗ್ಗೆ ಸ್ಪಷ್ಟ ಮತ್ತು ಕಾರ್ಯತಂತ್ರದ ಕಾರ್ಯಸೂಚಿಯನ್ನು ಮುಂದಿಡುತ್ತದೆ. ಕಳೆದ ನಾಲ್ಕು ತಿಂಗಳಿನಿಂದ ಈ ವರ್ಕಿಂಗ್ ಗ್ರೂಪ್ನ ಚರ್ಚೆಗಳಲ್ಲಿ ವ್ಯಾಪಿಸಿರುವ ಒಮ್ಮುಖ, ಒಮ್ಮತ ಮತ್ತು ಸಹ-ಸೃಷ್ಟಿಯ ಮನೋಭಾವವು ಮುಂದಿನ ದಿನಗಳಲ್ಲಿ ಮೇಲುಗೈ ಸಾಧಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಪ್ರಯತ್ನದಲ್ಲಿ ಪಾಲುದಾರರ ನಿರಂತರ ಬೆಂಬಲ ಶ್ಲಾಘನೀಯ. ಈ ಗುಂಪಿನ ಕೆಲಸವನ್ನು ಬೆಂಬಲಿಸುವಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅವರ ವಿಶೇಷ ಪ್ರತಿನಿಧಿ ಮಾಮಿ ಮಿಜುಟೋರಿ ವೈಯಕ್ತಿಕ ಪ್ರಯತ್ನ ಕೂಡ ಗಮನಾರ್ಹ. ಈ ವರ್ಕಿಂಗ್ ಗ್ರೂಪ್ನ ಕಾರ್ಯಸೂಚಿಯನ್ನು ರೂಪಿಸುವಲ್ಲಿ TROIKA ತೊಡಗಿಸಿಕೊಂಡಿರುವುದು ನಿಜಕ್ಕೂ ಸಂತಸವಾಗಿದೆ. ಇಂಡೋನೇಷ್ಯಾ, ಜಪಾನ್ ಮತ್ತು ಮೆಕ್ಸಿಕೋ ಸೇರಿದಂತೆ ಹಿಂದಿನ ಅಧ್ಯಕ್ಷರು ಹಾಕಿದ ಅಡಿಪಾಯದ ಮೇಲೆ ಭಾರತವು ಕಾರ್ಯಸೂಚಿಯನ್ನು ರವಾನಿಸಿದೆ ಮತ್ತು ಬ್ರೆಜಿಲ್ ಅದನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಆಶಾವಾದವನ್ನು ವ್ಯಕ್ತಪಡಿಸಿದೆ ಎಂದು ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು.
ಬ್ರೆಜಿಲ್ನಿಂದ ಕಾರ್ಯದರ್ಶಿ ವೊಲ್ನಿ ಅವರನ್ನು ಪ್ರಮೋದ್ ಕುಮಾರ್ ಮಿಶ್ರಾ ಸಭೆಗೆ ಸ್ವಾಗತಿಸಿದರು.
ಭಾರತದ G20 ಅಧ್ಯಕ್ಷತೆಯಲ್ಲಿ ಕಳೆದ ಎಂಟು ತಿಂಗಳ ಅವಧಿಯಲ್ಲಿ, ಇಡೀ ರಾಷ್ಟ್ರವು ಅತ್ಯಂತ ಉತ್ಸಾಹದಿಂದ ಭಾಗವಹಿಸಿದೆ ಮತ್ತು ಇದುವರೆಗೆ ದೇಶಾದ್ಯಂತ 56 ಸ್ಥಳಗಳಲ್ಲಿ 177 ಸಭೆಗಳನ್ನು ಆಯೋಜಿಸಲಾಗಿದೆ. ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ವೈವಿಧ್ಯತೆಯ ನೋಟವನ್ನು ಪಡೆಯುವ ಜೊತೆಗೆ ಚರ್ಚೆಯಲ್ಲಿ ಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆ ಮೆಚ್ಚುಗಗೆ ಅರ್ಹವಾಗಿದೆ. “G20 ಕಾರ್ಯಸೂಚಿಯ ಪ್ರಮುಖ ಅಂಶಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಮಾಡಲಾಗಿದೆ. ಒಂದೂವರೆ ತಿಂಗಳ ಅವಧಿಯಲ್ಲಿ ನಡೆಯಲಿರುವ ಶೃಂಗಸಭೆಯು ಮಹತ್ವದ ಕಾರ್ಯಕ್ರಮವಾಗಲಿದೆ. ಇದಕ್ಕೆ ನಿಮ್ಮೆಲ್ಲರ ಕೊಡುಗೆ ಮಹತ್ವದ್ದಾಗಿದೆ’ ಎಂದು ತಿಳಿಸಿದರು.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ವಿಶೇಷ ಪ್ರತಿನಿಧಿ ಮಾಮಿ ಮಿಜುಟೋರಿ, ಭಾರತದ G20 ಶೆರ್ಪಾ ಶ್ರೀ ಅಮಿತಾಭ್ ಕಾಂತ್, ವರ್ಕಿಂಗ್ ಗ್ರೂಪ್ನ ಅಧ್ಯಕ್ಷರಾದ ಶ್ರೀ ಕಮಲ್ ಕಿಶೋರ್, G20 ಸದಸ್ಯರು ಹಾಗೂ ಅತಿಥಿ ರಾಷ್ಟ್ರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
****
(Release ID: 1942279)
Visitor Counter : 120
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam