ಕಲ್ಲಿದ್ದಲು ಸಚಿವಾಲಯ
2023-24 ಸಾಲಿನ ಮೊದಲ ತ್ರೈಮಾಸಿಕದಲ್ಲಿ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆ 223.36 ಮಿಲಿಯನ್ ಟನ್ಗೆ ಏರಿಕೆ
2023 ರ ಏಪ್ರಿಲ್-ಜೂನ್ ಅವಧಿಯಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ಉತ್ಪಾದನೆಯು ಶೇಕಡ 9.85% ರಷ್ಟು ಹೆಚ್ಚಳ
ಜೂನ್ 2023 ರ ಅಂತ್ಯದ ವೇಳೆಗೆ ಕಲ್ಲಿದ್ದಲು ದಾಸ್ತಾನು ಶೇಕಡ 37.62% ಏರಿಕೆ
Posted On:
21 JUL 2023 1:35PM by PIB Bengaluru
2023-24ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಕಲ್ಲಿದ್ದಲು ವಲಯವು 223.36 ಮಿಲಿಯನ್ ಟನ್ (MT) ಕಲ್ಲಿದ್ದಲು ಉತ್ಪಾದನೆಯನ್ನು ದಾಖಲಿಸುವ ಮೂಲಕ ಗಮನಾರ್ಹವಾದ ಮೈಲಿಗಲ್ಲು ಸಾಧಿಸಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ ಈ ಪ್ರಮಾಣ 205.76 MT ಆಗಿತ್ತು. ಕಳೆದ ಸಾಲಿನ ಉತ್ಪಾದನೆಗೆ ಹೋಲಿಸಿದರೆ ಶೇಕಡ 8.55% ರಷ್ಟು ಗಣನೀಯ ಬೆಳವಣಿಗೆ ಕಂಡಿದೆ.
ಕೋಲ್ ಇಂಡಿಯಾ ಲಿಮಿಟೆಡ್ (CIL) ಏಪ್ರಿಲ್ ಮತ್ತು ಜೂನ್ 2023 ರ ನಡುವೆ 175.48 MT ಉತ್ಪಾದನೆ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 159.75 MT ಇತ್ತು. ಇದು ಶೇಕಡ 9.85%ರಷ್ಟು ಬೆಳವಣಿಗೆಯಾಗಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಸ್ಥಿರವಾದ ಮೇಲ್ಮುಖ ಪಥವು ಬೇಡಿಕೆಗಳನ್ನು ಪೂರೈಸಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ.
ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಏಪ್ರಿಲ್ 2023 ರಿಂದ ಮೇ 2023 ರ ಅವಧಿಯಲ್ಲಿ ಕಲ್ಲಿದ್ದಲು ಆಮದುಗಳು ಶೇಕಡ 16.76% ರಷ್ಟು ಏರಿಕೆಯಾಗಿದ್ದರೂ, ಕಲ್ಲಿದ್ದಲು ಆಮದು ಬೆಲೆಗಳಲ್ಲಿನ ಗಣನೀಯ ಇಳಿಕೆಯಾಗಿರುವುದನ್ನು ಕೂಡ ಗಮನಿಸಬೇಕಾಗಿದೆ. 2022-23 ಆರ್ಥಿಕ ವರ್ಷದ ಮೊದಲ ತ್ರೈ ಮಾಸಿಕಕ್ಕೆ ಹೋಲಿಸಿದರೆ, 2023-24 ರ ಸಾಲಿನ ಮೊದಲ ತೈ ಮಾಸಿಕದಲ್ಲಿ ಕಲ್ಲಿದ್ದಲಿನ ಆಮದು ಬೆಲೆಗಳು ಶೇಕಡ 60% ಕ್ಕಿಂತ ಹೆಚ್ಚು ಕುಸಿದಿವೆ.
ಇದರ ಪರಿಣಾಮವಾಗಿ, CIL ನ ಅಧಿಸೂಚಿತ ಬೆಲೆಗಳ ಮೇಲಿನ ಇ-ಹರಾಜು ಪ್ರೀಮಿಯಂ ಗಮನಾರ್ಹವಾದ ಇಳಿಕೆಗೆ ಸಾಕ್ಷಿಯಾಗಿದೆ, ಜೂನ್ 2022 ರಲ್ಲಿ ಶೇಕಡ 357 ರಿಂದ ಜೂನ್ 2023 ರಲ್ಲಿ ಶೇಕಡ 54 ಕ್ಕೆ ಇಳಿಕೆಯಾಗಿದೆ, ಮುಖ್ಯವಾಗಿ ಆಮದು ಬೆಲೆಗಳಲ್ಲಿನ ತೀವ್ರ ಕುಸಿತದ ಪರಿಣಾಮ ಇದೆ. ಕಲ್ಲಿದ್ದಲು ಹರಾಜು ಪ್ರೀಮಿಯಂನಲ್ಲಿ ತೀವ್ರ ಕುಸಿತವು ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯತೆಯನ್ನು ಸೂಚಿಸುತ್ತದೆ. ಆಮದು ಬೆಲೆಗಳಲ್ಲಿನ ಈ ಕುಸಿತವು ಕಲ್ಲಿದ್ದಲು ಆಮದು ಚಿತ್ರಣ ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ.
ಇದೇ ಜೂನ್ 23 ರ ಅಂತ್ಯದ ಅವಧಿಯಲ್ಲಿ ಕಲ್ಲಿದ್ದಲಿನ ಲಭ್ಯತೆ ದೇಶದಲ್ಲಿ 107.15 MT (ಕಲ್ಲಿದ್ದಲು ಕಂಪನಿಗಳೊಂದಿಗೆ 67 MT, 33.61 MT TPP (DCB) ಮತ್ತು 6.54 MT ಖಾಸಗಿ ವಾಷರೀಸ್/ಗುಡ್ ಶೆಡ್ ಸೈಡಿಂಗ್/ಬಂದರುಗಳಲ್ಲಿ) ರಷ್ಟು ಇದೆ. ಕಳೆದ ಸಾಲಿಗೆ ಹೋಲಿಸಿದರೆ ಶೇಕಡ 37.62ರಷ್ಟು ಹೆಚ್ಚಳ ಕಂಡಿದೆ ಗಣನೀಯ ಗಣನೀಯ ಪ್ರಮಾಣದ ಕಲ್ಲಿದ್ದಲು ದಾಸ್ತಾನು ಲಭ್ಯತೆಯು ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿರುವ ವಿವಿಧ ವಲಯಗಳಿಗೆ ಸ್ಥಿರವಾದ ಪೂರೈಕೆಯನ್ನು ಖಾತ್ರಿಗೊಳಿಸುತ್ತದೆ, ಇದರಿಂದಾಗಿ ರಾಷ್ಟ್ರದ ಒಟ್ಟಾರೆ ಇಂಧನ ಭದ್ರತೆಗೆ ಕೊಡುಗೆ ನೀಡುತ್ತದೆ.
ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತದ ಸಾಧನೆಯು ಕಲ್ಲಿದ್ದಲು ಉದ್ಯಮದ ಸಂಘಟಿತ ಪ್ರಯತ್ನಗಳು ಮತ್ತು ರಾಷ್ಟ್ರದ ಇಂಧನ ಅಗತ್ಯಗಳನ್ನು ಪೂರೈಸಲು ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ದಾಖಲೆ ಅಂಕಿಅಂಶಗಳು ಉದ್ಯಮದ ಸ್ಥಿತಿಸ್ಥಾಪಕತ್ವವನ್ನು ಮಾತ್ರವಲ್ಲದೆ ಸುಸ್ಥಿರ ಬೆಳವಣಿಗೆಗೆ ಶ್ರಮಿಸುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಸಹ ತೋರಿವೆ.
****
(Release ID: 1941559)
Visitor Counter : 136