ಸಹಕಾರ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 2023ರ ಜುಲೈ 21ರಂದು ಹೊಸದಿಲ್ಲಿಯಲ್ಲಿ 'ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ (ಪಿಎಸಿಎಸ್) ಮೂಲಕ ಸಿಎಸ್ಸಿ ಸೇವೆಗಳ ವಿತರಣೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ'ವನ್ನು ಉದ್ಘಾಟಿಸಲಿದ್ದಾರೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಹಾಗು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸಹಕಾರ ಸಚಿವಾಲಯವು ದೇಶಾದ್ಯಂತ ಪಿಎಸಿಎಸ್ ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.

ಪಿಎಸಿಎಸ್ ಗಳು ದೇಶದ ಸಹಕಾರಿ ಸಂಸ್ಥೆಗಳ ಬೆನ್ನೆಲುಬಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪಿಎಸಿಎಸ್ ಮೂಲಕ ಸಿಎಸ್ ಸಿ ಸೇವೆಗಳ ವಿತರಣೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ

ಪಿಎಸಿಎಸ್ ಗಳು ದೇಶದ ಸಹಕಾರಿ ಆಂದೋಲನಕ್ಕೆ ಆಧಾರವಾಗಿವೆ, ಮತ್ತು ಅದಕ್ಕಾಗಿಯೇ ಮೋದಿ ಸರ್ಕಾರವು ಅವುಗಳ ಕಾರ್ಯಸಾಧ್ಯತೆಯನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ

ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚಿಸಿದ ನಂತರ ಸಹಕಾರ ಸಚಿವಾಲಯವು ಸಿದ್ಧಪಡಿಸಿದ ಮಾದರಿ ಬೈಲಾಗಳು, ಪಿಎಸಿಎಸ್  ಗೆ 25 ಕ್ಕೂ ಹೆಚ್ಚು ವಿಭಿನ್ನ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ತನ್ನ ವ್ಯವಹಾರವನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಲು ಅನುವು ಮಾಡಿಕೊಡುತ್ತವೆ

ಪಿಎಸಿಎಸ್ ಗಳಿಗೆ ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು, ಎಫ್ ಪಿಒಗಳನ್ನು ರಚಿಸಲು, ಎಲ್ ಪಿಜಿ ವಿತರಣೆಗೆ ಅರ್ಜಿ ಸಲ್ಲಿಸಲು, ಚಿಲ್ಲರೆ (ರಿಟೈಲ್) ಪೆಟ್ರೋಲ್ / ಡೀಸೆಲ್ ಪಂಪ್ ಔಟ್ ಲೆಟ್ ಗಳನ್ನು ತೆರೆಯಲು, ಜನೌಷಧಿ ಕೇಂದ್ರಗಳು ಮತ್ತು ರಸಗೊಬ್ಬರ ವಿತರಣಾ ಕೇಂದ್ರಗಳನ್ನು ತೆರೆಯಲು ಅವಕಾಶ ಒದಗಿಸಲಾಗುತ್ತದೆ.

ಪಿಎಸಿಎಸ್ ಗಳು ದೇಶದ ಸಹಕಾರಿ ಸಂಸ್ಥೆಗಳ ಬೆನ್ನೆಲುಬಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪಿಎಸಿಎಸ್ ಮೂಲಕ ಸಿಎಸ್ ಸಿ ಸೇವೆಗಳ ವಿತರಣೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ

ಪಿಎಸಿಎಸ್ ಗಳು ದೇಶದ ಸಹಕಾರಿ ಆಂದೋಲನಕ್ಕೆ ಆಧಾರವಾಗಿವೆ, ಮತ್ತು ಅದಕ್ಕಾಗಿಯೇ ಮೋದಿ ಸರ್ಕಾರವು ಅವುಗಳ ಕಾರ್ಯಸಾಧ್ಯತೆಯನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ

ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚಿಸಿದ ನಂತರ ಸಹಕಾರ ಸಚಿವಾಲಯವು ಸಿದ್ಧಪಡಿಸಿದ ಮಾದರಿ ಬೈಲಾಗಳು, ಪಿಎಸಿಎಸ್ ಗೆ 25 ಕ್ಕೂ ಹೆಚ್ಚು ವಿಭಿನ್ನ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ತನ್ನ ವ್ಯವಹಾರವನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಲು ಅನುವು ಮಾಡಿಕೊಡುತ್ತವೆ

Posted On: 19 JUL 2023 5:10PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 2023 ರ ಜುಲೈ 21 ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ 'ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ (ಪಿಎಸಿಎಸ್) ಮೂಲಕ ಸಿಎಸ್ಸಿ ಸೇವೆಗಳ ವಿತರಣೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ'ವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಸಹಕಾರ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್ಸಿಡಿಸಿ)ವು  ಸಿಎಸ್ಸಿ ಸಹಯೋಗದೊಂದಿಗೆ ಈ ವಿಚಾರ ಸಂಕಿರಣವನ್ನು ಆಯೋಜಿಸುತ್ತಿದೆ. ಕಾರ್ಯಕ್ರಮದಲ್ಲಿ ಪಿಎಸಿಎಸ್ ಗಳಿಂದ  ಸಿಎಸ್ ಸಿ ಸೇವೆಗಳಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಚರ್ಚಿಸಲಾಗುವುದು. ಇಲ್ಲಿಯವರೆಗೆ, ಸಿಎಸ್ಸಿ ಪೋರ್ಟಲಿನಲ್ಲಿ 17,000 ಪಿಎಸಿಎಸ್ ಗಳನ್ನು ದಾಖಲು ಮಾಡಲಾಗಿದೆ, ಅದರಲ್ಲಿ 6,000 ಪಿಎಸಿಎಸ್ ಗಳು ಈಗಾಗಲೇ ಸಿಎಸ್ಸಿಗಳಾಗಿ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಗೃಹ ಸಚಿವ ಹಾಗು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸಹಕಾರ ಸಚಿವಾಲಯವು ದೇಶಾದ್ಯಂತ ಪಿಎಸಿಎಸ್ ಗಳನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ, ಇದರಿಂದ  ದೇಶದ ಕೋಟ್ಯಂತರ ರೈತರಿಗೆ ಪ್ರಯೋಜನವಾಗಲಿದೆ. ಪಿಎಸಿಎಸ್ ಗಳು ದೇಶದ ಸಹಕಾರಿ ಸಂಸ್ಥೆಗಳ ಬೆನ್ನೆಲುಬಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪಿಎಸಿಎಸ್ ಮೂಲಕ ಸಿಎಸ್ ಸಿ ಸೇವೆಗಳನ್ನು ತಲುಪಿಸುವುದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಪಿಎಸಿಎಸ್ ಗಳು ದೇಶದ ಸಹಕಾರಿ ಆಂದೋಲನದ ಮೂಲಾಧಾರವಾಗಿದೆ, ಮತ್ತು ಅದಕ್ಕಾಗಿಯೇ ಮೋದಿ ಸರ್ಕಾರವು ಅವುಗಳ ಕಾರ್ಯಸಾಧ್ಯತೆಯನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಸಹಕಾರ ಸಚಿವಾಲಯವು ಗ್ರಾಮಸ್ಥರಿಗೆ ಸಾಲ ಸೇವೆಗಳನ್ನು ಒದಗಿಸಲು ದೇಶಾದ್ಯಂತ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳ (ಪಿಎಸಿಎಸ್) ವ್ಯಾಪಕ ಜಾಲವನ್ನು ಹೊಂದಿದೆ.

ಮೋದಿ ಸರಕಾರವು ದೇಶದಲ್ಲಿ ಮೊದಲ ಬಾರಿಗೆ ಪಿಎಸಿಎಸ್ ಗಳನ್ನು ಕಂಪ್ಯೂಟರೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವುದು ಮತ್ತು ಪಿಎಸಿಎಸ್ ಗಳಲ್ಲಿ ಆರ್ಥಿಕ ಶಿಸ್ತನ್ನು ಸುಧಾರಿಸುವುದು ಈ ಕಾರ್ಯಕ್ರಮದ  ಉದ್ದೇಶವಾಗಿದೆ. ಪಿಎಸಿಎಸ್ ಗಳನ್ನು ಬಲಪಡಿಸಲು, ಮೋದಿ ಸರ್ಕಾರವು ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ , ರಾಷ್ಟ್ರೀಯ ಸಹಕಾರಿ ನೀತಿ ರೂಪಣೆ  ಮತ್ತು ಸಹಕಾರಿ ಡೇಟಾಬೇಸ್ ನಿರ್ಮಾಣದ ಕಾರ್ಯದಲ್ಲಿ ತೊಡಗಿದೆ. ಪಿಎಸಿಎಸ್ ಗಳನ್ನು  ವಿವಿಧೋದ್ದೇಶದ ಸೊಸೈಟಿಗಳನ್ನಾಗಿ ಮಾಡುವ ಮೂಲಕ, ಪ್ರಧಾನ ಮಂತ್ರಿ  ಮೋದಿ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ. ಬೀಜಗಳು, ಸಾವಯವ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮತ್ತು ರೈತರ ಉತ್ಪನ್ನಗಳ ರಫ್ತಿಗಾಗಿ ಬಹು ರಾಜ್ಯ ಸಹಕಾರಿ ಸೊಸೈಟಿಗಳನ್ನು ರಚಿಸಲಾಗಿದೆ.

ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚಿಸಿದ ನಂತರ ಸಹಕಾರ ಸಚಿವಾಲಯವು ಸಿದ್ಧಪಡಿಸಿದ ಮಾದರಿ ಬೈಲಾಗಳು, ಡೈರಿ, ಮೀನುಗಾರಿಕೆ, ಗೋದಾಮುಗಳು, ಕೃಷಿ ಉಪಕರಣಗಳ ಬಾಡಿಗೆ (ಕಸ್ಟಮ್ಸ್ ಬಾಡಿಗೆ) ಕೇಂದ್ರಗಳು, ನ್ಯಾಯಬೆಲೆ ಅಂಗಡಿಗಳು, ಎಲ್ಪಿಜಿ / ಡೀಸೆಲ್ / ಪೆಟ್ರೋಲ್ ವಿತರಕರು ಸೇರಿದಂತೆ 25 ಕ್ಕೂ ಹೆಚ್ಚು ವಿಭಿನ್ನ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಪಿಎಸಿಎಸ್ ತನ್ನ ವ್ಯವಹಾರವನ್ನು ವೈವಿಧ್ಯಮಯಗೊಳಿಸಲು ಅನುವು ಮಾಡಿಕೊಡುತ್ತವೆ.

ಇದಲ್ಲದೆ, ಸಂಬಂಧಪಟ್ಟ ಸಚಿವಾಲಯಗಳೊಂದಿಗೆ ಸಮಾಲೋಚಿಸಿ, ಪಿಎಸಿಎಸ್ ಗಳಿಗೆ ಸಾಮಾನ್ಯ ಸೇವಾ ಕೇಂದ್ರಗಳಾಗಿ (ಸಿಎಸ್ಸಿ) ಕಾರ್ಯನಿರ್ವಹಿಸಲು, ಎಫ್ಪಿಒಗಳನ್ನು ರಚಿಸಲು, ಎಲ್ಪಿಜಿ ವಿತರಕ ಕಾರ್ಯಚಟುವಟಿಕೆಗೆ  ಅರ್ಜಿ ಸಲ್ಲಿಸಲು, ಚಿಲ್ಲರೆ ಪೆಟ್ರೋಲ್ / ಡೀಸೆಲ್ ಪಂಪ್ ಮಳಿಗೆಗಳಿಗೆ ಅರ್ಜಿ ಸಲ್ಲಿಸಲು, ಜನೌಷಧಿ ಕೇಂದ್ರಗಳನ್ನು ತೆರೆಯಲು, ರಸಗೊಬ್ಬರ ವಿತರಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು  ಅನುವು ಮಾಡಿಕೊಡಲಾಗಿದೆ. ಪಿಎಸಿಎಸ್ ಮೂಲಕ ಸಿಎಸ್ಸಿ ಸೇವೆಗಳನ್ನು ವಿತರಿಸುವುದು ಅವುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ, ಇದು ಪಿಎಸಿಎಸ್ ಗಳಿಗೆ ದೇಶದಲ್ಲಿ ಸಾಮಾನ್ಯ ಸೇವಾ ಕೇಂದ್ರದಂತಹ ಸೌಲಭ್ಯಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ ಮತ್ತು ಅದರ ಪ್ರಯೋಜನಗಳು ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕೋಟ್ಯಂತರ ಜನರನ್ನು ತಲುಪಲಿವೆ. ಈ ಗ್ರಾಮ ಮಟ್ಟದ ಸಹಕಾರಿ ಕ್ರೆಡಿಟ್ ಸೊಸೈಟಿಗಳು ರಾಜ್ಯ ಸಹಕಾರಿ ಬ್ಯಾಂಕುಗಳ (ಎಸ್ಸಿಬಿ) ನೇತೃತ್ವದ ಮೂರು ಹಂತದ ಸಹಕಾರಿ ಸಾಲ ರಚನೆಯಲ್ಲಿ ಕೊನೆಯ ಹಂತದವರೆಗಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಪಿಎಸಿಎಸ್ ಗಳು ವಿವಿಧ ಕೃಷಿ ಮತ್ತು ಕೃಷಿ ಚಟುವಟಿಕೆಗಳಿಗಾಗಿ ರೈತರಿಗೆ ಅಲ್ಪಾವಧಿ ಮತ್ತು ಮಧ್ಯಮ ಅವಧಿಯ ಕೃಷಿ ಸಾಲಗಳನ್ನು ಒದಗಿಸುತ್ತವೆ.

ಸಹಕಾರ ಖಾತೆ ಸಹಾಯಕ  ಸಚಿವ ಶ್ರೀ ಬಿ.ಎಲ್.ವರ್ಮಾ, ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಮತ್ತು ಸಿಎಸ್ ಸಿ-ಎಸ್ ಪಿವಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂಜಯ್ ರಾಕೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ 'ಪಿಎಸಿಎಸ್ ಗಳಿಂದ ಸಿಎಸ್ ಸಿ ಸೇವೆಗಳ ವಿತರಣೆ' ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಗುವುದು.

ಪಿಎಸಿಎಸ್ ಗಳನ್ನು  ಸಿಎಸ್ಸಿಯ ಜಾಲದಲ್ಲಿ  ತರಲು ಸಿಎಸ್ಸಿ - ಎಸ್ಪಿವಿಯು 2019 ರಲ್ಲಿ ಒಡಿಶಾ ಸರ್ಕಾರದೊಂದಿಗೆ ಅವಶ್ಯ ಕಾರ್ಯಕ್ರಮಗಳನ್ನು (ಉಪಕ್ರಮವನ್ನು)  ಕೈಗೊಂಡಿತ್ತು . ತರುವಾಯ, ಪಿಎಸಿಎಸ್ ಒಕ್ಕೂಟದ ಕೋರಿಕೆಯ ಮೇರೆಗೆ ಸಿಎಸ್ಸಿ ಸೇವೆಗಳನ್ನು ವಿತರಿಸಲು  ಅಸ್ಸಾಂ ಮತ್ತು ತಮಿಳುನಾಡಿನ ಪಿಎಸಿಎಸ್ ಗಳಿಗೆ ತರಬೇತಿ ನೀಡಲಾಯಿತು. 2021ರ ಸೆಪ್ಟೆಂಬರ್ 01 ರಂದು, ಜಾರ್ಖಂಡ್ ಸರ್ಕಾರದ ಕೋರಿಕೆಯ ಮೇರೆಗೆ, ಪಿಎಸಿಎಸ್ ಗಳನ್ನು ಸಿಎಸ್ಸಿ ಜಾಲಕ್ಕೆ  ಸಂಯೋಜಿಸಲು ಸಿಎಸ್ಸಿ-ಎಸ್ಪಿವಿಯು   ಜಾರ್ಖಂಡ್ ಸಹಕಾರಿ ಸೊಸೈಟಿಗಳ ರಿಜಿಸ್ಟ್ರಾರ್ ರೊಂದಿಗೆ  ಸಹಭಾಗಿತ್ವವನ್ನು ಮಾಡಿಕೊಂಡಿತು. 2023ರ ಫೆಬ್ರವರಿ 02 ರಂದು, ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಮತ್ತು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರ ಉಪಸ್ಥಿತಿಯಲ್ಲಿ, ಪಿಎಸಿಎಸ್ ಗಳಿಗೆ ಸಿಎಸ್ಸಿಗಳು ಒದಗಿಸುವ ಸೇವೆಗಳನ್ನು ಒದಗಿಸಲು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಮೊದಲ ಹಂತದಲ್ಲಿ, ಸಿಎಸ್ಸಿಗಳಾಗಿ ಕೆಲಸ ಮಾಡಲು 63,000 ಪಿಎಸಿಎಸ್ ಗಳಿಗೆ ತರಬೇತಿ ನೀಡಲಾಗುತ್ತಿದೆ ಮತ್ತು ಎರಡನೇ ಹಂತದಲ್ಲಿ, ಇನ್ನೂ 30,000 ಪಿಎಸಿಎಸ್ ಗಳಿಗೆ ತರಬೇತಿ ನೀಡಲಾಗುವುದು.

ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿಗಳು) ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿವೆ. ಇಂದು, ಗ್ರಾಮೀಣ, ಅರೆ-ನಗರ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಮೀಣ ಜನಸಂಖ್ಯೆಗೆ ಸರ್ಕಾರಿ ಮತ್ತು ಸಾರ್ವಜನಿಕ ಸೇವೆಗಳ ವಿತರಣಾ ಕೇಂದ್ರಗಳಾಗಿ ದೇಶಾದ್ಯಂತ 5,20,000 ಕ್ಕೂ ಹೆಚ್ಚು ಸಿಎಸ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಒಂದು ವಿಶೇಷ ಉದ್ದೇಶದ ವಾಹಕ (ಸಿಎಸ್ಸಿ ಎಸ್ಪಿವಿ) ಆಗಿದ್ದು, ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್ಸಿ) ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ), ಕಂಪನಿಗಳ ಕಾಯ್ದೆ, 1956 ರ ಅಡಿಯಲ್ಲಿ 2009 ರಲ್ಲಿ ರೂಪಿಸಲಾದ ಸಂಸ್ಥೆಯಾಗಿದೆ.

****



(Release ID: 1941166) Visitor Counter : 109