ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಲ್ಲಿದ್ದಲು ಮತ್ತು ಲಿಗ್ನೈಟ್ ಗಣಿಗಳ ಸ್ಟಾರ್ ರೇಟಿಂಗ್ಗಾಗಿ ನೋಂದಣಿ ದಿನಾಂಕ ವಿಸ್ತರಣೆ

Posted On: 19 JUL 2023 3:18PM by PIB Bengaluru

ಕಲ್ಲಿದ್ದಲು ಮತ್ತು ಲಿಗ್ನೈಟ್ ಗಣಿಗಳ ಸ್ಟಾರ್ ರೇಟಿಂಗ್ ಗಾಗಿ ಹೆಚ್ಚಿನ ಭಾಗವಹಿಸುವಿಕೆಗೆ ಅನುಕೂಲವಾಗಲು ಮತ್ತು ನಿಖರವಾದ ಸ್ವಯಂ-ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಲು, ಕಲ್ಲಿದ್ದಲು ಸಚಿವಾಲಯವು ನೋಂದಣಿ ಮತ್ತು ಸ್ವಯಂ-ಮೌಲ್ಯಮಾಪನದ ಕೊನೆಯ ದಿನಾಂಕವನ್ನು ಜುಲೈ 15 ರಿಂದ ಜುಲೈ 25, 2023 ರವರೆಗೆ ವಿಸ್ತರಿಸಿದೆ.

ಮೇ 30, 2023 ರಂದು, 2022-23 ರ ಹಣಕಾಸು ವರ್ಷದ ಸ್ಟಾರ್ ರೇಟಿಂಗ್ ಗಾಗಿ ಎಲ್ಲಾ ಕಲ್ಲಿದ್ದಲು ಮತ್ತು ಲಿಗ್ನೈಟ್ ಗಣಿಗಳ ನೋಂದಣಿಗಾಗಿ ಅಧಿಸೂಚನೆಯನ್ನು ನೀಡಲಾಯಿತು. ಇದರ ನಂತರ, ಜೂನ್ 1, 2023 ರಿಂದ ಸ್ಟಾರ್ ರೇಟಿಂಗ್ ಪೋರ್ಟಲ್ ನೋಂದಣಿಗಾಗಿ ಲಭ್ಯವಾಗಿದ್ದು  ಮತ್ತು ಪ್ರತಿಕ್ರಿಯೆಯು ಉತ್ತೇಜಕವಾಗಿದೆ. 377 ಗಣಿಗಳು ಈಗಾಗಲೇ ಪೋರ್ಟಲ್ನಲ್ಲಿ 14 ಜುಲೈ 2023 ರಂತೆ ನೋಂದಾಯಿಸಿಕೊಂಡಿವೆ.   ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚಿನ ಗಣಿಗಳಿಗೆ ನೋಂದಾಯಿಸಲು ಮತ್ತು ಸ್ವಯಂ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶವನ್ನು ಒದಗಿಸಲು, ಕಲ್ಲಿದ್ದಲು ಸಚಿವಾಲಯವು ಗಡುವನ್ನು ವಿಸ್ತರಿಸಲು ನಿರ್ಧರಿಸಿದೆ.

ಕಲ್ಲಿದ್ದಲು ಸಚಿವಾಲಯವು ಸುಸ್ಥಿರ ಗಣಿಗಾರಿಕೆ ಅಭ್ಯಾಸಗಳನ್ನು ಉತ್ತೇಜಿಸುವಲ್ಲಿ ಮತ್ತು ಕಲ್ಲಿದ್ದಲು ಮತ್ತು ಲಿಗ್ನೈಟ್ ಗಣಿಗಳ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಸ್ಟಾರ್ ರೇಟಿಂಗ್ ವ್ಯವಸ್ಥೆಯ ಪ್ರಾಮುಖ್ಯತೆಗೆ ಹೆಚ್ಚು ಒತ್ತಿ ನೀಡಿದೆ. ಪರಿಸರ ಸುಸ್ಥಿರತೆ, ಸುರಕ್ಷತೆ ಮತ್ತು ಸಾಮಾಜಿಕ ಜವಾಬ್ದಾರಿಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ವಿಸ್ತರಿಸಿದ ನೋಂದಣಿ ಅವಧಿಯ ಲಾಭವನ್ನು ಪಡೆಯಲು ಎಲ್ಲಾ ಅರ್ಹ ಗಣಿಗಳನ್ನು ಪ್ರೋತ್ಸಾಹಿಸುತ್ತದೆ.

****


(Release ID: 1940708) Visitor Counter : 114