ಸಹಕಾರ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾರವರು ಇಂದು ನವದೆಹಲಿಯಲ್ಲಿ CRCS - ಸಹಾರಾ ಮರುಪಾವತಿ ಪೋರ್ಟಲ್ https://mocrefund.crcs.gov.in/ ಅನ್ನು ಉದ್ಘಾಟಿಸಿದರು.


ಸಹಾರಾ ಗ್ರೂಪ್‌ನ ಸಹಕಾರಿ ಸಂಘಗಳಾದ ಸಹಾರಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್, ಸಹರಾಯನ್ ಯೂನಿವರ್ಸಲ್ ಮಲ್ಟಿಪರ್ಪಸ್ ಸೊಸೈಟಿ ಲಿಮಿಟೆಡ್, ಹಮಾರಾ ಇಂಡಿಯಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಮತ್ತು ಸ್ಟಾರ್ಸ್ ಮಲ್ಟಿಪರ್ಪಸ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್‌ಗಳ ನಿಜವಾದ ಠೇವಣಿದಾರರಿಂದ ಕ್ಲೈಮ್‌ಗಳನ್ನು ಸ್ವೀಕರಿಸಲು ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಹೂಡಿಕೆದಾರರು ಹಗರಣದಲ್ಲಿ ಸಿಲುಕಿದ್ದ ತಮ್ಮ ಹಣವನ್ನು ಮರಳಿ ಪಡೆಯುತ್ತಿದ್ದಾರೆ, ಇದೊಂದು ದೊಡ್ಡ ಸಾಧನೆಯೇ ಸರಿ.

ಇಂದು ಕೋಟಿಗಟ್ಟಲೆ ಜನರು ತಾವು ಕಷ್ಟಪಟ್ಟು ದುಡಿದ ಹಣ ವಾಪಸ್ಸು ಪಡೆಯುತ್ತಿರುವ ಐತಿಹಾಸಿಕ ಸಮಯ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಿದು, ಈ ವಿಷಯದಲ್ಲಿ ಕ್ರಮಗಳನ್ನು ಕೈಗೊಂಡು ಸಣ್ಣ ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು  ಎಲ್ಲಾ ಪಾಲುದಾರರೊಂದಿಗೆ ಚರ್ಚೆ ನಡೆಸಲಾಯಿತು.

ಹೂಡಿಕೆದಾರರಿಗೆ ರೂ. 5,000 ಕೋಟಿ ಮರುಪಾವತಿ ಪ್ರಕ್ರಿಯೆ ಇಂದು ಪಾರದರ್ಶಕ ರೀತಿಯಲ್ಲಿ ಪ್ರಾರಂಭವಾಗುತ್ತದೆ.

ನೈಜ ಹೂಡಿಕೆದಾರರಿಗೆ ಯಾವುದೇ ರೀತಿಯ ಮೋಸ ಅಥವಾ ಅನ್ಯಾಯಕ್ಕೆ ಅವಕಾಶವಿರದ ಹಾಗೇ ಈ ಪ್ರಕ್ರಿಯೆಯಲ್ಲಿ ಎಲ್ಲಾ ರೀತಿಯ ನಿಬಂಧನೆಗಳನ್ನು ಮಾಡಲಾಗಿದೆ.

ಠೇವಣಿದಾರರ ಕ್ಲೈಮ್‌ಗಳ ಪರಿಶೀಲನೆ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಆನ್‌ಲೈನ್ ಕ್ಲೈಮ್ ಸಲ್ಲಿಕೆಯಾದ 45 ದಿನಗಳೊಳಗೆ ಮೊತ್ತವನ್ನು ನೇರವಾಗಿ ಠೇವಣಿದಾರರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

Posted On: 18 JUL 2023 4:20PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ CRCS - ಸಹಾರಾ ಮರುಪಾವತಿ ಪೋರ್ಟಲ್ https://mocrefund.crcs.gov.in ಅನ್ನು ಉದ್ಘಾಟಿಸಿದರು. ಸಹಾರಾ ಗ್ರೂಪ್ನ ಸಹಕಾರಿ ಸಂಘಗಳಾದ ಸಹಾರಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್, ಸಹರಾಯನ್ ಯೂನಿವರ್ಸಲ್ ಮಲ್ಟಿಪರ್ಪಸ್ ಸೊಸೈಟಿ ಲಿಮಿಟೆಡ್, ಹಮಾರಾ ಇಂಡಿಯಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಮತ್ತು ಸ್ಟಾರ್ಸ್ ಮಲ್ಟಿಪರ್ಪಸ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ಗಳ ನಿಜವಾದ ಠೇವಣಿದಾರರಿಂದ ಕ್ಲೈಮ್ಗಳನ್ನು ಸ್ವೀಕರಿಸಲು ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸಹಕಾರ ಸಚಿವಾಲಯದ ರಾಜ್ಯ ಸಚಿವ ಶ್ರೀ ಬಿ.ಎಲ್. ವರ್ಮಾ, ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ, ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರು ಮತ್ತು ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಸಹಾರಾ ಗ್ರೂಪ್ನ ನಾಲ್ಕು ಸಹಕಾರಿ ಸಂಘಗಳ ಠೇವಣಿದಾರರು ಉಪಸ್ಥಿತರಿದ್ದರು.

ಈ ನಾಲ್ಕು ಸಹಕಾರಿ ಸಂಘಗಳಲ್ಲಿ ಜನರು ಕಷ್ಟಪಟ್ಟು ದುಡಿದ ಹಣವು ಸಿಲುಕಿದ್ದ ಕಾರಣ ಈ ಕಾರ್ಯಕ್ರಮವು ಮಹತ್ವದ್ದಾಗಿದೆ, ಮತ್ತು ಈ ಜನರ ಬಗ್ಗೆ ಯಾರು ಕಾಳಜಿ ವಹಿಸಿರಲಿಲ್ಲ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ  ಉಲ್ಲೇಖಿಸಿದರು. ಅಂತಹ ಸಂದರ್ಭಗಳಲ್ಲಿ,  ಸಾಮಾನ್ಯವಾಗಿ ಮಲ್ಟಿ-ಏಜೆನ್ಸಿಗಳನ್ನು ಸೀಜ್ ಮಾಡಲಾಗುತ್ತದೆ, ಆದರೆ ಹೂಡಿಕೆದಾರರ ಬಗ್ಗೆ ಯಾರು ಯೋಚಿಸುವುದಿಲ್ಲ. ಇದು ಸಹಕಾರಿ ಸಂಘಗಳ ಬಗ್ಗೆ ದೊಡ್ಡ ಅಭದ್ರತೆ ಮತ್ತು ಅಪನಂಬಿಕೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ದೇಶದ ಕೋಟ್ಯಂತರ ಜನರ ಬಳಿ ಬಂಡವಾಳವಿಲ್ಲ, ಆದರೆ ಅವರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುತ್ತಾರೆ ಮತ್ತು ಅದಕ್ಕೆ ಸಹಕಾರಿ ಚಳುವಳಿಗಿಂತ ಬೇರೆ ಮಾರ್ಗವಿಲ್ಲ ಎಂದು ಶ್ರೀಯುತ ಶಾ ಹೇಳಿದರು. ಈ ದಿಸೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸುವ ನಿರ್ಧಾರವನ್ನು ಕೈಗೊಂಡರು. ಸಣ್ಣ ಬಂಡವಾಳವನ್ನು ಒಟ್ಟುಗೂಡಿಸಿ ದೊಡ್ಡ ಬಂಡವಾಳವನ್ನು ಸೃಷ್ಟಿಸುವ ಮೂಲಕ ದೊಡ್ಡ ಕೆಲಸಗಳನ್ನು ಮಾಡುವ ಏಕೈಕ ಚಳುವಳಿ ಸಹಕಾರಿ ಎಂದು ಹೇಳಿದರು.

ಶ್ರೀ ಅಮಿತ್ ಶಾರವರು ಮುಂದುವರೆಸುತ್ತಾ ಅನೇಕ ಬಾರಿ ಹಲವು ಹಗರಣಗಳು ಹೊರಗೆ ಬರುತ್ತವೆ, ಮತ್ತು ಹೂಡಿಕೆದಾರದ ಬಂಡವಾಳವು ಇಕ್ಕಟ್ಟಿನಲ್ಲಿ ಸಿಲುಕಿಕೊಳ್ಳುತ್ತದೆ, ಸಹರಾ ಉದಾಹರಣೆ ಎಲ್ಲರ ಮುಂದೆಯೇ ಇದೆ. ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್ನಲ್ಲಿ ಇದರ ಪ್ರಕರಣ ನಡೆದು, ಏಜೆನ್ಸಿಗಳು ತಮ್ಮ ಆಸ್ತಿ ಮತ್ತು ಖಾತೆಗಳಿಗೆ ಸೀಲ್ಮಾಡಿದ ಕಾರಣ,  ಸಹಕಾರ ಸಂಘಗಳ ವಿಶ್ವಾಸಾರ್ಹತೆಯೂ ಕಳೆದುಹೋಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಿದ್ದಾರೆ ಮತ್ತು ಈ ವಿಷಯದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಎಲ್ಲಾ ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಆಚೆ ಬಂದು ಸಣ್ಣ ಹೂಡಿಕೆದಾರರ ಬಗ್ಗೆ ಯೋಚಿಸುವಂತಹ ವ್ಯವಸ್ಥೆಯನ್ನು ಮಾಡಬಹುದೇ ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ಎಲ್ಲಾ ಏಜೆನ್ಸಿಗಳು ಒಟ್ಟಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿವೆ ಮತ್ತು ಪಾವತಿ ಪ್ರಕ್ರಿಯೆಯನ್ನು ಪಾರದರ್ಶಕ ರೀತಿಯಲ್ಲಿ ಪ್ರಾರಂಭಿಸಲು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸುವ ಐತಿಹಾಸಿಕ ನಿರ್ಧಾರವನ್ನು ನೀಡಿದೆ ಎಂದು ಶ್ರೀಯುತ ಶಾ ಹೇಳಿದರು. ಹೂಡಿಕೆದಾರರಿಗೆ ಇಂದು 5,000 ಕೋಟಿ ರೂ.ಗಳನ್ನು ಪ್ರಾಯೋಗಿಕವಾಗಿ ಪಾರದರ್ಶಕ ರೀತಿಯಲ್ಲಿ ಹಿಂದಿರುಗಿಸುವ ಪ್ರಕ್ರಿಯೆ ಆರಂಭವಾಗುತ್ತಿದೆ. ರೂ. 5,000 ಕೋಟಿ ಪಾವತಿ ಪೂರ್ಣಗೊಂಡ ನಂತರ , ಉಳಿದ ಹೂಡಿಕೆದಾರರಿಗೆ ಕೂಡ ಮೊತ್ತವನ್ನು ಹಿಂದಿರುಗಿಸಲು ಸುಪ್ರೀಂ ಕೋರ್ಟ್ನಲ್ಲಿ ಮತ್ತೊಂದು ಮೇಲ್ಮನವಿ ಸಲ್ಲಿಸಲಾಗುವುದು.

ಈ ಪೋರ್ಟಲ್ ಮೂಲಕ ರೂ 10,000 ಅಥವಾ ಹೆಚ್ಚು ಠೇವಣಿ ಇಟ್ಟಿರುವ ಒಂದು ಕೋಟಿ ಹೂಡಿಕೆದಾರರಿಗೆ ರೂ. 10,000 ವರೆಗಿನ ಮೊದಲು ಪಾವತಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಈ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಎಲ್ಲಾ ನಾಲ್ಕು ಸೊಸೈಟಿಗಳ ಸಂಪೂರ್ಣ ಡೇಟಾ ಆನ್ಲೈನ್ನಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.  ನೈಜ ಹೂಡಿಕೆದಾರರಿಗೆ ಯಾವುದೇ ರೀತಿಯ ಮೋಸ ಅಥವಾ ಅನ್ಯಾಯಕ್ಕೆ ಅವಕಾಶವಿಲ್ಲದಂತೆ ಈ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಎಲ್ಲಾ ನಿಬಂಧನೆಗಳನ್ನು ಕೈಗೊಳ್ಳವಾಗಿದೆ ಎಂದು ಹೇಳಿದರು.

ಯಾವುದೇ ಹೂಡಿಕೆ ಮಾಡದ ಜನರು ಈ ಪೋರ್ಟಲ್ನಿಂದ ಯಾವುದೇ ರೀತಿಯಲ್ಲಿಯೂ ಮರುಪಾವತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ, ಆದರೆ ಹೂಡಿಕೆ ಮಾಡಿದವರು ಖಚಿತವಾಗಿ ಮರುಪಾವತಿಯನ್ನು ಸ್ವೀಕರಿಸುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ) ಮೂಲಕ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಬೇಕು ಎಂದು ಸಹಕಾರ ಸಚಿವರು ಸೂಚನೆ ನೀಡಿದರು. ಎಲ್ಲಾ ಹೂಡಿಕೆದಾರರು ಸಿಎಸ್ಸಿ ಸೌಲಭ್ಯದ ಮೂಲಕ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳುವಂತೆ ಅವರು ವಿನಂತಿಸಿದರು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ಷರತ್ತುಗಳಿವೆ ಎಂದು ಶ್ರೀ ಶಾ ಹೇಳಿದರು: ಮೊದಲನೆಯದಾಗಿ, ಹೂಡಿಕೆದಾರರ ಆಧಾರ್ ಕಾರ್ಡ್ಅನ್ನು ಅವರ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕು ಮತ್ತು ಎರಡನೆಯದಾಗಿ, ಅವರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ಅನ್ನು ಲಿಂಕ್ ಮಾಡಬೇಕು. ಹೂಡಿಕೆದಾರರಿಗೆ 45 ದಿನಗಳಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇಂದು ತುಂಬಾ ಮಹತ್ವದ ಆರಂಭಕ್ಕೆ ಮುನ್ನುಡಿ ಬರೆದಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೊಟ್ಟಮೊದಲ ಬಾರಿಗೆ ಹೂಡಿಕೆದಾರರು ಹಗರಣದಿಂದ ಸಿಕ್ಕಿಬಿದ್ದ ಹಣವನ್ನು ಪಾರದರ್ಶಕವಾಗಿ ಸ್ವೀಕರಿಸುತ್ತಿರುವುದು ಬಹಳ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು. ಈಗ ಕೋಟಿಗಟ್ಟಲೆ ಜನರು ವಂಚನೆಗಳಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ, ಕಷ್ಟಪಟ್ಟು ದುಡಿದ ತಮ್ಮ ಹಣವನ್ನು ಮರಳಿ ಪಡೆಯಲಿದ್ದಾರೆ ಎಂದರು. ಸರಿಸುಮಾರು 1.78 ಕೋಟಿ ಸಣ್ಣ ಹೂಡಿಕೆದಾರರು ವಂಚನೆಯಲ್ಲಿ ಸಿಲುಕಿದ್ದ ರೂ. 30,000 ವರೆಗಿನ, ತಮ್ಮ ಹಣವನ್ನು ಹಿಂತಿರುಗಿ ಪಡೆಯುತ್ತಿದ್ದಾರೆ, ಇದೊಂದು ದೊಡ್ಡ ಸಾಧನೆಯೇ ಸರಿಯೆಂದರು.

ಗೌರವಾನ್ವಿತ ಸುಪ್ರೀಂ ಕೋರ್ಟ್ ಮಾರ್ಚ್ 29, 2023 ರಂದು  ಸಹಾರಾ ಗ್ರೂಪ್ ಆಫ್ ಕೋಆಪರೇಟಿವ್ ಸೊಸೈಟಿಗಳ ನಿಜವಾದ ಠೇವಣಿದಾರರ ಕಾನೂನುಬದ್ಧ ಬಾಕಿಗಳ ವಿತರಣೆಗಾಗಿ ರೂ. 5000 ಕೋಟಿಗಳನ್ನು "ಸಹಾರಾ-ಸೆಬಿ ಮರುಪಾವತಿ ಖಾತೆ" ಯಿಂದ ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ (CRCS) ಗೆ ವರ್ಗಾಯಿಸುವಂತೆ ಆದೇಶ ನೀಡಿತು. ಈ ಸಂಫೂರ್ಣ ವಿತರಣಾ ಪ್ರಕ್ರಿಯೆ ಗೌರವಾನ್ವಿತ ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ, ಅಮಿಕಸ್ ಕ್ಯೂರಿಯ ವಕೀಲರಾದ ಶ್ರೀ ಗೌರವ್ ಅಗರವಾಲ್ ಅವರ ಸಹಾಯದ ಜೊತೆಗೆ ಗೌರವಾನ್ವಿತ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿಯವರವ ಮೇಲ್ವಿಚಾರಣೆಯಲ್ಲಿ ನಡೆಯಲಿದೆ. ಮರುಪಾವತಿ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಮೇಲಿನ ಪ್ರತಿಯೊಂದು ಸೊಸೈಟಿಗಳಿಗೆ ವಿಶೇಷ ಕರ್ತವ್ಯದ ಮೇಲಿನ ನಾಲ್ಕು ಹಿರಿಯ ಅಧಿಕಾರಿಗಳನ್ನು (Officers On Special Duty) ನೇಮಿಸಲಾಗಿದೆ.

ಕ್ಲೈಮ್ಗಳ ಸಲ್ಲಿಕೆಗಾಗಿ ಅಭಿವೃದ್ಧಿಪಡಿಸಲಾದ ಆನ್ಲೈನ್ ಪೋರ್ಟಲ್ ಬಳಕೆದಾರ ಸ್ನೇಹಿ, ಪರಿಣಾಮಕಾರಿ ಮತ್ತು ಪಾರದರ್ಶಕವಾಗಿದೆ. ಇಡೀ ಪ್ರಕ್ರಿಯೆಯು ಡಿಜಿಟಲ್ ಆಗಿದೆ. ನಿಜವಾದ ಠೇವಣಿದಾರರ ಕಾನೂನುಬದ್ಧ ಠೇವಣಿಗಳನ್ನು ಮಾತ್ರ ಮರುಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ಪೋರ್ಟಲ್ನಲ್ಲಿ ಅಗತ್ಯ ಪರಿಶೀಲನೆ ಮತ್ತು ಕ್ರಮಗಳನ್ನು ಅಳವಡಿಸಲಾಗಿದೆ. ಸಹಕಾರ ಸಚಿವಾಲಯದ ವೆಬ್ಸೈಟ್ ಮೂಲಕ ಪೋರ್ಟಲ್ಅನ್ನು ಸಹ ಪ್ರವೇಶಿಸಬಹುದು. ಈ ಸೊಸೈಟಿಗಳ ನಿಜವಾದ ಠೇವಣಿದಾರರು ಪೋರ್ಟಲ್ನಲ್ಲಿ ಲಭ್ಯವಿರುವ ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಸಲ್ಲಿಸಬೇಕು. ಠೇವಣಿದಾರರ ಗುರುತನ್ನು ಖಚಿತಪಡಿಸಿಕೊಳ್ಳಲು ಆಧಾರ್ ಕಾರ್ಡ್ ಮೂಲಕ ಪರಿಶೀಲಿಸಲಾಗುತ್ತದೆ. ನೇಮಕಗೊಂಡ ಸೊಸೈಟಿಗಳು, ಲೆಕ್ಕಪರಿಶೋಧಕರು ಮತ್ತು OSD ಗಳಿಂದ ಅವರ ಕ್ಲೈಮ್ ಮತ್ತು ಅಪ್ಲೋಡ್ ಮಾಡಿದ ದಾಖಲೆಗಳ ಪರಿಶೀಲನೆ ನಂತರ, ನಿಧಿಯ ಲಭ್ಯತೆಯ ಅನುಸಾರ ನಿಜವಾದ ಠೇವಣಿದಾರರಿಗೆ  ಅವರು ಆನ್ಲೈನ್ ಕ್ಲೈಮ್ಗಳನ್ನು ಸಲ್ಲಿಸಿದ  45 ದಿನಗಳಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ, ಮತ್ತು SMS/ಪೋರ್ಟಲ್ ಮೂಲಕ ಅವರಿಗೆ ತಿಳಿಸಲಾಗುತ್ತದೆ. ಸೊಸೈಟಿಗಳ ನಿಜವಾದ ಠೇವಣಿದಾರರು ತಮ್ಮ ಹಕ್ಕು ಮತ್ತು ಠೇವಣಿಗಳ ಪುರಾವೆಯಾಗಿ ಅಗತ್ಯವಿರುವ ದಾಖಲೆಗಳೊಂದಿಗೆ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ವಿನಂತಿಸಲಾಗಿದೆ.

****



(Release ID: 1940582) Visitor Counter : 177