ಪ್ರಧಾನ ಮಂತ್ರಿಯವರ ಕಛೇರಿ
ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಇದರ ನಿಯೋಜಿತ ಅಧ್ಯಕ್ಷ ಡಾ. ಸುಲ್ತಾನ್ ಅಲ್ ಜಾಬರ್ ಅವರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ
Posted On:
15 JUL 2023 5:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 15 ಜುಲೈ 2023 ರಂದು ಅಬುಧಾಬಿಯಲ್ಲಿ ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಇದರ ನಿಯೋಜಿತ ಅಧ್ಯಕ್ಷ ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ ಗ್ರೂಪ್ ಸಂಸ್ಥೆಯ ಸಿಇಒ ಡಾ. ಸುಲ್ತಾನ್ ಅಲ್ ಜಾಬರ್ ಅವರನ್ನು ಭೇಟಿಯಾದರು.
ಯು.ಎ.ಇ.ಯ ಅಧ್ಯಕ್ಷತೆಯಡಿಯಲ್ಲಿ ನಡೆಯಲಿರುವ ಯು.ಎನ್.ಎಫ್.ಸಿ.ಸಿ.ಸಿ.ಯ ಮುಂಬರುವ ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಕುರಿತು ಚರ್ಚೆಗಳು ನಡೆದವು. ಈ ಮಹತ್ವದ ಸಭೆಗೆ ಯು.ಎ.ಇ. ನಡೆಸಿರುವ ಕಾರ್ಯವಿಧಾನಗಳ ಕುರಿತು ಡಾ. ಜಾಬರ್ ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಇದರ ಅಧ್ಯಕ್ಷತೆ ಹೊಂದಿರುವ ಯು.ಎ.ಇ.ಗೆ ಭಾರತದ ಸಂಪೂರ್ಣ ಬೆಂಬಲವನ್ನು ಪ್ರಧಾನಮಂತ್ರಿ ಅವರು ತಿಳಿಸಿದರು. ಅಂತರರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಅಂತರರಾಷ್ಟ್ರೀಯ ಸಿರಿಧಾನ್ಯ(ರಾಗಿ) ವರ್ಷ ಮತ್ತು ಪರಿಸರಕ್ಕಾಗಿ ಮಿಷನ್ ಜೀವನಶೈಲಿ (ಲೈಫ್) ಸೇರಿದಂತೆ ಹವಾಮಾನ ಬದಲಾವಣೆಯನ್ನು ಸಕಾರಾತ್ಮಕವಾಗಿ ಪರಿಹರಿಸಲು ಭಾರತವು ಮಾಡಿರುವ ಪ್ರಯತ್ನಗಳು ಮತ್ತು ಮಾಡುತ್ತಿರುವ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ವಿವರಿಸಿದರು.
ಚರ್ಚೆಗಳು ಭಾರತ ಮತ್ತು ಯು.ಎ.ಇ. ನಡುವಿನ ಇಂಧನ ಸಹಕಾರವನ್ನು ಕೂಡಾ ಒಳಗೊಂಡಿವೆ.
****
(Release ID: 1939834)
Visitor Counter : 147
Read this release in:
Assamese
,
Gujarati
,
Tamil
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Odia
,
Telugu
,
Malayalam