ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಚಂದ್ರಯಾನ-3 ಯಶಸ್ವಿ ಉಡಾವಣೆಯನ್ನು ಶ್ಲಾಘಿಸಿದ ಉಪರಾಷ್ಟ್ರಪತಿ

ಪ್ರಕಟಣಾ ದಿನಾಂಕ: 14 JUL 2023 4:22PM by PIB Bengaluru

ಚಂದ್ರಯಾನ-3 ಯಶಸ್ವಿ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯನ್ನು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಅಭಿನಂದಿಸಿದರು.

ತಮ್ಮ ಟ್ವೀಟ್ ಸಂದೇಶದಲ್ಲಿ ಉಪರಾಷ್ಟ್ರಪತಿಯವರು ಹೀಗೆ ಹೇಳಿದ್ದಾರೆ:

"ಚಂದ್ರಯಾನ-3 ಇದರ ಐತಿಹಾಸಿಕ ಉಡಾವಣೆಗಾಗಿ #ಇಸ್ರೋ ( #ISRO ) ಸಂಸ್ಥೆಯ ತಂಡಕ್ಕೆ ಅಭಿನಂದನೆಗಳು! ಈ ಅಸಾಮಾನ್ಯ ಸಾಧನೆಯು ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ದೇಶ ಮಾಡಿರುವ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿನ ಈ ಮೈಲಿಗಲ್ಲು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡುತ್ತದೆ!" @isro 

***


(ಪ್ರಕಟಣೆ ಐ.ಡಿ.: 1939513) ವಿಸಿಟರ್ ಕೌಂಟರ್ : 215
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Punjabi , Tamil