ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಗಡಿ ಪ್ರದೇಶಗಳಲ್ಲಿ ಮಕ್ಕಳ ಕಳ್ಳಸಾಗಣೆ ತಡೆಗೆ ಮೂಲಸೌಕರ್ಯ ನಿರ್ಮಾಣಕ್ಕೆ ಸರ್ಕಾರ ನೆರವಾಗಲಿದೆ


ಮಾನವ ಕಳ್ಳಸಾಗಣೆ ತಡೆಗಟ್ಟಲು ಗಡಿ ಪ್ರದೇಶಗಳಲ್ಲಿ 30 ಗಡಿ ರಕ್ಷಣಾ  ಪಡೆಗಳು ಸೇರಿದಂತೆ 788 ಮಾನವ ಕಳ್ಳಸಾಗಣೆ ತಡೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

Posted On: 11 JUL 2023 2:00PM by PIB Bengaluru

ಮಾನವ ಕಳ್ಳಸಾಗಣೆ ಸಂತ್ರಸ್ತರಿಗೆ, ವಿಶೇಷವಾಗಿ ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರಿಗೆ ಆಶ್ರಯ ಮತ್ತು ಪುನರ್ವಸತಿ ಮನೆಗಳನ್ನು ಸ್ಥಾಪಿಸಲು ಗಡಿ ಪ್ರದೇಶಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ಈ ಮನೆಗಳು ವಸತಿ, ಆಹಾರ, ಬಟ್ಟೆ, ಸಮಾಲೋಚನೆ, ಪ್ರಾಥಮಿಕ ಆರೋಗ್ಯ ಸೇವೆ ಮತ್ತು ಇತರ ದೈನಂದಿನ ಅಗತ್ಯಗಳಂತಹ ಸೌಲಭ್ಯಗಳನ್ನು ಒದಗಿಸುತ್ತವೆ.

ಮಿಷನ್ ವಾತ್ಸಲ್ಯ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಸಂತ್ರಸ್ತ ಬಾಲಕಿಯರಿಗೆ ಪ್ರಾಯೋಜಕತ್ವವನ್ನು ಒದಗಿಸಲು ಅವರನ್ನು ಮಕ್ಕಳ ಕಲ್ಯಾಣ ಸಮಿತಿ (ಸಿ ಡಬ್ಲ್ಯೂ ಸಿ)  ಯ ಮುಂದೆ ಹಾಜರುಪಡಿಸಲಾಗುವುದು ಮತ್ತು ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗುವುದು.
 
ದೇಶದ ಪ್ರತಿ ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಣೆ ತಡೆ ಘಟಕಗಳನ್ನು  ಸ್ಥಾಪಿಸಲು/ಬಲಪಡಿಸಲು ನಿರ್ಭಯಾ ನಿಧಿಯ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ  ಆರ್ಥಿಕ ನೆರವನ್ನು  ಒದಗಿಸಿದೆ.  ಹೆಚ್ಚುವರಿಯಾಗಿ, ಮಾನವ ಕಳ್ಳಸಾಗಣೆ ತಡೆ ಕೇಂದ್ರಗಳಾದ ಬಿಎಸ್ಎಫ್ ಮತ್ತು ಎಸ್ಎಸ್ಬಿ ಯಂತಹ ಗಡಿ ರಕ್ಷಣಾ ಪಡೆಗಳಿಗೂ  ಆರ್ಥಿಕ ನೆರವನ್ನು ಒದಗಿಸಲಾಗಿದೆ. ಗಡಿ ಪ್ರದೇಶಗಳಲ್ಲಿ 30 ಕೇಂದ್ರಗಳು ಸೇರಿದಂತೆ ಇಲ್ಲಿಯವರೆಗೆ 788 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ

 
ಭಾರತವು ವ್ಯಕ್ತಿಗಳ ಕಳ್ಳಸಾಗಣೆಗೆ ಒಂದು ಮೂಲ ಮತ್ತು ಗಮ್ಯ ದೇಶವಾಗಿದೆ. ಮೂಲ ದೇಶಗಳು ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಆಗಿದ್ದು, ಭಾರತದಲ್ಲಿ ಉತ್ತಮ ಜೀವನ, ಉದ್ಯೋಗಗಳು ಮತ್ತು ಉತ್ತಮ ಜೀವನ ಸ್ಥಿತಿಯನ್ನು ಸಾಬೀತುಪಡಿಸುವ ನೆಪದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಕಳ್ಳಸಾಗಣೆ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಹುಡುಗಿಯರು/ ಕಿರಿಯ ವಯಸ್ಸಿನ ಮಹಿಳೆಯರು, ಭಾರತಕ್ಕೆ ಬಂದ ನಂತರ ಅವರನ್ನು ಮಾರಾಟ ಮಾಡಲಾಗುತ್ತದೆ ಮತ್ತು ವಾಣಿಜ್ಯ ಲೈಂಗಿಕ ಕೆಲಸಕ್ಕೆ ಒತ್ತಾಯಿಸಲಾಗುತ್ತದೆ.
ಭಾರತವು ಮಾನವ ಕಳ್ಳಸಾಗಣಿಕೆಯ ಮೂಲ ಹಾಗು ತಾಣವಾಗಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಮಾನವ ಕಳ್ಳಸಾಗಣೆಯ ಮೂಲ ದೇಶಗಳಾಗಿದ್ದು, ಭಾರತದಲ್ಲಿ ಉತ್ತಮ ಜೀವನ, ಉದ್ಯೋಗ ಮತ್ತು ಉತ್ತಮ ಜೀವನ ಪರಿಸ್ಥಿತಿಗಳ ಆಮಿಷವೊಡ್ಡಿ ಮಹಿಳೆಯರು ಮತ್ತು ಬಾಲಕಿಯರನ್ನು  ಕಳ್ಳಸಾಗಣೆ ಮಾಡಲಾಗುತ್ತದೆ. ಇವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಹುಡುಗಿಯರು ಮತ್ತು ಕಿರಿಯ ವಯಸ್ಸಿನ ಮಹಿಳೆಯರಾಗಿದ್ದು  ಭಾರತದೊಳಗೆ ಪ್ರವೇಶಿಸಿದ ನಂತರ ಅವರನ್ನು ಮಾರಾಟ ಮಾಡಲಾಗುತ್ತದೆ ಮತ್ತು  ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. 

ಈ ಹುಡುಗಿಯರು ಮತ್ತು ಮಹಿಳೆಯರು ಹೆಚ್ಚಾಗಿ ಮುಂಬೈ ದೆಹಲಿ, ಹೈದರಾಬಾದ್, ಮುಂತಾದ ಪ್ರಮುಖ ನಗರಗಳನ್ನು ತಲುಪುತ್ತಾರೆ, ಅಲ್ಲಿಂದ ಅವರನ್ನು ಮುಖ್ಯವಾಗಿ ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದ ದೇಶಗಳಿಗೆ ಕರೆದೊಯ್ಯಲಾಗುತ್ತದೆ. ಈ ಕಾರಣದಿಂದಾಗಿಯೇ, ಈ ದೇಶಗಳ  ಗಡಿಯಲ್ಲಿರುವ ರಾಜ್ಯಗಳು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಕಳ್ಳಸಾಗಣೆಯ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಸೇವೆಗಳನ್ನು ಒದಗಿಸಲು ಸಾಕಷ್ಟು ಸೌಲಭ್ಯಗಳನ್ನು ಹೊಂದಿರಬೇಕು.
 
ಇದಲ್ಲದೆ,  ಬಾಲ ನ್ಯಾಯ ಕಾಯಿದೆ, (ಜೆಜೆ ಕಾಯಿದೆ) 2015 ರ ಸೆಕ್ಷನ್ 51 ರ ಪ್ರಕಾರ (2021 ರಲ್ಲಿ ತಿದ್ದುಪಡಿ ಮಾಡಿದಂತೆ), (1) ನಿಗದಿತ ಮಾನದಂಡಗಳ ಪ್ರಕಾರ ಮಂಡಳಿ ಅಥವಾ ಸಮಿತಿಯು ಸರಿಯಾದ ವಿಚಾರಣೆಯ ನಂತರ ತಾತ್ಕಾಲಿಕವಾಗಿ  ಮಗುವಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಮರ್ಥ್ಯವಿರುವ ಕಾಯಿದೆಯ ಅಡಿಯಲ್ಲಿ ನೋಂದಾಯಿಸಲಾದ ಯಾವುದೇ ಸರ್ಕಾರಿ ಸಂಸ್ಥೆಗಳು ಅಥವಾ ಸರ್ಕಾರೇತರ ಸಂಸ್ಥೆಗಳನ್ನು ಆಯ್ಕೆ ಮಾಡುತ್ತದೆ ಮತ್ತು(2) ಮಂಡಳಿ ಅಥವಾ ಸಮಿತಿಯು ಲಿಖಿತ ರೂಪದಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ ಉಪ-ವಿಭಾಗ (1) ರ  ಅಡಿಯಲ್ಲಿ ಅದರ ಅನುಮೋದನೆಯನ್ನು ಹಿಂತೆಗೆದುಕೊಳ್ಳಬಹುದು. 

****



(Release ID: 1938722) Visitor Counter : 114