ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಈ ವಾರ ಶ್ರೀಹರಿಕೋಟಾದಿಂದ ಉಡಾವಣೆಯಾಗಲು ನಿಗದಿಯಾಗಿರುವ ಚಂದ್ರಯಾನ-3, ಚಂದ್ರನ ಮೇಲ್ಮೈನಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸಿದ 4ನೇ ರಾಷ್ಟ್ರ ಭಾರತ ಆಗಲಿದೆ – ಡಾ. ಜಿತೇಂದ್ರ ಸಿಂಗ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಡಳಿತದಲ್ಲಿ, ಬಾಹ್ಯಾಕಾಶ ಪರಿಣಿತಿಯಲ್ಲಿ ನಾವು ಭಾರೀ ಮುಂದುವರಿದಿದ್ದು, ಭಾರತವು ಚಂದ್ರನತ್ತ ತನ್ನ ಪಯಣದಲ್ಲಿ ಹಿಂದೆ ಉಳಿಯಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.
ಚಂದ್ರಯಾನ-2 ನಂತರ ಚಂದ್ರಯಾನ-3 ಕೈಗೊಳ್ಳಲಾಗುತ್ತಿದ್ದು, ಇದು ಚಂದ್ರನ ಅಂಗಳದಲ್ಲಿ ಅಥವಾ ಚಂದ್ರನ ಮೇಲ್ಮೈನಲ್ಲಿ ಮೃದುವಾಗಿ ಇಳಿದ್ದು, ಚಲನೆ ಮಾಡುವ ಮೂಲಕ, ಭಾರತದ ಸಾಮರ್ಥ್ಯ ಪ್ರದರ್ಶನದ ಗುರಿ ಹೊಂದಿದೆ – ಜಿತೇಂದ್ರ ಸಿಂಗ್
ಚಂದ್ರಯಾನ-2ರ ಉತ್ತರಾಧಿಕಾರಿಯಾಗಿರುವ ಚಂದ್ರಯಾನ-3ರಲ್ಲಿ, ಲ್ಯಾಂಡರ್ ನ ದೃಢತೆಯನ್ನು ಹೆಚ್ಚಿಸಲು ಕೆಲವು ಬದಲಾವಣೆ ಮಾಡಲಾಗಿದೆ
Posted On:
09 JUL 2023 2:12PM by PIB Bengaluru
ಈ ವಾರ ಶ್ರೀಹರಿಕೋಟಾದಿಂದ ನಿಗದಿಯಾಗಿರುವ ಚಂದ್ರಯಾನ-3 ಉಡಾವಣೆ ನಂತರ ಚಂದ್ರನ ಮೇಲ್ಮೈನಲ್ಲಿ ತನ್ನ ಬಾಹ್ಯಾಕಾಶ ನೌಕೆ (ಸ್ಪೇಸ್ ಕ್ರಾಫ್ಟ್) ಅನ್ನು ಇಳಿಸಿದ 4ನೇ ರಾಷ್ಟ್ರ ಭಾರತವಾಗಲಿದೆ.
ಸುದ್ದಿ ಸಂಸ್ಥೆಗೆ ಇಂದು ನೀಡಿದ ವಿಶೇಷ ಸಂದರ್ಶನದಲ್ಲಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಅಣು ಇಂಧನ ಇಲಾಖೆ, ಬಾಹ್ಯಾಕಾಶ ಇಲಾಖೆ, ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇತ್ತೀಚೆಗೆ ಕೈಗೊಂಡ ಅಮೆರಿಕ ಭೇಟಿ ವೇಳೆ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದು ಭಾರತಕ್ಕೂ ಮುಂಚಿತವಾಗಿಯೇ ಬಾಹ್ಯಾಕಾಶ ಯಾತ್ರೆ ಕೈಗೊಂಡ ರಾಷ್ಟ್ರಗಳು ಇಂದು ಭಾರತವನ್ನು ಸಮಾನ ಸಹಭಾಗಿಯಾಗಿ ನೋಡುತ್ತಿವೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಳಿತಾವಧಿಯಲ್ಲಿ ಬಾಹ್ಯಾಕಾಶ ಪರಿಣಿತಿಯಲ್ಲಿ ನಾವು ಗಮನಾರ್ಹ ಸಾಧನೆ ಮಾಡಿದ್ದೇವೆ. ಭಾರತವು ಚಂದ್ರನತ್ತ ತನ್ನ ಪಯಣ ಮಾಡುವ ಕಾಲ ಕೂಡಿ ಬಂದಿದೆ ಎಂದು ಸಚಿವರು ಹೇಳಿದರು.
ಚಂದ್ರಯಾನ-2ರ ನಂತರ ಮುಂದುವರಿದ ಭಾಗವಾಗಿ ಚಂದ್ರಯಾನ-3 ಕೈಗೊಳ್ಳಲಾಗಿದೆ ಮತ್ತು ಇದು ಚಂದ್ರನ ಅಂಗಳದಲ್ಲಿ ಅಥವಾ ಚಂದ್ರನ ಮೇಲ್ಮೈ ಮೇಲೆ ಮೃದುವಾಗಿ ಲ್ಯಾಂಡಿಂಗ್ ಮತ್ತು ರೋವಿಂಗ್ ಮಾಡುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದರು. ಇದೊಂದು ಸಂಕೀರ್ಣ ಮಿಷನ್ ಆಗಿದ್ದು, ಚಂದ್ರನ ಕಕ್ಷೆಗೆ ಸ್ಪೇಸ್ ಕ್ರಾಫ್ಟ್ (ಬಾಹ್ಯಕಾಶ ನೌಕೆ) ಅನ್ನು ನಿರ್ದಿಷ್ಟ ರೀತಿಯಲ್ಲಿ ಪ್ರವೇಶಿಸುವಂತೆ ಮಾಡಬೇಕಿದೆ. ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮೇಲೆ ಇಳಿದ ನಂತರ 6 ಚಕ್ರಗಳನ್ನು ಹೊಂದಿರುವ ರೋವರ್ ಹೊರಬರುತ್ತದೆ ಮತ್ತು ಅದು 14 ದಿನಗಳ ಕಾಲ ಚಂದ್ರನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ರೋವರ್ ನಲ್ಲಿ ಹಲವು ಕ್ಯಾಮರಾಗಳಿದ್ದು, ಅವುಗಳಿಂದ ನಾವು ಚಿತ್ರಗಳನ್ನು ಸ್ವೀಕರಿಸಬಹುದಾಗಿದೆ ಎಂದರು.
ಸಾರ್ವಜನಿಕ ಖಾಸಗಿ ಪಾಲುದಾರಿಕೆ(ಪಿಪಿಪಿ)ಗೆ ಬಾಹ್ಯಾಕಾಶ ವಲಯವನ್ನು ಮುಕ್ತಗೊಳಿಸಿದ್ದು ಸೇರಿದಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ಮತ್ತು ಬಾಹ್ಯಾಕಾಶ ಸಿಬ್ಬಂದಿಗೆ ಪೂರಕ ವಾತಾವರಣ ನಿರ್ಮಿಸಲು ಅನುವು ಮಾಡಿಕೊಟ್ಟ ಸಂಪೂರ್ಣ ಶ್ರೇಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದ ಡಾ. ಜಿತೇಂದ್ರ ಸಿಂಗ್ ಅವರು, ಸದ್ಯದ ಯಶೋಗಾಥೆ ಆಧರಿಸಿ ಭಾರತದ ಬಾಹ್ಯಾಕಾಶ ವಲಯ ಮುಂದಿನ ವರ್ಷಗಳಲ್ಲಿ ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ತಲುಪಲಿದೆ ಎಂದರು.
ಯೋಜನೆ ಕುರಿತು ಮತ್ತಷ್ಟು ವಿವರಿಸಿದ ಡಾ. ಜಿತೇಂದ್ರ ಸಿಂಗ್ ಅವರು, ಚಂದ್ರಯಾನ-3 ಯೋಜನೆಯು ಪ್ರಾಥಮಿಕವಾಗಿ ಮೂರು ಉದ್ದೇಶಗಳನ್ನು ಹೊಂದಿದೆ. ಎ)ಮಂಗಳನ ಮೇಲ್ಮೈ ಮೇಲೆ ಸುರಕ್ಷಿತ ಹಾಗೂ ಸಾಫ್ಟ್ ಲ್ಯಾಂಡಿಗ್ ಬಿ) ಚಂದ್ರನಲ್ಲಿ ರೋವರ್ ಓಡಾಡುವುದನ್ನು ಪ್ರದರ್ಶಿಸುವುದು ಮತ್ತು ಸಿ) ಸ್ಥಳದಲ್ಲಿಯೇ ಕೆಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು.
ಚಂದ್ರಯಾನ ಸರಣಿ ಅಂದರೆ ಚಂದ್ರಯಾನ-1ಅನ್ನು ನೆನಪು ಮಾಡಿಕೊಂಡ ಸಚಿವರು, ಅದು ಚಂದ್ರನ ಮೇಲ್ಮೈನಲ್ಲಿ ನೀರಿನ ಇರುವಿಕೆಯನ್ನು ಸಂಶೋಧಿಸಿತ್ತು. ಇದು ವಿಶ್ವದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿತ್ತು ಮತ್ತು ಅಮೆರಿಕದ ಪ್ರಮುಖ ಬಾಹ್ಯಾಕಾಶ ಸಂಸ್ಥೆ ನಾಸಾ(ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್) ಸೇರಿದಂತೆ ಪ್ರಮುಖ ಸಂಸ್ಥೆಗಳು ಸಂಶೋಧನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದವು ಮತ್ತು ಅವುಗಳು ತಮ್ಮ ಮತ್ತಷ್ಟು ಪ್ರಯೋಗಗಳಿಗೆ ಈ ಮಾಹಿತಿಯನ್ನು ಬಳಸಿಕೊಂಡರು. ಚಂದ್ರಯಾನ-3ರ ಕುರಿತಂತೆ ಸಚಿವರು, ಅದು ಮುಂದಿನ ಹಂತದಲ್ಲಿ ಕಾರ್ಯ ನಿರ್ವಹಿಸುತ್ತದೆ ಅದನ್ನು ಇಸ್ರೋ ಸಂಸ್ಥೆ ತನ್ನ ಉಡಾವಣಾ ವಾಹಕ ಮಾರ್ಕ್-3 ಮೂಲಕ ಉಡಾವಣೆ ಮಾಡಲಿದೆ ಎಂದರು.
2019ರ ಸೆಪ್ಟೆಂಬರ್ 6ರಂದು ಉಡಾವಣೆ ಮಾಡಲಾದ ಚಂದ್ರಯಾನ-2 ಉಡಾವಣೆ ನಂತರ 13 ನಿಮಿಷಗಳ ಬಳಿಕ ಅದು ವಿಫಲವಾಗಿ ನಿರೀಕ್ಷಿತ ಫಲಿತಾಂಶಗಳನ್ನು ನೀಡದ ಹಿನ್ನೆಲೆಯಲ್ಲಿ ಚಂದ್ರಯಾನ-3 ಉಡಾವಣೆಗೆ ದೇಶಾದ್ಯಂತ ಭಾರೀ ಕುತೂಹಲ ಉಂಟಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಖುದ್ದು ಶ್ರೀಹರಿಕೋಟಾದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.
ಚಂದ್ರಯಾನ-2ರ ನಂತರ ಚಂದ್ರಯಾನ-3 ಅನ್ನು ಉಡಾವಣೆ ಮಾಡುತ್ತಿದ್ದು, ಆ ಲ್ಯಾಂಡರ್ ನ ಉತ್ಕೃಷ್ಟತೆ ಹೆಚ್ಚಿಸಲು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಎಲ್ಲ ಬದಲಾವಣೆಗಳನ್ನು ವ್ಯಾಪಕ ತಳಮಟ್ಟದ ಪರೀಕ್ಷೆಗಳು ಮತ್ತು ಟೆಸ್ಟ್ ಬೆಡ್ ಗಳ ಮೂಲಕ ಸಿಮ್ಯುಲೇಶನ್ಸ್ ಮಾಡಿ, ಪರಿಷ್ಕರಣೆ ಮಾಡಲಾಗಿದೆ ಎಂದರು.
ಚಂದ್ರಯಾನ-3ರ ಲ್ಯಾಂಡರ್ ಮತ್ತು ರೋವರ್ ಎರಡೂ ಮಾದರಿಗಳು ಪೇಲೋಡ್ ನೊಂದಿಗೆ ಸಂಪರ್ಕ ಹೊಂದಿದ್ದು, ಅವು ಚಂದ್ರನ ಮೇಲಿನ ಮಣ್ಣು, ಕಲ್ಲು, ಸೇರಿದಂತೆ ರಾಸಾಯನಿಕ ಮತ್ತು ಧಾತುರೂಪದ ಸಂಯೋಜನೆ ಸೇರಿದಂತೆ ಬಂಡೆಗಳ ವಿವಿಧ ಗುಣಲಕ್ಷಣಗಳ ಬಗ್ಗೆ ಮಾಹಿತಿಗಳನ್ನು ನೀಡಲಿದೆ ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು.
****
(Release ID: 1938321)
Visitor Counter : 152