ಸಂಪುಟ

ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ (CDRI)ಕ್ಕಾಗಿ ಒಕ್ಕೂಟ ಮತ್ತು ಭಾರತ ಸರ್ಕಾರ ನಡುವಿನ ಪ್ರಧಾನ ಕಛೇರಿಗಳ ಒಪ್ಪಂದದ (HQA) ದೃಢೀಕರಣಕ್ಕೆ ಸಂಪುಟ ಅನುಮೋದನೆ

Posted On: 28 JUN 2023 3:51PM by PIB Bengaluru

 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, 2022ರ ಆಗಸ್ಟ್ 22ರಂದು ಸಹಿ ಮಾಡಿದ ಭಾರತ ಸರ್ಕಾರ ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ ಒಕ್ಕೂಟದ (CDRI) ನಡುವಿನ ಪ್ರಧಾನ ಕಛೇರಿಗಳ ಒಪ್ಪಂದದ (HQA) ದೃಢೀಕರಣಕ್ಕೆ ಇಂದು ತನ್ನ ಅನುಮೋದನೆಯನ್ನು ನೀಡಿದೆ.

2019ರ ಸೆಪ್ಟೆಂಬರ್ 23ರಂದು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾರತದ ಪ್ರಧಾನ ಮಂತ್ರಿಯವರು ಸಿಡಿಆರ್ ಐಯನ್ನು ಆರಂಭಿಸಿದರು. ಇದು ಭಾರತ ಸರ್ಕಾರವು ಪ್ರಾರಂಭಿಸಿದ ಪ್ರಮುಖ ಜಾಗತಿಕ ಉಪಕ್ರಮವಾಗಿದ್ದು, ಹವಾಮಾನ ಬದಲಾವಣೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವದ ವಿಷಯಗಳಲ್ಲಿ ಜಾಗತಿಕ ನಾಯಕತ್ವದ ಪಾತ್ರವನ್ನು ವಹಿಸಲು ಭಾರತ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

2019ರ ಆಗಸ್ಟ್ 28ರಂದು ಕೇಂದ್ರ ಸಂಪುಟವು ದೆಹಲಿಯಲ್ಲಿ ಸಿಡಿಆರ್ ಐನೊಂದಿಗೆ ಅದಕ್ಕೆ ಪೂರಕವಾದ ಸಚಿವಾಲಯವನ್ನು ಸ್ಥಾಪಿಸಲು ಸರ್ಕಾರಕ್ಕೆ ಅನುಮೋದನೆ ನೀಡಿತು. 2019-20 ರಿಂದ 2023-24 ರವರೆಗಿನ 5 ವರ್ಷಗಳ ಅವಧಿಯಲ್ಲಿ ಸಿಡಿಆರ್ ಐಗೆ 480 ಕೋಟಿ ಹಣಕಾಸು ನೆರವು ನೀಡಲು ಸಂಪುಟ ಅನುಮೋದನೆ ನೀಡಿತ್ತು.
ತರುವಾಯ, ಜೂನ್ 29, 2022 ರಂದು, ಸಿಡಿಆರ್ ಐಯನ್ನು ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಗುರುತಿಸಲು ಮತ್ತು ಯುಎನ್(ಪಿ&ಐ) ಕಾಯ್ದೆ 1947ರ ಸೆಕ್ಷನ್-3ರ ಅಡಿಯಲ್ಲಿ ಪರಿಗಣಿಸಿದಂತೆ ಸಿಡಿಆರ್ ಐ ವಿನಾಯಿತಿಗಳು, ವಿನಾಯಿತಿಗಳು ಮತ್ತು ಸವಲತ್ತುಗಳನ್ನು ನೀಡಲು ಪ್ರಧಾನ ಕಛೇರಿಗಳ ಒಪ್ಪಂದಕ್ಕೆ (HQA) ಸಹಿ ಹಾಕಲು ಸಂಪುಟ ಅನುಮೋದನೆ ನೀಡಿತು.

ಸಂಪುಟ ನಿರ್ಧಾರಕ್ಕೆ ಅನುಗುಣವಾಗಿ, 2022ರ ಆಗಸ್ಟ್ 22ರಂದು ಭಾರತ ಸರ್ಕಾರ ಮತ್ತು ಸಿಡಿಆರ್ ಐ ನಡುವೆ ಪ್ರಧಾನ ಕಚೇರಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಸಿಡಿಆರ್ ಐ ಎಂಬುದು ರಾಷ್ಟ್ರೀಯ ಸರ್ಕಾರಗಳು, ವಿಶ್ವಸಂಸ್ಥೆ ಏಜೆನ್ಸಿಗಳು ಮತ್ತು ಕಾರ್ಯಕ್ರಮಗಳು, ಬಹುಹಂತ ಅಭಿವೃದ್ಧಿ ಬ್ಯಾಂಕುಗಳು ಮತ್ತು ಹಣಕಾಸು ಕಾರ್ಯವಿಧಾನಗಳು, ಖಾಸಗಿ ವಲಯ, ಶೈಕ್ಷಣಿಕ ಮತ್ತು ಜ್ಞಾನ ಸಂಸ್ಥೆಗಳ ಜಾಗತಿಕ ಪಾಲುದಾರಿಕೆಯಾಗಿದ್ದು, ಹವಾಮಾನ ಮತ್ತು ವಿಪತ್ತು ಅಪಾಯಗಳಿಗೆ ಮೂಲಸೌಕರ್ಯ ವ್ಯವಸ್ಥೆಗಳ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಆ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತದೆ.

ಸಿಡಿಆರ್ ಐ ಪ್ರಾರಂಭವಾದಾಗಿನಿಂದ, 31 ದೇಶಗಳು, 6 ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು 2 ಖಾಸಗಿ ವಲಯದ ಸಂಸ್ಥೆಗಳು ಅದರ ಸದಸ್ಯರಾಗಿದ್ದಾರೆ. ಸಿಡಿಆರ್ ಐ ತನ್ನ ಸದಸ್ಯತ್ವವನ್ನು ನಿರಂತರವಾಗಿ ವಿಸ್ತರಿಸುತ್ತಾ, ಆರ್ಥಿಕವಾಗಿ ಮುಂದುವರಿದ ದೇಶಗಳು, ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಹವಾಮಾನ ಬದಲಾವಣೆ ಮತ್ತು ವಿಪತ್ತುಗಳಿಗೆ ಹೆಚ್ಚು ದುರ್ಬಲವಾಗಿರುವ ದೇಶಗಳನ್ನು ಆಕರ್ಷಿಸುತ್ತದೆ.

ಭಾರತ ಸರ್ಕಾರ ಮತ್ತು ಸಿಡಿಆರ್ ಐ ನಡುವಿನ ಸಹಿ ಮಾಡಲಾದ ಪ್ರಧಾನ ಕಛೇರಿಯ ಒಪ್ಪಂದವು 1947ರ ವಿಶ್ವಸಂಸ್ಥೆ (ಸವಲತ್ತುಗಳು ಮತ್ತು ವಿನಾಯಿತಿಗಳು) ಕಾಯಿದೆಯ ಸೆಕ್ಷನ್-3ರ ಅಡಿಯಲ್ಲಿ ಪರಿಗಣಿಸಿದಂತೆ ವಿನಾಯಿತಿಗಳು ಮತ್ತು ಸವಲತ್ತುಗಳನ್ನು ಸಿಡಿಆರ್ ಐಗೆ ಸ್ವತಂತ್ರವಾಗಿ ಮತ್ತು ಅಂತಾರಾಷ್ಟ್ರೀಯ ಕಾನೂನು ವ್ಯಕ್ತಿತ್ವ ನೀಡಲು ಅಂತಾರಾಷ್ಟ್ರೀಯವಾಗಿ ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.

****



(Release ID: 1935944) Visitor Counter : 126