ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾಶ್ಮೀರದ ಶ್ರೀಮಂತ ಸಂಸ್ಕೃತಿ, ಕಲೆ ಮತ್ತು ಕರಕುಶಲತೆ ಪ್ರದರ್ಶಿಸುವ “ವಿತಾಸ್ತ – ಕಾಶ್ಮೀರ ಉತ್ಸವ” ಕಾರ್ಯಕ್ರಮ ಶ್ಲಾಘಿಸಿದ ಪ್ರಧಾನಿ

Posted On: 28 JUN 2023 2:28PM by PIB Bengaluru

ಕಾಶ್ಮೀರದ ಶ್ರೀಮಂತ ಸಂಸ್ಕೃತಿ, ಕಲೆ ಮತ್ತು ಕರಕುಶಲತೆಯನ್ನು ಪ್ರದರ್ಶಿಸುವ ಅದ್ಭುತ ಉಪಕ್ರಮ "ವಿತಾಸ್ತ-ದಿ ಫೆಸ್ಟಿವಲ್ ಆಫ್ ಕಾಶ್ಮೀರ" ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಕಾಶ್ಮೀರದ ಶ್ರೀಮಂತ ಕಲೆ, ಸಂಸ್ಕೃತಿ, ಸಾಹಿತ್ಯ, ಕರಕುಶಲ ಮತ್ತು ಪಾಕ ಪದ್ಧತಿಯನ್ನು ಇಡೀ ದೇಶಕ್ಕೆ ಪರಿಚಯಿಸಲು ವಿತಾಸ್ತ ಕಾರ್ಯಕ್ರಮ ಆಯೋಜಿಸಲಾಗಿದೆ.

ಚೆನ್ನೈನಿಂದ ಆರಂಭವಾದ ಈ ಕಾರ್ಯಕ್ರಮಗಳ ಸರಣಿ ಶ್ರೀನಗರದಲ್ಲಿ ಸಮಾಪನಗೊಂಡಿದ್ದು, ಯುವಕರು ಕಾಶ್ಮೀರಿ ಸಂಸ್ಕೃತಿಯನ್ನು ಅರಿಯುವ ಉತ್ಸಾಹ ತೋರಿದರು. ಕಾಶ್ಮೀರ ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ತಲುಪಿಸಲು ಕಾರ್ಯಾಗಾರಗಳು, ಕಲಾ ಪ್ರತಿಷ್ಠಾಪನಾ ಶಿಬಿರಗಳು, ವಿಚಾರಸಂಕಿರಣಗಳು, ಕರಕುಶಲ ಪ್ರದರ್ಶನಗಳಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಜನರು ಭಾಗವಹಿಸಿ ಕಾಶ್ಮೀರದ ಸಂಸ್ಕೃತಿಯ ಪರಿಚಯ ಮಾಡಿಕೊಂಡರು.

ವಿತಾಸ್ತ ಕಾರ್ಯಕ್ರಮ ಕುರಿತು ಅಮೃತ ಮಹೋತ್ಸವದ ಟ್ವೀಟ್ ಥ್ರೆಡ್‌ಗಳಿಗೆ ಪ್ರತಿಕ್ರಿಯಿಸಿ ಪ್ರಧಾನಿ, ಟ್ವೀಟ್ ಮಾಡಿದ್ದಾರೆ;

“ಈ ಅದ್ಭುತ ಉಪಕ್ರಮಕ್ಕಾಗಿ ಅನೇಕ ಅಭಿನಂದನೆಗಳು. ಹಲವು ವರ್ಷಗಳ ನಂತರ, "ವಿತಾಸ್ತ – ಕಾಶ್ಮೀರ ಉತ್ಸವ" ದೇಶಾದ್ಯಂತ ಜನರಿಗೆ ಕಣಿವೆ ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡಿದೆ. ಎಲ್ಲಕ್ಕಿಂತ  ವಿಶೇಷವಾಗಿ, ಈ ಕಾರ್ಯಕ್ರಮವು ದೇಶವಾಸಿಗಳನ್ನು ಒಗ್ಗೂಡಿಸುವ ಉತ್ತಮ ಪ್ರಯತ್ನವಾಗಿದೆ ಎಂದಿದ್ದಾರೆ.

*******


(Release ID: 1935891) Visitor Counter : 111