ಕಲ್ಲಿದ್ದಲು ಸಚಿವಾಲಯ
azadi ka amrit mahotsav

7ನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿಗೆ 35 ಬಿಡ್‌ಗಳನ್ನು ಸ್ವೀಕರಿಸಿದ ಕಲ್ಲಿದ್ದಲು ಸಚಿವಾಲಯ

Posted On: 27 JUN 2023 5:05PM by PIB Bengaluru

7ನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜನ್ನು ಕಲ್ಲಿದ್ದಲು ಸಚಿವಾಲಯದ ನಾಮನಿರ್ದೇಶಿತ ಪ್ರಾಧಿಕಾರ ಮಾರ್ಚ್ 29, 2023 ರಂದು 103 ಕಲ್ಲಿದ್ದಲು ಗಣಿಗಳಿಗೆ ಪ್ರಾರಂಭಿಸಿತು. ಬಿಡ್ ಸಲ್ಲಿಸಲು ಕೊನೆಯ ದಿನಾಂಕ ಇಂದು ಜೂನ್ 27, 2023 ಆಗಿತ್ತು.

18 ಕಲ್ಲಿದ್ದಲು ಗಣಿಗಳಿಗೆ ಒಟ್ಟು 35 ಆಫ್‌ಲೈನ್ ಬಿಡ್‌ಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ ಏಳು ಗಣಿಗಳಿಗೆ ಎರಡು ಅಥವಾ ಹೆಚ್ಚಿನ ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ಹರಾಜು ಪ್ರಕ್ರಿಯೆಯ ಭಾಗವಾಗಿ ಸ್ವೀಕರಿಸಲಾದ ಆನ್‌ಲೈನ್ ಬಿಡ್‌ಗಳನ್ನು ನಾಳೆ ಜೂನ್ 28, 2023ರಂದು ದೆಹಲಿಯಲ್ಲಿ ತೆರೆಯಲಾಗುತ್ತದೆ.

****


(Release ID: 1935659) Visitor Counter : 149