ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಯುವಜನ  ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ 2022 ರ ತೇನ್ ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗೆ ನಾಮನಿರ್ದೇಶನಗಳ ಆಹ್ವಾನ


ನಾಮನಿರ್ದೇಶನ ಶಿಫಾರಸುಗಳನ್ನು 2023ರ  ಜುಲೈ 14 ರೊಳಗೆ ಆನ್ ಲೈನ್ ಮೂಲಕ ಸಲ್ಲಿಸಬೇಕು.

Posted On: 26 JUN 2023 4:30PM by PIB Bengaluru

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು 2022 ರ ತೇನ್ ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಸಾಹಸ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಸಾಧನೆಗಳನ್ನು ಗುರುತಿಸಲು ಮತ್ತು ಸವಾಲಿನ ಸಂದರ್ಭಗಳಲ್ಲಿ ಸಹಿಷ್ಣುತೆ, ಅಪಾಯವನ್ನು ನಿಭಾಯಿಸುವ (ರಿಸ್ಕ್ ತೆಗೆದುಕೊಳ್ಳುವ), ಸಹಕಾರಿ ತಂಡ ಮಾದರಿಯ  ಕೆಲಸವನ್ನು ಉತ್ತೇಜಿಸಲು  ಮತ್ತು ತ್ವರಿತ, ಸಿದ್ಧ ಹಾಗು  ಪರಿಣಾಮಕಾರಿ ಪ್ರತಿಕ್ರಿಯೆಗಳ  ಮನೋಭಾವವನ್ನು ಬೆಳೆಸಿಕೊಳ್ಳಲು ಯುವಕರನ್ನು ಉತ್ತೇಜಿಸುವ ಸಲುವಾಗಿ "ತೇನ್ ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ" (ಟಿಎನ್ ಎನ್ ಎಎ) ಎಂದು ಕರೆಯಲ್ಪಡುವ ರಾಷ್ಟ್ರೀಯ ಸಾಹಸ ಪ್ರಶಸ್ತಿಗಳನ್ನು ನೀಡುತ್ತದೆ.

ಟಿಎನ್ಎನ್ಎಎ 2022 ಕ್ಕೆ ನಾಮನಿರ್ದೇಶನಗಳನ್ನು ಪೋರ್ಟಲ್ ಮೂಲಕ ಆಹ್ವಾನಿಸಲಾಗಿದೆ https://awards.gov.inಗೆ 2023ರ ಜೂನ್ 15 ರಿಂದ 2023 ರ ಜುಲೈ 14 ರವರೆಗೆ ನಾಮ ನಿರ್ದೇಶನಗಳನು ಮಾಡಬಹುದು. . ಪ್ರಶಸ್ತಿಗಾಗಿ ಮಾರ್ಗಸೂಚಿಗಳು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಜಾಲತಾಣದಲ್ಲಿ ಈ ಕೆಳಗಿನ ಯು.ಆರ್.ಎಲ್. https://yas.nic.in/youth-affairs/inviting-nominations-tenzing-norgay-national-adventure-award-2022-15th-june-2023-14thನಲ್ಲಿ ಲಭ್ಯವಿವೆ. ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಮತ್ತು ನಾಯಕತ್ವದ ಅತ್ಯುತ್ತಮ ಗುಣಗಳನ್ನು ಹೊಂದಿರುವ ಯಾವುದೇ ವ್ಯಕ್ತಿ, ಸಾಹಸ ಶಿಸ್ತು ಮತ್ತು ಒಂದು ನಿರ್ದಿಷ್ಟ ಸಾಹಸ ಕ್ಷೇತ್ರದಲ್ಲಿ ಅಂದರೆ ಭೂಮಿ, ವಾಯು ಅಥವಾ ಜಲ (ಸಮುದ್ರ) ಕ್ಷೇತ್ರಗಳಲ್ಲಿ ನಿರಂತರ ಸಾಧನೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಮೇಲಿನ ಪೋರ್ಟಲ್ ಮೂಲಕ ಕೊನೆಯ ದಿನಾಂಕದ ಮೊದಲು ಅಂದರೆ 2023ರ ಜುಲೈ 14 ರೊಳಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.

ಪ್ರಶಸ್ತಿಯು ಕಂಚಿನ ಪ್ರತಿಮೆ, ಪ್ರಮಾಣಪತ್ರ, ರೇಷ್ಮೆ ಟೈ ಹೊಂದಿರುವ ಬ್ಲೇಜರ್/ಸೀರೆ ಮತ್ತು 15 ಲಕ್ಷ ರೂ.ಗಳ ಪ್ರಶಸ್ತಿ ಮೊತ್ತವನ್ನು ಒಳಗೊಂಡಿದೆ. ವಿಜೇತರಿಗೆ ಭಾರತ ಸರ್ಕಾರವು ಅರ್ಜುನ ಪ್ರಶಸ್ತಿಗಳೊಂದಿಗೆ  ಈ ಪ್ರಶಸ್ತಿ ಪ್ರದಾನಿಸುತ್ತದೆ.

ಸಾಮಾನ್ಯವಾಗಿ, ಭೂ ಸಾಹಸ, ಜಲ (ಸಮುದ್ರ) ಸಾಹಸ, ವಾಯು ಸಾಹಸ ಮತ್ತು ಭೂಮಿ, ಸಮುದ್ರ ಹಾಗು  ವಾಯುವಿನಲ್ಲಿ  ಸಾಹಸ ಚಟುವಟಿಕೆಗಳಿಗೆ ಜೀವಮಾನ ಸಾಧನೆ ಎಂಬ ನಾಲ್ಕು ವಿಭಾಗಗಳಲ್ಲಿ ಒಂದು ಪ್ರಶಸ್ತಿಯನ್ನು ನೀಡಲಾಗುತ್ತದೆ. ಕಳೆದ 3 ವರ್ಷಗಳ ಸಾಧನೆಗಳನ್ನು ಭೂ ಸಾಹಸ, ಜಲ (ಸಮುದ್ರ) ಸಾಹಸ, ವಾಯು ಸಾಹಸ ಎಂಬ 3 ವಿಭಾಗಗಳಿಗೆ ಪರಿಗಣಿಸಲಾಗುತ್ತದೆ, ಮತ್ತು ಜೀವಮಾನ ಸಾಧನೆ ಪ್ರಶಸ್ತಿಗೆ  ಇಡೀ ವೃತ್ತಿಜೀವನದ ಸಾಧನೆಯನ್ನು ಪರಿಗಣಿಸಲಾಗುತ್ತದೆ.

****



(Release ID: 1935403) Visitor Counter : 107