ಆಯುಷ್
azadi ka amrit mahotsav

9ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿನ 2023 ಹೆಚ್ಚಿನ ಜನರು ಪಾಲ್ಗೊಳ್ಳುವುದರೊಂದಿಗೆ ವಿಶ್ವಾದ್ಯಂತ ಆಚರಣೆ


ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಚಾಲನೆ

ಭಾರತದ ಭವಿಷ್ಯ ಮುನ್ನಡೆಸುವ ಆರೋಗ್ಯಕರ ಮತ್ತು ಶಕ್ತಿಯುತ ಸಮಾಜ ರೂಪಿಸುವ  ಸಂಘಟಿತ ಶಕ್ತಿಗೆ ಯೋಗ ಕೊಡುಗೆ ನೀಡಿದೆ – ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

ಅಂತಾರಾಷ್ಟ್ರೀಯ ಯೋಗ ದಿನ 2023 ಜಾಗತಿಕ ಮಟ್ಟದಲ್ಲಿ ಸಾರ್ವತ್ರಿಕ ಯೋಗಕ್ಷೇಮದ ಸಂದೇಶವನ್ನು ಮತ್ತಷ್ಟು ಹೆಚ್ಚಿಸುತ್ತದೆ - ಶ್ರೀ ಸರ್ಬಾನಂದ ಸೋನೋವಾಲ್

Posted On: 21 JUN 2023 1:01PM by PIB Bengaluru

9ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿನ 2023 ಅನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿ ಆಚರಿಸಲಾಯಿತು. ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವು ವಿಶೇಷವಾದ ಹೊಸ ಉಪಕ್ರಮಗಳಿಗೆ ಸಾಕ್ಷಿಯಾಯಿತು. ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿ  ಶ್ರೀ ಜಗದೀಪ್ ಧನಕರ್ ಅವರ ಉಪಸ್ಥಿತಿಯಲ್ಲಿ 15,000ಕ್ಕಿಂತ ಹೆಚ್ಚಿನ ಜನರು ಸಾಮಾನ್ಯ ಯೋಗ ಪ್ರದರ್ಶನದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರದೇಶ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್, ಮಧ್ಯಪ್ರದೇಶ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಆಯುಷ್, ಬಂದರು ಹಡಗು ಮತ್ತು ಜಲಮಾರ್ಗಗಳ ಖಾತೆ ಸಚಿವ ಶ್ರೀ ಸರ್ಬಾನಂದ ಸೋನೋವಾಲ್, ಕೇಂದ್ರ ಆಯುಷ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾದ ಡಾ. ಮುಂಜ್ಪಾರಾ ಮಹೇಂದ್ರಭಾಯಿ, ಸಂಪುಟ ಸಚಿವರು, ಮಧ್ಯಪ್ರದೇಶದ ಸಂಸದರು, ಶ್ರೀ ರಾಮಚಂದ್ರ ಮಿಷನ್ ಅಧ್ಯಕ್ಷ ಕಮಲೇಶ್ ಡಿ. ಪಟೇಲ್, ಮಧ್ಯ ಪ್ರದೇಶ ಸರ್ಕಾರದ ಮಂತ್ರಿಗಳು ಮತ್ತು ಆಯುಷ್ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್, ನಮ್ಮ ಪ್ರಧಾನ ಮಂತ್ರಿಗಳ ಪ್ರಯತ್ನದಿಂದ ಯೋಗವು ಈಗ ಜಾಗತಿಕ ಹಬ್ಬವಾಗಿ ಮಾರ್ಪಟ್ಟಿರುವುದು ಸಂತಸದ ವಿಷಯವಾಗಿದೆ. ಯೋಗವು ಯಾವುದೇ ವ್ಯಕ್ತಿಗೆ ಮಾತ್ರವಲ್ಲ, ಇಡೀ ಮನುಕುಲಕ್ಕೆ. ಯೋಗವು ಆರ್ಥಿಕ ರೂಪ ಪಡೆದುಕೊಂಡಿದ್ದು, ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ನಮ್ಮ ತರಬೇತಿ ಪಡೆದ ಯೋಗ ಶಿಕ್ಷಕರು ವಿಶ್ವಾದ್ಯಂತ ಕೆಲಸ ಮಾಡುತ್ತಿದ್ದಾರೆ, ಅಲ್ಲದೆ ಯೋಗ ಶಿಕ್ಷಕರ ಬೇಡಿಕೆಯೂ ಹೆಚ್ಚುತ್ತಿದೆ ಎಂದರು.

https://static.pib.gov.in/WriteReadData/userfiles/image/image001K3GL.jpg

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಸಂದೇಶದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರತಿ ಆವೃತ್ತಿಯಲ್ಲಿ ಪಾಲ್ಗೊಂಡಾಗಲೂ, ಯೋಗ ದಿನದ ಹಿಂದಿನ ಸಂದರ್ಭಗಳಿಗಿಂತ ಭಿನ್ನವಾಗಿ, ವಿವಿಧ ಬದ್ಧತೆಗಳ ಕಾರಣದಿಂದಾಗಿ ಪ್ರಸ್ತುತ, ಇದೇ ಕಾರಣಕ್ಕಾಗಿ ಅಮೆರಿಕ ಪ್ರವಾಸದಲ್ಲಿದ್ದೇನೆ ಎಂದರು. ಆದಾಗ್ಯೂ, ಈ ವರ್ಷ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ  ಪ್ರಧಾನ ಕಚೇರಿಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದೇನೆ. ಯೋಗಾಭ್ಯಾಸದ ಮೂಲಕ ಯಾರೇ ಆಗಲಿ, ಆರೋಗ್ಯ, ಚೈತನ್ಯ ಮತ್ತು ಶಕ್ತಿ ಪಡೆದುಕೊಳ್ಳುತ್ತಾರೆ. ಹಲವು ವರ್ಷಗಳಿಂದ ನಿಯಮಿತವಾಗಿ ಈ ಅಭ್ಯಾಸದಲ್ಲಿ ತೊಡಗಿಸಿಕೊಂಡವರು ಅದರ ಶಕ್ತಿ, ಚೈತನ್ಯವನ್ನು ಅನುಭವಿಸುತ್ತಾರೆ. ವ್ಯಕ್ತಿ ಹಾಗೂ ಕುಟುಂಬದ ಮಟ್ಟದಲ್ಲಿ ಉತ್ತಮ ಆರೋಗ್ಯದ ಪ್ರಾಮುಖ್ಯತೆ ಬಹಳ ಮುಖ್ಯ. ಯೋಗವು ಆರೋಗ್ಯಕರ ಮತ್ತು ಶಕ್ತಿಯುತ ಸಮಾಜ ಸೃಷ್ಟಿಸುತ್ತದೆ, ಅಲ್ಲಿ ಸಾಮೂಹಿಕ ಶಕ್ತಿ ಹೆಚ್ಚು. ಸ್ವಾವಲಂಬಿ ರಾಷ್ಟ್ರ ನಿರ್ಮಿಸಲು ಸಹಾಯ ಮಾಡಿದ ಸ್ವಚ್ಛ ಭಾರತ ಮತ್ತು ಸ್ಟಾರ್ಟಪ್ ಇಂಡಿಯಾದಂತಹ ಅಭಿಯಾನಗಳು ದೇಶದ ಸಾಂಸ್ಕೃತಿಕ ಗುರುತು ಮರುಸ್ಥಾಪಿಸಲು ನಮ್ಮ ಯುವಜನರು ಈ ಶಕ್ತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂದು ದೇಶದ ಮನಸ್ಸುಗಳು ಬದಲಾಗಿದ್ದು, ಜನರಲ್ಲಿ ಮತ್ತು ಅವರ ಬದುಕಿನಲ್ಲಿ ಬದಲಾವಣೆಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಆಯುಷ್, ಬಂದರು ಮತ್ತು ಮತ್ತು ಜಲಮಾರ್ಗಗಳ ಖಾತೆ ಸಚಿವ ಸರ್ಬಾನಂದ ಸೋನೊವಾಲ್ ಮಾತನಾಡಿ, “ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಆದರ್ಶಪ್ರಾಯ ನಾಯಕತ್ವದಲ್ಲಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಯೋಗ ಮತ್ತು ಭಾರತೀಯ ಸಂಪ್ರದಾಯಗಳ ತತ್ವಗಳನ್ನು ದೃಢವಾಗಿ ಅಳವಡಿಸಲು 2023ರ ಅಂತಾರಾಷ್ಟ್ರೀಯ ಯೋಗ ದಿನ ಸಜ್ಜಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಸಾರ್ವತ್ರಿಕ ಯೋಗಕ್ಷೇಮದ ಸಂದೇಶವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.

ಮಧ್ಯಪ್ರದೇಶ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್ ತಮ್ಮ ಭಾಷಣದಲ್ಲಿ, “ಇಂದಿನ ಯುವ ಪೀಳಿಗೆಗೆ ಯೋಗವು ಬಹಳ ಪ್ರಸ್ತುತವಾಗಿದೆ. ಯೋಗಾಭ್ಯಾಸದ ಪ್ರಯೋಜನಗಳ ಮೂಲಕ ಅವರು ಭವಿಷ್ಯದ ಸವಾಲುಗಳನ್ನು ಉತ್ತಮವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.

https://static.pib.gov.in/WriteReadData/userfiles/image/image002WAR9.jpg

ಈ ಸಂದರ್ಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, ನಮ್ಮ ಸರ್ಕಾರವು ಯೋಗವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಿದೆ, ಮಧ್ಯಪ್ರದೇಶದ ಎಲ್ಲಾ ಶಾಲೆಗಳಲ್ಲಿ ಅದನ್ನು ಜಾರಿಗೊಳಿಸುತ್ತದೆ ಎಂಬ ಮಹತ್ವದ ಘೋಷಣೆ ಮಾಡಿದರು.

9ನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಮುಖ ಅಂಶವೆಂದರೆ, ಸಾಗರ ಭಾಗದಲ್ಲಿ ವರ್ತುಲಾಕಾರದಲ್ಲಿ ಯೋಗ ಪ್ರದರ್ಶನ(ಓಶಿಯನ್ ರಿಂಗ್ ಆಫ್ ಯೋಗ) ವಿಶಿಷ್ಟ ಪರಿಕಲ್ಪನೆ ಅಳವಡಿಸಲಾಗಿದೆ. ವಿಶ್ವದ ವಿವಿಧ ದೇಶಗಳಲ್ಲಿ ಭಾರತ ಹೊಂದಿರುವ ಸಾಗರ ಸಹಕಾರ ಮತ್ತು ಒಪ್ಪಂದವಿರುವ ಬಂದರುಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ವಾಣಿಜ್ಯ ಹಡಗುಗಳು ಅಂತಾರಾಷ್ಟ್ರೀಯ ಯೋಗ ಪ್ರದರ್ಶನದಲ್ಲಿ ಭಾಗವಹಿಸಿವೆ.

ಭಾರತೀಯ ನೌಕಾಪಡೆಯ 19 ಹಡಗುಗಳಲ್ಲಿ ಸುಮಾರು 3,500 ನೌಕಾ ಸಿಬ್ಬಂದಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಯೋಗದ ರಾಯಭಾರಿಗಳಾಗಿ 35,000 ಕಿ.ಮೀ ದೂರ ಸಾಗಿದರು. ಇದು ವಿದೇಶಿ ಬಂದರುಗಳು ಮತ್ತು ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಾಗಿದ 11 ಐಎನ್ ಹಡಗುಗಳಲ್ಲಿ 2,400 ಸಿಬ್ಬಂದಿ ಇದ್ದರು. ಗಮನಾರ್ಹ ವಿಷಯವೆಂದರೆ, 1,200ಕ್ಕೂ ಹೆಚ್ಚು ವಿದೇಶಿ ನೌಕಾಪಡೆಯ ಸಿಬ್ಬಂದಿ ಒಳಗೊಂಡಿರುವ ನಮ್ಮ ಸಾಗರೋತ್ತರ ಮಿಷನ್‌ಗಳೊಂದಿಗೆ ಹಲವಾರು ವಿದೇಶಿ ನೌಕಾಪಡೆಗಳ ಹಡಗುಗಳಲ್ಲಿ ಯೋಗ ದಿನ ಆಚರಿಸಲಾಗಿದೆ.

ಆರ್ಕ್ಟಿಕ್‌ನಿಂದ ಅಂಟಾರ್ಟಿಕಾದವರೆಗೆ ಯೋಗ ಪ್ರದರ್ಶನವು ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮತ್ತೊಂದು ಮುಖವಾಗಿದೆ. ಪ್ರಧಾನ ಮೆರಿಡಿಯನ್ ರೇಖೆಯಲ್ಲಿ ಮತ್ತು ಅದರ ಸುತ್ತಮುತ್ತಲ ದೇಶಗಳಲ್ಲಿ, ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಯೋಗ ಪ್ರದರ್ಶನ ಆಯೋಜಿಸಲಾಗಿದೆ. ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದಲ್ಲಿರುವ ಭಾರತದ ಸಂಶೋಧನಾ ನೆಲೆಗಳಾದ ಹಿಮಾದ್ರಿ ಮತ್ತು ಭಾರತಿಯಲ್ಲಿ ವಿಜ್ಞಾನಿಗ, ಸಂಶೋಧಕರು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ ಜತೆಗೆ ಐಟಿಬಿಪಿ, ಬಿಎಸ್ಸೆಫ್ ಮತ್ತು ಬಿಆರ್ ಒ ತಂಡಗಳಿಂದ ಯೋಗ ಭಾರತಮಾಲಾ ಎಂಬ ಹೆಸರಿನ ಯೋಗ ಪ್ರದರ್ಶನದ ಸರಪಳಿ ಒಗ್ಗೂಡಿಸಲಾಯಿತು. ಅದೇ ರೀತಿ ಭಾರತೀಯ ಕರಾವಳಿ ರೇಖೆಯ ಉದ್ದಕ್ಕೂ ಯೋಗ ಪ್ರದರ್ಶನ ಮತ್ತು ಯೋಗ ಸಾಗರಮಾಲ ಎಂಬ ದ್ವೀಪಗಳನ್ನು ಸಹ ರೂಪಿಸಲಾಯಿತು.

ಗ್ರಾಮೀಣ ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು ಆಯುಷ್ ಸಚಿವಾಲಯವು "ಹರ್ ಅಂಗನ್ ಯೋಗ" ಸಂದೇಶ ಹರಡಲು ವಿಸ್ತಾರವಾಗಿ ಯೋಜಿಸಿದೆ. ಪಂಚಾಯತಿಗಳು, ಅಂಗನವಾಡಿಗಳು, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಶಾಲೆಗಳು, ಸುಮಾರು 2 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು, ಆಯುಷ್ ಗ್ರಾಮ ಘಟಕ ಮತ್ತು ಅಮೃತ ಸರೋವರದ ಸುತ್ತಮುತ್ತಲ ಸ್ಥಳಗಳಲ್ಲಿ ಯೋಗ ಪ್ರದರ್ಶನ ಆಯೋಜಿಸಲಾಗಿದೆ.

ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಪೂರ್ಣ ಸರ್ಕಾರಿ ಕಾರ್ಯವಿಧಾನದೊಂದಿಗೆ ಆಚರಿಸಲಾಯಿತು, ಭಾರತ ಸರ್ಕಾರದ ಎಲ್ಲಾ ಪ್ರಮುಖ ಸಚಿವಾಲಯಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಯೋಗ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳು ಮತ್ತು ಇತರ ಪಾಲುದಾರರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಭಾರತೀಯ ಮಿಷನ್‌ಗಳು ಮತ್ತು ರಾಯಭಾರ ಕಚೇರಿಗಳ ಜತೆಗೆ, ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಮತ್ತು ಜಾಮ್‌ನಗರದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ-ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರ(ಡಬ್ಲ್ಯುಎಚ್ಒ-ಜಿಸಿಟಿಎಂ) ಕಚೇರಿಯು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.

*****

 

*******

 


(Release ID: 1934038)