ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಕ್ರೀಡಾಪಟುಗಳು ಮತ್ತು ತಂಡದ ಅಧಿಕಾರಿಗಳಿಗೆ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ವ್ಯವಸ್ಥೆಗಾಗಿ ವೆಚ್ಚಗಳನ್ನು ಕೇಂದ್ರ ಕ್ರೀಡಾ ಸಚಿವಾಲಯವು 66% ರಷ್ಟು ಹೆಚ್ಚಿಸಿದೆ

Posted On: 16 JUN 2023 3:43PM by PIB Bengaluru

ಭಾರತೀಯ ಕ್ರೀಡಾಪಟುಗಳು ಮತ್ತು ತಂಡದ ಅಧಿಕಾರಿಗಳಿಗೆ ವಿದೇಶ ಕ್ರೀಡಾ ಕೂಟದ ಸಂದರ್ಭದಲ್ಲಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ವ್ಯವಸ್ಥೆಗಾಗಿ ಆಗುವ ವೆಚ್ಚಗಳ ಮೊತ್ತವನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 66% ರಷ್ಟು ಪರಿಷ್ಕರಿಸಿದೆ.

ಇದು ಕೇಂದ್ರ ಕ್ರೀಡಾ ಸಚಿವಾಲಯದ ಸಹಾಯದ ಯೋಜನೆಯಡಿಯಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗಾಗಿ, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ನೀಡುವ ಧನಸಹಾಯವಾಗಿದೆ.

ಹೊಸದಾಗಿ ಪರಿಷ್ಕೃತ ಮಾನದಂಡದ ಅಡಿಯಲ್ಲಿ, ವಿದೇಶದಲ್ಲಿ ಅನುಮೋದಿತ ಸ್ಪರ್ಧೆಗಳಿಗೆ (ವಿದೇಶಿ ಮಾನ್ಯತೆಗಳು) ಪ್ರಯಾಣಿಸುವ ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಗಳು ಇನ್ನು ಮುಂದೆ ದಿನಕ್ಕೆ 250 ಯು.ಎಸ್.ಡಾಲರ್ ಸಂಭಾವನೆಗೆ ಅರ್ಹರಾಗಿರುತ್ತಾರೆ, ಇದು ಹಿಂದಿನ ರೂಢಿಯಂತೆ ಪ್ರತಿದಿನವೂ ನೀಡುತ್ತಿದ್ದ 150 ಯು.ಎಸ್.ಡಾಲರ್ ಸಂಭಾವನೆಗಿಂತ 66% ರಷ್ಟು ಹೆಚ್ಚಳವಾಗಿದೆ.  

“ಎನ್.ಎಸ್.ಎಫ್.ಗಳ ವಿನಂತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಪರಿಷ್ಕರಣೆ ಮಾಡಲಾಗಿದೆ. ಇದರಲ್ಲಿ ಸ್ಪರ್ಧೆಗಳ ಸ್ಥಳೀಯ ಸಂಘಟನಾ ಸಮಿತಿ (ಎಲ್.ಒ.ಸಿ.) ನಿಗದಿಪಡಿಸಿದ ಬೋರ್ಡಿಂಗ್ ಮತ್ತು ವಸತಿಗಾಗಿ ಅಸ್ತಿತ್ವದಲ್ಲಿರುವ ದಿನಕ್ಕೆ 150 ಯು.ಎಸ್.ಡಾಲರ್ ಸಂಭಾವನೆಯ ದರಗಳ ವಿತಿಗಿಂತ 66% ರಷ್ಟು ಹೆಚ್ಚಾಗಿದೆ” ಎಂದು ತಿಳಿಸಿದ್ದಾರೆ. ಬೋರ್ಡಿಂಗ್ ಮತ್ತು ವಸತಿಗಾಗಿ ಈ ಮಾನದಂಡಗಳನ್ನು ನವೆಂಬರ್ 2015 ರಲ್ಲಿ ನಿಗದಿಪಡಿಸಲಾಗಿದೆ ಮತ್ತು ಎಂಟು ವರ್ಷಗಳ ನಂತರ ಈ ನಿಟ್ಟಿನಲ್ಲಿ ಪರಿಷ್ಕರಣೆ ನಡೆದಿದೆ.

ಬೋರ್ಡಿಂಗ್ ಮತ್ತು ವಸತಿಗಾಗಿ ಮಾಡಬಹುದಾದ ವೆಚ್ಚದ ಮಿತಿಯ ಹೆಚ್ಚಳದೊಂದಿಗೆ, ಇನ್ನು ಮುಂದೆ ಎನ್.ಎಸ್.ಎಫ್.ಗಳು ವಿವಿಧ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸುವಾಗ ಮತ್ತು ದೇಶವನ್ನು ಪ್ರತಿನಿಧಿಸುವಾಗ ಕ್ರೀಡಾಪಟುಗಳಿಗೆ ಸಮಂಜಸವಾದ ಉತ್ತಮ ವಸತಿ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ.

ಇದಲ್ಲದೆ, ಇತ್ತೀಚಿನ ಕ್ರಮವ್ಯವಸ್ಥೆಗಳ ಪ್ರಕಾರ, ಅಂತರರಾಷ್ಟ್ರೀಯ ಸ್ಪರ್ಧೆಗಳ ಸ್ಥಳೀಯ ಸಂಘಟನಾ ಸಮಿತಿಗಳು (ಎಲ್.ಒ.ಸಿ.) ಭಾಗವಹಿಸುವ ತಂಡಗಳಿಗೆ ಮೊದಲಿಂತೆ ಕೇವಲ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಗೆ ಬದಲಾಗಿ ಸಂಪೂರ್ಣ ಆತಿಥ್ಯ ಪ್ಯಾಕೇಜ್ ಅನ್ನು ನೀಡುತ್ತಿವೆ.

ಬೋರ್ಡಿಂಗ್, ಲಾಡ್ಜಿಂಗ್, ಸ್ಥಳೀಯ ಸಾರಿಗೆ ಮತ್ತು ಕೆಲವು ಸಂದರ್ಭಗಳಲ್ಲಿ ಪ್ರವೇಶ ಶುಲ್ಕವನ್ನು ಸಂಪೂರ್ಣ ಆತಿಥ್ಯ ಪ್ಯಾಕೇಜ್ ಒಳಗೊಂಡಿರುತ್ತದೆ. ಪ್ಯಾಕೇಜ್ ನ ಒಟ್ಟು ವೆಚ್ಚವು ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೆ ದಿನಕ್ಕೆ  150 ಯು.ಎಸ್.ಡಾಲರ್ ಗಿಂತ ಹೆಚ್ಚಾಗಿರುತ್ತದೆ. ಇದನ್ನು ಮನಗಂಡು, 2015 ರಲ್ಲಿ ನಿಗದಿಪಡಿಸಿದ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಮಾನದಂಡಗಳ ಅನ್ವಯ  ಪರಿಶೀಲನೆ ಮೂಲಕ ಈ ಪರಿಷ್ಕೃತ ಪರಿಗಣನೆ ನಡೆದಿದೆ.    

****


(Release ID: 1932918)