ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮಣಿಪುರ ರಾಜ್ಯದಲ್ಲಿ 03.05.2023 ಮತ್ತು ಆನಂತರ ನಡೆದ ಹಿಂಸಾಕೃತ್ಯಗಳ ಘಟನೆಯ ಬಗ್ಗೆ ತನಿಖಾ ಆಯೋಗ ಕಾಯ್ದೆ 1952 ಅನ್ವಯ ತನಿಖಾ ಆಯೋಗವನ್ನು ರಚಿಸಿ, ಅಧಿಸೂಚನೆ ಹೊರಡಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ


​​​​​​​ಆಯೋಗದ ಅಧ್ಯಕ್ಷರಾಗಿ ಗುವಾಹತಿ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ, ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಹಿಮಾಂಶು ಶೇಖರ್ ದಾಸ್, ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಅಲೋಕ್ ಪ್ರಭಾಕರ್ ನೇಮಕ

Posted On: 04 JUN 2023 6:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಮಣಿಪುರದಲ್ಲಿ 03.05.2023 ಮತ್ತು ಆನಂತರ ನಡೆದ ಹಿಂಸಾಕೃತ್ಯಗಳ ಬಗ್ಗೆ ತನಿಖಾ ಆಯೋಗ ಕಾಯ್ದೆ 1952 ಅನ್ವಯ ತನಿಖಾ ಆಯೋಗವನ್ನು ರಚಿಸಿ, ಅಧಿಸೂಚನೆ ಹೊರಡಿಸಿದ್ದು, ಆಯೋಗದ ಅಧ್ಯಕ್ಷರಾಗಿ ಗುವಾಹತಿ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ, ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಹಿಮಾಂಶು ಶೇಖರ್ ದಾಸ್, ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಅಲೋಕ್ ಪ್ರಭಾಕರ್ ನೇಮಕ ಮಾಡಲಾಗಿದೆ.

ಈ ಆಯೋಗ ಮಣಿಪುರದಲ್ಲಿ ನಡೆದ ಹಿಂಸಾಕೃತ್ಯಗಳು ಹರಡಲು ಮತ್ತು ಅದಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸಲಿದೆ ಮತ್ತು ಯಾವುದಾದರೂ ಜವಾಬ್ದಾರಿಯುತ ಪ್ರಾಧಿಕಾರಗಳು ಮತ್ತು ವ್ಯಕ್ತಿಗಳ ಕಡೆಯಿಂದ ಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸಲಿದೆ.

ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ, 2023ರ ಮೇ 29 ರಿಂದ 2023ರ ಜೂನ್ 1ರ ವರೆಗೆ ಮಣಿಪುರಕ್ಕೆ ಭೇಟಿ ನೀಡಿದ್ದರು ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕಿಸಿದ ಬಳಿಕ ತನಿಖಾ ಆಯೋಗವನ್ನು ರಚಿಸುವುದಾಗಿ ಘೋಷಿಸಿದ್ದರು.

ಈ ತನಿಖಾ ಆಯೋಗ 6 ತಿಂಗಳು ಮೀರದಂತೆ ಸಾಧ್ಯವಾದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕಿದೆ. ಈ ಆಯೋಗದ ಕೇಂದ್ರ ಕಚೇರಿ ಇಂಫಾಲದಲ್ಲಿರಲಿದೆ.

***

 


(Release ID: 1929769) Visitor Counter : 142