ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿಯವರ ಸಂವಾದ

Posted On: 23 MAY 2023 6:40PM by PIB Bengaluru

ಸಿಡ್ನಿಯ ಕುಡೋಸ್ ಬ್ಯಾಂಕ್ ಅರೆನಾದಲ್ಲಿ 2023ರ ಮೇ 23ರಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಘನತೆವೆತ್ತ ಶ್ರೀ ಆಂಥೋನಿ ಅಲ್ಬನೀಸ್ ಅವರೊಟ್ಟಿಗೆ ಪ್ರಧಾನಿ ಮೋದಿಯವರು ಭಾರತೀಯ ಸಮುದಾಯದ ಬೃಹತ್ ಸಭಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಮತ್ತು ಸಂವಾದ ನಡೆಸಿದರು.

ವಿದ್ಯಾರ್ಥಿಗಳು, ಸಂಶೋಧಕರು, ವೃತ್ತಿಪರರು ಮತ್ತು ಉದ್ಯಮಿಗಳನ್ನು ಒಳಗೊಂಡ ಭಾರತೀಯ ವಲಸಿಗರು ಈ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಆಸ್ಟ್ರೇಲಿಯಾದ ಹಲವಾರು ಸಚಿವರು, ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಶ್ಚಿಮ ಸಿಡ್ನಿಯ ಪರಮಟ್ಟಾದಲ್ಲಿರುವ ಹ್ಯಾರಿಸ್ ಪಾರ್ಕ್‌ನಲ್ಲಿ ನಿರ್ಮಿಸಲಾಗುವ 'ಲಿಟಲ್ ಇಂಡಿಯಾ ಗೇಟ್‌ವೇʼಗೆ ಉಭಯ ಪ್ರಧಾನ ಮಂತ್ರಿಗಳು ಜಂಟಿಯಾಗಿ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಿಕಟ ಐತಿಹಾಸಿಕ ಸಂಬಂಧಗಳಿಗೆ "ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವಗಳೇ ಅಡಿಪಾಯ” ಎಂದು ಒತ್ತಿ ಹೇಳಿದರು. ಜೊತೆಗೆ ಎರಡೂ ದೇಶಗಳನ್ನು ಒಂದುಗೂಡಿಸಿರುವ ಹಲವಾರು ಅಂಶಗಳ ಬಗ್ಗೆ ಒತ್ತಿಹೇಳಿದರು. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯದ ಕೊಡುಗೆ ಮತ್ತು ಯಶಸ್ಸನ್ನು ಶ್ಲಾಘಿಸಿದ ಶ್ರೀ ಮೋದಿ, ಆ ಸಮುದಾಯದ ಜನರನ್ನು ಭಾರತದ ಸಾಂಸ್ಕೃತಿಕ ಮತ್ತು ಬ್ರಾಂಡ್ ರಾಯಭಾರಿಗಳು ಎಂದು ಬಣ್ಣಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತದ ಮಾಡುತ್ತಿರುವ ಸಾಧನೆಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ಭಾರತದ ಯಶೋಗಾಥೆಗಳ ಬಗ್ಗೆ ಜಗತ್ತು ಹೆಚ್ಚು ಆಸಕ್ತಿ ವಹಿಸುತ್ತಿದೆ ಎಂದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಾಢವಾದ ಬಾಂಧವ್ಯವನ್ನು ಅವರು ಎತ್ತಿ ತೋರಿಸಿದರು. ಬ್ರಿಸ್ಬೇನ್‌ನಲ್ಲಿ ಭಾರತೀಯ ದೂತಾವಾಸವನ್ನು ತೆರೆಯಲಾಗುವುದು ಎಂದು ಘೋಷಿಸಿದರು.

*****


(Release ID: 1929231) Visitor Counter : 106