ಸಂಪುಟ

ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಜೊತೆಗಿನ ಒಪ್ಪಂದದಲ್ಲಿ ಭಾರತದ ನವದೆಹಲಿಯಲ್ಲಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ನ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

Posted On: 31 MAY 2023 3:37PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ನ ಪ್ರಾದೇಶಿಕ ಕಚೇರಿಯನ್ನು ಒಪ್ಪಂದದ ಮೂಲಕ ಭಾರತದ ನವ ದೆಹಲಿಯಲ್ಲಿ ಸ್ಥಾಪಿಸಲು ಅನುಮೋದಿಸಿದೆ. 

ಅಭಿವೃದ್ಧಿಶೀಲ ರಾಷ್ಟ್ರಗಳು ಹಾಗೂ ತ್ರಿಕೋನ ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಒತ್ತು ನೀಡುವ ಮೂಲಕ ಅಂಚೆ ವಲಯದ ಬಹುಪಕ್ಷೀಯ ಸಂಸ್ಥೆಗಳಲ್ಲಿ ಭಾರತವು ಸಕ್ರಿಯ ಪಾತ್ರವನ್ನು ವಹಿಸಲು ಅನುಮೋದನೆಯನ್ನು ಸಕ್ರಿಯಗೊಳಿಸುತ್ತದೆ. ಯುಪಿಯುನ ಪ್ರಾದೇಶಿಕ ಕಚೇರಿಗಾಗಿ ಭಾರತವು ಕ್ಷೇತ್ರ ಯೋಜನಾ ತಜ್ಞರು, ಸಿಬ್ಬಂದಿ ಮತ್ತು ಕಚೇರಿ ಸೌಲಭ್ಯಗಳನ್ನು ಒದಗಿಸುತ್ತದೆ. ಸಾಮರ್ಥ್ಯ ವರ್ಧನೆ ಮತ್ತು ತರಬೇತಿ, ದಕ್ಷತೆ ಮತ್ತು ಅಂಚೆ ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು, ಅಂಚೆ ತಂತ್ರಜ್ಞಾನವನ್ನು ಸುಧಾರಿಸುವುದು, ಇ-ಕಾಮರ್ಸ್ ಮತ್ತು ವ್ಯಾಪಾರ ಪ್ರಚಾರ ಮುಂತಾದ ಯೋಜನೆಗಳನ್ನು ಈ ಕಛೇರಿಯು ಯುಪಿಯು ಸಮನ್ವಯದೊಂದಿಗೆ ಈ ಪ್ರದೇಶಕ್ಕೆ ಸಿದ್ಧಪಡಿಸುತ್ತದೆ ಮತ್ತು ಕಾರ್ಯಗತಗೊಳಿಸುತ್ತದೆ.

ಈ ಉಪಕ್ರಮವು ಭಾರತದ ರಾಜತಾಂತ್ರಿಕ ಸಂಬಂಧಗಳನ್ನು ವಿಸ್ತರಿಸುವುದರ ಜೊತೆಗೆ ಇತರ ದೇಶಗಳೊಂದಿಗೆ, ವಿಶೇಷವಾಗಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಬಾಂಧವ್ಯವನ್ನು ಬಲಪಡಿಸಲು ಮತ್ತು ಜಾಗತಿಕ ಅಂಚೆ ವೇದಿಕೆಗಳಲ್ಲಿ ಭಾರತದ ಉಪಸ್ಥಿತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

****



(Release ID: 1928693) Visitor Counter : 97