ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ವಿಶ್ವ ಸ್ಕ್ಲೆರೋಸಿಸ್ ದಿನಕ್ಕಾಗಿ ವಿಶ್ವ ಮಲ್ಟಿಪಲ್ ಸ್ಕ್ಲೆರೋಸಿಸ್ ಸಂಪರ್ಕಗಳ ಅಭಿಯಾನ

Posted On: 31 MAY 2023 12:25PM by PIB Bengaluru

ವಿಶ್ವ ಮಲ್ಟಿಪಲ್ ಸ್ಕ್ಲೆರೋಸಿಸ್ ಗೆ ಒಳಗಾದವರು ಒಂಟಿತನ ಮತ್ತು ಸಾಮಾಜಿಕವಾಗಿ ಪ್ರತ್ಯೇಕತೆ ಸಮಸ್ಯೆಗೆ ಒಳಗಾಗುತ್ತಾರೆ. ಸಾಮಾಜಿಕ ಅಡೆತಡೆಗಳನ್ನು ನಿವಾರಿಸುವ ಸವಾಲು ಈಗ ವಿಶ್ವ ಮಲ್ಟಿಪಲ್ ಸ್ಕ್ಲೆರೋಸಿಸ್ ದಿನದ ಅಭಿಯಾನದ ಮುಂದಿದೆ.

ವಿಶ್ವ ಮಲ್ಟಿಪಲ್ ಸ್ಕ್ಲೆರೋಸಿಸ್ (MS) ದಿನವನ್ನು ಅಧಿಕೃತವಾಗಿ ಮೇ 30 ರಂದು ಆಚರಿಸಲಾಗುತ್ತಿದೆ. ಜಾಗತಿಕ ಮಲ್ಟಿಪಲ್ ಸ್ಕ್ಲೆರೋಸಿಸ್ ಸಮುದಾಯವನ್ನು ಒಟ್ಟುಗೂಡಿವ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ (ಎಂಎಸ್) ಪೀಡಿತ ಪ್ರತಿಯೊಬ್ಬರಿಗೂ ಜಾಗೃತಿ ಮತ್ತು ವಿಶೇಷ ಪ್ರಚಾರ ಅಭಿಯಾನಕ್ಕೆ ಒತ್ತು ನೀಡುವುದಕ್ಕೆ ಆದ್ಯತೆ ನೀಡಲಾಗುವುದು. ವಿಶ್ವ MS ದಿನದ 2020-2023ರ ವಿಷಯವು 'ಸಂಪರ್ಕ' ಆಗಿದೆ. MS ಸಂಪರ್ಕಗಳ ಅಭಿಯಾನವು ಸಮುದಾಯದ ಸಂಪರ್ಕ, ಸ್ವಯಂ-ಸಂಪರ್ಕ ಮತ್ತು ಗುಣಮಟ್ಟದ ಆರೈಕೆಗೆ ಸಂಪರ್ಕಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಅಭಿಯಾನದ ಧ್ಯೇಯವಾಕ್ಯ ಎಂದರೆ 'ಐ ಕನೆಕ್ಟ್, ವಿ ಕನೆಕ್ಟ್' ಮತ್ತು ಈ ಅಭಿಯಾನದ ಹ್ಯಾಷ್ ಟ್ಯಾಗ್ MS ಸಂಪರ್ಕಗಳು. MS ಸಂಪರ್ಕಗಳು ಸಾಮಾಜಿಕ ಅಡೆತಡೆಗಳ ಸಮಸ್ಯೆ ನಿವಾರಿಸುವುದಕ್ಕೆ ಒತ್ತು ನೀಡುತ್ತಿದೆ. ಮಲ್ಟಿಪಲ್ ಸ್ಕ್ಲೆರೋಸಿಸ್ ಪರಿಣಾಮಕ್ಕೆ ಒಳಗಾಗಿರುವವರನ್ನು ಒಂಟಿತನಕ್ಕೆ ಮತ್ತು ಸಾಮಾಜಿಕವಾಗಿ ಪ್ರತ್ಯೇಕವಾಗಿರುವ ಸಮಸ್ಯೆಗೆ ದೂಡುತ್ತಿದೆ. ಈದನ್ನು ಈಗ ನಿವಾರಿಸಬೇಕಾಗಿದೆ. ಉತ್ತಮ ಸೇವೆಗಳನ್ನು ಒದಗಿಸಲು,  ಬೆಂಬಲ ಜಾಲವನ್ನು ಹೆಚ್ಚಿಸಲು ಮತ್ತು ಸ್ವಯಂ-ಆರೈಕೆಯ ಮೂಲಕ ಸಮಸ್ಯೆ ಗೆಲ್ಲಲು ಒಂದು ಅವಕಾಶವಾಗಿದೆ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ (DEPwD) ದೇಶದ ವಿಕಲಾಂಗ ವ್ಯಕ್ತಿಗಳ ಎಲ್ಲಾ ಅಭಿವೃದ್ಧಿ ಕಾರ್ಯಸೂಚಿಗಳನ್ನು ನೋಡಿಕೊಳ್ಳುವ ನೋಡಲ್ ಸಂಸ್ಥೆಯಾಗಿದೆ. ಜನಸಾಮಾನ್ಯರಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯೊಂದಿಗೆ, ಇಲಾಖೆಯು 30 ಮೇ 2023 ರಂದು ವಿಶ್ವ ಮಲ್ಟಿಪಲ್ ಸ್ಕ್ಲೆರೋಸಿಸ್ ದಿನವನ್ನು ಸಂಬಂಧಿಸಿದ ಸಂಸ್ಥೆಗಳ ಮೂಲಕ ಭಾರತದಾದ್ಯಂತ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. MS ದಿನದ ಥೀಮ್ ಬಣ್ಣ ಕಿತ್ತಳೆಯಾಗಿದೆ. ಮೇ 30, 2023 ರಂದು, ಸಂಸ್ಥೆಗಳು ತಮ್ಮ ಕಟ್ಟಡಗಳಿಗೆ  ಕಿತ್ತಳೆ ಬಣ್ಣ ಅಳವಡಿಸಿತ್ತು.

30 ಮೇ 2023 ರಂದು ವಿಶ್ವ ಮಲ್ಟಿಪಲ್ ಸ್ಕ್ಲೆರೋಸಿಸ್ ದಿನವನ್ನು ಆಚರಿಸಲು ದೇಶಾದ್ಯಂತ ಈ ಕೆಳಗಿನ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು:-

1.ಜಾಗೃತಿ ಕಾರ್ಯಕ್ರಮಗಳು

2.ಸೆಮಿನಾರ್ಗಳು ಮತ್ತು ಕಾರ್ಯಾಗಾರಗಳು

3.ರಸಪ್ರಶ್ನೆ ಸ್ಪರ್ಧೆ, ಪೋಸ್ಟರ್ ತಯಾರಿಕೆ

4.TLM ಕಿಟ್ಗಳ ವಿತರಣೆ

5. MSSI ಜೊತೆಗೂಡಿ ಮಲ್ಟಿಪಲ್ ಸ್ಕ್ಲೆರೋಸಿಸ್ ಹೊಂದಿರುವ ವ್ಯಕ್ತಿಗಳ ಜತೆ ಸಮಾಲೋಚನೆ, ಸಲಹೆ ಮತ್ತು ಸರ್ಕಾರದ ಯೋಜನೆಗಳ ಮತ್ತು ಪ್ರಯೋಜನಗಳ ವಿಷಯದ ಕುರಿತು ವೆಬಿನಾರ್.

6.ಮಲ್ಟಿಪಲ್ ಸ್ಕ್ಲೆರೋಸಿಸ್ ಕುರಿತು ರಾಷ್ಟ್ರೀಯ ವೆಬಿನಾರ್ - ಅರಿವು ಮತ್ತು ವಿಶೇಷ ಸಂವೇದನಾ ಕಾರ್ಯಾಗಾರ

7. ಪ್ರತಿ ಮನೆಯ ಸದಸ್ಯರ ದೈಹಿಕ ತಪಾಸಣೆ ಶಿಬಿರ

8. "ಮಲ್ಟಿಪಲ್ ಸ್ಕ್ಲೆರೋಸಿಸ್ & ಇಂಪಾರ್ಟೆನ್ಸ್ ಆಫ್ ಕಾಂಪ್ರಹೆನ್ಸಿವ್ ಕೇರ್" ವಿಷಯದ ಮೇಲೆ ವೆಬಿನಾರ್.

9. ಸ್ಕಿಜೋಫ್ರೇನಿಯಾದಲ್ಲಿ ಆರಂಭಿಕ ಹಂತದ ಬಗ್ಗೆ ಮನಶ್ಶಾಸ್ತ್ರಜ್ಞ ಮತ್ತು ಮನೋವೈದ್ಯರ ದೃಷ್ಟಿಕೋನದ ವೆಬಿನಾರ್

10. ವಿಶೇಷ ಸಹಾಯ ಅಥವಾ ನೆರವಿನ ಸಾಧನಗಳ ವಿತರಣೆ.

11.ಮಲ್ಟಿಪಲ್ ಸ್ಕ್ಲೆರೋಸಿಸ್ ಕುರಿತು ಅರಿವು ಮೂಡಿಸುವ ಕಿರು ನಾಟಕ.

****


(Release ID: 1928588) Visitor Counter : 127