ಪ್ರಧಾನ ಮಂತ್ರಿಯವರ ಕಛೇರಿ
ಮಹಾರಾಣಾ ಪ್ರತಾಪ್ ಜಯಂತಿಯಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
09 MAY 2023 8:53AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಹಾರಾಣಾ ಪ್ರತಾಪ್ ಅವರನ್ನು ಧೈರ್ಯ, ಶೌರ್ಯ ಮತ್ತು ಹೆಮ್ಮೆಯ ಸಂಕೇತ ಎಂದು ಹೆಸರಿಸಿದ್ದಾರೆ. ಮಹಾರಾಣಾ ಪ್ರತಾಪ್ ಅವರ ಜಯಂತಿಯಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿಯವರು, "ಮಹಾರಾಣಾ ಪ್ರತಾಪ್ ಅವರು ತಮ್ಮ ಜೀವನವನ್ನು ತಾಯ್ನಾಡಿನ ಸೇವೆಗಾಗಿ ಮುಡಿಪಾಗಿಟ್ಟರು. ಅವರ ಜೀವನವು ಮುಂಬರುವ ತಲೆಮಾರುಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ" ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಯವರು:
"ಸಾಹಸ, ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾದ ಮಹಾರಾಣಾ ಪ್ರತಾಪ್ ಅವರಿಗೆ ಅವರ ಜನ್ಮ ದಿನಾಚರಣೆಯಂದು ಗೌರವಪೂರ್ವಕ ಶ್ರದ್ಧಾಂಜಲಿಯನ್ನು ಅರ್ಪಿಸಲು ಇಚ್ಚಿಸುತ್ತೇನೆ. ತಾಯ್ನಾಡನ್ನು ರಕ್ಷಿಸಲು ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು, ಇದು ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯಲಿದೆ" ಎಂದು ಟ್ವೀಟ್ ಮಾಡಿದ್ದಾರೆ.
***
(ಪ್ರಕಟಣೆ ಐ.ಡಿ.: 1928208)
ವಿಸಿಟರ್ ಕೌಂಟರ್ : 165
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam