ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫೋರ್ಟೆಸ್ಕ್ಯೂ ಮೆಟಲ್ಸ್ ಗ್ರೂಪ್ ಮತ್ತು ಫೋರ್ಟೆಸ್ಕ್ಯೂ ಫ್ಯೂಚರ್ ಇಂಡಸ್ಟ್ರೀಸ್‌ ನ ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ. ಆಂಡ್ರ್ಯೂ ಫಾರೆಸ್ಟ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

Posted On: 23 MAY 2023 8:50AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಫೋರ್ಟೆಸ್ಕ್ಯೂ ಮೆಟಲ್ಸ್ ಗ್ರೂಪ್ ಮತ್ತು ಫೋರ್ಟೆಸ್ಕ್ಯೂ ಫ್ಯೂಚರ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಂಸ್ಥಾಪಕರಾದ ಆಸ್ಟ್ರೇಲಿಯಾದ ಪ್ರಮುಖ ಕೈಗಾರಿಕೋದ್ಯಮಿ ಡಾ. ಆಂಡ್ರ್ಯೂ ಫಾರೆಸ್ಟ್ ಅವರನ್ನು ಭೇಟಿ ಮಾಡಿದರು.

ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತೀಯ ಕಂಪನಿಗಳೊಂದಿಗೆ ಕೆಲಸ ಮಾಡುವ ಫೋರ್ಟೆಸ್ಕ್ಯೂ ಗ್ರೂಪ್ ನ ಯೋಜನೆಗಳನ್ನು ಪ್ರಧಾನಿ ಸ್ವಾಗತಿಸಿದರು. ಭಾರತದ ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ಯೋಜನೆಗಳ ಬಗ್ಗೆ ಒತ್ತು ನೀಡಿದ ಪ್ರಧಾನಮಂತ್ರಿಯವರು, ಗ್ರೀನ್ ಹೈಡ್ರೋಜನ್ ಮಿಷನ್‌ನಂತಹ ಪರಿವರ್ತಕ ಸುಧಾರಣೆಗಳು ಮತ್ತು ಭಾರತವು ತೆಗೆದುಕೊಳ್ಳುತ್ತಿರುವ ಉಪಕ್ರಮಗಳನ್ನು ಎತ್ತಿ ತೋರಿಸಿದರು.

ಡಾ. ಫಾರೆಸ್ಟ್ ಅವರು ಭಾರತದಲ್ಲಿನ ಫಾರ್ಟೆಸ್ಕ್ಯೂ ಫ್ಯೂಚರ್ ಇಂಡಸ್ಟ್ರೀಸ್ ಯೋಜನೆಗಳು ಮತ್ತು ಯೋಜನೆಗಳ ಕುರಿತು ಪ್ರಧಾನ ಮಂತ್ರಿಯವರಿಗೆ ವಿವರಿಸಿದರು.

******


(Release ID: 1926639) Visitor Counter : 190