ಸಹಕಾರ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಸಹಕಾರ್ ಸೆ ಸಮೃದ್ಧಿ" ದೃಷ್ಟಿಕೋನವನ್ನು ಸಾಕಾರಗೊಳಿಸುವ ಸಲುವಾಗಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಪ್ರಯತ್ನದಿಂದ, ಸಹಕಾರಿ ವಲಯದಲ್ಲಿ 1100 ಹೊಸ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಒ.) ರಚಿಸಲು ನಿರ್ಧಾರ
ಈ ಹೆಚ್ಚುವರಿ 1100 ಎಫ್.ಪಿ.ಒಗಳನ್ನು ಎಫ್.ಪಿ.ಒಗಳ ಯೋಜನೆಯಡಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (ಎನ್.ಸಿ.ಡಿಸಿ) ನೀಡಿಕೆ
ಎಫ್.ಪಿ.ಒ ಯೋಜನೆಯಡಿ, ಪ್ರತಿ ಎಫ್.ಪಿ.ಒಗೆ 33 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ, ಜೊತೆಗೆ, ಕ್ಲಸ್ಟರ್ ಆಧಾರಿತ ವ್ಯವಹಾರ ಸಂಸ್ಥೆಗಳಿಗೆ (ಸಿಬಿಬಿಒ) ಪ್ರತಿ ಎಫ್.ಪಿ.ಒಗೆ 25 ಲಕ್ಷ ರೂ.ಗಳ ಧನ ಸಹಾಯವನ್ನು ಒದಗಿಸಲಾಗುತ್ತದೆ
ಪಿಎಸಿಎಸ್ ಗಳು ಪ್ರಾಥಮಿಕವಾಗಿ ಅಲ್ಪಾವಧಿ ಸಾಲ ಮತ್ತು ಬೀಜ, ರಸಗೊಬ್ಬರ ಇತ್ಯಾದಿಗಳ ವಿತರಣೆಯಲ್ಲಿ ತೊಡಗಿವೆ, ಈಗ ಅವರು ಜೇನು ಸಾಕಾಣಿಕೆ, ಅಣಬೆ ಕೃಷಿ ಮುಂತಾದ ಹೆಚ್ಚಿನ ಆದಾಯವನ್ನು ತರುವ ಚಟುವಟಿಕೆಗಳು ಸೇರಿದಂತೆ ಇತರ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.
ಈ ಉಪಕ್ರಮವು ರೈತರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಾತ್ರಿಪಡಿಸುತ್ತದೆ, ಇದು ಪಿಎಸಿಎಸ್.ನ ಆರ್ಥಿಕ ಚಟುವಟಿಕೆಗಳಲ್ಲಿ ವೈವಿಧ್ಯೀಕರಣಕ್ಕೆ ಕಾರಣವಾಗುತ್ತದೆ ಮತ್ತು ಹೊಸ ಮತ್ತು ಸ್ಥಿರ ಆದಾಯದ ಮೂಲಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ.
ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ಸಹಕಾರ ಸಚಿವಾಲಯ ಕೈಗೊಂಡ ವಿವಿಧ ಉಪಕ್ರಮಗಳು ಸಾಮಾನ್ಯವಾಗಿ ಸಹಕಾರಿ ವಲಯ ಮತ್ತು ನಿರ್ದಿಷ್ಟವಾಗಿ ಪಿಎಸಿಎಸ್.ಗಳಿಗೆ ತಮ್ಮ ಸದಸ್ಯರಿಗೆ ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸಲು ಮತ್ತು ಅವುಗಳನ್ನು ಕಾರ್ಯಸಾಧ್ಯ, ಕ್ರಿಯಾತ್ಮಕ ಮತ್ತು ಆರ್ಥಿಕವಾಗಿ ಸುಸ್ಥಿರ ಆರ್ಥಿಕ ಘಟಕಗಳಾಗ
Posted On:
17 MAY 2023 7:31PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಸಹಕಾರ್ ಸೆ ಸಮೃದ್ಧಿ" ದೃಷ್ಟಿಕೋನವನ್ನು ಸಾಕಾರಗೊಳಿಸುವ ಸಲುವಾಗಿ ಮತ್ತು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಪ್ರಯತ್ನದಿಂದ, ಸಹಕಾರಿ ವಲಯದಲ್ಲಿ 1100 ಹೊಸ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಒ.) ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ 1100 ಹೆಚ್ಚುವರಿ ಎಫ್.ಪಿ.ಒಗಳ ಗುರಿಯನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ತನ್ನ '10,000 ಎಫ್.ಪಿ.ಒಗಳ ರಚನೆ ಮತ್ತು ಉತ್ತೇಜನ' ಯೋಜನೆಯಡಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (ಎನ್.ಸಿ.ಡಿಸಿ) ನೀಡಿದೆ.
ಎಫ್ ಪಿ ಒ ಯೋಜನೆಯಡಿ, ಪ್ರತಿ ಎಫ್ ಪಿಒಗೆ 33 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. ಇದಲ್ಲದೆ, ಕ್ಲಸ್ಟರ್ ಆಧಾರಿತ ವ್ಯಾಪಾರ ಸಂಸ್ಥೆಗಳಿಗೆ (ಸಿಬಿಬಿಒ) ಪ್ರತಿ ಎಫ್.ಪಿ.ಒ ಗೆ 25 ಲಕ್ಷ ರೂ.ಗಳ ಧನ ಸಹಾಯವನ್ನು ಒದಗಿಸಲಾಗುತ್ತದೆ.
ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (ಪಿಎಸಿಎಸ್), ಸುಮಾರು 13 ಕೋಟಿ ರೈತರ ಸದಸ್ಯತ್ವವನ್ನು ಹೊಂದಿವೆ ಮತ್ತು ಪ್ರಾಥಮಿಕವಾಗಿ ಅಲ್ಪಾವಧಿ ಸಾಲ ಮತ್ತು ಬೀಜಗಳು, ರಸಗೊಬ್ಬರಗಳು ಇತ್ಯಾದಿಗಳ ವಿತರಣೆಯಲ್ಲಿ ತೊಡಗಿವೆ. ಈಗ ಇತರ ಆರ್ಥಿಕ ಚಟುವಟಿಕೆಗಳನ್ನು ಸಹ ಕೈಗೊಳ್ಳಲು ಸಾಧ್ಯವಾಗುತ್ತದೆ. ಎಫ್.ಪಿ.ಒ ಯೋಜನೆಯಲ್ಲಿ ಪಿಎಸಿಎಸ್.ಗಳ ಏಕೀಕರಣವು ಉತ್ಪಾದನಾ ಆದಾನದ ಪೂರೈಕೆ; ಕಲ್ಟಿವೇಟರ್, ಟಿಲ್ಲರ್, ಹಾರ್ವೆಸ್ಟರ್ ಮುಂತಾದ ಕೃಷಿ ಉಪಕರಣಗಳು ಮತ್ತು ಸಂಸ್ಕರಣೆ, ಶುಚಿಗೊಳಿಸುವಿಕೆ, ಮೌಲ್ಯೀಕರಣ, ವಿಂಗಡಣೆ, ಶ್ರೇಣೀಕರಣ, ಪ್ಯಾಕಿಂಗ್, ಸಂಗ್ರಹಣೆ, ಸಾರಿಗೆ, ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಜೇನು ಸಾಕಾಣಿಕೆ, ಅಣಬೆ ಕೃಷಿ ಮುಂತಾದ ಹೆಚ್ಚಿನ ಆದಾಯವನ್ನು ಉತ್ಪಾದಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ಪಿಎಸಿಎಸ್ ಗೆ ಸಾಧ್ಯವಾಗುತ್ತದೆ.
ಈ ಉಪಕ್ರಮವು ರೈತರಿಗೆ ಅಗತ್ಯವಾದ ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸುವ ಮೂಲಕ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಾತ್ರಿಪಡಿಸುತ್ತದೆ. ಇದು ಪಿಎಸಿಎಸ್ ನ ಆರ್ಥಿಕ ಚಟುವಟಿಕೆಗಳಲ್ಲಿ ವೈವಿಧ್ಯೀಕರಣಕ್ಕೆ ಕಾರಣವಾಗುತ್ತದೆ, ಇದರಿಂದಾಗಿ ಹೊಸ ಮತ್ತು ಸ್ಥಿರವಾದ ಆದಾಯದ ಮೂಲಗಳನ್ನು ಸೃಷ್ಟಿಸಲು ಅನುಕೂಲವಾಗುತ್ತದೆ.
ಇದು, ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ಸಹಕಾರ ಸಚಿವಾಲಯವು ಕೈಗೊಂಡ ವಿವಿಧ ಉಪಕ್ರಮಗಳೊಂದಿಗೆ, ಸಾಮಾನ್ಯವಾಗಿ ಸಹಕಾರಿ ವಲಯ ಮತ್ತು ನಿರ್ದಿಷ್ಟವಾಗಿ ಪಿಎಸಿಎಸ್ ಗೆ ತಮ್ಮ ಸದಸ್ಯರಿಗೆ ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ, ಆ ಮೂಲಕ ತಮ್ಮನ್ನು ಕಾರ್ಯಸಾಧ್ಯವಾದ, ಕ್ರಿಯಾತ್ಮಕ ಮತ್ತು ಆರ್ಥಿಕವಾಗಿ ಸುಸ್ಥಿರ ಆರ್ಥಿಕ ಘಟಕಗಳಾಗಿ ಪರಿವರ್ತಿಸುತ್ತದೆ.
*******
(Release ID: 1925207)
Visitor Counter : 176