ಗೃಹ ವ್ಯವಹಾರಗಳ ಸಚಿವಾಲಯ

ಬೆಂಗಳೂರಿನಲ್ಲಿ ನಾಳೆ 'ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮ್ಮೇಳನ; ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಮಾದಕ ದ್ರವ್ಯಗಳ ಸೇವನೆಮುಕ್ತ ಭಾರತ ಮಾಡಲು ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ ಅಳವಡಿಸಿಕೊಂಡಿದೆ.

ವಶಪಡಿಸಿಕೊಂಡ 9,298 ಕೆಜಿ ಡ್ರಗ್ಸ್ ನಾಶದ ಮೇಲ್ವಿಚಾರಣೆ ನಡೆಸಲಿರುವ ಕೇಂದ್ರ ಗೃಹ ಸಚಿವರು; 2022 ಜೂನ್ 01ರಿಂದ 75 ದಿನಗಳ ಕಾಲ ನಡೆದ ಅಭಿಯಾನದಲ್ಲಿ 75,000 ಕೆಜಿ ಡ್ರಗ್ಸ್ ನಾಶ ಗುರಿ ನಿಗದಿಪಡಿಸಲಾಗಿತ್ತು. ಆದರೆ ಇದುವರೆಗೆ ಒಟ್ಟು 5,94,620 ಕೆಜಿ ಡ್ರಗ್ಸ್ ನಾಶಪಡಿಸಿ, ನಿಗದಿತ ಗುರಿ ದಾಟಿ ಸಾಧನೆ ಮಾಡಲಾಗಿದೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿರ್ದೇಶನದ ಮೇರೆಗೆ ಗೃಹ ಸಚಿವಾಲಯವು ಸಾಂಸ್ಥಿಕ ರಚನೆ, ಸಬಲೀಕರಣ ಮತ್ತು ಎಲ್ಲಾ ಮಾದಕ ದ್ರವ್ಯ ಏಜೆನ್ಸಿಗಳ ಸಮನ್ವಯ ಬಲಪಡಿಸುವ 3 ಅಂಶಗಳ ಸೂತ್ರ ಅಳವಡಿಸಿಕೊಂಡಿದೆ, ಮಾದಕ ದ್ರವ್ಯಗಳನ್ನು ಹತ್ತಿಕ್ಕಲು ಸಮಗ್ರ ಜಾಗೃತಿ ಅಭಿಯಾನ ಅಳವಡಿಸಿಕೊಂಡಿದೆ.

Posted On: 23 MAR 2023 3:45PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ನಾಳೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 'ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. 5 ದಕ್ಷಿಣ ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವರು 1,235 ಕೋಟಿ ರೂ. ಮೌಲ್ಯದ 9,298 ಕಿಲೋಗ್ರಾಂ ವಶಪಡಿಸಿಕೊಂಡ ಡ್ರಗ್ಸ್ ನಾಶದ ಮೇಲ್ವಿಚಾರಣೆ ನಡೆಸಲಿದ್ದಾರೆ.

ಸಾಗರ ಮಾರ್ಗಗಳ ಮೂಲಕ ಮಾದಕವಸ್ತು ಕಳ್ಳಸಾಗಣೆಗೆ ಕಡಿವಾಣ ಹಾಕುವ ಮಾರ್ಗೋಪಾಯಗಳು, ಮಾದಕವಸ್ತು ಕಳ್ಳಸಾಗಣೆದಾರರ ಮೇಲೆ ಕಠಿಣ ದಂಡನಾತ್ಮಕ ಕ್ರಮಗಳು, ಶೂನ್ಯ ಸಹಿಷ್ಣುತೆ, ರಾಜ್ಯ ಮತ್ತು ಕೇಂದ್ರ ಮಾದಕವಸ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ತಡೆರಹಿತ ಸಮನ್ವಯ, ಸಹಕಾರ ಮತ್ತು ಮಾದಕ ವಸ್ತುಗಳ ಹರಡುವಿಕೆ ತಡೆಯುವ ಅಂಶಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು. ಸಂಘಟಿತ ಜಾಗೃತಿ ಕಾರ್ಯಕ್ರಮದ ಮೂಲಕ ಮಾದಕ ದ್ರವ್ಯ ಸೇವನೆಯನ್ನು ತಡೆಗಟ್ಟುವ ಕುರಿತು ಸಭೆಯಲ್ಲಿ ಆದ್ಯತೆಯ ಚರ್ಚೆ ಸಾಗಲಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಮಾದಕ ದ್ರವ್ಯಗಳ ಸೇವನೆ ಮುಕ್ತ ಭಾರತ ನಿರ್ಮಾಣ ಮಾಡಲು ಡ್ರಗ್ಸ್ ವಿರುದ್ಧ ಶೂನ್ಯ ಸಹಿಷ್ಣುತಾ  ನೀತಿ ಅಳವಡಿಸಿಕೊಂಡಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಡಿ, 2022 ಜೂನ್ 01ರಿಂದ ಆರಂಭವಾದ 75 ದಿನಗಳ ಅಭಿಯಾನದಲ್ಲಿ 75,000 ಕೆಜಿ ಮಾದಕ ದ್ರವ್ಯಗಳನ್ನು ನಾಶಪಡಿಸುವ ಗುರಿ ನಿಗದಿಪಡಿಸಲಾಗಿತ್ತು, ಆದರೆ 8,409 ಕೋಟಿ ರೂಪಾಯಿ ಮೌಲ್ಯದ, ವಶಪಡಿಸಿಕೊಂಡ ಒಟ್ಟು 5,94,620 ಕಿಲೋಗ್ರಾಂ ಮಾದಕವಸ್ತುಗಳನ್ನು ಇದುವರೆಗೆ ನಾಶಪಡಿಸಿ, ನಿಗದಿತ ಗುರಿ ದಾಟಿ ಸಾಧನೆ ಮಾಡಲಾಗಿದೆ. ನಾಶಪಡಿಸಿದ ಒಟ್ಟು ಮಾದಕವಸ್ತುಗಳ ಪೈಕಿ 3,138 ಕೋಟಿ ರೂಪಾಯಿ ಮೌಲ್ಯದ 1,29,363 ಕಿಲೋಗ್ರಾಂ ಡ್ರಗ್ಸ್ ಅನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್‌ಸಿಬಿ) ಒಂದೇ ನಾಶಪಡಿಸಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಿರ್ದೇಶನದಂತೆ, ಗೃಹ ಸಚಿವಾಲಯವು ಸಾಂಸ್ಥಿಕ ರಚನೆ ಬಲಪಡಿಸುವ 3 ಅಂಶಗಳ ಸೂತ್ರ ಅಳವಡಿಸಿಕೊಂಡಿದೆ, ಎಲ್ಲಾ ನಾರ್ಕೋಟಿಕ್ಸ್ ಏಜೆನ್ಸಿಗಳ ಸಬಲೀಕರಣ ಮತ್ತು ಸಮನ್ವಯ ಹಾಗೂ ಮಾದಕ ದ್ರವ್ಯಗಳನ್ನು ಹತ್ತಿಕ್ಕುವ ಸಮಗ್ರ ಜಾಗೃತಿ ಅಭಿಯಾನ. ಮಾದಕವಸ್ತು ಕಳ್ಳಸಾಗಣೆ ಸಮಸ್ಯೆಯು ಕೇಂದ್ರ ಅಥವಾ ರಾಜ್ಯದ ಸಮಸ್ಯೆಯಲ್ಲ, ಆದರೆ ರಾಷ್ಟ್ರೀಯ ಸಮಸ್ಯೆಯಾಗಿದೆ. ಅದನ್ನು ಎದುರಿಸುವ ಪ್ರಯತ್ನಗಳು ರಾಷ್ಟ್ರೀವಾಗಿರಬೇಕುಯ ಮತ್ತು ಏಕೀಕೃತವಾಗಿರಬೇಕು. ಮಾದಕ ದ್ರವ್ಯಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು, ಎಲ್ಲಾ ರಾಜ್ಯಗಳು ನಿಯಮಿತವಾಗಿ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ರಾಷ್ಟ್ರೀಯ ನಾರ್ಕೊಟಿಕ್ಸ್ ಸಮನ್ವಯ ಪೋರ್ಟಲ್(ಎನ್‌ಸಿಒಆರ್‌ಡಿ)ನ ಸಭೆ ಕರೆಯಬೇಕು.

ಮಾದಕ ದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ಇತ್ತೀಚಿನ ಸುಧಾರಿತ ತಂತ್ರಜ್ಞಾನ  ಬಳಸುವುದು ಮುಂದಿನ ದಾರಿಯಾಗಿರಬೇಕು. ಗಾಂಜಾ, ಅಫೀಮು ಬೆಳೆಯುವ ಪ್ರದೇಶಗಳ ಗುರುತಿಸುವಿಕೆ ಮತ್ತು ನಿಯಂತ್ರಣಕ್ಕಾಗಿ ಡ್ರೋನ್, ಕೃತಕ ಬುದ್ಧಿಮತ್ತೆ ಮತ್ತು ಉಪಗ್ರಹ ಮ್ಯಾಪಿಂಗ್ ಬಳಕೆಯನ್ನು ಶ್ರದ್ಧೆಯಿಂದ ನೋಡಬೇಕು. ಮಾದಕ ದ್ರವ್ಯಗಳ ಪ್ರಕರಣಗಳನ್ನು ಅದರ ಮೂಲದಿಂದ ಗಮ್ಯಸ್ಥಾನದವರೆಗೆ ಅದರ ಸಂಪೂರ್ಣ ಜಾಲವನ್ನು ದಮನ ಮಾಡಲು ಸಂಪೂರ್ಣ ತನಿಖೆ ಮಾಡಬೇಕಿದೆ.


***



(Release ID: 1910015) Visitor Counter : 148