ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸೃಜನಶೀಲತೆಯ ಹೆಸರಿನಲ್ಲಿ ಅಶ್ಲೀಲತೆಯನ್ನು ಸಹಿಸಲು ಸಾಧ್ಯವಿಲ್ಲ: ಅನುರಾಗ್ ಠಾಕೂರ್


ಒಟಿಟಿಯಲ್ಲಿ ಅಶ್ಲೀಲ ವಿಷಯಗಳು ಹೆಚ್ಚುತ್ತಿವೆ ಎಂಬ ದೂರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಅನುರಾಗ್ ಠಾಕೂರ್

Posted On: 19 MAR 2023 7:32PM by PIB Bengaluru

ಕೇಂದ್ರ ಮಾಹಿತಿ ಪ್ರಸಾರ ಮತ್ತು ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ನಾಗ್ಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಒಟಿಟಿ ವೇದಿಕೆಯಲ್ಲಿ ಹೆಚ್ಚುತ್ತಿರುವ ಅಶ್ಲೀಲತೆ ಮತ್ತು ನಿಂದನಾತ್ಮಕ ಭಾಷೆಯ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದರು ಮತ್ತು ಈ ವಿಷಯದ ಬಗ್ಗೆ ಸರ್ಕಾರದ ಗಂಭೀರತೆಯನ್ನು ವ್ಯಕ್ತಪಡಿಸಿದರು.

ಶ್ರೀ ಅನುರಾಗ್ ಠಾಕೂರ್, "ಸೃಜನಶೀಲತೆಯ ಹೆಸರಿನಲ್ಲಿ ನಿಂದನಾತ್ಮಕ ಭಾಷೆಯನ್ನು ಸಹಿಸಲಾಗುವುದಿಲ್ಲ. ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ನಿಂದನಾತ್ಮಕ ಮತ್ತು ಅಶ್ಲೀಲ ವಿಷಯಗಳು ಹೆಚ್ಚುತ್ತಿರುವ ದೂರುಗಳ ಬಗ್ಗೆ ಸರ್ಕಾರ ಗಂಭೀರವಾಗಿದೆ. ಇದಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಅಗತ್ಯವಿದ್ದರೆ, ಸಚಿವಾಲಯವು ಅದನ್ನು ಪರಿಗಣಿಸಲು ಸಿದ್ಧವಾಗಿದೆ. ಈ ವೇದಿಕೆಗಳಿಗೆ ಸೃಜನಶೀಲತೆಗೆ ಸ್ವಾತಂತ್ರ್ಯವನ್ನು ನೀಡಲಾಗಿದಿಯೇ ಹೊರತು ಅಶ್ಲೀಲತೆಗೆ ಅಲ್ಲ. ಈ ಬಗ್ಗೆ ಯಾವುದೇ ಅಗತ್ಯ ಕ್ರಮ ಕೈಗೊಳ್ಳಬೇಕಾದರೂ ಸರ್ಕಾರ ಅದರಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಮುಂದುವರಿದ ಮಾತನಾಡಿದ ಅವರು, "ಇಲ್ಲಿಯವರೆಗಿನ ಪ್ರಕ್ರಿಯೆಯೆಂದರೆ ನಿರ್ಮಾಪಕರು ಸ್ವೀಕರಿಸಿದ ದೂರುಗಳನ್ನು ಮೊದಲ ಹಂತದಲ್ಲಿ ಪರಿಹರಿಸಬೇಕಾಗಿದೆ. 90 ರಿಂದ  ಶೇ.92 ರಷ್ಟು ದೂರುಗಳನ್ನು ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಪರಿಹರಿಸಲಾಗುತ್ತದೆ. ದೂರು ಪರಿಹಾರದ ಮುಂದಿನ ಹಂತವು ಅವರ ಸಂಘದ ಮಟ್ಟದಲ್ಲಿದೆ, ಅಲ್ಲಿ ಹೆಚ್ಚಿನ ದೂರುಗಳನ್ನು ಪರಿಹರಿಸಲಾಗುತ್ತದೆ. ಕೊನೆಯ ಹಂತದಲ್ಲಿ ಅದು ಸರ್ಕಾರದ ಮಟ್ಟಕ್ಕೆ ಬರುತ್ತದೆ, ಅಲ್ಲಿ ನಿಯಮಗಳ ಪ್ರಕಾರ ಇಲಾಖಾ ಸಮಿತಿ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಎಲ್ಲೋ ಕಳೆದ ಕೆಲವು ದಿನಗಳಿಂದ ದೂರುಗಳು ಹೆಚ್ಚಾಗಲು ಪ್ರಾರಂಭಿಸಿವೆ ಮತ್ತು ಇಲಾಖೆ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಬದಲಾವಣೆ ಮಾಡುವ ಅಗತ್ಯವಿದ್ದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

****


(Release ID: 1908718) Visitor Counter : 156