ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯು ಐದು ರಾಜ್ಯಗಳಿಗೆ ರೂ. 1,816.162 ಕೋಟಿ ಹೆಚ್ಚುವರಿ ಕೇಂದ್ರ ನೆರವು ಅನುಮೋದಿಸಿತು
ನೈಸರ್ಗಿಕ ವಿಕೋಪಗಳನ್ನು ಎದುರಿಸಿದ ಈ ಐದು ರಾಜ್ಯಗಳ ಜನರಿಗೆ ಸಹಾಯ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಂಕಲ್ಪವನ್ನು ಇದು ತೋರಿಸುತ್ತದೆ.
ಅಸ್ಸಾಂ, ಹಿಮಾಚಲ ಪ್ರದೇಶ, ಕರ್ನಾಟಕ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ 2022 ರಲ್ಲಿ ಸಂಭವಿಸಿದ ಪ್ರವಾಹ / ಭೂಕುಸಿತಗಳು, ಅತಿವೃಷ್ಟಿ (ಮೇಘಸ್ಫೋಟ)ಗಳಿಗೆ ಪರಿಹಾರವಾಗಿ ಹಣವನ್ನು ನೀಡಲಾಗುವುದು
Posted On:
13 MAR 2023 4:05PM by PIB Bengaluru
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು 2022 ರ ಅವಧಿಯಲ್ಲಿ ಪ್ರವಾಹ, ಭೂಕುಸಿತ, ಅತಿವೃಷ್ಟಿ (ಮೇಘಸ್ಫೋಟ) ಯಿಂದ ಹಾನಿಗೊಳಗಾದ ಐದು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಹೆಚ್ಚುವರಿ ಕೇಂದ್ರ ಸರ್ಕಾರವು ಈ ಸಹಾಯವನ್ನು ಅನುಮೋದಿಸಿದೆ. ನೈಸರ್ಗಿಕ ವಿಕೋಪಗಳನ್ನು ಎದುರಿಸಿದ ಈ ಐದು ರಾಜ್ಯಗಳ ಜನರಿಗೆ ಸಹಾಯ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಂಕಲ್ಪವನ್ನು ಇದು ಧೃಢೀಕರಿಸುತ್ತದೆ
ಕೇಂದ್ರ ಉನ್ನತ ಮಟ್ಟದ ಸಮಿತಿಯ ಶಿಫಾರಸಿನಂತೆ ಎನ್.ಡಿ.ಆರ್.ಎಫ್.ನಿಂದ ಐದು ರಾಜ್ಯಗಳಿಗೆ ನೀಡಲಾಗುವ ರೂ. 1,816.162 ಕೋಟಿ ಹೆಚ್ಚುವರಿ ಧನ ಸಹಾಯದ ವಿಂಗಡನೆ ಹೀಗಿದೆ:-
ಅಸ್ಸಾಂಗೆ ರೂ 520.466 ಕೋಟಿ
ಹಿಮಾಚಲ ಪ್ರದೇಶಕ್ಕೆ ರೂ 239.31 ಕೋಟಿ
ಕರ್ನಾಟಕಕ್ಕೆ ರೂ 941.04 ಕೋಟಿ
ಮೇಘಾಲಯಕ್ಕೆ ರೂ 47.326 ಕೋಟಿ
ನಾಗಾಲ್ಯಾಂಡ್‌ಗೆ ರೂ 68.02 ಕೋಟಿ
ಈಗಾಗಲೇ ರಾಜ್ಯಗಳ ವಿಲೇವಾರಿಯಲ್ಲಿ ಇರಿಸಲಾಗಿರುವ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಲ್ಲಿ ರಾಜ್ಯಗಳಿಗೆ ಕೇಂದ್ರವು ಬಿಡುಗಡೆ ಮಾಡಿದ ನಿಧಿಗಿಂತ ಹೆಚ್ಚಿನ ವಿಶೇಷ ಮೊತ್ತವಾಗಿ ಈ ಹೆಚ್ಚುವರಿ ನೆರವನ್ನು ನೀಡಲಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ 25 ರಾಜ್ಯಗಳಿಗೆ ತಮ್ಮ ಎಸ್‌ಡಿಆರ್‌ಎಫ್‌ನಲ್ಲಿ ರೂ. 15,770.40 ಕೋಟಿ ಮತ್ತು ಎನ್‌ಡಿಆರ್‌ಎಫ್‌ನಿಂದ 4 ರಾಜ್ಯಗಳಿಗೆ ರೂ 502.744 ಕೋಟಿ ನೀಡಲಾಗಿದೆ.
ವಿಪತ್ತುಗಳು ಸಂಭವಿಸಿದಾಗ, ರಾಜ್ಯಗಳಿಂದ ಈ ಕುರಿತು ಜ್ಞಾಪಕ ಪತ್ರದ ಸ್ವೀಕೃತಿ ಬೇರುವ ತನಕ ಕಾಯದೆ, ಪರಿಹಾರ ಪ್ರಕ್ರಿಯೆಗಾಗಿ ಕೇಂದ್ರ ಸರ್ಕಾರವು ತಕ್ಷಣವೇ ಅಂತರ ಸಚಿವಾಲಯದ ಕೇಂದ್ರ ತಂಡಗಳನ್ನು ಪರಿಶೀಲನೆಗಾಗಿ ಈ ರಾಜ್ಯಗಳಿಗೆ ನಿಯೋಜಿಸಿತ್ತು.
***
(Release ID: 1906454)
Visitor Counter : 166