ಗೃಹ ವ್ಯವಹಾರಗಳ ಸಚಿವಾಲಯ

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿರುವ‌ ಆರ್‌ಆರ್‌ಆರ್‌ ಚಿತ್ರದ 'ನಾಟು ನಾಟು' ಹಾಡು ಮತ್ತು ಕಿರುಚಿತ್ರ 'ದಿ ಎಲಿಫೆಂಟ್ ವಿಸ್ಪರರ್ಸ್' ಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅಭಿನಂದನೆ 


ಭಾರತೀಯ ಚಿತ್ರರಂಗಕ್ಕೆ ಇದೊಂದು ಮೈಲಿಗಲ್ಲು. 'ನಾಟು ನಾಟು' ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ, ಈ ಹಾಡು ಭಾರತೀಯರ ಜೊತೆಗೆ ಪ್ರಪಂಚದಾದ್ಯಂತದ ಸಂಗೀತ ಪ್ರೇಮಿಗಳ ಬಾಯಲ್ಲಿ ಗುನುಗುತ್ತಿತ್ತು, ಆರ್‌ಆರ್‌ಆರ್‌ ತಂಡಕ್ಕೆ ಅಭಿನಂದನೆಗಳು

'ದಿ ಎಲಿಫೆಂಟ್ ವಿಸ್ಪರರ್ಸ್' ಚಿತ್ರವು ಆನೆಗಳನ್ನು ಉಳಿಸಲು ಭಾರತದ ಪ್ರಯತ್ನಗಳನ್ನು ಮುನ್ನೆಲೆಗೆ ತಂದಿದೆ, ಪ್ರಶಸ್ತಿಯು ಭಾರತೀಯ ಚಲನಚಿತ್ರೋದ್ಯಮದ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ ಮತ್ತು ಯುವ ಸಿನಿಮಾ ನಿರ್ಮಾತೃಗಳಿಗೆ ಸ್ಫೂರ್ತಿ ನೀಡುತ್ತದೆ

Posted On: 13 MAR 2023 1:03PM by PIB Bengaluru

ಆರ್‌ಆರ್‌ಆರ್‌ ಚಲನಚಿತ್ರದ 'ನಾಟು ನಾಟು' ಹಾಡು ಮತ್ತು 'ದಿ ಎಲಿಫೆಂಟ್ ವಿಸ್ಪರರ್ಸ್' ಕಿರುಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅಭಿನಂದನೆ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು,

“ಭಾರತೀಯ ಚಿತ್ರರಂಗಕ್ಕೆ ಇದೊಂದು ಮೈಲಿಗಲ್ಲು. ‘ನಾಟು ನಾಟುʼ ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಈ ಹಾಡು ಭಾರತೀಯರ ಜೊತೆಗೆ ಪ್ರಪಂಚದಾದ್ಯಂತದ ಸಂಗೀತ ಪ್ರೇಮಿಗಳ ಬಾಯಲ್ಲಿ ಗುನುಗುತ್ತಿತ್ತು. ಆರ್‌ಆರ್‌ಆರ್‌ ತಂಡದ @ssrajamouli @mmkeeravaani @boselyricist @tarak9999 @AlwaysRamCharan ಅವರಿಗೆ ಅಭಿನಂದನೆಗಳು” ಎಂದು ಅವರು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಶ್ರೀ ಅಮಿತ್ ಶಾ ಅವರು, “'ದಿ ಎಲಿಫೆಂಟ್ ವಿಸ್ಪರರ್ಸ್' ಕಿರುಚಿತ್ರಕ್ಕಾಗಿ ಆಸ್ಕರ್ ಗೆದ್ದ @EarthSpectrum ಮತ್ತು @guneetm ಅವರಿಗೆ ಅಭಿನಂದನೆಗಳು. ಈ ಚಿತ್ರವು ಆನೆಗಳನ್ನು ಉಳಿಸುವ ಭಾರತದ ಪ್ರಯತ್ನಗಳನ್ನು ಮುನ್ನೆಲೆಗೆ ತಂದಿದೆ. ಪ್ರಶಸ್ತಿಯು ಭಾರತೀಯ ಚಲನಚಿತ್ರೋದ್ಯಮದ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ ಮತ್ತು ಯುವ ಚಲನಚಿತ್ರ ನಿರ್ಮಾತೃಗಳಿಗೆ ಸ್ಫೂರ್ತಿ ನೀಡುತ್ತದೆ” ಎಂದು ಹೇಳಿದ್ದಾರೆ.

*****



(Release ID: 1906396) Visitor Counter : 125