ಪ್ರಧಾನ ಮಂತ್ರಿಯವರ ಕಛೇರಿ
ಆಸ್ಕರ್ ಪ್ರಶಸ್ತಿಯನ್ನು ಗೆದ್ದ 'ನಾಟು ನಾಟು' ಗೀತೆ, “ಆರ್ ಆರ್ ಆರ್” ಚಿತ್ರ ತಂಡಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ.
Posted On:
13 MAR 2023 10:59AM by PIB Bengaluru
ಅತ್ಯುತ್ತಮ ಮೂಲ ಗೀತೆಗಾಗಿ RRR ಚಲನಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಮ್ಮ ಹೆಮ್ಮೆಯ ಭಾರತೀಯ ಸಂಗೀತ ಸಂಯೋಜಕ, M.M ಕೀರವಾಣಿ, ಗೀತ ರಚನೆಕಾರ, ಚಂದ್ರಬೋಸ್ ಮತ್ತು ಇಡೀ ತಂಡವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಇದು ನಿಜಕ್ಕೂ ಅಸಾಧಾರಣ ಸಾಧನೆ. ಮತ್ತು 'ನಾಟು ನಾಟು' ಜನಪ್ರಿಯತೆ ಜಾಗತಿಕವಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಅಕಾಡೆಮಿಯ ಪ್ರಶಸ್ತಿ ಪಡೆದ ನಂತರ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.
"ಅಸಾಧಾರಣ!
'ನಾಟು ನಾಟು' ಜನಪ್ರಿಯತೆ ಜಾಗತಿಕವಾಗಿದೆ. ಇದು ಮುಂದಿನ ವರ್ಷಗಳಲ್ಲಿ ಸದಾ ನೆನಪಿನಲ್ಲಿ ಉಳಿಯುವ ಹಾಡು. ಈ ಪ್ರತಿಷ್ಠಿತ ಗೌರವಕ್ಕಾಗಿ @mmkeeravaani, @boselyricist ಮತ್ತು ಇಡೀ ತಂಡಕ್ಕೆ ಅಭಿನಂದನೆಗಳುʼ ಎಂದು ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.
ಭಾರತವು ಉತ್ಸುಕವಾಗಿದೆ, ಹರ್ಷದಾಯಕವಾಗಿ ಮತ್ತು ಹೆಮ್ಮೆಪಡುತ್ತದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
*****
(Release ID: 1906284)
Visitor Counter : 164
Read this release in:
Marathi
,
English
,
Urdu
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam