ಪ್ರಧಾನ ಮಂತ್ರಿಯವರ ಕಛೇರಿ
ಸಿ.ಐ.ಎಸ್.ಎಫ್. ಸಿಬ್ಬಂದಿಗೆ ಅವರ ಸಂಸ್ಥಾಪನಾ ದಿನದಂದು ಶುಭ ಹಾರೈಸಿದ ಪ್ರಧಾನಮಂತ್ರಿಯವರು
Posted On:
10 MAR 2023 8:23AM by PIB Bengaluru
ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳ (ಸಿ.ಐ.ಎಸ್.ಎಫ್.) ಸಂಸ್ಥಾಪನಾ ದಿನದಂದು ಸಿ.ಐ.ಎಸ್.ಎಫ್. ಸಿಬ್ಬಂದಿಗೆ ಮತ್ತು ಅವರ ಕುಟುಂಬಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯಗಳನ್ನು ಕೋರಿದ್ದಾರೆ.
ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಹೇಳಿದ್ದಾರೆ;
"ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳ (ಸಿ.ಐ.ಎಸ್.ಎಫ್.) ಸಂಸ್ಥಾಪನಾ ದಿನದಂದು, ಎಲ್ಲ @CISFHQrs ಸಿಬ್ಬಂದಿಗೆ ಶುಭಾಶಯಗಳು. ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ಸಿ.ಐ.ಎಸ್.ಎಫ್. ಪ್ರಮುಖ ಪಾತ್ರವನ್ನು ಹೊಂದಿದೆ. ಪ್ರಮುಖ ಸ್ಥಳಗಳಲ್ಲಿ ಅವರು ದಿನದ 24 ಗಂಟೆಯೂ ನಿರ್ಣಾಯಕ ಮತ್ತು ಕಾರ್ಯತಂತ್ರದ ಮೂಲಸೌಕರ್ಯ ಸೇರಿದಂತೆ ಭದ್ರತೆಯನ್ನು ಒದಗಿಸುತ್ತಾರೆ. ಈ ಭದ್ರತಾ ಪಡೆ ತನ್ನ ಕಠಿಣ ಪರಿಶ್ರಮ ಮತ್ತು ವೃತ್ತಿಪರ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದೆ."
***
(Release ID: 1905619)
Visitor Counter : 151
Read this release in:
Malayalam
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu