ಪ್ರಧಾನ ಮಂತ್ರಿಯವರ ಕಛೇರಿ

ಮೇಘಾಲಯದ ಪ್ರತಿಯೊಬ್ಬ ಮತದಾರರನ್ನು ತಲುಪುವ ಪ್ರಯತ್ನಕ್ಕಾಗಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 26 FEB 2023 11:07AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮೇಘಾಲಯದಲ್ಲಿ ಪ್ರತಿಯೊಬ್ಬ ಅರ್ಹ ಮತದಾರ ಸುಲಭವಾಗಿ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗದ ಬೃಹತ್ ಪ್ರಯತ್ನದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶ್ಲಾಘಿಸಿದ್ದಾರೆ.

ಚುನಾವಣಾ ಆಯೋಗವು ಮೇಘಾಲಯದ 59 ವಿಧಾನಸಭಾ ಕ್ಷೇತ್ರಗಳಿಗೆ 974 ಮತದಾನ ತಂಡಗಳನ್ನು ಕಳುಹಿಸಿದೆ.

ಇದಲ್ಲದೆ, ಮತದಾನ ತಂಡಗಳು ಗಂಟೆಗಳ ಕಾಲ ಕಠಿಣ ಭೂಪ್ರದೇಶಗಳನ್ನು ಚಾರಣ ಮಾಡಿ, ಕೇವಲ 35 ಮತದಾರರನ್ನು ಹೊಂದಿರುವ ಕಮ್ಸಿಂಗ್ ಮತದಾನ ಕೇಂದ್ರಕ್ಕೆ ಪ್ರಯಾಣಿಸಿದವು, ಯಾವುದೇ ಮತದಾರರು ಹಿಂದೆ ಉಳಿಯದಂತೆ ಖಚಿತಪಡಿಸಿಕೊಳ್ಳಲು ಮತದಾನ ಸಾಮಗ್ರಿಗಳನ್ನು ಸಾಗಿಸಲು ಸಾಂಪ್ರದಾಯಿಕ ಖಾಸಿ ಬುಟ್ಟಿಗಳನ್ನು ಬಳಸಿದವು.

ಪಿಐಬಿ ಮೇಘಾಲಯದ ಟ್ವೀಟ್ ಗೆ ಉತ್ತರವಾಗಿ ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ;

"ಪ್ರತಿಯೊಬ್ಬ ಅರ್ಹ ಮತದಾರರು ಸುಲಭವಾಗಿ ಮತ ಚಲಾಯಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗದ ಬೃಹತ್ ಪ್ರಯತ್ನಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಈ ತಂಡಗಳ ಭಾಗವಾಗಿರುವ ಎಲ್ಲರಿಗೂ ಅಭಿನಂದನೆಗಳು. ಇದು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಲು ಮತದಾರರನ್ನು ಪ್ರೇರೇಪಿಸಬೇಕು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು,’’ ಎಂದು ಹೇಳಿದ್ದಾರೆ.

*****



(Release ID: 1902607) Visitor Counter : 122