ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಮೇಲುಸ್ತುವಾರಿ ಸಮಿತಿಯು 2 ನೇ ಶ್ರೇಯಾಂಕದ ಸರಣಿಯಲ್ಲಿ ಭಾಗವಹಿಸಲು 27 ಕುಸ್ತಿಪಟುಗಳ ತಂಡವನ್ನು ಅನುಮೋದಿಸಿದೆ  

Posted On: 20 FEB 2023 12:39PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ  ಉಸ್ತುವಾರಿ ಸಮಿತಿಯು ಮುಂಬರುವ 2 ನೇ ಶ್ರೇಯಾಂಕದ ಸರಣಿ ‘ಇಬ್ರಾಹಿಂ-ಮೌಸ್ತಫಾ’ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಲು 27 ಕುಸ್ತಿಪಟುಗಳು ಸೇರಿದಂತೆ 43 ಸದಸ್ಯರ ತಂಡವನ್ನು ಅನುಮೋದಿಸಿದೆ .

ಈಜಿಪ್ಟ್‌ ನ ಅಲೆಕ್ಸಾಂಡ್ರಿಯಾದಲ್ಲಿ ಫೆಬ್ರವರಿ 23 ರಿಂದ 26 ರವರೆಗೆ ನಡೆಯಲಿರುವ ಕ್ರೀಡಾಸ್ಪರ್ಧೆಯು ಸೀನಿಯರ್ ಏಷ್ಯನ್ ಚಾಂಪಿಯನ್ಶಿಪ್ 2023 ಮತ್ತು ಸೀನಿಯರ್ ವರ್ಲ್ಡ್ ಚಾಂಪಿಯನ್ಶಿಪ್ 2023 ನಲ್ಲಿ ಉತ್ತಮ ಶ್ರೇಯಾಂಕಕ್ಕಾಗಿ ಶ್ರೇಯಾಂಕಗಳನ್ನು ಪಡೆಯಲು ನಿರ್ಣಾಯಕವಾಗಿದೆ.

ಭಾರತ ತಂಡವು 9 ಫ್ರೀಸ್ಟೈಲ್ ಕುಸ್ತಿಪಟುಗಳು, 8 ಮಹಿಳಾ ಕುಸ್ತಿಪಟುಗಳು, ಮತ್ತು 10 ಗ್ರೀಕೋ-ರೋಮನ್ ಕುಸ್ತಿಪಟುಗಳು ಮತ್ತು 16 ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ.

ಆಶು 67 ಕೆಜಿ, ಜಿಆರ್  ಭತೇರಿ 65 Kg ಡಬ್ಲ್ಯೂ ಡಬ್ಲ್ಯೂ  ಮತ್ತು ಸುಜೀತ್ 65 ಕೆಜಿ ಎಫ್ ಎಸ್. ಸೇರಿದಂತೆ 27 ಕುಸ್ತಿಪಟುಗಳು,  3 ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (ಟಿಒಪಿಎಸ್) ಕುಸ್ತಿಪಟುಗಳನ್ನು ಒಳಗೊಂಡಿರುತ್ತದೆ  

ಭಾರತ ತಂಡದ ಭಾಗವಹಿಸುವಿಕೆಯ ಕುರಿತು ಮಾತನಾಡಿದ ಒಲಿಂಪಿಕ್ ಪದಕ ವಿಜೇತೆ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಎಂಸಿ ಮೇರಿ ಕೋಮ್, “ಕ್ರೀಡೆ ಮತ್ತು ಕ್ರೀಡಾಪಟುಗಳು ತೊಂದರೆಗೊಳಗಾಗದಂತೆ ಮತ್ತು ಹೆಚ್ಚು ಹೆಚ್ಚು ಕುಸ್ತಿಪಟುಗಳು ಅಂತರರಾಷ್ಟ್ರೀಯ ಮಾನ್ಯತೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ ಇದರಿಂದ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ವಿರುದ್ಧ ಸ್ಪರ್ಧಿಸುವ ಅವಕಾಶ ಸಿಗುವುದು." ಎಂದು ಹೇಳಿದರು.

ಇಲ್ಲಿಯವರೆಗೆ 9 ಹಾಲಿ ಮತ್ತು ಮಾಜಿ ವಿಶ್ವ ಚಾಂಪಿಯನ್ ಶಿಪ್ ಚಿನ್ನದ ಪದಕ ವಿಜೇತರು 2 ನೇ ಶ್ರೇಯಾಂಕದ ಸರಣಿಗೆ ನೋಂದಾಯಿಸಿಕೊಂಡಿದ್ದಾರೆ.
ಕುಸ್ತಿಪಟುಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

https://static.pib.gov.in/WriteReadData/specificdocs/documents/2023/feb/doc2023220160701.pdf

*****



(Release ID: 1901417) Visitor Counter : 89