ರೈಲ್ವೇ ಸಚಿವಾಲಯ
ಬೈಸಾಖಿ ಅವಧಿಯಲ್ಲಿ ಗುರು ಕೃಪಾ ಯಾತ್ರೆ, ಭಾರತ್ ಗೌರವ್ ಪ್ರವಾಸ ರೈಲು ಮೂಲಕ ಪ್ರಸಿದ್ಧ ಸಿಖ್ ದೇಗುಲಗಳಿಗೆ ಪ್ರಯಾಣಿಸಲು ಒಳ್ಳೆಯ ಅವಕಾಶ
ಸಿಖ್‌ನ ಅನೇಕ ಗುರುದ್ವಾರ ನಿರ್ವಹಣಾ ಸಮಿತಿಗಳು, ಸಂಸ್ಥೆಗಳು ಮತ್ತು ವಿವಿಧ ಸಿಖ್ ಸಂಘಗಳೊಂದಿಗೆ ಸಮಾಲೋಚಿಸಿದ ನಂತರ ವಿಶೇಷ ಪ್ರವಾಸದ ಪರಿಕಲ್ಪನೆ ಹಮ್ಮಿಕೊಳ್ಳಲಾಗಿದೆ.
11 ದಿನ ಹಾಗೂ 10 ರಾತ್ರಿಗಳ ಒಳಗೊಂಡ ಪ್ರವಾಸವು ಏಪ್ರಿಲ್ 5 ರಂದು ಲಕ್ನೋದಿಂದ ಆರಂಭವಾಗಿ 15, 2023 ರಂದು ಕೊನೆಗೊಳ್ಳಲಿದೆ.
ಆನಂದಪುರ ಸಾಹಿಬ್‌ನಗರದ ಶ್ರೀ ಕೇಸ್‌ಗರ್ ಸಾಹಿಬ್ ಗುರುದ್ವಾರ ಮತ್ತು ವಿರಾಸತ್-ಎ-ಖಾಲ್ಸಾ, ಕಿರಾತ್‌ಪುರ್ ಸಾಹಿಬ್‌ನಗರದ ಗುರುದ್ವಾರ ಶ್ರೀ ಪಾತಾಳಪುರಿ ಸಾಹಿಬ್, ಶ್ರೀಹಿಂದ್‌ನಗರದ ಗುರುದ್ವಾರ ಶ್ರೀ ಫತೇಘರ್ ಸಾಹಿಬ್, ಶ್ರೀ ಅಕಾಲ್ ತಖ್ತ್ ಸಾಹಿಬ್ ಮತ್ತು ಶ್ರೀ ಹರ್ಮಂದಿರ್ ಸಾಹಿಬ್, ಅಮೃತಸರ್ ನಗರದ ಶ್ರೀ ಹರ್ಮಂದಿರ್ ಸಾಹಿಬ್ ಹಾಗೂ ಬತಿಂಡಾದ ಶ್ರೀ ದಮದಮ ಸಾಹಿಬ್, ನಾಂದೇಡ್ ನಗರದ ತಖ್ತ್ ಸಚ್ಖಂಡ್ ಶ್ರೀ ಹಜೂರ್ ಸಾಹಿಬ್, ಬೀದರ್ ನಗರದಲ್ಲಿರುವ ಗುರುದ್ವಾರ ಶ್ರೀ ಗುರುನಾನಕ್ ಜೀರಾ ಸಾಹಿಬ್ ಮತ್ತು ಪಾಟ್ನಾ ನಗರದ ಗುರುದ್ವಾರ ಶ್ರೀ ಹರ್ಮಂದರ್ಜಿ ಸಾಹಿಬ್ ಈ ಸಿಖ್ ಸ್ಥಳಗಳಿಗೆ ಭೇಟಿ ನೀಡಬಹದು.
678 ಭಕ್ತರು ಈ ವಿಶೇಷ ರೈಲಿನಲ್ಲಿ ಪ್ರಯಾಣಿಸಬಹುದು
Posted On:
21 FEB 2023 4:06PM by PIB Bengaluru
* ಏಪ್ರಿಲ್‌ನಲ್ಲಿ ಐಆರ್‌ಸಿಟಿಸಿ ಗುರು ಕ್ರಿಪಾ ಯಾತ್ರೆಯನ್ನು ಭಾರತ್ ಗೌರವ್ ವಿಶೇಷ ಪ್ರವಾಸದ ರೈಲಿನೊಂದಿಗೆ ನಡೆಸುತ್ತಿದ್ದು, ಇದು ಬೈಸಾಖಿ ಹಬ್ಬದೊಂದಿಗೆ ಸೇರಿಕೊಳ್ಳಲಿದೆ.
* 9 ಸ್ಲೀಪರ್ ಕ್ಲಾಸ್ ಬೋಗಿಗಳು, 1 ಎಸಿ ತ್ರಿ ಟೈಯರ್ ಬೋಗಿ ಮತ್ತು 1 ಎಸಿ ಟು ಟೈಯರ್ ಬೋಗಿ ಮತ್ತು 1 ಪ್ಯಾಂಟ್ರಿ ಕಾರ್ ಹಾಗೂ 2 ಜನರೇಟರ್ ಬೋಗಿಗಳ ಸಂಯೋಜನೆ ಹೊಂದಿರಲಿದೆ.
* ಐಆರ್‌ಸಿಟಿಸಿ 3 ವಿಭಾಗಗಳಾದ್ಯಂತ ಪ್ರವಾಸ ಪ್ಯಾಕೇಜ್‌ನ್ನು ಘೋಷಿಸಿದೆ ಅವುಗಳೆಂದರೆ: ಸ್ಟ್ಯಾಂಡರ್ಡ್, ಸುಪೀರಿಯರ್ ಮತ್ತು ಕಂಫರ್ಟ್.
* ಲಕ್ನೋ, ಸೀತಾಪುರ್, ಪಿಲಿಭಿತ್ ಮತ್ತು ರಾಯ್ ಬರೇಲಿ ನಗರಗಳಲ್ಲಿ ಪ್ರಯಾಣಿಕರು ರೈಲು ಹತ್ತಲು ಅವಕಾಶ ನೀಡಲಾಗಿದೆ.
* ಪ್ರವಾಸ ಪ್ಯಾಕೇಜ್‌ಗೆ ಒಬ್ಬ ವ್ಯಕ್ತಿಗೆ 19,999 ಹಣ ನಿಗದಿ ಮಾಡಲಾಗಿದೆ.
ಈ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ವಿವಿಧ ಪ್ರಸಿದ್ಧ ಥೀಮ್ ಆಧಾರಿತ ಮಾದರಿಗಳಲ್ಲಿ ಈ ಭಾರತ್ ಗೌರವ್ ಪ್ರವಾಸ್ ರೈಲುಗಳ ಮೂಲಕ ರೈಲ್ವೆ ಸಚಿವಾಲಯವು ಭಾರತದ ಭವ್ಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಪ್ರಚಾರ ಮಾಡುತ್ತಿದೆ.
ಮುಂಬರುವ ಏಪ್ರಿಲ್‌ನಲ್ಲಿ ಸಿಖ್ ಧರ್ಮೀಯರ ಗೌರವದ ಸಲುವಾಗಿ ಭಾರತೀಯ ರೈಲ್ವೆಯು ಭಾರತ್ ಗೌರವ್ ವಿಶೇಷ ಪ್ರವಾಸ ರೈಲಿನೊಂದಿಗೆ ಗುರು ಕ್ರಿಪಾ ಯಾತ್ರೆಯನ್ನು ಪ್ರಾರಂಭಿಸುತ್ತಿದೆ. ಇದನ್ನು ಉತ್ತರ ಭಾರತದಲ್ಲಿ ಬೈಸಾಖಿ ತಿಂಗಳಾಗಿ ಆಚರಿಸುತ್ತಾರೆ. ಅನೇಕ ಮಹನೀಯರ ಜೊತೆಗೆ ಸಮಾಲೋಚನೆಯ ನಂತರ, ಭಾರತೀಯ ರೈಲ್ವೆಯು ವಿಶೇಷವಾಗಿ ದೇಶದ ವಿವಿಧ ಭಾಗಗಳಲ್ಲಿ ನೆಲೆಯಾಗಿರುವ ಪವಿತ್ರ ಸಿಖ್ ಪುಣ್ಯಕ್ಷೇತ್ರಗಳಿಗೆ ಈ ಪ್ರವಾಸವನ್ನು ಕಲ್ಪಿಸಿದೆ.
ಭಾರತೀಯ ರೈಲ್ವೆಯು 11 ದಿನ ಹಾಗೂ10 ರಾತ್ರಿಗಳನ್ನು ಒಳಗೊಂಡ ಪ್ರವಾಸ ಕೈಗೊಂಡಿದೆ. ಇದು ಏಪ್ರಿಲ್ 5 ಲಕ್ನೋದಿಂದ ರಂದು ಪ್ರಾರಂಭವಾಗಿ, 15 ಏಪ್ರಿಲ್, 2023 ರಂದು ಕೊನೆಗೊಳ್ಳುತ್ತದೆ. ಈ ಪವಿತ್ರ ಪ್ರವಾಸದ ಸಮಯದಲ್ಲಿ, ಯಾತ್ರಿಕರು ಪ್ರಮುಖ ಪ್ರೇಕ್ಷಣಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಸಿಖ್ ಧರ್ಮದ ಐದು ಪವಿತ್ರ ತಖ್ತ್‌ಗಳನ್ನು ಒಳಗೊಂಡಿದೆ. ಪ್ರವಾಸವು ಆನಂದಪುರ ಸಾಹಿಬ್‌ನಲ್ಲಿರುವ ಶ್ರೀ ಕೇಸ್ಗಢ ಸಾಹಿಬ್ ಗುರುದ್ವಾರ ಮತ್ತು ವಿರಾಸತ್-ಎ-ಖಾಲ್ಸಾ, ಕಿರಾತ್‌ಪುರ ಸಾಹಿಬ್‌ನಗರದಲ್ಲಿರುವ ಗುರುದ್ವಾರ ಶ್ರೀ ಪಾತಾಳಪುರಿ ಸಾಹಿಬ್, ಸಿರ್ಹಿಂದ್‌ನ ಗುರುದ್ವಾರ ಶ್ರೀ ಫತೇಘರ್ ಸಾಹಿಬ್, ಶ್ರೀ ಅಕಲ್ ತಖ್ತ್ ಸಾಹಿಬ್ ಮತ್ತು ಶ್ರೀ ಹರ್ಮಂದಿರ್ ಸಾಹಿಬ್, ಅಮೃತ ಸರ್‌ದ ಶ್ರೀ ಹರ್ಮಂದಿರ್ ಸಾಹಿಬ್, ಶ್ರೀ ಅಮೃತಮ್, ಬತಿಂಡಾ, ನಾಂದೇಡ್‌ನ ತಖ್ತ್ ಸಚ್ಖಂಡ್ ಶ್ರೀ ಹಜೂರ್ ಸಾಹಿಬ್, ಬೀದರ್‌ನಗರದ ಗುರುದ್ವಾರ ಶ್ರೀ ಗುರುನಾನಕ್ ಜೀರಾ ಸಾಹಿಬ್ ಮತ್ತು ಪಾಟ್ನಾದಲ್ಲಿ ಗುರುದ್ವಾರ ಶ್ರೀ ಹರ್ಮಂದರ್ಜಿ ಸಾಹಿಬ್ ಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿರುತ್ತದೆ.
ಈ ರೈಲು 9 ಸ್ಲೀಪರ್ ಕ್ಲಾಸ್ ಬೋಗಿಗಳು, 1 ಎಸಿ ತ್ರಿ ಟೈಯರ್ ಬೋಗಿ ಮತ್ತು 1 ಎಸಿ ಟು ಟೈಯರ್ ಬೋಗಿಗಳ ಸಂಯೋಜನೆ ಹೊಂದಿದೆ. ಐಆರ್‌ಸಿಟಿಸಿಯು 3 ವಿಭಾಗಗಳಾದ್ಯಂತ ಪ್ರವಾಸ ಪ್ಯಾಕೇಜ್‌ನ್ನು ಘೋಷಿಸಿದೆ ಅವುಗಳು: ಸ್ಟ್ಯಾಂಡರ್ಡ್, ಸುಪೀರಿಯರ್ ಮತ್ತು ಕಂಫರ್ಟ್ ಒಳಗೊಂಡಿದ್ದು, ಇದರಲ್ಲಿ ಒಟ್ಟು 678 ಪ್ರಯಾಣಿಕರ ಸಾಮರ್ಥ್ಯ ಹೊಂದಿರುತ್ತದೆ. ಈ ಪ್ರವಾಸ ಪ್ಯಾಕೇಜ್ ವಿಶೇಷ ಬೋಗಿಗಳ ಆರಾಮದಾಯಕ ಪ್ರಯಾಣ ಒಳಗೊಂಡಿದ್ದು, ಉತ್ತಮ ಗುಣಮಟ್ಟದ ಊಟದ ವ್ಯಸವ್ಥೆ, ಪ್ರಯಾಣದ ವಿಮಾ, ಭದ್ರತೆ ಮತ್ತು ಸ್ವಚ್ಛತಾ ವ್ಯವಸ್ಥೆ ಸೇರಿದಂದತೆ ಇನೀತರ ಸೇವೆಗಳು ಲಭ್ಯವಿರುತ್ತವೆ.
ಪ್ರಯಾಣದ ಸಮಯದಲ್ಲಿ ಪ್ರಮುಖ ಗುರುದ್ವಾರಗಳಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ಲಾಂಗರ್‌ಗಳ ಲಭ್ಯವಿರುತ್ತದೆ.
ರೈಲಿನಲ್ಲಿ ಪ್ರಯಾಣಿಸುವ ಪ್ರವಾಸಿಗರ ಭರ್ತಿಯನ್ನು ಗರಿಷ್ಠಗೊಳಿಸುವ ಹಕ್ಕು ಐಆರ್‌ಸಿಟಿಸಿಯು ನಿಗದಿಪಡಿಸುತ್ತದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರಿಗೆ ಹೆಸರಾಗಿರುವ ಸಿಖ್ ಧರ್ಮದ ಅನುಯಾಯಿಗಳನ್ನು ಸ್ವಾಗತಿಸಲು ಭಾರತೀಯ ರೈಲ್ವೆ ಇಲಾಖೆ ಸದಾ ಸಿದ್ಧವಾಗಿದೆ.
ಭಾರತ್ ಗೌರವ್ ಪ್ರವಾಸಿ ರೈಲಿನ
ಗುರುಕೃಪಾ ಯಾತ್ರೆಯ ಪ್ರವಾಸದ ಪ್ರಮುಖ ಮುಖ್ಯಾಂಶಗಳು
ಅವಧಿ (ಲಕ್ನೋದಿಂದ) : 10 ರಾತ್ರಿಗಳು /11ದಿನಗಳು
ಪ್ರವಾಸದ ದಿನಾಂಕ : 05.04.2023 - 15.04.2023
ಪ್ರವಾಸದ ಮಾರ್ಗ : ಲಕ್ನೋ- ಶ್ರೀ ಕೇಸ್ಗಢ ಸಾಹಿಬ್ (ಆನಂದಪುರ)- ಶ್ರೀ ಕಿರಾತ್ಪುರ್ ಸಾಹಿಬ್ - ಶ್ರೀ ಫತೇಘಡ್ ಸಾಹಿಬ್ - ಶ್ರೀ ಅಕಲ್ ತಖ್ತ್ (ಅಮೃತಸರ) - ಶ್ರೀ ದಮದಮಾ ಸಾಹಿಬ್ (ಭತಿಂಡಾ) - ಶ್ರೀ ಹಜೂರ್ ಸಾಹಿಬ್ (ನಾಂದೇಡ್) - ಶ್ರೀ ಗುರುನಾನಕ್ ಜ್ಹಿರಾ ಸಾಹಿಬ್ (ಬೀದರ್) - ಶ್ರೀ ಹರ್ಮಿಂದ್ರಜಿ ಸಾಹಿಬ್ (ಪಾಟ್ನಾ) .
ಹತ್ತುವ/ಇಳಿಯುವ ಸ್ಥಳಗಳು : ಲಕ್ನೋ, ಸಿತಾಪುರ, ಪಿಲಿಭಿತ್, ರಾಯ್ ಬರೇಲಿ
ಭೇಟಿಯ ಒಳಗೊಂಡಿದೆ ಗಮ್ಯಸ್ಥಾನಗಳು:
ಆನಂದಪುರ ಸಾಹಿಬ್: ಶ್ರೀ ಕೇಸ್ಗಢ ಸಾಹಿಬ್ ಗುರುದ್ವಾರ ಮತ್ತು ವಿರಾಸತ್-ಎ-ಖಾಲ್ಸಾ
. ಕಿರಾತಪುರ ಸಾಹಿಬ್: ಗುರುದ್ವಾರ ಶ್ರೀ ಪಾತಾಳಪುರಿ ಸಾಹಿಬ್
ಸರ್‌ಹಿಂದ್: ಗುರುದ್ವಾರ ಶ್ರೀ ಫತೇಘರ್ ಸಾಹಿಬ್
ಅಮೃತಸರ: ಶ್ರೀ ಅಕಲ್ ತಖ್ತ್ ಮತ್ತು ಗೋಲ್ಡನ್ ಟೆಂಪಲ್
ಭತಿಂಡ : ಶ್ರೀ ದಮದಮಾ ಸಾಹಿಬ್
ನಾಂದೇಡ್ : ತಖ್ತ್ ಸಚ್ಖಂಡ್ ಶ್ರೀ ಹಜೂರ್ ಸಾಹಿಬ್
ಬೀದರ್: ಗುರುದ್ವಾರ ಶ್ರೀ ಗುರುನಾನಕ್ ಜ್ಹಿರಾ ಸಾಹಿಬ್
ಪಾಟ್ನಾ: ಗುರುದ್ವಾರ ಶ್ರೀ ಹರ್ಮಂದ್ರಿಜಿ ಸಾಹಿಬ್
ಪ್ರವಾಸದ ದರ : ಒಬ್ಬ ವ್ಯಕ್ತಿಗೆ(ರೂ.ಗಳಲ್ಲಿ)
ವರ್ಗ
|
ಪ್ರಯಾಣದ ರೈಲು
|
ಒಬ್ಬ
|
ಇಬ್ಬರು/ಮೂವರು
|
ಮಕ್ಕಳು (5-11)
|
ಕಂಫರ್ಟ್
|
2A
|
48275
|
39999
|
37780
|
ಸುಪೀರಿಯರ್
|
3A
|
36196
|
29999
|
28327
|
ಸ್ಟ್ಯಾಂಡರ್ಡ್
|
SL
|
24127
|
19999
|
18882
|
ಪ್ರವಾಸದ ವಿವರಗಳು
ದಿನಗಳು
|
ಗಮ್ಯಸ್ಥಾನ
|
ಸಂಭವಣಿಯ ಆಗಮನ/ ನಿರ್ಗಮನ
|
ವಿವರಗಳು
|
ದಿನ 01
|
ಲಕ್ನೋ
(05.04.23)
|
|
17:30 ಗಂಟೆಗೆ ರೈಲು ನಿರ್ಗಮನ
|
ಸೀತಾಪುರ
|
18:30/18:35
|
ಪ್ರವಾಸಿಗರ ಹತ್ತುವ ಸ್ಥಳ
|
ಪಿಲಿಭಿತ್
|
20:00/20:05
|
ಪ್ರವಾಸಿಗರ ಹತ್ತುವ ಸ್ಥಳ
|
ರಾಯ್ ಬರೇಲಿ
|
21:05/21:10
|
ಪ್ರವಾಸಿಗರ ಹತ್ತುವ ಸ್ಥಳ
|
ದಿನ 02
|
ಆನಂದಪುರ ಸಾಹಿಬ್
(06.04.23)
|
10:00/****
|
* ಉಪಹಾರ
* 10 ಗಂಟೆಗೆ ಆನಂದಪುರ ಸಾಹಿಬ್ ರೈಲು ನಿಲ್ದಾಣಕ್ಕೆ ಆಗಮನ.
* ವಸತಿ ಸ್ಥಳಗಳಿಗೆ ಹೋಗುವುದು
* ಆನಂದಪುರ ಸಾಹಿಬ್‌ನಲ್ಲಿರುವ ಶ್ರೀ ಕೇಸ್‌ಗಢ್ ಸಾಹಿಬ್ ಮತ್ತು ಇತರ ಗುರುದ್ವಾರಗಳಿಗೆ ಭೇಟಿ ನೀಡುವುದು ಮತ್ತು ದಿನ ಪೂರ್ತಿ ಪ್ರಾರ್ಥನೆ ಮಾಡುವುದು.
* ಸೂಕ್ತ ಸ್ಥಳದಲ್ಲಿ ಊಟ ಮತ್ತು ಭೋಜನ ವ್ಯವಸ್ಥೆ.
ಆನಂದಪುರ ಸಾಹಿಬ್‌ನಲ್ಲಿ ರಾತ್ರಿ ಕಳೆಯುವುದು. |
ದಿನ 03
|
(ಸರ್‌ಹಿಂದ್)
ಶ್ರೀ ಕಿರಾತ್ಪುರ್ ಸಾಹಿಬ್ ಮತ್ತು ಶ್ರೀ ಫತೇಘರ್ ಸಾಹಿಬ್
(07.04.23)
|
ಆನಂದ್ ಪುರ ಸಾಹೀಬ್ ನಿರ್ಗಮನ: 12:30
ಸರ್‌ಹಿಂದ್‌ಗೆ ಆಗಮನ:14:30 ನಿರ್ಗಮನ:21:00
|
* ಉಪಹಾರದ ನಂತರ ಶ್ರೀ ಕಿರಾತ್ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವುದು.
* ರೈಲು ಹತ್ತಿ 12:30ಗಂಟೆಗೆ ಸರ್‌ಹಿಂದ್‌ಗೆ ಪ್ರಯಾಣ.
* ಮಾರ್ಗದಲ್ಲಿ ಊಟದ ವ್ಯವಸ್ಥೆ.
* ಮಧ್ಯಾಹ್ನ 2:30ಕ್ಕೆ ಸರ್‌ಹಿಂದ್ ಜಂಕ್ಷನ್ ತಲುಪಿ, ಶ್ರೀ ಫತೇಘರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವುದು.
* ಮರಳಿ ಸರ್‌ಹಿಂದ್‌ಗೆ ರಾತ್ರಿ 8 ಗಂಟೆಗೆ ರೈಲು ಹತ್ತುವುದು.
* ರಾತ್ರಿ 9 ಗಂಟೆಗೆ ಅಮೃತಸರದಿಂದ ನಿರ್ಗಮನ. ಮಾರ್ಗದಲ್ಲಿ ರಾತ್ರಿಯ ಊಟ
|
ದಿನ 04
|
ಅಮೃತ್‌ಸರ್
(08.04.23)
|
07:00/21:00
|
* ಉಪಹಾರ
* ಬೆಳಿಗ್ಗೆ 7 ಗಂಟೆಗೆ ಅಮೃತಸರ ರೈಲು ನಿಲ್ದಾಣಕ್ಕೆ ಆಗಮನ.
* ವಸತಿ ಸ್ಥಳಗಳಿಗೆ ಹೋಗುವುದು( ನಿತ್ಯ ಸೇವೆ).
* ಗುರುದ್ವಾರಕ್ಕೆ ಭೇಟಿ ನೀಡುವುದು ಹಾಗೂ ದಿನ ಪೂರ್ತಿ ಪ್ರಾರ್ಥನೆ ಇತ್ಯಾದಿ.
ಸೂಕ್ತವಾದ ಸ್ಥಳದಲ್ಲಿ ಊಟದ ವ್ಯವಸ್ಥೆ
* ರಾತ್ರಿ 8 ಗಂಟೆಗೆ ರೈಲು ಹತ್ತಿ ಅಮೃತಸರ ಕಡೆಗೆ ಪ್ರಯಾಣ.
* ರಾತ್ರಿ 9 ಗಂಟೆಗೆ ಭತಿಂಡಾ ಕಡೆಗೆ ಪ್ರಯಾಣ. ಮಾರ್ಗದಲ್ಲಿ ರಾತ್ರಿಯ ಊಟ |
ದಿನ 05
|
ಬತಿಂಡಾ
(09.04.23)
|
05:00/14:30
|
* ಸಂಜೆ 5 ಗಂಟೆಗೆ ಬತಿಂಡಾಕ್ಕೆ ಆಗಮನ. ಬಸ್‌ಗಳ ಮೂಲಕ ದಮದಮಾ ಸಾಹಿಬ್ ಗುರುದ್ವಾರಕ್ಕೆ ಪ್ರಯಾಣ.
* ಉಪಹಾರದ ನಂತರ ಗುರುದ್ವಾರ ದಮದಾಮ ಸಾಹಿಬ್‌ಗೆ ಭೇಟಿ ನೀಡಿ ಮತ್ತು ಪ್ರಾರ್ಥನೆ ಇತ್ಯಾದಿ.
* ಮಧ್ಯಾಹ್ನ 2 ಗಂಟೆಗೆ ಭತಿಂಡಾ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವುದು
* ಮಾರ್ಗದಲ್ಲಿ ಊಟ, ಮಧ್ಯಾಹ್ನ 2; 30ಕ್ಕೆ ಹಜೂರ್ ಸಾಹಿಬ್ ನಾಂದೇಡ್‌ಗೆ ಪ್ರಯಾಣ.
ರಾತ್ರಿಯ ಊಟ |
ದಿನ 06
|
ಹಜೂರ್ ಸಾಹೀಬ್ ನಾಂದೇಡ್ (10.04.23)
|
20:00/****
|
* ಉಪಹಾರ, ಮಧ್ಯಾಹ್ನದ ಊಟ
* ದಿನ ಪೂರ್ತಿ ಪ್ರಯಾಣ.
* ರಾತ್ರಿ 8 ಗಂಟೆಗೆ ಹಜೂರ್ ಸಾಹೀಬ್ ನಾಂದೇಡ್ ರೈಲು ನಿಲ್ದಾಣಕ್ಕೆ ಆಗಮನ.
* ವಸತಿ ಸ್ಥಳಗಳಿಗೆ ಹೋಗುವುದು
|
ದಿನ 07
|
ಹಜೂರ್ ಸಾಹೀಬ್ ನಾಂದೇಡ್
(11.04.23)
|
****/22:00
|
* ಬೆಳಗಿನ ಉಪಾಹಾರದ ನಂತರ ಗುರುದ್ವಾರಕ್ಕೆ ಭೇಟಿ ನೀಡುವುದು. .
* ಸೂಕ್ತ ಸ್ದಳದಲ್ಲಿ ಊಟದ ವ್ಯವಸ್ಥೆ
* ನಾಂದೇಡ್ ರೈಲ್ವೇ ನಿಲ್ದಾಣಕ್ಕೆ ಹಿಂತಿರುಗಿ ರಾತ್ರಿ 9; 30 ಗಂಟೆಗೆ ರೈಲು ಹತ್ತುವುದು
* ರಾತ್ರಿ 10 ಗಂಟೆ ಬೀದರ್ ಕಡೆಗೆ ಪ್ರಯಾಣ
* ರಾತ್ರಿ ಪೂರ್ತಿ ಪ್ರಯಾಣ |
ದಿನ 08
|
ಗುರು ನಾನಕ್ ಜೀರಾ ಸಾಹೀಬ್ (ಬೀದರ್) (12.04.23)
|
05:00/14:30
|
* ಬೀದರ್ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 5 ಗಂಟೆಗೆ ಆಗಮನ. ಉಪಹಾರಕ್ಕೆ ವಸತಿ ಸ್ಥಳಗಳ ಕಡೆಗೆ ಹೋಗುವುದು.
* ಗುರುದ್ವಾರ ಗುರುನಾನಕ್ ಜೀರಾ ಸಾಹಿಬ್‌ಗೆ ಭೇಟಿ ನೀಡುವುದು ಮತ್ತು ಪ್ರಾರ್ಥನೆ ಇತ್ಯಾದಿ.
* ಮಧ್ಯಾಹ್ನ 2ಗಂಟೆಗೆ ಬೀದರ್ ರೈಲು ನಿಲ್ದಾಣದಿಂದ ರೈಲು ಹತ್ತುವುದು.
* ಮಧ್ಯಾಹ್ನದ ಊಟದ ನಂತರ 2 ;30 ಗಂಟೆಗೆ ಪಾಟ್ನಾದ ಕಡೆಗೆ ಪ್ರಯಾಣ
* ರಾತ್ರಿ ಊಟ. ರಾತ್ರಿ ಪೂರ್ತಿ ರೈಲಿನಲ್ಲಿ ಪ್ರಯಾಣ |
ದಿನ 09
|
ರೈಲಿನ ಪ್ರಯಾಣ (13.04.23)
|
|
* ಮಾರ್ಗದಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ಊಟ. ಮತ್ತು ರಾತ್ರಿ ಪೂರ್ತಿ ರೈಲು ಪ್ರಯಾಣ.
|
ದಿನ 10
|
ಪಾಟ್ನಾ ಸಾಹೀಬ್
(14.04.2023)
|
07:00/22:00
|
* ಉಪಹಾರ
* ಬೆಳಿಗ್ಗೆ 7 ಗಂಟೆಗೆ ಪಾಟ್ನಾ ನಿಲ್ದಾಣಕ್ಕೆ ಆಗಮನ
* ವಸತಿ ಗೃಹಗಳಿಗೆ ಹೋಗುವುದು
* ಗುರುದ್ವಾರಕ್ಕೆ ಭೇಟಿ ನೀಡಿ, ದಿನ ಪೂರ್ತಿ ಪ್ರಾರ್ಥನೆ ಇತ್ಯಾದಿ.
* ಮಧ್ಯಾಹ್ನ ಸೂಕ್ತವಾದ ಸ್ಥಳದಲ್ಲಿ ಊಟ.
* ರಾತ್ರಿ 9 ಗಂಟೆಗೆ ಪಾಟ್ನಾ ರೈಲು ನಿಲ್ದಾಣಕ್ಕೆ ಹತ್ತಿ, 10 ಗಂಟೆಗೆ ಲಕ್ನೋಗೆ ಆಗಮನ.
* ರಾತ್ರಿಯ ಊಟ |
ದಿನ 11
|
ಲಕ್ನೋ
|
08:00/08:05
|
ಪ್ರವಾಸಿಗರ ಇಳಿಯುವ ಸ್ಥಳ
|
ರಾಯ್ ಬರೇಲಿ
|
12:30/1:235
|
ಪ್ರವಾಸಿಗರ ಇಳಿಯುವ ಸ್ಥಳ
|
ಪಿಲಿಭಿತ್
|
13:55/14:00
|
ಪ್ರವಾಸಿಗರ ಇಳಿಯುವ ಸ್ಥಳ
|
ಸೀತಾಪುರ (15.04.2023)
|
Arr – 17:30hrs
|
ಪ್ರವಾಸಿಗರ ಇಳಿಯುವ ಸ್ಥಳ
ಪ್ರವಾಸದ ಸಮಯದಲ್ಲಿನ ಸಂತೋಷದ ನೆನಪುಗಳೊಂದಿಗೆ ತಮ್ಮ ಪ್ರಯಾಣ ಕೊನೆಗೊಳ್ಳಲಿದೆ
|
YB/DNS
*****
(Release ID: 1901139)
Visitor Counter : 195