ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಜಿ-20 ರ ವೈ20 ಎಂಗೇಜ್‌ಮೆಂಟ್ ಗ್ರೂಪ್‌ ಅಡಿಯಲ್ಲಿ, 'ಹಂಚಿಕೆಯ ಭವಿಷ್ಯ: ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಜನತೆ' ಕುರಿತು ಮಂಥನ ಸಭೆಯನ್ನು ನಾಳೆ ನವದೆಹಲಿಯಲ್ಲಿ ಆಯೋಜಿಸಲಾಗಿದೆ

Posted On: 21 FEB 2023 11:28AM by PIB Bengaluru

ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಜನತೆಯ ಪ್ರಾಮುಖ್ಯತೆಯನ್ನು ಹೇಳುವ ಪ್ರಯತ್ನವಾಗಿ, ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ನ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಕಚೇರಿಯು, 2023ರ ಫೆ.22 ರಂದು ಮಂಥನ ಕಾರ್ಯಾಗಾರವನ್ನು ಆಯೋಜಿಸಿದೆ. ಈ ಕಾರ್ಯಾಗಾರವು ಜಿ-20 ರ ಒಟ್ಟಾರೆ ಚೌಕಟ್ಟಿನ ಅಡಿಯಲ್ಲಿ ಯೂತ್20 ಎಂಗೇಜ್‌ಮೆಂಟ್ ಗುಂಪಿನ ಚಟುವಟಿಕೆಗಳ ಒಂದು ಭಾಗವಾಗಿದೆ.

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ (ಯುವ ವ್ಯವಹಾರಗಳು) ಶ್ರೀಮತಿ ಮೀತಾ ರಾಜೀವಲೋಚನ್‌ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

"ಡಿಜಿಟಲ್ ಇಂಡಿಯಾ," "ವಿದ್ಯಾರ್ಥಿ ಕೇಂದ್ರಿತ ಆಡಳಿತ" ಮತ್ತು "ನೀತಿ ವಲಯ" ಮಂಥನ ಕಾರ್ಯಾಗಾರದ ಮೂರು ಮುಖ್ಯ ವಿಷಯಗಳಾಗಿವೆ. ದೆಹಲಿ-ಎನ್‌ಸಿಆರ್ ಪ್ರದೇಶದ ಯುವ ಮತ್ತು ಅನುಭವಿ ಉದ್ಯಮಿಗಳು ಮಂಥನ ಸಭೆಯಲ್ಲಿ ಭಾಗವಹಿಸುವ ನಿರೀಕ್ಷಿಯಿದೆ. ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಹಳೆಯ ವಿದ್ಯಾರ್ಥಿಗಳು ವರ್ಚುವಲ್‌ ಮಾದರಿಯಲ್ಲಿ ಸಭೆಗೆ ಸೇರಿಕೊಳ್ಳಲಿದ್ದಾರೆ.

ಅಧಿವೇಶನದ ನಂತರದ ಚರ್ಚೆಗಳು ಮತ್ತು ನೀತಿ ಶಿಫಾರಸುಗಳ ಸಾರಾಂಶದ ವರದಿಯಲ್ಲಿ ಅಧಿವೇಶನದ ಒಳನೋಟಗಳನ್ನು ಸೇರಿಸಲಾಗುತ್ತದೆ.

ಯುವ ವ್ಯವಹಾರಗಳ ಇಲಾಖೆಯ ಬಗ್ಗೆ:

ಯುವಜನರು ರಾಷ್ಟ್ರದ ಭವಿಷ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು ದೇಶದ ಅತ್ಯಮೂಲ್ಯ ಮಾನವ ಸಂಪನ್ಮೂಲವಾಗಿದ್ದಾರೆ. ಅವರ ರಚನಾತ್ಮಕ ಮತ್ತು ಸೃಜನಶೀಲ ಶಕ್ತಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು, ಇಲಾಖೆಯು ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಅವಳಿ ಉದ್ದೇಶಗಳನ್ನು ಹೊಂದಿದೆ.

ಒಐಪಿ-ಎಸ್‌ ಆರ್‌ ಸಿ ಸಿ ಬಗ್ಗೆ

ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ನ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಕಚೇರಿ (ಒಐಪಿ-ಎಸ್‌ ಆರ್‌ ಸಿ ಸಿ) ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳ ಮೂಲಕ ಅಂತರರಾಷ್ಟ್ರೀಯ ಸಮನ್ವಯವನ್ನು ಸಾಧಿಸುವ ಮತ್ತು ವಿಸ್ತರಿಸುವ ಗುರಿಯನ್ನು ಹೊಂದಿದೆ. ಇದು ವಿಶ್ವವಿದ್ಯಾನಿಲಯಗಳು, ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಶಿಕ್ಷಣ, ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಹಯೋಗ ಮತ್ತು ಸಹಕಾರವನ್ನು ಸುಗಮಗೊಳಿಸುತ್ತದೆ.

ಒಐಪಿ-ಎಸ್‌ ಆರ್‌ ಸಿ ಸಿ 2015 ರಲ್ಲಿ ಪ್ರಾರಂಭವಾದಾಗಿನಿಂದ, 175ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಪ್ರಮುಖ ಜಾಗತಿಕ ಶೈಕ್ಷಣಿಕ ಸಂಸ್ಥೆಗಳಾದ ಹಾರ್ವರ್ಡ್ ವಿಶ್ವವಿದ್ಯಾಲಯ (ಅಮೆರಿಕಾ), ಮೆಲ್ಬೋರ್ನ್ ವಿಶ್ವವಿದ್ಯಾಲಯ (ಆಸ್ಟ್ರೇಲಿಯಾ), ಉಟ್ರೆಕ್ಟ್‌ ವಿಶ್ವವಿದ್ಯಾಲಯ (ನೆದರ್ಲ್ಯಾಂಡ್ಸ್) ಗಳ ಸಹಯೋಗದಲ್ಲಿ ಆಯೋಜಿಸಿದೆ. ಯುವ ವ್ಯವಹಾರಗಳ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಸಂಸ್ಕೃತಿ ಸಚಿವಾಲಯ ಮತ್ತು ನೀತಿ ಆಯೋಗಗಳ ಸಹಯೋಗದೊಂದಿಗೂ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಿದೆ. ದೆಹಲಿಯಲ್ಲಿ ವಿಶ್ವ ಬ್ಯಾಂಕ್, ದೆಹಲಿಯಲ್ಲಿ ಯು ಎನ್‌ ಡಿ ಪಿ, ಅಂತರರಾಷ್ಟ್ರೀಯ ಸಹಕಾರ ಒಕ್ಕೂಟ- ಏಷ್ಯಾ ಪೆಸಿಫಿಕ್ (ICA-AP), ಬ್ಯಾಂಕಾಕ್‌ನಲ್ಲಿ ಯು ಎನ್‌ ಇ ಎಸ್‌ ಎ ಪಿ, ಪ್ಯಾರಿಸ್‌ನಲ್ಲಿ ಯುನೆಸ್ಕೋ ಮತ್ತು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಸೇರಿದಂತೆ ಹಲವಾರು ರಾಯಭಾರ ಕಚೇರಿಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂವಾದಗಳು ಮತ್ತು ಸಂವಾದಗಳನ್ನು ಒಐಪಿಯು ಸುಗಮಗೊಳಿಸಿದೆ.

*****



(Release ID: 1901084) Visitor Counter : 137