ಗೃಹ ವ್ಯವಹಾರಗಳ ಸಚಿವಾಲಯ

ಅಂತಾರಾಷ್ಟ್ರೀಯ ಮಾತೃಭಾಷಾ ದಿನದಂದು ದೇಶವಾಸಿಗಳಿಗೆ ಶುಭ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ 


ಮಗುವು ತನ್ನ ಮಾತೃಭಾಷೆಯಲ್ಲಿ ಓದಿದಾಗ, ಮಾತನಾಡಿದಾಗ ಮತ್ತು ಯೋಚಿಸಿದಾಗ, ಅದು ಚಿಂತಿಸುವ, ತರ್ಕಿಸುವ, ವಿಶ್ಲೇಷಿಸುವ ಮತ್ತು ಸಂಶೋಧಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ 'ನೂತನ ಶಿಕ್ಷಣ ನೀತಿ'ಯ ಮೂಲಕ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದು, ಇದು ಭಾರತದ ಉಜ್ವಲ ಭವಿಷ್ಯಕ್ಕೆ ಆಧಾರವಾಗಲಿದೆ

ನಮ್ಮ ಮಾತೃಭಾಷೆಯೊಂದಿಗೆ ಸಂಪರ್ಕಿತವಾಗಿರಲು ಮತ್ತು ಅದನ್ನು ಹೆಚ್ಚು ಸಮೃದ್ಧಗೊಳಿಸಲು ಸಂಕಲ್ಪ ಕೈಗೊಳ್ಳುವ ದಿನ ಇದಾಗಿದೆ

ಒಬ್ಬ ವ್ಯಕ್ತಿಯು ತನ್ನ ಮಾತೃಭಾಷೆಯನ್ನು ಸಮೃದ್ಧಗೊಳಿಸಿದಾಗ ಮಾತ್ರ ದೇಶದ ಎಲ್ಲಾ ಭಾಷೆಗಳು ಸಮೃದ್ಧವಾಗುತ್ತವೆ ಮತ್ತು ದೇಶವೂ ಸಮೃದ್ಧವಾಗಿರುತ್ತದೆ, ನಿಮ್ಮ ಮಾತೃಭಾಷೆಯ ಗರಿಷ್ಠ ಬಳಕೆಯನ್ನು ಮಾಡುವ ಪ್ರತಿಜ್ಞೆಯನ್ನು ಕೈಗೊಳ್ಳಿ

Posted On: 21 FEB 2023 1:16PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಅಂತಾರಾಷ್ಟ್ರೀಯ ಮಾತೃಭಾಷಾ ದಿನದಂದು ದೇಶವಾಸಿಗಳಿಗೆ ಶುಭ ಕೋರಿದ್ದಾರೆ.

ಕೇಂದ್ರ ಗೃಹ ಸಚಿವರು ತಮ್ಮ ಟ್ವೀಟ್ ಗಳ ಮೂಲಕ ಎಲ್ಲರಿಗೂ ಅಂತಾರಾಷ್ಟ್ರೀಯ ಮಾತೃಭಾಷಾ ದಿನದಂದು ಶುಭ ಕೋರಿದ್ದಾರೆ. ನಮ್ಮ ಮಾತೃಭಾಷೆಯೊಂದಿಗೆ ಸಂಪರ್ಕಿತರಾಗಲು ಮತ್ತು ಅದನ್ನು ಹೆಚ್ಚು ಸಮೃದ್ಧಗೊಳಿಸಲು ಸಂಕಲ್ಪ ಕೈಗೊಳ್ಳುವ ದಿನ ಇದಾಗಿದೆ ಎಂದು ಅವರು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ಮಾತೃಭಾಷೆಯನ್ನು ಸಮೃದ್ಧಗೊಳಿಸಿದಾಗ ಮಾತ್ರ ದೇಶದ ಎಲ್ಲಾ ಭಾಷೆಗಳು ಸಮೃದ್ಧವಾಗುತ್ತವೆ ಮತ್ತು ದೇಶವೂ ಸಮೃದ್ಧವಾಗಿರುತ್ತದೆ. ನಮ್ಮ ಮಾತೃಭಾಷೆಯ ಗರಿಷ್ಠ ಬಳಕೆಯನ್ನು ಮಾಡಲು ನಾವು ಪ್ರತಿಜ್ಞೆಯನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಮಗು ತನ್ನ ಮಾತೃಭಾಷೆಯಲ್ಲಿ ಓದುವಾಗ, ಮಾತನಾಡುವಾಗ ಮತ್ತು ಯೋಚಿಸುವಾಗ, ಅದು ಚಿಂತಿಸುವ, ತರ್ಕಿಸುವ, ವಿಶ್ಲೇಷಿಸುವ ಮತ್ತು ಸಂಶೋಧನೆ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ 'ನೂತನ ಶಿಕ್ಷಣ ನೀತಿ'ಯ ಮೂಲಕ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದೆ. ಇದು ಭಾರತದ ಉಜ್ವಲ ಭವಿಷ್ಯದ ಆಧಾರವಾಗಲಿದೆ ಎಂದು ತಿಳಿಸಿದ್ದಾರೆ.

***



(Release ID: 1901080) Visitor Counter : 118