ಗ್ರಾಮೀಣಾಭಿವೃದ್ಧಿ ಸಚಿವಾಲಯ
2004-14 ರ ಯುಪಿಎ ಆಡಳಿತ ಮತ್ತು 9 ವರ್ಷಗಳ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಎಂಜಿಎನ್‌ಆರ್‌ಇಜಿಎ ಅನುದಾನ ಹಂಚಿಕೆ ಮತ್ತು ಆಸ್ತಿಗಳ ಸೃಷ್ಟಿಗೆ ಸಂಬಂಧಿಸಿದಂತೆ ಚರ್ಚೆಗೆ ಬರುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರು ಕಾಂಗ್ರೆಸ್ ನಾಯಕ ಶ್ರೀ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಸರಸ್ ಮೇಳದಲ್ಲಿ ಮಾತನಾಡಿದ ಸಚಿವರು, ಎಂಜಿಎನ್‌ಆರ್‌ಇಜಿಎ ಬಜೆಟ್ ಅನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಅವರ ಫೇಸ್‌ಬುಕ್ ಪೋಸ್ಟ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ಯುಪಿಎಯ 10 ವರ್ಷಗಳ ಆಡಳಿತದಲ್ಲಿ, ಎಂಜಿಎನ್‌ಆರ್‌ಇಜಿಎಯ ಬಜೆಟ್ ಅಂದಾಜು 33,000 ಕೋಟಿ ರೂಪಾಯಿಗಳನ್ನು ಮೀರಿರಲಿಲ್ಲ , ಆದರೆ ಮೇ, 2014 ರಿಂದ, ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ, ಪ್ರತಿ ವರ್ಷ ಬಜೆಟ್ ಅಂದಾಜುಗಿಂತ ಪರಿಷ್ಕೃತ ಅಂದಾಜು ಹೆಚ್ಚಳ ಕಂಡಿದೆ ಎಂದು ಶ್ರೀ ಗಿರಿರಾಜ್ ಸಿಂಗ್ ಪ್ರತಿಪಾದಿಸಿದರು.
2020-21 ರಲ್ಲಿ 61,500 ಕೋಟಿ ರೂ.ಗಳ ಬಜೆಟ್ ಅಂದಾಜು, ಪರಿಷ್ಕೃತ ಅಂದಾಜಿನಲ್ಲಿ 1.11,500 ಕೋಟಿ ರೂ.ಗೆ ಹೆಚ್ಚಾಯಿತು, ಇದು ಮೊದಲ ಅನುದಾನದ ಎರಡು ಪಟ್ಟಗಿಂತ ಸ್ವಲ್ಪ ಕಡಿಮೆಯಾಗಿದೆ ಶ್ರೀ ಗಿರಿರಾಜ್ ಸಿಂಗ್ ಹೇಳಿದರು.
10 ವರ್ಷಗಳ ಯುಪಿಎ ಆಡಳಿತದಲ್ಲಿ, ಆಸ್ತಿ ಸೃಷ್ಟಿ ಕೇವಲ 17 ಪ್ರತಿಶತ ಇತ್ತು, ಆದರೆ ಕಳೆದ 9 ವರ್ಷಗಳ ಮೋದಿ ಆಡಳಿತದಲ್ಲಿ, ಆಸ್ತಿ ಸೃಷ್ಟಿ 60 ಪ್ರತಿಶತ ದಾಟಿದೆ: ಶ್ರೀ ಗಿರಿರಾಜ್ ಸಿಂಗ್
Posted On:
18 FEB 2023 5:39PM by PIB Bengaluru
2004-14 ರ ಯುಪಿಎ ಆಡಳಿತ ಮತ್ತು 9 ವರ್ಷಗಳ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಎಂಜಿಎನ್‌ಆರ್‌ಇಜಿಎ ಅನುದಾನ ಹಂಚಿಕೆ ಮತ್ತು ಆಸ್ತಿಗಳ ಸೃಷ್ಟಿಗೆ ಸಂಬಂಧಿಸಿದಂತೆ ಚರ್ಚೆಗೆ ಬರುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರು ಇಂದು ಹಿರಿಯ ಕಾಂಗ್ರೆಸ್ ನಾಯಕ ಶ್ರೀ ರಾಹುಲ್ ಗಾಂಧಿಯವರಿಗೆ ಸವಾಲು ಹಾಕಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಸರಸ್ ಮೇಳದ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗಿರಿರಾಜ್ ಸಿಂಗ್, ಎಂಜಿಎನ್‌ಆರ್‌ಇಜಿಎ ಬಜೆಟ್ ಅನ್ನು ಕಡಿಮೆ ಮಾಡಲಾಗಿದೆ ಎಂಬ ಸುದ್ದಿ ವರದಿಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿಯವರ ಫೇಸ್‌ಬುಕ್ ಪೋಸ್ಟ್ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು ಮತ್ತು ಇಂತಹ ವೃಥಾ ಆರೋಪ ಮಾಡುವ ಮೊದಲು ಕಾಂಗ್ರೆಸ್ ನಾಯಕರು ಸತ್ಯ ಮತ್ತು ಅಂಕಿಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎಯ 10 ವರ್ಷಗಳ ಆಡಳಿತದಲ್ಲಿ, ಎಂಜಿಎನ್‌ಆರ್‌ಇಜಿಎಯ ಬಿಇ (ಬಜೆಟ್ ಅಂದಾಜು) ಎಂದಿಗೂ 33,000 ಕೋಟಿ ರೂ. ಮೀರಿರಲಿಲ್ಲ ಮತ್ತು ಬಹುತೇಕ ಹಣಕಾಸು ವರ್ಷಗಳಲ್ಲಿ, ಗ್ರಾಮೀಣ ಉದ್ಯೋಗ ಯೋಜನೆಯ ಕಳಪೆ ಅನುಷ್ಠಾನದಿಂದಾಗಿ ಹಣವನ್ನು ವಾಪಸ್ ಮಾಡಲಾಗಿದೆ ಎಂದು ಶ್ರೀ ಗಿರಿರಾಜ್ ಸಿಂಗ್ ಪ್ರತಿಪಾದಿಸಿದರು. ಮತ್ತೊಂದೆಡೆ, ಮೇ, 2014 ರಿಂದ, ಪ್ರಧಾನಿ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ, ಪ್ರತಿ ವರ್ಷ ಪರಿಷ್ಕೃತ ಅಂದಾಜು (ಆರ್‌ಇ) ನಲ್ಲಿ ಬಜೆಟ್ ಅಂದಾಜನ್ನು (ಬಿಇ) ಮೀರಿದೆ ಎಂದು ಸಚಿವರು ಹೇಳಿದರು. ಈ ವರ್ಷವೂ 73,000 ಕೋಟಿ ರೂ. ಇದ್ದ ಬಿಇ ಈಗಾಗಲೇ 89,400 ಕೋಟಿ ರೂ. ಗೆ ತಲುಪಿದೆ. ರಾಜ್ಯಗಳ ಬಾಕಿ ಸಂಗ್ರಹದಿಂದಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಬೇಡಿಕೆಯ 25,000 ಕೋಟಿ ರೂ.ಗಳಲ್ಲಿ 16,000 ಕೋಟಿ ರೂ.ಗಳ ಆರ್ ಇ (ಪರಿಷ್ಕೃತ ಅಂದಾಜು) ಯನ್ನು ಸ್ವೀಕರಿಸಿದೆ ಎಂದು ಅವರು ಹೇಳಿದರು.
2019-20 ರಲ್ಲಿ, ಬಜೆಟ್ ಅಂದಾಜು 60,000 ಕೋಟಿ ರೂ. ಮತ್ತು ಪರಿಷ್ಕೃತ ಅಂದಾಜು 71,000 ಕೋಟಿಗೆ ಏರಿತು, 2020-21 ರಲ್ಲಿ 61,500 ಕೋಟಿರೂ. ಬಜೆಟ್ ಅಂದಾಜು, ಒಂದು ಲಕ್ಷದ 11 ಸಾವಿರದ 500 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಗರಗಳಿಂದ ಹಳ್ಳಿಗಳಿಗೆ ಗ್ರಾಮೀಣ ಜನಸಂಖ್ಯೆಯ ಮರುವಲಸೆ ಮತ್ತು ಕೆಲಸಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ ಆರಂಭಿಕ ಹಂಚಿಕೆಗಿಂತ ಎರಡು ಪಟ್ಟು ಹೆಚ್ಚಾಯಿತು. ಅದೇ ರೀತಿ, 2021-2022 ನೇ ಆರ್ಥಿಕ ವರ್ಷದಲ್ಲಿ 73,000 ಕೋಟಿ ರೂ.ಗಳ ಬಜೆಟ್ ಅಂದಾಜು, 99, 117 ಕೋಟಿ ರೂ. ಗಳನ್ನು ಮುಟ್ಟಿತು ಎಂದು ಅವರು ಹೇಳಿದರು.
ಯುಪಿಎ ಆಡಳಿತಾವಧಿಯಲ್ಲಿ ಗ್ರಾಮೀಣ ಉದ್ಯೋಗ ಯೋಜನೆಯಡಿ ಕೇವಲ 17 ಪ್ರತಿಶತದಷ್ಟು ಆಸ್ತಿಗಳ ಸೃಷ್ಟಿಯಾಗಿದೆ. ಆದರೆ ಕಳೆದ 9 ವರ್ಷಗಳ ಮೋದಿ ಆಡಳಿತದಲ್ಲಿ ಆಸ್ತಿ ಸೃಷ್ಟಿ ಈಗಾಗಲೇ ಶೇಕಡಾ 60 ದಾಟಿರುವುದನ್ನು ಪರಿಶೀಲಿಸುವಂತೆ ರಾಹುಲ್ ಗಾಂಧಿಯವರಿಗೆ ಶ್ರೀ ಗಿರಿರಾಜ್ ಸಿಂಗ್ ಸವಾಲು ಹಾಕಿದರು, ಕೇವಲ ಅಗೆಯುವ ಮತ್ತು ಗುಂಡಿಗಳನ್ನು ಮುಚ್ಚುವ ಕೆಲಸವಾಗಿದ್ದ ಎಂಜಿಎನ್‌ಆರ್‌ಇಜಿಎಗೆ ಹೊಸರೂಪ ನೀಡಿದ ಸಂಪೂರ್ಣ ಶ್ರೇಯ ಶ್ರೀ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದು ಅವರು ಹೇಳಿದರು.
ಬಿಜೆಪಿ ನೇತೃತ್ವದ ಸರ್ಕಾರವು ಎಂಜಿಎನ್‌ಆರ್‌ಇಜಿಎ ಬಜೆಟ್ ಅನ್ನು ಕಡಿಮೆ ಮಾಡಿದೆ ಮತ್ತು ಭಾರತದ ಗ್ರಾಮೀಣ ಆರ್ಥಿಕತೆಯ ಅಡಿಪಾಯವಾಗಿದ್ದ ಗ್ರಾಮೀಣ ಉದ್ಯೋಗ ಯೋಜನೆಯು ಕೇಂದ್ರದ ದಮನಕಾರಿ ನೀತಿಗಳಿಗೆ ಬಲಿಯಾಗುತ್ತಿದೆ ಎಂದು ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಯೋಜನೆಗೆ ಆಧಾರ್ ಅನ್ನು ಲಿಂಕ್ ಮಾಡುವ ಮೂಲಕ ಸರ್ಕಾರವು ಸಮಾಜದ ಬಡ ವರ್ಗಗಳ ವಿರುದ್ಧ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ರಾಹುಲ್ ಗಾಂಧಿಯವರ ಆರೋಪದ ಬಗ್ಗೆ ಉತ್ತರಿಸಿದ ಶ್ರೀ ಗಿರಿರಾಜ್ ಸಿಂಗ್, ಮೋದಿ ಸರ್ಕಾರದ ಗುರಿ ಯೋಜನೆ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ ತರುವುದಾಗಿದೆ ಎಂದು ಹೇಳಿದರು.
*****
(Release ID: 1900381)
Visitor Counter : 192