ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಹಣದುಬ್ಬರವನ್ನು ಪರಿಶೀಲಿಸಲು ಗೋಧಿಯ ಮೀಸಲು ಬೆಲೆಯನ್ನು ಮಾರ್ಚ್ 31ರವರೆಗೆ ಮತ್ತಷ್ಟು ತಗ್ಗಿಸಿದ ಕೇಂದ್ರ ಸರ್ಕಾರ
ಗೋಧಿ ಮತ್ತು ಗೋಧಿ ಉತ್ಪನ್ನಗಳ ಮಾರುಕಟ್ಟೆ ಬೆಲೆಯನ್ನು ಕಡಿಮೆ ಮಾಡಲು ಸಹಾಯವಾಗಲು ಮೀಸಲು ಬೆಲೆಯಲ್ಲಿ ಕಡಿತ
प्रविष्टि तिथि:
17 FEB 2023 4:59PM by PIB Bengaluru
ಆಹಾರ ಆರ್ಥಿಕತೆಯಲ್ಲಿ ಹಣದುಬ್ಬರದ ಪ್ರವೃತ್ತಿಯನ್ನು ಪರಿಶೀಲಿಸಲು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು (DFPD) ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ 31 ರವರೆಗೆ ಮೀಸಲು ಬೆಲೆಯನ್ನು ಈ ಕೆಳಗಿನಂತೆ ಕಡಿಮೆ ಮಾಡಲು ನಿರ್ಧರಿಸಿದೆ:
ಎ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) {OMSS (D)} ಅಡಿಯಲ್ಲಿ ಗೋಧಿಗೆ ಮೀಸಲು ಬೆಲೆಯನ್ನು ಕ್ವಿಂಟಾಲ್ ಗೆ 2,150 ರೂಪಾಯಿ(ದೇಶೀಯ ಮಟ್ಟದಲ್ಲಿ) ಮತ್ತು ಖಾಸಗಿ ವ್ಯಕ್ತಿಗಳಿಗೆ ಗೋಧಿಯನ್ನು ಮಾರಾಟ ಮಾಡಲು ಚಿಲ್ಲರೆ ನಿರ್ವಹಣೆ ವ್ಯವಸ್ಥೆ(RMS) 2023-24ಯಡಿಯಲ್ಲಿ ಎಲ್ಲಾ ಬೆಳೆಗಳ ಗೋಧಿಗೆ 2,125 ರೂಪಾಯಿಗಳನ್ನು ಕ್ವಿಂಟಾಲ್ ಗೆ ನಿಗದಿಪಡಿಸಲಾಗಿದೆ.
ಬಿ. ಇ-ಹರಾಜಿನಲ್ಲಿ ಭಾಗವಹಿಸದೆ ಮೇಲಿನ ಪ್ರಸ್ತಾವಿತ ಮೀಸಲು ಬೆಲೆಗಳಲ್ಲಿ ತಮ್ಮದೇ ಯೋಜನೆಗಾಗಿ ಭಾರತ ಆಹಾರ ನಿಗಮದಿಂದ ಗೋಧಿಯನ್ನು ಖರೀದಿಸಲು ರಾಜ್ಯಗಳಿಗೆ ಅನುಮತಿ ನೀಡಬಹುದು.
ಮೀಸಲು ಬೆಲೆಯಲ್ಲಿನ ಕಡಿತವು ಗ್ರಾಹಕರಿಗೆ ಗೋಧಿ ಮತ್ತು ಗೋಧಿ ಉತ್ಪನ್ನಗಳ ಮಾರುಕಟ್ಟೆ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಭಾರತ ಆಹಾರ ನಿಗಮವು, ಇಂದಿನಿಂದ ಫೆಬ್ರವರಿ 22ರವರೆಗೆ ಈ ಪರಿಷ್ಕೃತ ಮೀಸಲು ಬೆಲೆಗಳಲ್ಲಿ ಗೋಧಿಯ ಮಾರಾಟಕ್ಕಾಗಿ 3 ನೇ ಇ-ಹರಾಜನ್ನುತೆರೆಯುತ್ತದೆ.
ಸಚಿವರ ಸಮಿತಿಯು ಭಾರತ ಆಹಾರ ನಿಗಮದ ಸಂಗ್ರಹದಿಂದ 30 ಲಕ್ಷ ಮೆಟ್ರಿಕ್ ಟನ್(LMT) ಗೋಧಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಮೂಲಕ ಈ ಕೆಳಗಿನಂತೆ ಬಿಡುಗಡೆ ಮಾಡಲು ನಿರ್ಧರಿಸಿದೆ:
ಎ. 25 ಎಲ್ ಎಂಟಿಯನ್ನು ಇ-ಹರಾಜು ಮೂಲಕ ವ್ಯಾಪಾರಿಗಳು, ಹಿಟ್ಟಿನ ಗಿರಣಿಗಳು ಇತ್ಯಾದಿಗಳಿಗೆ ಭಾರತ ಆಹಾರ ನಿಗಮವು ಅನುಸರಿಸುವ ಸಾಮಾನ್ಯ ಪ್ರಕ್ರಿಯೆಯ ಪ್ರಕಾರ ನೀಡಲಾಗುತ್ತದೆ. ಪ್ರತಿ ಪ್ರದೇಶಕ್ಕೆ ಪ್ರತಿ ಹರಾಜಿನಲ್ಲಿ ಗರಿಷ್ಠ 3000 ಮೆಟ್ರಿಕ್ ಟನ್ ವರೆಗೆ ಬಿಡ್ ದಾರರು ಇ-ಹರಾಜಿನಲ್ಲಿ ಭಾಗವಹಿಸಬಹುದು.
ಬಿ. 2 ಎಲ್ ಎಂಟಿಯನ್ನು ರಾಜ್ಯ ಸರ್ಕಾರಗಳಿಗೆ ತಮ್ಮ ಯೋಜನೆಗಳಿಗಾಗಿ ಇ-ಹರಾಜು ಇಲ್ಲದೆ 10 ಸಾವಿರ ಮೆಟ್ರಿಕ್ ಟನ್ ರಾಜ್ಯಕ್ಕೆ ನೀಡಲಾಗುತ್ತದೆ.
ಸಿ. 3 ಎಲ್ ಎಂಟಿಯನ್ನು ಸರ್ಕಾರಿ ಸ್ವಾಮ್ಯದ ಘಟಕಗಳು/ಸಹಕಾರ ಸಂಸ್ಥೆಗಳು/ಫೆಡರೇಶನ್‌ಗಳಾದ ಕೇಂದ್ರೀಯ ಭಂಡಾರ/ಎನ್ ಸಿಸಿಎಫ್/ಎನ್ ಎಎಫ್ ಇಡಿ ಇತ್ಯಾದಿಗಳಿಗೆ ಇ-ಹರಾಜು ಇಲ್ಲದೆ ನೀಡಲಾಗುವುದು.
ತರುವಾಯ, ಇಲಾಖೆಯು 3 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಕೇಂದ್ರೀಯ ಭಂಡಾರ / ಎನ್ ಎಎಫ್ ಇಡಿ / ಎನ್ ಸಿಸಿಎಫ್ ಗೆ ಅವರ ಕೋರಿಕೆಗಳ ಪ್ರಕಾರ ಹಂಚಿಕೆ ಮಾಡಿದೆ. ಕೇಂದ್ರೀಯ ಭಂಡಾರ, ಎನ್ ಎಎಫ್ ಇಡಿ ಮತ್ತು ಎನ್ ಸಿಸಿಎಫ್ ಗೆ ಕ್ರಮವಾಗಿ 1.32 ಲಕ್ಷ ಮೆಟ್ರಿಕ್ ಟನ್, 1 ಲಕ್ಷ ಮೆಟ್ರಿಕ್ ಟನ್ ಮತ್ತು 0.68 ಲಕ್ಷ ಮೆಟ್ರಿಕ್ ಟನ್ ಹಂಚಿಕೆ ಮಾಡಲಾಗಿದೆ.
ಇದಲ್ಲದೆ, ಮೊನ್ನೆ ಫೆಬ್ರವರಿ 10ರಂದು ಗೋಧಿ ದರವನ್ನು ಎನ್ ಸಿಸಿಎಫ್/ಎನ್ ಎಎಫ್ ಇಡಿ/ ಕೇಂದ್ರೀಯ ಭಂಡಾರ/ರಾಜ್ಯ ಸರ್ಕಾರ. ಸಹಕಾರಿ ಸಂಸ್ಥೆಗಳು/ ಫೆಡರೇಶನ್‌ಗಳು ಇತ್ಯಾದಿ ಹಾಗೂ ಸಮುದಾಯ ಅಡುಗೆ/ ದತ್ತಿ/ ಎನ್ ಜಿಒಇತ್ಯಾದಿಗಳಿಗೆ ಮಾರಾಟ ಮಾಡಲು ಪ್ರತಿ ಕೆಜಿಗೆ 21.50 ರೂಪಾಯಿಗೆ ಇಳಿಸಲಾಗಿದ್ದು, ಗೋಧಿಯನ್ನು ಪುಡಿಯಾಗಿ ಪರಿವರ್ತಿಸಿ ಗ್ರಾಹಕರಿಗೆ ಕೆ.ಜಿಗೆ 27 ರೂಪಾಯಿ 50 ಪೈಸೆಗೆ ಮಾರಾಟ ಮಾಡಲಾಗುತ್ತದೆ.
****
(रिलीज़ आईडी: 1900364)
आगंतुक पटल : 225