ಹಣಕಾಸು ಸಚಿವಾಲಯ

2023-24ನೇ ಹಣಕಾಸು ವರ್ಷದಲ್ಲಿ ಹಣಕಾಸಿನ ಕೊರತೆಯು 5.9% ರಷ್ಟಾಗಬಹುದು


2023-24ನೇ ಹಣಕಾಸು ವರ್ಷದಲ್ಲಿ ಆದಾಯ ಕೊರತೆಯು 2.9 % ರಷ್ಟಾಗಬಹುದು

2025-26 ರ ಹಣಕಾಸು ವರ್ಷದ ಹೊತ್ತಿಗೆ ಹಣಕಾಸಿನ ಕೊರತೆಯು 4.5% ಕ್ಕಿಂತ ಕಡಿಮೆ ತಲುಪಲಿದೆ

2021-22ರ ಹೋಲಿಕೆಯಲ್ಲಿ 2022-23 ರ ಒಟ್ಟು ತೆರಿಗೆ ಆದಾಯದವು 15.5 % ರಷ್ಟು ವರ್ಷದಿಂದ-ವರ್ಷಕ್ಕೆ ಅಭಿವೃದ್ಧಿ ಕಂಡಿದೆ

2022-23 ರ ಹಣಕಾಸು ವರ್ಷದ ಮೊದಲ 8 ತಿಂಗಳುಗಳಲ್ಲಿ ನೇರ ತೆರಿಗೆಗಳು 23.5% ರಷ್ಟು ಹೆಚ್ಚಾಗಿದೆ

ಅದೇ ಅವಧಿಯಲ್ಲಿ ಪರೋಕ್ಷ ತೆರಿಗೆಗಳು 8.6% ರಷ್ಟು ಹೆಚ್ಚಾಗಿವೆ

ಜಿ.ಎಸ್‌.ಡಿ.ಪಿ.ಯ ಶೇಕಡಾ 3.5 ರಷ್ಟು ಹಣಕಾಸಿನ ಕೊರತೆಯನ್ನು ರಾಜ್ಯಗಳಿಗೆ ಅನುಮತಿಸಲಾಗಿದೆ

ರಾಜ್ಯಗಳಿಗೆ ಐವತ್ತು ವರ್ಷಗಳ ಬಡ್ಡಿ ರಹಿತ ಸಾಲವನ್ನು ಒದಗಿಸಲಾಗುವುದು

Posted On: 01 FEB 2023 12:59PM by PIB Bengaluru

ವಿತ್ತೀಯ ಬಲವರ್ಧನೆಯ ಹಾದಿಯನ್ನು ಮುಂದುವರೆಸುತ್ತಾ, 2025-26 ರ ವೇಳೆಗೆ ವಿತ್ತೀಯ ಕೊರತೆಯನ್ನು ಜಿ.ಡಿ.ಪಿ.ಯ ಶೇಕಡಾ 4.5 ಕ್ಕಿಂತ ಕೆಳಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023-24 ಅನ್ನು ಮಂಡಿಸಿದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

 

2023-24 ರ ಬಜೆಟ್ ಅಂದಾಜುಗಳಲ್ಲಿ ವಿತ್ತೀಯ ಕೊರತೆಯು 5.9 ಶೇಕಡಾ ಎಂದು ಅಂದಾಜಿಸಲಾಗಿದೆ.  2023-24ರ ವಿತ್ತೀಯ ಕೊರತೆಗೆ ಹಣಕಾಸು ಒದಗಿಸಲು, ದಿನಾಂಕ ನಮೂದಿಸಿದ ಸೆಕ್ಯುರಿಟಿಗಳಿಂದ ರೂ. 11.8 ಲಕ್ಷ ಕೋಟಿ ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆಯಲಾಗುವುದು. ಸಣ್ಣ ಉಳಿತಾಯ ಮತ್ತು ಇತರ ಮೂಲಗಳಿಂದ ಬಾಕಿ ಹಣಕಾಸು ಬರುವ ನಿರೀಕ್ಷೆಯಿದೆ. ಒಟ್ಟು ಮಾರುಕಟ್ಟೆ ಸಾಲವನ್ನು ರೂ. 15.4 ಲಕ್ಷ ಕೋಟಿ ಅಗಿರುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.     

 

2023-24ರ ಬಜೆಟ್ ಅಂದಾಜುಗಳಲ್ಲಿ, ಸಾಲಗಳನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು ಮತ್ತು ಒಟ್ಟು ವೆಚ್ಚವನ್ನು ಕ್ರಮವಾಗಿ ರೂ. 27.2 ಲಕ್ಷ ಕೋಟಿ ಮತ್ತು ರೂ. 45 ಲಕ್ಷ ಕೋಟಿ ಇದಲ್ಲದೆ, ನಿವ್ವಳ ತೆರಿಗೆ ರಸೀದಿಗಳು ರೂ. 23.3 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.  

 

2023-24ರ ಪರಿಷ್ಕೃತ ಅಂದಾಜಿನಲ್ಲಿ, ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು ರೂ. 24.3 ಲಕ್ಷ ಕೋಟಿ, ಇದರಲ್ಲಿ ನಿವ್ವಳ ತೆರಿಗೆ ಸ್ವೀಕೃತಿಗಳು ರೂ. 20.9 ಲಕ್ಷ ಕೋಟಿ ಆಗಿರುತ್ತದೆ. ಒಟ್ಟು ವೆಚ್ಚದ ಪರಿಷ್ಕೃತ ಅಂದಾಜು ರೂ. 41.9 ಲಕ್ಷ ಕೋಟಿ, ಇದರಲ್ಲಿ ಬಂಡವಾಳ ವೆಚ್ಚ ಸುಮಾರು ರೂ. 7.3 ಲಕ್ಷ ಕೋಟಿ ಆಗಿರುತ್ತದೆ. 2022-23 ರಲ್ಲಿ ವಿತ್ತೀಯ ಕೊರತೆಯ ಪರಿಷ್ಕೃತ ಅಂದಾಜು ಜಿಡಿಪಿಯ ಶೇಕಡಾ 6.4 ಆಗಿದೆ, ಇದು ಬಜೆಟ್ ಅಂದಾಜಿಗೆ ಸಂಪೂರ್ಣವಾಗಿ ಬದ್ಧವಾಗಿದೆ.  

 

https://static.pib.gov.in/WriteReadData/userfiles/image/image001ATEO.jpg

ಆದಾಯ ಕೊರತೆ

ಆದಾಯ ಕೊರತೆಯು ಹಣಕಾಸು ವರ್ಷ 2022-23ರ 4.1% ಕ್ಕಿಂತ 2023-24ರಲ್ಲಿ ಕೇವಲ 2.9% ರಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ. ಪುನರಪಿ ( ಬ್ಯಾಕ್-ಟು-ಬ್ಯಾಕ್) ಜಾಗತಿಕ ಪ್ರತಿರೋಧ ವಾತಾವರಣಗಳು ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ದೇಶೀಯ ಆರ್ಥಿಕ ನೀತಿಯ ಮೇಲೆ ನೇರ ನಿಯಂತ್ರಣವನ್ನು ಮೀರಿದ ನಿರ್ಬಂಧಗಳನ್ನು ಒಡ್ಡುತ್ತಲೇ ಇರುತ್ತವೆ. ಆದರೂ, ಹೊಸ ಅಭಿವೃದ್ಧಿ ಮತ್ತು ಕಲ್ಯಾಣ-ಸಂಬಂಧಿತ ವೆಚ್ಚದ ಬದ್ಧತೆಗಳು, ತೆರಿಗೆ ಸ್ವೀಕೃತಿಗಳಲ್ಲಿನ ಅವಕಾಶಗಳು ಮತ್ತು ವರ್ಷದಲ್ಲಿ ಉದ್ದೇಶಿತ ವೆಚ್ಚದ ತರ್ಕಬದ್ಧಗೊಳಿಸುವಿಕೆ, ತ್ವರಿತ ಅಂತರ್ಗತ ಅಭಿವೃದ್ಧಿಯ ಮೇಲೆ ಒತ್ತಡವನ್ನು ಮುಂದುವರಿಸಲು ಸಹಾಯ ಮಾಡಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಹಣಕಾಸು ವರ್ಷ 2022-23 ರ ಹಣಕಾಸು ನೀತಿ ಹೇಳಿಕೆಯು, ಆಹಾರ ಮತ್ತು ಇಂಧನ ಭದ್ರತೆಗೆ ಅಪಾಯವನ್ನುಂಟುಮಾಡುವ ಹಠಾತ್ ಏಕಾಏಕಿ ಭೌಗೋಳಿಕ ರಾಜಕೀಯ ಸಂಘರ್ಷದ ಕಾರಣ, ದುರ್ಬಲರನ್ನು ಬೆಂಬಲಿಸಲು ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ ಅಗತ್ಯವಿತ್ತು.   

ಹಣಕಾಸು ವರ್ಷ 2025-26 ರ ವೇಳೆಗೆ ಜಿಡಿಪಿಯ 4.5 ಶೇಕಡಾಕ್ಕಿಂತ ಕಡಿಮೆ ವಿತ್ತೀಯ ಕೊರತೆಯ ಮಟ್ಟವನ್ನು ಸಾಧಿಸಲು ವಿತ್ತೀಯ ಬಲವರ್ಧನೆಯ ವಿಶಾಲ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರದ ಬದ್ಧತೆಯನ್ನು ಶ್ರೀಮತಿ ಸೀತಾರಾಮನ್ ಅವರು ಹೇಳಿದರು. ಸರ್ಕಾರವು ನಿರಂತರ, ವಿಶಾಲ ಆಧಾರಿತ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತದೆ ಮತ್ತು ಹಣಕಾಸಿನ ಸರಿಯಾದ ಮಾರ್ಗವನ್ನು ಅನುಸರಿಸುವಾಗ ಜನರ ಜೀವನ / ಜೀವನೋಪಾಯವನ್ನು ರಕ್ಷಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.  

 

ಪರಿಷ್ಕೃತ ಅಂದಾಜುಗಳು(2022-23)

ಬಜೆಟ್ ಅಂದಾಜುಗಳು(2023-24)

ಹಣಕಾಸಿನ ಕೊರತೆ

6.4%

5.9%

ಆದಾಯ ಕೊರತೆ

4.1%

2.9%

ತೆರಿಗೆ ಆದಾಯ

ಹಣಕಾಸು ವರ್ಷ 2022-23 ಕ್ಕಿಂತ ಹಣಕಾಸು ವರ್ಷ 2023-24 ರಲ್ಲಿ ಒಟ್ಟು ತೆರಿಗೆ ಆದಾಯ (ಜಿಟಿಆರ್) 10.4 ಶೇಕಡಾ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಎರಡೂ ತೆರಿಗೆಗಳ(ನೇರ ಮತ್ತು ಪರೋಕ್ಷ ತೆರಿಗೆಗಳೆರಡರ) ಸ್ವೀಕೃತಿಗಳು ಕ್ರಮವಾಗಿ 10.5 ಶೇಕಡಾ ಮತ್ತು 10.4 ಶೇಕಡಾದಲ್ಲಿ ಬೆಳೆಯುತ್ತವೆ ಎಂದು ಅಂದಾಜಿಸಲಾಗಿದೆ. ಜಿಟಿಆರ್‌ಗೆ ನೇರ ಮತ್ತು ಪರೋಕ್ಷ ತೆರಿಗೆಗಳು ಕ್ರಮವಾಗಿ ಶೇಕಡಾ 54.4 ಮತ್ತು ಶೇಕಡಾ 45.6 ರಷ್ಟು ಕೊಡುಗೆ ನೀಡುತ್ತವೆ ಎಂದು ಹಣಕಾಸು ನೀತಿ ಹೇಳಿಕೆಯಲ್ಲಿ ಅಂದಾಜಿಸಲಾಗಿದೆ. ತೆರಿಗೆ ಮತ್ತು ಜಿಡಿಪಿ ಅನುಪಾತವು ಶೇಕಡಾ 11.1 ಎಂದು ಅಂದಾಜಿಸಲಾಗಿದೆ.

ತೆರಿಗೆ ನೀತಿಯ ಒಟ್ಟಾರೆ ಮಧ್ಯಮ ಅವಧಿಯ ಒತ್ತಡವು ಸುಂಕದ ರಚನೆಯನ್ನು ತರ್ಕಬದ್ಧಗೊಳಿಸುವುದು ಮತ್ತು ತೆರಿಗೆ ಮೂಲವನ್ನು ವಿಸ್ತರಿಸುವುದು. ತೆರಿಗೆ ರಚನೆಯಲ್ಲಿ ಹರಿದಾಡಿರುವ ತೆರಿಗೆ ವಿಲೋಮಗಳನ್ನು ತೆಗೆದುಹಾಕುವ ಮೂಲಕ ಮತ್ತು ವಿನಾಯಿತಿಗಳನ್ನು ಕಡಿತಗೊಳಿಸುವ ಮೂಲಕ ಇದನ್ನು ಸಾಧಿಸಲಾಗುತ್ತಿದೆ. ಹೆಚ್ಚುವರಿಯಾಗಿ, ತೆರಿಗೆ ಮೂಲವನ್ನು ವಿಸ್ತರಿಸಲು, ತೆರಿಗೆದಾರರಿಗೆ ವಿಧಿವಧಾನಗಳ ಅನುಸರಣೆಯನ್ನು ಸುಲಭಗೊಳಿಸಲು, ಪೂರೈಕೆ ಸರಪಳಿಯ ಔಪಚಾರಿಕೀಕರಣ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

 

ಕಂದಾಯ ಸ್ವೀಕೃತಿಗಳು ಮತ್ತು ಆದಾಯ ವೆಚ್ಚಗಳ ನಡುವಿನ ಸಮತೋಲನ

 

ಕೇಂದ್ರದ ಒಟ್ಟು ಆದಾಯ ಸ್ವೀಕೃತಿಗಳು ಮತ್ತು ಆದಾಯ ವೆಚ್ಚಗಳು ಅಂದಾಜು ರೂ. 26.32 ಲಕ್ಷ ಕೋಟಿ ಮತ್ತು 2023-24 ರ ಬಜೆಟ್ ಅಂದಾಜುಗಳಲ್ಲಿ  ಕ್ರಮವಾಗಿ ರೂ. 35.02 ಲಕ್ಷ ಕೋಟಿ ಆಗಿರುತ್ತದೆ.  ಇದರ ಆಧಾರದ ಮೇಲೆ,  2023-24 ರ ಬಜೆಟ್ ಅಂದಾಜುಗಳಲ್ಲಿ  ಆದಾಯ ಸ್ವೀಕೃತಿಗಳ ಅನುಪಾತವು 75.2 ಶೇಕಡಾ ಎಂದು ಅಂದಾಜಿಸಲಾಗಿದೆ, ಇದು ಕ್ರಮವಾಗಿ  2022-23ರ ಪರಿಷ್ಕೃತ ಅಂದಾಜು ಮತ್ತು ಹಣಕಾಸು ವರ್ಷ 2021-22 ರಲ್ಲಿ 67.9 ಶೇಕಡಾ ಮತ್ತು 67.8 ರಷ್ಟು ಸುಧಾರಿಸಿದೆ.
 
ತೆರಿಗೆ-ಜಿಡಿಪಿ ಅನುಪಾತವು 2022-23 ರ ಬಜೆಟ್ ಅಂದಾಜುಗಳಲ್ಲಿ  10.7 ಶೇಕಡಾದಿಂದ  2022-23ರ ಪರಿಷ್ಕೃತ ಅಂದಾಜು ಮತ್ತು ಬಜೆಟ್ ಅಂದಾಜುಗಳಲ್ಲಿ  2023-24 ರಲ್ಲಿ ಶೇಕಡಾ 11.1 ಕ್ಕೆ ಸುಧಾರಿಸಲಿದೆ

 

ತೆರಿಗೆಯೇತರ ಆದಾಯ

 

ತೆರಿಗೆಯೇತರ ಆದಾಯವು ಕಂದಾಯ ಸ್ವೀಕೃತಿಯ ರೂ. 3.02 ಲಕ್ಷ ಕೋಟಿ ಆಗಿದ್ದು, ಇದು ಶೇಕಡಾ 11.5 ರಷ್ಟು ಕೊಡುಗೆಯನ್ನು ನೀಡುತ್ತದೆ ಎಂದು ಅಂದಾಜಿಸಲಾಗಿದೆ ಮತ್ತು ಇದು 2022-23 ರ ಪರಿಷ್ಕೃತ ಅಂದಾಜು ರೂ. 2.62 ಲಕ್ಷ ಕೋಟಿಗಿಂತ 15.2 ಶೇಕಡಾ ಹೆಚ್ಚು ಎಂದು  ಅಂದಾಜಿಸಲಾಗಿದೆ

 

ಸಾಲದ ಬಂಡವಾಳದ ರಸೀದಿಗಳು

 

2023-24 ರ ಬಜೆಟ್ ಅಂದಾಜುಗಳಲ್ಲಿ  ಸಾಲಗಳು ಮತ್ತು ಮುಂಗಡಗಳ ವಸೂಲಾತಿ (ರೂ. 23,000 ಕೋಟಿ), ರಸ್ತೆಗಳ ಆದಾಯಗಳಿಕೆಯಿಂದ (ರೂ.10,000 ಕೋಟಿ) ರಸೀದಿಗಳನ್ನು ಒಳಗೊಂಡಂತೆ   ಸಾಲೇತರ ಬಂಡವಾಳ ಸ್ವೀಕೃತಿಗಳು (ಎನ್.ಡಿ.ಸಿ.ಆರ್) ರೂ. 84,000 ಕೋಟಿ ಎಂದು ಅಂದಾಜಿಸಲಾಗಿದೆ

 

ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸ್ಥಿತಿಗಳು, ಸರ್ಕಾರದ ಪಾಲಿಗೆ ನಿಯೋಜಿಸಲಾದ ನಿರೀಕ್ಷಿತ ಮೌಲ್ಯಮಾಪನ ಇತ್ಯಾದಿಗಳ ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿ ಸಾಲೇತರ ಬಂಡವಾಳದ ರಶೀದಿಗಳ ನಿಜವಾದ ವಾಸ್ತವ(ಸಾಕ್ಷಾತ್ಕಾರ)ವಾಗುತ್ತದೆ.

 

ಹಣಕಾಸಿನ ಕೊರತೆಯ ಅನುಪಾತಕ್ಕೆ ಬಂಡವಾಳ ವೆಚ್ಚ

 

2022-23 ರ ಪರಿಷ್ಕೃತ ಅಂದಾಜುಗಳಲ್ಲಿ 41.5 ಶೇಕಡಾ ಮತ್ತು ಹಣಕಾಸುವರ್ಷ 2021-22 ರಲ್ಲಿ 37.4 ಶೇಕಡಾ ಆಗಿದ್ದು, 2023-24 ರ ಬಜೆಟ್ ಅಂದಾಜುಗಳಲ್ಲಿ ವಿತ್ತೀಯ ಕೊರತೆ (ಕ್ಯಾಪೆಕ್ಸ್-ಎಫ್‌.ಡಿ) ಗೆ ಬಂಡವಾಳ ವೆಚ್ಚದ ಅನುಪಾತವು  56.0 ಶೇಕಡಾ ಎಂದು ಅಂದಾಜಿಸಲಾಗಿದೆ.

https://static.pib.gov.in/WriteReadData/userfiles/image/image00215NV.jpg

ರಾಜ್ಯಗಳ ವಿತ್ತೀಯ ಕೊರತೆ

 

ರಾಜ್ಯಗಳಿಗೆ ಜಿ.ಎಸ್‌.ಡಿ.ಪಿ.ಯ 3.5 ಪ್ರತಿಶತದಷ್ಟು ವಿತ್ತೀಯ ಕೊರತೆಯನ್ನು ಅನುಮತಿಸಲಾಗುವುದು ಮತ್ತು ಅದರಲ್ಲಿ 0.5 ಪ್ರತಿಶತವನ್ನು ವಿದ್ಯುತ್ ವಲಯದ ಸುಧಾರಣೆಗಳೊಂದಿಗೆ ಜೋಡಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. ರಾಜ್ಯಗಳಿಗೆ ಐವತ್ತು ವರ್ಷಗಳ ಬಡ್ಡಿ ರಹಿತ ಸಾಲವನ್ನೂ ನೀಡಲಾಗುವುದು. ರಾಜ್ಯಗಳಿಗೆ ಐವತ್ತು ವರ್ಷಗಳ ಸಂಪೂರ್ಣ ಸಾಲವನ್ನು 2023-24 ರೊಳಗೆ ಬಂಡವಾಳ ವೆಚ್ಚಕ್ಕಾಗಿ ಖರ್ಚು ಮಾಡಬೇಕು. ಇವುಗಳಲ್ಲಿ ಹೆಚ್ಚಿನವು ರಾಜ್ಯಗಳ ವಿವೇಚನೆಗೆ ಅನುಗುಣವಾಗಿರುತ್ತವೆ, ಆದರೆ ಒಂದು ಭಾಗವು ರಾಜ್ಯಗಳು ತಮ್ಮ ನಿಜವಾದ ಬಂಡವಾಳ ವೆಚ್ಚವನ್ನು ಹೆಚ್ಚಿಸುವುದರ ಮೇಲೆ ಷರತ್ತುಬದ್ಧವಾಗಿರುತ್ತದೆ. ವೆಚ್ಚದ ಭಾಗಗಳನ್ನು ಈ ಕೆಳಗಿನ ಉದ್ದೇಶಗಳಿಗೆ ಲಿಂಕ್ ಮಾಡಲಾಗುತ್ತದೆ ಅಥವಾ ಹಂಚಿಕೆ ಮಾಡಲಾಗುತ್ತದೆ:

 

* ಹಳೆಯ ಸರ್ಕಾರಿ ವಾಹನಗಳನ್ನು ರದ್ದುಗೊಳಿಸುವುದು

* ನಗರ ಯೋಜನೆ ಸುಧಾರಣೆಗಳು ಮತ್ತು ಕ್ರಮಗಳು

* ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಣಕಾಸು ಸುಧಾರಣೆಗಳು ಪುರಸಭೆಯ ಬಾಂಡ್‌ಗಳಿಗೆ ಸಾಲ ನೀಡುವಂತೆ ಮಾಡುವುದು

* ಪೋಲೀಸ್ ಠಾಣೆಗಳ ಮೇಲೆ ಅಥವಾ ಭಾಗವಾಗಿ ಪೊಲೀಸ್ ಸಿಬ್ಬಂದಿಗೆ ವಸತಿ

* ಏಕತಾ(ಯುನಿಟಿ) ಮಾಲ್‌ ಗಳನ್ನು ನಿರ್ಮಿಸುವುದು

* ಮಕ್ಕಳು ಮತ್ತು ಹದಿಹರೆಯದವರ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ

* ಕೇಂದ್ರ ಯೋಜನೆಗಳ ಬಂಡವಾಳ ವೆಚ್ಚದ ರಾಜ್ಯದ ಪಾಲು  

*****
 (Release ID: 1895424) Visitor Counter : 493