ಹಣಕಾಸು ಸಚಿವಾಲಯ
azadi ka amrit mahotsav g20-india-2023

​​​​​​​ಸರ್ಕಾರದ ಸಕಾರಾತ್ಮಕ ಕ್ರಮಗಳಿಂದ ಹಣದುಬ್ಬರವನ್ನು ಆರ್.ಬಿ.ಐ ಸಹಿಷ್ಣುತೆಯ ಮಿತಿಯೊಳಗೆ ತರಲಾಗಿದೆ

​​​​​​​
ಗ್ರಾಹಕ ದರದುಬ್ಬರ ಮತ್ತು ಸಗಟು ದರದುಬ್ಬರ 2022 ರ ಡಿಸೆಂಬರ್ ನಲ್ಲಿ ಕ್ರಮವಾಗಿ 5.7% ಮತ್ತು 5.0% ಕ್ಕೆ ಇಳಿಕೆ  

ಜಾಗತಿಕ ಸರಕುಗಳ ಬೆಲೆಗಳಿಂದಾದ ಹಣದುಬ್ಬರದ ಅಪಾಯಗಳು 2024 ರ ಆರ್ಥಿಕ ವರ್ಷದಲ್ಲಿ ಕಡಿಮೆಯಾಗುವ ಸಾಧ್ಯತೆ

Posted On: 31 JAN 2023 1:54PM by PIB Bengaluru

ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ [ಆರ್.ಬಿ.ಐ]ನ ತ್ವರಿತ ಹಾಗೂ ಸಮರ್ಪಕ ಕ್ರಮಗಳು ಹಣದುಬ್ಬರದ ಏರಿಕೆಯನ್ನು ನಿಯಂತ್ರಿಸಿವೆ ಮತ್ತು ಅದನ್ನು ಕೇಂದ್ರೀಯ ಬ್ಯಾಂಕ್ ನ ಸಹಿಷ್ಣುತೆಯ ಮಿತಿಯೊಳಗೆ ತರಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ.

ಗ್ರಾಹಕ ದರ ಹಣದುಬ್ಬರ ; [ಸಿಪಿಐ]

2022 ರಲ್ಲಿ ಗ್ರಾಹಕ ಬೆಲೆ ಹಣದುಬ್ಬರ ಮೂರು ಹಂತಗಳ ಮೂಲಕ ಸಾಗಿದೆ ಎಂದು ಸಮೀಕ್ಷೆ ಹೇಳಿದೆ. 2022 ರ ಏಪ್ರಿಲ್ ವರೆಗೆ ಏರುತ್ತಿರುವ ಹಂತದಲ್ಲಿ ಶೇ 7.8 ರಷ್ಟು, ನಂತರ ಆಗಸ್ಟ್ 2022 ರ ವರೆಗೆ ಸುಮಾರು ಶೇ 7.0 ರಷ್ಟು ಮತ್ತು ನಂತರ 2022 ರ ಡಿಸೆಂಬರ್ ವೇಳೆಗೆ ಶೇ 7.0 ರಷ್ಟು ಇಳಿಕೆ ಕಂಡಿದೆ. ರಷ್ಯಾ – ಉಕ್ರೇನ್ ಯುದ್ಧದ ತೀವ್ರತೆ ಕಡಿಮೆಯಾಗಿರುವ ಮತ್ತು ದೇಶದ ಕೆಲವು ಭಾಗಗಳಲ್ಲಿ ಅತಿಯಾದ ಉಷ್ಣಾಂಶದಿಂದಾಗಿ ಬೆಲೆ ಕೊಯ್ಲಿನಲ್ಲಿ ಇಳಿಕೆಯಿಂದಾಗಿ ಹಣದುಬ್ಬರ ಏರಿಕೆ ಹಂತದಲ್ಲಿತ್ತು. ಬೇಸಿಗೆಯಲ್ಲಿ ಅತಿಯಾದ ಶಾಖ ಮತ್ತು ನಂತರ ದೇಶದ ಕೆಲವು ಭಾಗಗಳಲ್ಲಿ ಅಸಮರ್ಪಕ ಮಳೆಯಿಂದಾಗಿ ಕೃಷಿ ವಲಯದ ಮೇಲೆ ಪರಿಣಾಮ ಬೀರಿತು. ಪೂರೈಕೆ ತಗ್ಗಿತು ಮತ್ತು ಇದರಿಂದ ಕೆಲವು ಪ್ರಮುಖ ಉತ್ಪನ್ನಗಳ ಬೆಲೆ ಏರಿಕೆಗೂ ಕಾರಣವಾಯಿತು. ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ [ಆರ್.ಬಿ.ಐ]ನ ತ್ವರಿತ ಮತ್ತು ಸಮರ್ಪಕ ಕ್ರಮಗಳು ಹಣದುಬ್ಬರದ ಏರಿಕೆಯನ್ನು ನಿಯಂತ್ರಣ ಮಾಡಿತು ಮತ್ತು ಅದನ್ನು ಕೇಂದ್ರೀಯ ಬ್ಯಾಂಕ್ ನ ಸಹಿಷ್ಣುತೆಯ ಮಿತಿಯೊಳಗೆ ತಂದಿತು. ಉತ್ತಮ ಮುಂಗಾರು ಕೂಡ ಅಗತ್ಯ ಪ್ರಮಾಣದ ಆಹಾರ ಪೂರೈಕೆಗೆ ನೆರವಾಯಿತು ಎಂದು ತಿಳಿಸಿದೆ.

ಸಗಟು ದರದುಬ್ಬರ ; [ಡಬ್ಲ್ಯೂ.ಪಿ.ಐ]

ಕೋವಿಡ್-19 ಸಂದರ್ಭದಲ್ಲಿ ಡಬ್ಲ್ಯೂ.ಪಿ.ಐ ಆಧಾರಿತ ಹಣದುಬ್ಬರ ಕಡಿಮೆ ಇತ್ತು ಮತ್ತು ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಂಡಂತೆ ಸಾಂಕ್ರಾಮಿಕ ನಂತರದ ಅವಧಿಯಲ್ಲಿ ಇದು ವೇಗ ಪಡೆಯಲಾರಂಭಿಸಿತು ಎಂದು ಸಮೀಕ್ಷೆಯು ಗಮನಿಸಿದೆ. ರಷ್ಯಾ – ಉಕ್ರೇನ್ ಸಂಘರ್ಷ ಅಗತ್ಯ ಸರಕುಗಳ ಮುಕ್ತ ಚಲನೆಯ ಜೊತೆಗೆ ಜಾಗತಿಕ ಪೂರೈಕೆಯಲ್ಲಾದ ವ್ಯತ್ಯಯದ ಕಾರಣದಿಂದ ಹೊರೆ ಇನ್ನಷ್ಟು ಉಲ್ಬಣಗೊಂಡಿತು. ಇದರಿಂದಾಗಿ 22 ರ ಹಣಕಾಸು ವರ್ಷದಲ್ಲಿ ಸಗಟು ಹಣದುಬ್ಬರ 13.0 ರಷ್ಟು ಏರಿಕೆಯಾಗಿದೆ. 2022 ರ ಮೇ ನಲ್ಲಿ ಡಬ್ಲ್ಯೂ.ಪಿ.ಐ ಗರಿಷ್ಠ 16.6% ರಿಂದ 2022 ರ ಸೆಪ್ಟೆಂಬರ್ ನಲ್ಲಿ 10.6% ಕ್ಕೆ ಇಳಿಕೆಯಾಯಿತು ಮತ್ತು 2022 ರ ಡಿಸೆಂಬರ್ ನಲ್ಲಿ 5.0% ಕ್ಕೆ ತಗ್ಗಿತು. ಡಬ್ಲ್ಯೂ.ಪಿ.ಐ ಏರಿಕೆಗೆ ಭಾಗಶಃ ಆಹಾರ ಹಣದುಬ್ಬರ ಏರಿಕೆ ಮತ್ತು ಭಾಗಶಃ ಆಮದು ಮಾಡಿಕೊಂಡದ್ದು ಹಣದುಬ್ಬರಕ್ಕೆ ಕಾರಣವಾಗಿದೆ. ಖಾದ್ಯ ತೈಲಗಳ ಅಂತರರಾಷ್ಟ್ರೀಯ ಬೆಲೆಗಳ ಏರಿಕೆಯ ತಾತ್ಕಾಲಿಕ ಪರಿಣಾಮ ದೇಶೀಯ ಬೆಳೆಗಳಲ್ಲಿಯೂ ಪ್ರತಿಫಲಿಸಿದೆ. 23 ರ ಹಣಕಾಸು ವರ್ಷದ ಮೊದಲಾರ್ದದಲ್ಲಿ ಭಾರತದ ವಿನಿಮಯ ದರದಲ್ಲಿ ಪ್ರತಿಕೂಲ ಪರಿಣಾಮ ಬೀರಿತು. ಇದರಿಂದಾಗಿ ಆಮದು ಪ್ರಕ್ರಿಯೆ ಒಳ ಹರಿವು ಹೆಚ್ಚಿನ ಬೆಲೆಗಳಿಗೆ ಕಾರಣವಾಯಿತು.    

ಡಬ್ಲ್ಯೂ.ಪಿ.ಐ ಮತ್ತು ಸಿ.ಪಿ.ಐ ಪ್ರವೃತ್ತಿಗಳು;

ತುಲನಾತ್ಮಕವಾಗಿ ಹೆಚ್ಚಿನ ಸಗಟು ಬೆಲೆ ಸೂಚ್ಯಂಕ [ಡಬ್ಲ್ಯೂ.ಪಿ.ಐ] ಹಣದುಬ್ಬರ ಮತ್ತು ಕಡಿಮೆ ಗ್ರಾಹಕ ಬೆಲೆ ಸೂಚ್ಯಂಕ [ಸಿಪಿಐ] ಹಣದುಬ್ಬರದ ನಡುವಿನ ವ್ಯತ್ಯಾಸ ಪ್ರಮುಖವಾಗಿ ಎರಡು ಸೂಚ್ಯಂಕಗಳ ಪ್ರಮಾಣದಲ್ಲಿ ವ್ಯತ್ಯಾಸ ಮತ್ತು ಆಮದು ಮಾಡಿದ ಸಹಾಯಧನದ ವೆಚ್ಚಗಳು ಮತ್ತು ಚಿಲ್ಲರೆ ಹಣದುಬ್ಬರದ ಮಂದತಿಯ ಪರಿಣಾಮದಿಂದಾಗಿ 2022 ರ ಮೇನಲ್ಲಿ ಈ ವಲಯದಲ್ಲಿ ವಿಸ್ತರಣೆಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಆದಾಗ್ಯೂ ಹಣದುಬ್ಬರದ ಎರಡು ಕ್ರಮಗಳ ನಡುವಿನ ಅಂತರ ಅಂದಿನಿಂದ ಕಡಿಮೆಯಾಗಿ, ಏಕಮುಖದತ್ತ ತನ್ನ ಪ್ರವೃತ್ತಿಯನ್ನು ಪ್ರದರ್ಶಿಸಿದೆ.  

ಡಬ್ಲ್ಯೂ.ಪಿ.ಐ ಮತ್ತು ಸಿ.ಪಿ.ಐ ಸೂಚ್ಯಂಕಗಳ ನಡುವಿನ ಏಕಮುಖ ಚಲನೆ ಮುಖ್ಯವಾಗಿ ಎರಡು ಅಂಶಗಳಿಂದ ನಡೆಸಲ್ಪಟ್ಟಿದೆ ಎಂದು ಸಮೀಕ್ಷೆ ಗಮನಿಸಿದೆ. ಮೊದಲನೆಯದಾಗಿ ಕಚ್ಚಾತೈಲ, ಕಬ್ಬಿಣ, ಅಲ್ಯೂಮಿನಿಯಂ ಮತ್ತು ಹತ್ತಿಯಂತಹ ಸರಕುಗಳಲ್ಲಿ ಸುಗಮವಾಗಿ ಡಬ್ಲ್ಯೂ.ಪಿ.ಐ ಕಡಿಮೆಯಾಗಲು ಕಾರಣವಾಗಿದೆ. ಎರಡನೆಯದಾಗಿ ಸೇವೆಗಳ ದರ ಹೆಚ್ಚಳದಿಂದಾಗಿ ಸಿಪಿಐ ಹಣದುಬ್ಬರ ಏರಿಕೆ ಕಂಡಿದೆ.

ದೇಶೀಯ ಚಿಲ್ಲರೆ ಹಣದುಬ್ಬರ;

ಚಿಲ್ಲರೆ ಹಣದುಬ್ಬರ ಮುಖ್ಯವಾಗಿ ಕೃಷಿ ಮತ್ತು ಸಂಬಂಧಿತ ವಲಯ, ವಸತಿ, ಜವಳಿ ಮತ್ತು ಔಷಧ ವಲಯಗಳಿಂದ ಉಂಟಾಗುತ್ತದೆ. 23 ರ ಹಣಕಾಸು ವರ್ಷದಲ್ಲಿ ಸಮೀಕ್ಷೆಯು ಗಮನಿಸಿರುವಂತೆ ಮುಖ್ಯವಾಗಿ ಹೆಚ್ಚಿನ ಆಹಾರ ದರದುಬ್ಬರದಿಂದ ಮುನ್ನಡೆದಿದೆ ಎಂದು ಸಮೀಕ್ಷೆ ಹೇಳಿದೆ. 2022 ರ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ಆಹಾರ ದರದುಬ್ಬರ ಶೇ 4.2 ರಿಂದ ಶೇ 8.6 ರ ನಡುವೆ ಇತ್ತು. ಜಾಗತಿಕ ಉತ್ಪಾದನೆಯಲ್ಲಿನ ಕೊರತೆ ಮತ್ತು ವಿವಿಧ ದೇಶಗಳಿಂದ ರಫ್ತು ತೆರಿಗೆ ಹೆಚ್ಚಳದಿಂದಾಗಿ 22 ರ ಹಣಕಾಸು ವರ್ಷದಲ್ಲಿ ಖಾದ್ಯ ತೈಲಗಳ ಅಂತರರಾಷ್ಟ್ರೀಯ ಬೆಲೆಗಳಲ್ಲಿ ಏರಿಕೆಯಾಯಿತು. ಭಾರತ ತನ್ನ ಖಾದ್ಯ ತೈಲಗಳ ಬೇಡಿಕೆಯ ಶೇ 60 ರಷ್ಟು ಪ್ರಮಾಣ ಆಮದು ಮೇಲೆ ಅವಲಂಬಿತವಾಗಿದೆ. ಅಂತರರಾಷ್ಟ್ರೀಯ ಬೆಲೆಗಳ ಚಲನೆಗಳಿಗೆ ಇದು ಕಾರಣವಾಗಿವೆ.  

ಭಾರತದ ಕೇಂದ್ರಾಡಳಿತ ಪ್ರದೇಶಗಳು [ಯುಟಿಗಳು] ಮತ್ತು ರಾಜ್ಯಗಳಲ್ಲಿ ಚಿಲ್ಲರೆ ದರದುಬ್ಬರದಲ್ಲಿ ಇದು ಗಣನೀಯ ವ್ಯತ್ಯಾಸಗಳಿಗೆ ಕಾರಣವಾಯಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಗರ ಭಾಗದ ದರದುಬ್ಬರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಹೆಚ್ಚಾಗಿತ್ತು, ಇದಕ್ಕೆ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ದರದುಬ್ಬರ ಅಲ್ಪ ಪ್ರಮಾಣದಷ್ಟು ಹೆಚ್ಚಿತ್ತು.  

ಬೆಲೆ ಏರಿಕೆಯಿಂದ ದುರ್ಬಲ ವರ್ಗಗಳನ್ನು ರಕ್ಷಿಸಲು ಸರ್ಕಾರ 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು 2023 ರ ಜನವರಿ 1 ರಂದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಎಂಬ ಹೊಸ ಸಮಗ್ರ ಆಹಾರ ಭದ್ರತಾ ಯೋಜನೆಯನ್ನು ಪ್ರಾರಂಭಿಸಿತು.  

ಬೆಲೆ ಸ್ಥಿರತೆಗಾಗಿ ನೀತಿ ಕ್ರಮಗಳು;

ಆರ್.ಬಿ.ಐ ನ ಹಣಕಾಸು ನೀತಿ ಸಮಿತಿಯು ದ್ವವ್ಯ ಹೊಂದಾಣಿಕೆ ಸೌಲಭ್ಯ [ಎಲ್.ಎ.ಎಫ್] ದಡಿ ರೆಪೋ ದರವನ್ನು 225 ಮೂಲ ಅಂಕಗಳಿಂದ ಶೇ 4.0 ರಿಂದ ಶೇ 6.8ಕ್ಕೆ 2022 ರ ಮೇ ಮತ್ತು ಡಿಸೆಂಬರ್ ನಡುವೆ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರ ಹಲವಾರು ವಿತ್ತೀಯ ಕ್ರಮಗಳನ್ನು ಕೈಗೊಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿತ, ಗೋಧಿ ಉತ್ಪನ್ನಗಳ ರಫ್ತು ನಿಷೇಧ, ಅಕ್ಕಿ ರಫ್ತು ಮೇಲೆ ಸುಂಕ ಹೇರಿಕೆ, ಬೇಳೆಕಾಳುಗಳ ಮೇಲೆ ಆಮದು ಸುಂಕ ಮತ್ತು ಸೆಸ್ ಇಳಿಕೆ, ಸುಂಕಗಳನ್ನು ಕ್ರಮಬದ್ಧಗೊಳಿಸುವ ಮತ್ತು ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನು ಮಿತಿ ನಿಗದಿ, ಈರುಳ್ಳಿ ಮತ್ತು ಬೇಳೆಕಾಳುಗಳ ಕಾಪು ದಾಸ್ತಾನು ನಿಯಂತ್ರಣ ಮತ್ತು ಉತ್ಪಾದನಾ ವಲಯದ ಉತ್ಪನ್ನಗಳ ಕಚ್ಚಾ ವಸ್ತುಗಳ ಮೇಲೆ ಆಮದು ಸುಂಕವನ್ನು ಕ್ರಮಬದ್ಧಗೊಳಿಸುವ ಕ್ರಮಗಳನ್ನು ತೆಗೆದುಕೊಂಡಿದೆ.  

ಭಾರತದ ಹಣದುಬ್ಬರ ನಿರ್ವಹಣೆ ವಿಶೇಷವಾಗಿ ಗಮನಾರ್ಹವಾಗಿದೆ ಮತ್ತು ಆಧುನಿಕ  ಆರ್ಥಿಕತೆಯಲ್ಲಿ ಇನ್ನೂ ಕಠಿಣವಾಗಿರುವ ಹಣದುಬ್ಬರ ದರಗಳೊಂದಿಗೆ ವ್ಯತಿರಿಕ್ತವಾಗಿ ಹಿಡಿತ ಸಾಧಿಸುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಮುಂದುವರೆದ ಆರ್ಥಿಕತೆಯಲ್ಲಿ ನಿರೀಕ್ಷಿತ ನಿಧಾನಗತಿಯ ಕಾರಣದಿಂದಾಗಿ ಜಾಗತಿಕ ಸರಕುಗಳ ಬೆಲೆಗಳಿಂದ ಬರುವ ಹಣದುಬ್ಬರದ ಅಪಾಯಗಳು 23 ರ ಹಣಕಾಸು ವರ್ಷಕ್ಕಿಂತ 23 ರ ಹಣಕಾಸು ವರ್ಷದಲ್ಲಿ ಕಡಿಮೆಯಾಗಬಹುದು ಮತ್ತು 24 ರ ಹಣಕಾಸು ವರ್ಷದಲ್ಲಿ ಹಣದುಬ್ಬರದ ಸವಾಲಿನ ಕಠಿಣತೆ ತಗ್ಗಬಹುದು ಎಂದು ಸಮೀಕ್ಷೆ ಅಂದಾಜು ಮಾಡಿದೆ.

*****(Release ID: 1895066) Visitor Counter : 122