ಚುನಾವಣಾ ಆಯೋಗ

ಮೇಘಾಲಯ, ನಾಗಾಲ್ಯಾಂಡ್‌ ಹಾಗೂ ತ್ರಿಪುರ ವಿಧಾನಸಭೆಗಳ ಸಾರ್ವತ್ರಿಕ ಚುನಾವಣೆ 2023- ಈ ಅವಧಿಯಲ್ಲಿ 1951ರ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 126ರ ಅನ್ವಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ

Posted On: 28 JAN 2023 9:11AM by PIB Bengaluru

ಮೇಘಾಲಯ, ನಾಗಾಲ್ಯಾಂಡ್‌ ಹಾಗೂ ತ್ರಿಪುರ ವಿಧಾನಸಭೆಗಳ ಸಾರ್ವತ್ರಿಕ ಚುನಾವಣೆ- 2023ರ ವೇಳಾಪಟ್ಟಿ 18.01.2023ರಂದು ಘೋಷಣೆಯಾಗಿದ್ದು ರಾಜ್ಯವಾರು ವೇಳಾಪಟ್ಟಿ ವಿವರ ಹೀಗಿದೆ.

 

ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಹೆಸರು

ಹಂತ ಮತ್ತು ಮತದಾನ ದಿನಾಂಕ

ಮೇಘಾಲಯ

ಒಂದೇ ಹಂತ- 27.02.2023

ನಾಗಾಲ್ಯಾಂಡ್‌

ಒಂದೇ ಹಂತ- 27.02.2023

ತ್ರಿಪುರ

ಒಂದೇ ಹಂತ- 16.02.2023

 
ಈ ನಿಟ್ಟಿನಲ್ಲಿ, 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 126ರ ಅನ್ವಯ ಮತದಾನ ಮುಗಿಯುವ ಗಂಟೆಯ 48 ಗಂಟೆಗೂ ಮೊದಲು ಚುನಾವಣೆ ಸಂಬಂಧಿಸಿದ ಯಾವುದೇ ಸುದ್ದಿ, ವಿಷಯವನ್ನು ದೂರದರ್ಶನ ಅಥವಾ ಅದೇ ರೀತಿಯ ಮಾಧ್ಯಮಗಳ ಪ್ರಸಾರ ಮಾಡುವುದನ್ನು ನಿರ್ಬಂಧಿಸಿರುವುದನ್ನು ಈ ಮೂಲಕ ಎಲ್ಲಾ ಮಾಧ್ಯಮಗಳ ಗಮನಕ್ಕೆ ತರಲಾಗುತ್ತಿದೆ. ಉಲ್ಲೇಖಿಸಲಾದ ಸೆಕ್ಷನ್‌- 26ರ ಮಹತ್ವದ ಅಂಶಗಳ ವಿವರ ಈ ಮುಂದಿನಂತಿದೆ.
 
(126. ಮತದಾನ ಮುಕ್ತಾಯಕ್ಕೆ ನಿಗದಿಪಡಿಸಲಾದ ಅವಧಿಗೂ 48 ಗಂಟೆ ಮೊದಲು ಸಾರ್ವಜನಿಕ ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ- 
 
1. ಯಾವುದೇ ವ್ಯಕ್ತಿಯು:
( a) ......................
 
(b) ಸಿನಿಮಾಟೋಗ್ರಾಫ್, ದೂರದರ್ಶನ ಅಥವಾ ಇತರ ಯಾವುದೇ ರೀತಿಯ ಸಾಧನಗಳ ಮೂಲಕ ಚುನಾವಣೆಗೆ ಸಂಬಂಧಪಟ್ಟ ಯಾವುದೇ ವಿಷಯವನ್ನು ಸಾರ್ವಜನಿಕರಿಗೆ ಪ್ರಸಾರ ಮಾಡುವಂತಿಲ್ಲ
(c)...........................
 
ಮತದಾನ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿ ಮತದಾನ ಮುಕ್ತಾಯವಾಗುವ 48 ಗಂಟೆಗೂ ಮೊದಲು ಆ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಲ್ಲಿ ಇರುವಂತಿಲ್ಲ
 
2. ಯಾವುದೇ ವ್ಯಕ್ತಿಯು ಉಪ-ವಿಭಾಗ (1)ರ ನಿಬಂಧನೆಗಳನ್ನು ಉಲ್ಲಂಘಿಸಿದರೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
 
3. ಈ ವಿಭಾಗದಲ್ಲಿ, ʼಚುನಾವಣೆ ವಿಷಯʼ ಅಭಿವ್ಯಕ್ತಿ ಎಂದರೆ ಯಾವುದಾದರೂ ಎಂದರ್ಥ. ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದಾದ ಅಥವಾ ಪರಿಣಾಮ ಬೀರುವ ಉದ್ದೇಶ ಇಲ್ಲವೇ ಆ ರೀತಿಯ ಲೆಕ್ಕಾಚಾರವಿರುವ ವಿಷಯ.
 
4. ಚುನಾವಣೆಯ ಸಂದರ್ಭದಲ್ಲಿ ಕೆಲವೊಮ್ಮೆ ಟಿವಿ ಸುದ್ದಿ ಚಾನೆಲ್‌ಗಳು ತಮ್ಮ ಪ್ಯಾನೆಲ್ ಚರ್ಚೆ/ ಸಂವಾದ ಮತ್ತು ಇತರ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತಂತೆ ಸುದ್ದಿ ಪ್ರಸಾರ ಮಾಡಿ 1951 ರ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 126ರ ನಿಬಂಧನೆಗಳ ಉಲ್ಲಂಘನೆ ಆರೋಪಗಳು ಕೇಳಿಬರುತ್ತವೆ. ಈ ಸಂಬಂಧ ಆಯೋಗವು ಈ ಹಿಂದೆಯೇ ಸ್ಪಷ್ಟನೆ ನೀಡಿದ್ದು, ಉಲ್ಲೇಖಿಸಲಾದ ಕಾಯ್ದೆಯ ಸೆಕ್ಷನ್ 126ರ ಪ್ರಕಾರ ಚುನಾವಣೆ ಸಂಬಂಧಿತ ಯಾವುದೇ ವಿಷಯವನ್ನು ದೂರದರ್ಶನ ಅಥವಾ ಅದೇರೀತಿಯ ಯಾವುದೇ ಸಾಧನಗಳ ಮೂಲಕ, ಒಂದು ಕ್ಷೇತ್ರದಲ್ಲಿ ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಗಂಟೆ ಕೊನೆಗೊಳ್ಳುವ 48 ಗಂಟೆ ಅವಧಿಯಲ್ಲಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಿದೆ. ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಅಥವಾ ಪರಿಣಾಮ ಬೀರುವ ಉದ್ದೇಶದ ಅಥವಾ ಆ ರೀತಿಯ ಲೆಕ್ಕಾಚಾರವಿರುವ ಯಾವುದೇ ವಿಷಯವನ್ನು ಸಹ "ಚುನಾವಣೆ ವಿಷಯ" ಎಂದೇ ವ್ಯಾಖ್ಯಾನಿಸಲಾಗಿದೆ. ಸೆಕ್ಷನ್ 126ರಡಿ ಉಲ್ಲೇಖಿಸಿರುವ ನಿಬಂಧನೆಗಳನ್ನು ಉಲ್ಲಂಘಿಸಿದರೆ ಎರಡು ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದು ಪುನರುಚ್ಚರಿಸಿದೆ.
 
5. ಟಿವಿ/ ರೇಡಿಯೋ ಚಾನೆಲ್‌ಗಳು ಮತ್ತು ಕೇಬಲ್ ನೆಟ್‌ವರ್ಕ್‌ಗಳು/ ಇಂಟರ್ನೆಟ್ ವೆಬ್‌ಸೈಟ್‌ಗಳು/ಸಾಮಾಜಿಕ ತಾಲತಾಣ ಮಾಧ್ಯಮ ವೇದಿಕೆಗಳು ಸೆಕ್ಷನ್ 126 ರಲ್ಲಿ ಉಲ್ಲೇಖಿಸಿದಂತೆ ಮತದಾನ ಮುಕ್ತಾಯದ ಅವಧಿಗೂ ಮುನ್ನ 48 ಗಂಟೆಗಳ ಅವಧಿಯಲ್ಲಿ ಚುನಾವಣೆಗೆ ಸಂಬಂಧಪಟ್ಟ ವಿಷಯವನ್ನು ಪ್ರಸಾರ/ ಪ್ರದರ್ಶಿಸುವಂತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಯೋಗವು ಪುನರುಚ್ಚರಿಸುತ್ತದೆ. ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ(ಗಳ) ಭವಿಷ್ಯವನ್ನು ನಿರ್ಧರಿಸುವಂತಹ ಪ್ರಚಾರ ಮಾಡುವುದು/ ಪೂರ್ವಾಗ್ರಹಪೀಡಿತರನ್ನಾಗಿಸುವುದು ಅಥವಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ/ ಪರಿಣಾಮ ಬೀರಬಹುದು ಎಂದು ವ್ಯಾಖ್ಯಾನಿಸಬಹುದಾದ ಅಂಶಗಳನ್ನು ಪ್ಯಾನಲ್‌ ಚರ್ಚೆ/ ಸಂವಾದದಲ್ಲಿ ಭಾಗವಹಿಸುವವರು ಪ್ರಸ್ತಾಪಿಸುವಂತಿಲ್ಲ. ಹಾಗೆಯೇ ಯಾವುದೇ ರೀತಿಯಲ್ಲಿ ಮತದಾರರನ್ನು ಪ್ರಭಾವಿತರನ್ನಾಗಿಸುವ ವಿಷಯಗಳು, ಅಭಿಪ್ರಾಯ, ಮನವಿಯ ಪ್ರಸಾರವನ್ನೂ ನಿರ್ಬಂಧಿಸಲಾಗಿದೆ. ಹಾಗೆಯೇ ಮತದಾರರ ಅಭಿಪ್ರಾಯ ಸಂಗ್ರಹ ಪ್ರದರ್ಶನ, ಸಮೀಕ್ಷೆಗಳು, ಚರ್ಚೆ, ವಿಶ್ಲೇಷಣೆಗಳು, ದೃಶ್ಯಾವಳಿ, ಧ್ವನಿಮುದ್ರಿಕೆಗಳನ್ನು ಪ್ರಸಾರ ಮಾಡುವುದು ಸಹ ನಿರ್ಬಂಧ ವ್ಯಾಪ್ತಿಯಲ್ಲಿದೆ.
 
6. ಈ ಸಂಬಂಧದಲ್ಲಿ, 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 126ರ ಅನ್ವಯ ಗಮನಕ್ಕೆ ತರುವುದು ಏನೆಂದರೆ, ಗೊತ್ತುಪಡಿಸಿದ ನಿರ್ಬಂಧದ ಅವಧಿಯಲ್ಲಿ ಮತಗಟ್ಟೆ ಸಮೀಕ್ಷೆ ನಡೆಸುವುದು, ಅದರ ಫಲಿತಾಂಶವನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ. ಅಂದರೆ ಮತದಾನದ ಅವಧಿ ಮುಕ್ತಾಯಕ್ಕೆ ಗೊತ್ತುಪಡಿಸಿದ ಗಂಟೆ ಮತ್ತು ಅನಂತರದ ಅರ್ಧ ಗಂಟೆ ಬಳಿಕ ರಾಜ್ಯಗಳಲ್ಲಿ ಕೊನೆಯ ಹಂತದ ಮತದಾನ ಮುಕ್ತಾಯ ಅವಧಿ.
 
* ಸೆಕ್ಷನ್ 126ರನ್ವಯ ಗೊತ್ತುಪಡಿಸಿದ ಅವಧಿ ಹೊರತುಪಡಿಸಿ ಅವಧಿಯಲ್ಲಿ ಯಾವುದೇ ಟಿವಿ/ರೇಡಿಯೋ/ಕೇಬಲ್/ಎಫ್‌ಎಂ ವಾಹಿನಿಗಳು/ ಇಂಟರ್‌ನೆಟ್ ವೆಬ್‌ಸೈಟ್‌ಗಳು/ಸಾಮಾಜಿಕ ಜಾಲತಾಣ ಮಾಧ್ಯಮ ವೇದಿಕೆಗಳು ಯಾವುದೇ ಕಾರ್ಯಕ್ರಮ ಪ್ರಸಾರ ಸಂಬಂಧ ಅಗತ್ಯ ಅನುಮತಿಗಾಗಿ ರಾಜ್ಯ/ ಜಿಲ್ಲೆ/ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಲು ಅವಕಾಶವಿರುತ್ತದೆ (ಆದರೆ ಮತಗಟ್ಟೆ ಸಮೀಕ್ಷೆ ಪ್ರಸಾರ ಹೊರತುಪಡಿಸಿ). ಆದರೆ ಪ್ರಸಾರ ಮಾಡುವ ಕಾರ್ಯಕ್ರಮಗಳು ಮಾದರಿ ನೀತಿ ಸಂಹಿತಿಯ ನಿಬಂಧನೆಗಳಿಗೆ ಪೂರಕವಾಗಿರಬೇಕು. ಹಾಗೆಯೇ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕೇಬಲ್‌ ನೆಟ್‌ವಕರ್ಸ್‌ (ನಿಯಂತ್ರಣ) ಕಾಯ್ದೆಯಡಿ ಉಲ್ಲೇಖಿಸಿರುವ ಸಭ್ಯತೆ, ಕೋಮು ಸೌಹಾರ್ದ ಕಾಪಾಡುವುದು ಸೇರಿದಂತೆ ಗೊತ್ತುಪಡಿಸಿದ ಇತರೆ ಸಂಹಿತೆಯ ಚೌಕಟ್ಟಿನಲ್ಲಿರಬೇಕು. ಎಲ್ಲ ಬಗೆಯ ಇಂಟರ್‌ನೆಟ್‌ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮಗಳು 2000ನೇ ವರ್ಷ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ 2021ರ ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಹಾಗೂ ಡಿಜಿಟಲ್‌ ಮಾಧ್ಯಮ ಸಂಹಿತೆ) ನಿಯಮಾವಳಿಗಳು ಹಾಗೂ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳ ನಿಬಂಧನೆಗಳನ್ನು ಪಾಲಿಸಬೇಕು.
 
ದಿನಾಂಕ 25ನೇ ಅಕ್ಟೋಬರ್‌ 2013ರ No-491/SM/2013/Communication ಅನ್ವಯ ಎಲ್ಲ ರಾಜಕೀಯ ಪಕ್ಷಗಳು ತಮ್ಮ ವೇದಿಕೆಗಳಲ್ಲಿ ಪ್ರಕಟಿಸುವ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ಆಯೋಗದ ಆದೇಶ ಸಂಖ್ಯೆ 509/75/2004/JS-I, ದಿನಾಂಕ 15ನೇ ಏಪ್ರಿಲ್, 2004ರ ಪ್ರಕಾರ ರಾಜ್ಯ/ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾದ ಸಮಿತಿಗಳಿಂದ ಪೂರ್ವ-ಪ್ರಮಾಣೀಕರಣ ಪಡೆಯುವುದು ಅಗತ್ಯ.
 
8. ಎಲ್ಲ ಮುದ್ರಣ ಮಾಧ್ಯಮಗಳ ಗಮನಕ್ಕೆ ತರುವುದು ಏನೆಂದರೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ದಿನಾಂಕ 30.07.2010 ಮತ್ತು ಚುನಾವಣೆಯ ಸಮಯದಲ್ಲಿ ಪಾಲಿಸಲು ಅನುಸರಿಸಲು 'ಪತ್ರಿಕೋದ್ಯಮ ನಡವಳಿಕೆಯ ನಿಯಮಾವಳಿ- 2020'ಕ್ಕೆ ಸಂಬಂಧಪಟ್ಟಂತೆ ಹೊರಡಿಸಿದ ಮಾರ್ಗಸೂಚಿಗಳಿಗೆ ಪಾಲಿಸಬೇಕು
 
9. ಎನ್‌ಬಿಎಸ್‌ಎ ದಿನಾಂಕ 3ನೇ ಮಾರ್ಚ್, 2014ರಂದು ಹೊರಡಿಸಿದ "ಚುನಾವಣಾ ಸಂಬಂಧಿತ ಪ್ರಸಾರಕ್ಕೆ ಮಾರ್ಗಸೂಚಿʼಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳ ಗಮನಕ್ಕೆ ತರಲಾಗಿದೆ.
 
10. ಇಂಟರ್‌ನೆಟ್‌ ಮತ್ತು ಮೊಬೈಲ್ ಅಸೋಸಿಯೇಷನ್ ​​​​ಆಫ್ ಇಂಡಿಯಾ (ಐಎಎಂಎಐ) ಸಂಸ್ಥೆಯು 2019ರ ಲೋಕಾಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಎಲ್ಲ ಸಾಮಾಜಿಕ ಜಾಲತಾಣ ಮಾಧ್ಯಮ ವೇದಿಗಳು ಮುಕ್ತ, ನ್ಯಾಯಸಮ್ಮತ ಹಾಗೂ ನೈತಿಕವಾಗಿ ಕಾರ್ಯ ನಿರ್ವಹಿಸುವ ಸಂಬಂಧ "ಸ್ವಯಂಪ್ರೇರಿತ ನೀತಿ ಸಂಹಿತೆʼಯನ್ನು ಅಭಿವೃದ್ಧಿಪಡಿಸಿದೆ. ಐಎಎಂಎಐ ಒಪ್ಪಿರುವಂತೆ 23.09.2019ರ ಪತ್ರದ ಅನ್ವಯ ʼಸ್ವಯಂಪ್ರೇರಿತ ನೀತಿ ಸಂಹಿತೆʼಯನ್ನು ಎಲ್ಲ ಚುನಾವಣೆಗಳನ್ನು ಪಾಲಿಸಲಾಗುತ್ತದೆ. ಅದರಂತೆ 2023ರಲ್ಲಿ ನಡೆಯಲಿರುವ ಮೇಘಾಲಯ, ನಾಗಾಲ್ಯಾಂಡ್‌ ಹಾಗೂ ತ್ರಿಪುರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳಿಗೂ ಈ ಸ್ವಯಂಪ್ರೇರಿತ ನೀತಿ ಸಂಹಿತೆ ಅನ್ವಯವಾಗಲಿದೆ. ಆ ಹಿನ್ನೆಲೆಯಲ್ಲಿ 20ನೇ ಮಾರ್ಚ್‌ 2019ರ ಅಂಶಗಳನ್ನು ಸಂಬಂಧಪಟ್ಟ ಎಲ್ಲ ಸಾಮಾಜಿಕ ಜಾಲತಾಣ ಮಾಧ್ಯಮ ವೇದಿಕೆಗಳ ಗಮನಕ್ಕೆ ತರಲಾಗುತ್ತಿದೆ.
 
11. ಐಟಿ (ಮಧ್ಯಂತರ ಮಾರ್ಗಸೂಚಿಗಳು ಹಾಗೂ ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿಗಳು 2021ರ ಅಂಶಗಳು ಅನ್ವಯವಾಗುವ ಎಲ್ಲೆಡೆಯೂ ಬಳಕೆಯಾಗಲಿದೆ.
 
12. ಮುಂದುವರಿದಂತೆ, ರಾಜ್ಯ/ ಜಿಲ್ಲಾ ಮಟ್ಟದಲ್ಲಿ ಎಂಸಿಎಂಸಿ ಸಮಿತಿಯಿಂದ ರಾಜಕೀಯ ಜಾಹೀರಾತುಗಳ ವಿಷಯಗಳನ್ನು ಪೂರ್ವ ಪ್ರಮಾಣೀಕರಿಸದ ಹೊರತು, ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಅಥವಾ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ಮತದಾನದ ದಿನ ಹಾಗೂ ಮತದಾನ ದಿನದ ಮೊದಲು ಮುದ್ರಣ ಮಾಧ್ಯಮಗಳು ಯಾವುದೇ ಜಾಹೀರಾತನ್ನು ಪ್ರಕಟಿಸುವಂತಿಲ್ಲ. ಅರ್ಜಿದಾರರು ಅಂತಹ ರಾಜಕೀಯ ಜಾಹೀರಾತುಗಳ ಪ್ರಕಟಣೆ ಮುದ್ರಣವಾಗುವ ದಿನಾಂಕದ ಎರಡು ದಿನ ಮೊದಲೇ ಎಂಸಿಎಂಸಿಗೆ ಅರ್ಜಿ ಸಲ್ಲಿಸಬೇಕು.
 
ಸಂಬಂಧಪಟ್ಟ ಎಲ್ಲ ಮಾಧ್ಯಮಗಳು ಮೇಲ್ಕಂಡ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
-----------------------
ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ 30.07.2010ರಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ಚುನಾವಣೆ ಸಂದರ್ಭದಲ್ಲಿ ಅನುಸರಿಸುವುದು:
 
1. ಚುನಾವಣೆ ಮತ್ತು ಅಭ್ಯರ್ಥಿಗಳ ಕುರಿತಂತೆ ವಸ್ತುನಿಷ್ಠ ವರದಿಗಳನ್ನು ನೀಡುವುದು ಪತ್ರಿಕೆಗಳ ಆದ್ಯ ಕರ್ತವ್ಯ. ಚುನಾವಣೆ ಸಂದರ್ಭದಲ್ಲಿ ಪತ್ರಿಕೆಗಳು ಅನಾರೋಗ್ಯಕರ ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಳ್ಳಬಾರದು, ಯಾವುದೇ ಅಭ್ಯರ್ಥಿ/ ಪಕ್ಷ, ಘಟನೆ ಬಗ್ಗೆ ಉತ್ಪ್ರೇಕ್ಷಿತ ವರದಿಗಳನ್ನು ಮುದ್ರಿಸಬಾರದು. ಪ್ರಾಯೋಗಿಕವಾಗಿ, ನಿಕಟ ಸ್ಪರ್ಧೆ ಇರುವ ಎರಡು ಅಥವಾ ಮೂರು ಅಭ್ಯರ್ಥಿಗಳು ಎಲ್ಲಾ ಮಾಧ್ಯಮಗಳ ಗಮನ ಸೆಳೆಯುತ್ತಾರೆ. ಆದರೆ ವಾಸ್ತವದ ಪ್ರಚಾರದ ಬಗ್ಗೆ ವರದಿ ಮಾಡುವಾಗ, ಪತ್ರಿಕೆಯು ಅಭ್ಯರ್ಥಿಯು ಎತ್ತಿದ ಗಂಭೀರ ಅಂಶ, ವಿಚಾರವನ್ನು ಬಿಟ್ಟು ಅವನ ಅಥವಾ ಅವಳ ಎದುರಾಳಿಯ ನಡೆಸುವ ವಾಗ್ದಾಳಿಗಷ್ಟೇ ಸೀಮಿತಗೊಳಿಸಬಾರದು.
 
2. ಕೋಮು ಅಥವಾ ಜಾತಿ ಆಧಾರಿತವಾಗಿ ಚುನಾವಣಾ ಪ್ರಚಾರ ನಡೆಸುವುದನ್ನು ಚುನಾವಣಾ ನಿಯಮಾವಳಿಗಳಡಿ ನಿಷೇಧಿಸಲಾಗಿದೆ. ಹಾಗಾಗಿ ಪತ್ರಿಕೆಗಳು ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ಜನಗಳ ನಡುವೆ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಮೂಡಿಸುವ, ಕೆರಳಿಸುವ ಉತ್ತೇಜಿಸುವ ವರದಿಗಳನ್ನು ಮುದ್ರಿಸಬಾರದು.
 
3. ಯಾವುದೇ ಅಭ್ಯರ್ಥಿಯ ವೈಯಕ್ತಿಕ ವಿಚಾರ, ನಡತೆ, ನಡೆವಳಿಕೆಗೆ ಸಂಬಂಧಪಟ್ಟಂತೆ ಅಥವಾ ಯಾವುದೇ ಅಭ್ಯರ್ಥಿ ಇಲ್ಲವೇ ಅವರ ಉಮೇದುವಾರಿಕೆ ಸಲ್ಲಿಕೆ ಅಥವಾ ಹಿಂಪಡೆಯುವಿಕೆ ಹಾಗೂ ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಯ ರಾಜಕೀಯ ಭವಿಷ್ಯಕ್ಕೆ ಚ್ಯುತಿ ಉಂಟಾಗುವ ರೀತಿಯಲ್ಲಿ ಸುಳ್ಳು ಅಥವಾ ನಿರ್ಣಾಯಕ ಹೇಳಿಕೆ ಪ್ರಕಟಿಸುವುದನ್ನು ನಿಯಂತ್ರಿಸಿಕೊಳ್ಳಬೇಕು. ಯಾವುದೇ ಅಭ್ಯರ್ಥಿ/ ಪಕ್ಷದ ವಿರುದ್ಧ ಆರೋಪಗಳನ್ನು ಪರಿಶೀಲಿಸದೆ ಏಕಾಏಕಿ ಪತ್ರಿಕೆಗಳು ಮುದ್ರಿಸುವಂತಿಲ್ಲ.
 
4. ಪತ್ರಿಕೆಗಳು ಯಾವುದೇ ಅಭ್ಯರ್ಥಿ/ ಪಕ್ಷಗಳಿಂದ ಯಾವುದೇ ರೀತಿಯ ಪ್ರಚೋದನೆ, ಹಣ ಅಥವಾ ಇತರೆ ಯಾವುದೇ ರೀತಿಯ ಪ್ರಭಾವಕ್ಕೂ ಒಳಗಾಗುವಂತಿಲ್ಲ. ಯಾವುದೇ ಅಭ್ಯರ್ಥಿ/ಪಕ್ಷದಿಂದ ಅಥವಾ ಅವರ ಪರವಾಗಿ ಯಾವುದೇ ರೀತಿಯ ಆತಿಥ್ಯ, ಯಾವುದೇ ನೆರವು, ಸೌಲಭ್ಯವನ್ನೂ ಪಡೆಯುವಂತಿಲ್ಲ.
 
5. ಪತ್ರಿಕೆಗಳು ಯಾವುದೇ ನಿರ್ದಿಷ್ಟ ಅಭ್ಯರ್ಥಿ/ ಪಕ್ಷದ ಪರವಾಗಿ ಪ್ರಚಾರ ನಡೆಸುವಂತಿರಬಾರದು. ಆ ರೀತಿ ಮಾಡಿದರೆ ಇತರೆ ಅಭ್ಯರ್ಥಿ/ ಪಕ್ಷಗಳ ಪ್ರತಿಕ್ರಿಯೆಯನ್ನೂ ದಾಖಲಿಸುವ ಹಕ್ಕು ಮಂಡಿಸಲು ಅವಕಾಶವಿರುತ್ತದೆ.
 
6. ಆಡಳಿತಾರೂಢ ಪಕ್ಷ/ ಸರಕಾರದ ಸಾಧನೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರ ತೆರಿಗೆ ಹಣ ಪಡೆದು ಪತ್ರಿಕೆಗಳು ಯಾವುದೇ ಜಾಹೀರಾತು ಪ್ರಕಟಿಸುವಂತಿಲ್ಲ.
 
7. ಪತ್ರಿಕೆಗಳು ಕೇಂದ್ರ ಚುನಾವಣಾ ಆಯೋಗ/ ಚುನಾವಣಾಧಿಕಾರಿಗಳು ಅಥವಾ ಮುಖ್ಯ ಚುನಾವಣಾಧಿಕಾರಿಗಳು ಕಾಲ ಕಾಲಕ್ಕೆ ಹೊರಡಿಸುವ ಎಲ್ಲ ನಿರ್ದೇಶನ/ ಆದೇಶಗಳು/ ಸೂಚನೆಗಳನ್ನು ಕಟ್ಟುನಿಟ್ಟಾಗಿ ಗಮನಿಸಬೇಕು.
 
ಚುನಾವಣಾ ಆಯೋಗ/ಚುನಾವಣಾಧಿಕಾರಿಗಳು ಅಥವಾ ಮುಖ್ಯ ಚುನಾವಣಾಧಿಕಾರಿಗಳು ಕಾಲಕಾಲಕ್ಕೆ ನೀಡಲಾಗುತ್ತದೆ.
-------------------------------
ಪತ್ರಿಕಾ ನಡೆವಳಿಕೆ ನಿಯಮಾವಳಿಗಳು- 2020
 
1. ಪತ್ರಿಕೆಯು ಪ್ರಕಟಿಸುವ ನಾನಾ ವರದಿಗಳ ಹೊರತಾಗಿ ಪ್ರಕಟಿಸುವ ಪುರವಣಿ/ ವಿಶೇಷ ಸಂಚಿಕೆಗಳಿಗೆ ಸಂಬಂಧಪಟ್ಟಂತೆ ʼಮಾರುಕಟ್ಟೆ ಸಂಬಂಧಿತ ಪ್ರಯತ್ನʼ ಎಂದು ಸ್ಪಷ್ಟವಾಗಿ ಉಲ್ಲೇಖಿಸಿರಬೇಕು
 
2. ಪತ್ರಿಕೆಗಳು ಯಾವುದೇ ನಾಯಕರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವುದು ಇಲ್ಲವೇ ತಪ್ಪಾಗಿ ಉಲ್ಲೇಖಿಸಿ ಮುದ್ರಿಸುವಂತಿಲ್ಲ. ಅವರ ಹೇಳಿಕೆಯ ಉದ್ದೇಶ ಸರಿಯಾಗಿ ಮನವರಿಕೆಯಾಗುವಂತೆ ನೈಜ ಅರ್ಥ ಬರುವ ರೀತಿಯಲ್ಲೇ ಪ್ರಕಟಿಸಬೇಕು.
 
3. ಜಾತಿ ಆಧಾರದ ಮೇಲೆ ಮತದಾರರ ಹೆಸರು ಮತ್ತು ನಿರ್ದಿಷ್ಟ ರಾಜಕೀಯ ಪಕ್ಷದ ಅಭ್ಯರ್ಥಿಯ ಬೆಂಬಲಿಗರ ಹೆಸರನ್ನು ಒಳಗೊಂಡ ವರದಿಗಳಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವುದು ಹಾಗೂ ಆ ರೀತಿಯ ಮನೋಭಾವದ ವರದಿಗಳನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಬೇಕಾಗುತ್ತದೆ.
 
4. ಒಂದೇ ರೀತಿಯ ವಿಷಯ, ಮಾಹಿತಿಯುಳ್ಳ ರಾಜಕೀಯ ಸುದ್ದಿಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾದರೆ ಅವು ಕಾಸಿಗಾಗಿ ಸುದ್ದಿ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
 
5. ಚುನಾವಣಾ ಸಂರ್ಭದಲ್ಲಿ ಎರಡು ಪತ್ರಿಕೆಗಳಲ್ಲಿ ಒಂದೇ ಸುದ್ದಿಯನ್ನು ಯಥಾವತ್ತಾಗಿ ಪ್ರಕಟವಾಗಿರುವುದು ಆಕಸ್ಮಿಕವಲ್ಲ ಮತ್ತು ಅಂತಹ ಸುದ್ದಿಗಳನ್ನು ಪರಿಗಣನೆಗೆಂದೇ ಪ್ರಕಟಿಸಲಾಗಿದೆ ಎಂಬುದು ಸ್ಪಷ್ಟ.
 
6. ನಿರ್ದಿಷ್ಟ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡುವ ರೀತಿಯಲ್ಲಿ ನಿರೂಪಿಸಿರುವ ಸುದ್ದಿಯನ್ನೂ ಸಹ ಕಾಸಿಗಾಗಿ ಸುದ್ದಿ ಎಂದೇ ಪರಿಗಣಿಸಬೇಕಾಗುತ್ತದೆ
 
7. ಇನ್ನೂ ನಾಮಪತ್ರವನ್ನೇ ಸಲ್ಲಿಸದ ಅಭ್ಯರ್ಥಿ ಚುನಾವಣೆಯಲ್ಲಿ ಯಶಸ್ಸು ಸಾಧಿಸುತ್ತಾರೆ ಎಂಬರ್ಥದ ಸುದ್ದಿಗಳು ಸಹ ಕಾಸಿಗಾಗಿ ಸುದ್ದಿ ಎನಿಸುತ್ತವೆ.
 
8. ಪ್ರಚಾರ ಸಭೆ ಮತ್ತು ಸಿನಿತಾರೆಯರು ಪಾಲ್ಗೊಂಡ ಕುರಿತಂತೆ ಕುತೂಹಲದ ಕಾರಣಕ್ಕೆ ಪ್ರಕಟವಾಗುವ ಸುದ್ದಿ, ವರದಿಗಳನ್ನು ಕಾಸಿಗಾಗಿ ಸುದ್ದಿ ಎಂದು ಕರೆಯಲಾಗದು.
 
9. ಚುನಾವಣಾ ಸುದ್ದಿಗಳು ಹಾಗೂ ಅಭ್ಯರ್ಥಿಗಳ ಕುರಿತ ವಿಚಾರ/ ಸಂದರ್ಶನಗಳನ್ನು ಪ್ರಕಟಿಸುವಾಗ ವರದಿಗಳು ಸಮತೋಲನವಾಗಿರುವುದನ್ನು ಪತ್ರಿಕೆಗಳು ಖಾತರಿಪಡಿಸಿಕೊಳ್ಳುವುದು ಸೂಕ್ತ.
 
10. ಚುನಾವಣೆಯ ಸಮಯದಲ್ಲಿ ಕೇಂದ್ರ ಚುನಾವಣಾ ಆಯೋಗ ಗೊತ್ತುಪಡಿಸಿರುವ ಷರತ್ತುಗಳಿಗೆ ಒಳಪಟ್ಟು, ಅಭ್ಯರ್ಥಿಗಳ ಅಥವಾ ಪಕ್ಷಗಳ ಭವಿಷ್ಯದ ಬಗ್ಗೆ ಪ್ರಾಮಾಣಿಕ ಮೌಲ್ಯಮಾಪನ ನಡೆಸಲು ಪತ್ರಿಕೆಗಳಿಗೆ ಮುಕ್ತ ಸ್ವಾತಂತ್ರ್ಯವಿದೆ. ಅಂತಹ ಸುದ್ದಿ, ವರದಿಗಳನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸುವಂತಿಲ್ಲ.
 
11. ಪತ್ರಿಕೆಗಳು ಯಾವುದೇ ಆಧಾರ, ಪರಿಶೀಲನೆ ಇಲ್ಲದೆ ಯಾವುದೇ ರಾಜಕೀಯ ಪಕ್ಷದ ಗೆಲುವಿನ ಮುನ್ಸೂಚನೆ ನೀಡುವಂತಹ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ
 
ಎನ್‌ಬಿಎಸ್‌ಎ ಮಾರ್ಚ್ 3, 2014ರಂದು ಹೊರಡಿಸಿರುವ  ʼಚುನಾವಣಾ ಪ್ರಸಾರ ಸಂಬಂಧ ಮಾರ್ಗಸೂಚಿಗಳುʼ 
 
3. 1951ರ ಪ್ರಜಾಪ್ರತಿನಿಧಿ ಕಾಯ್ದೆಯಡಿ ಮತ್ತು ಕೇಂದ್ರ ಚುನಾವಣಾ ಆಯೋಗವು ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳನ್ವಯ ಸುದ್ದಿ ಪ್ರಸಾರಕರು ಸಂಬಂಧಪಟ್ಟ ಚುನಾವಣಾ ವಿಷಯಗಳು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಪ್ರಚಾರ ಸಂಬಂಧ ವಿಷಯಗಳು ಮತ್ತು ಮತದಾನ ಪ್ರಕ್ರಿಯೆಗಳ ಬಗ್ಗೆ ವಸ್ತುನಿಷ್ಠ ರೀತಿಯಲ್ಲಿ ಸುದ್ದಿ ಸಾರ್ವಜನಿಕರಿಗೆ ತಿಳಿಸಲು ಪ್ರಯತ್ನಸಬೇಕು.  
 
4. ಸುದ್ದಿ ವಾಹಿನಿಗಳು ಯಾವುದೇ ಪಕ್ಷ ಅಥವಾ ಅಭ್ಯರ್ಥಿಯೊಂದಿಗೆ ರಾಜಕೀಯ ಸಂಬಂಧ, ಒಡನಾಟವಿದ್ದರೆ ಅದನ್ನು ಮೊದಲೇ ಘೋಷಿಸಿಕೊಳ್ಳಬೇಕು. ಇಂತಹ ರಾಜಕೀಯ ಸಂಬಂಧ, ಒಡನಾಟ, ಬೆಂಬಲದ ವಿಚಾರವಿಲ್ಲದಿದ್ದರೆ ಸಮತೋಲನದ ಜತೆಗೆ ನಿಷ್ಪಕ್ಷಪಾತವಾಗಿ ಪ್ರಸಾರ ಮಾಡುವುದು ಅದರ ಕರ್ತವ್ಯವಾಗಿರುತ್ತದೆ
 
5. ಎಲ್ಲ ರೀತಿಯ ವದಂತಿ, ಗಾಳಿಸುದ್ದಿ, ಆಧಾರರಹಿತ, ಪೂರ್ವಾಗ್ರಹ ಪೀಡಿತ, ತಪ್ಪು/ ಅರ್ಧ ಮಾಹಿತಿಯುಳ್ಳ ಸುದ್ದಿ ಪ್ರಸಾರವಾಗುವುದನ್ನು ತಪ್ಪಿಸಬೇಕು. ಮುಖ್ಯವಾಗಿ ನಿರ್ದಿಷ್ಟ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಿಗೆ ಸಂಬಂಧಪಟ್ಟ, ಯಾವುದೇ ಅಭ್ಯರ್ಥಿ/ರಾಜಕೀಯ ಪಕ್ಷ, ಹಾಗೆಯೇ ಮಾನಹಾನಿಯಾಗುವ ಅಥವಾ ತಪ್ಪು ನಿರೂಪಣೆ, ತಪ್ಪು ಮಾಹಿತಿ ಅಥವಾ ಇತರೆ ರೀತಿಯ ತೇಜೋವಧೆ, ಹಾನಿಕಾರ ಮಾಹಿತಿ ಪ್ರಸಾರವಾಗಿದ್ದರೆ ಆ ಬಗ್ಗೆ ತಿದ್ದುಪಡಿಯನ್ನು ಪ್ರಸಾರ ಮಾಡಬೇಕು. ಸಾಧ್ಯವಿದ್ದರೆ ಪ್ರತಿಕ್ರಿಯೆ ನೀಡಲು ಅವಕಾಶ ಕಲ್ಪಿಸಬೇಕು.
 
6. ಚುನಾವಣೆ ಹಾಗೂ ಚುನಾವಣೆ ಸಂಬಂಧಿತ ವಿಷಯಗಳ ಮೇಲೆ ಪರಿಣಾಮ, ಪ್ರಭಾವ ಬೀರುವಂತಹ ಎಲ್ಲ ರಾಜಕೀಯ ಹಾಗೂ ಆರ್ಥಿಕ ಒತ್ತಡಗಳನ್ನು ತಡೆದು ನಿಯಂತ್ರಿಸಬೇಕು.
 
7. ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಸುದ್ದಿಗಳಲ್ಲಿ ಸಂಪಾದಕೀಯ ನಿಲುವು ಮತ್ತು ತಜ್ಞರ ಅಭಿಪ್ರಾಯಗಳ ನಡುವೆ ಸ್ಪಷ್ಟವಾದ ಅಂತರ ಕಾಯ್ದುಕೊಳ್ಳಬೇಕು.
 
8. ರಾಜಕೀಯ ಪಕ್ಷಗಳು ಒದಗಿಸುವ ವಿಡಿಯೋ ತುಣುಕುಗಳನ್ನು ಬಳಸುವಾಗ ಅದರ ಮೂಲವನ್ನು ಸೂಕ್ತ ರೀತಿಯಲ್ಲಿ ಪ್ರಸಾರ ಮಾಡುವುದು ಮುಖ್ಯ.
 
9. ಚುನಾವಣೆ ಮತ್ತು ಚುನಾವಣಾ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ಸುದ್ದಿ/ ಕಾರ್ಯಕ್ರಮಗಳ ಪ್ರತಿಯೊಂದು ಅಂಶ, ಘಟನೆ, ದಿನಾಂಕಗಳು, ಸ್ಥಳ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದ ಎಲ್ಲ ಸಂಗತಿಗಳ ಮೇಲೆ ಸತ್ಯಾಸತ್ಯತೆ, ನಿಖರತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಗಮನ ಹರಿಸಬೇಕು. ತಪ್ಪಾಗಿ ಅಥವಾ ಅಚಾತುರ್ಯದಿಂದ ಯಾವುದೇ ತಪ್ಪು ಮಾಹಿತಿ ಪ್ರಸಾರವಾದರೆ, ಅದು ಗಮನಕ್ಕೆ ಬಂದ ತಕ್ಷಣ ಸರಿಪಡಿಸಿ ಹಿಂದಿನ ಸುದ್ದಿ ಪ್ರಸಾರಕ್ಕೆ ನೀಡಿದ ಪ್ರಾಮುಖ್ಯತೆಯೊಂದಿಗೆ ಸರಿಪಡಿಸಿ ಪ್ರಸಾರ ಮಾಡಬೇಕು.
 
10. ಸುದ್ದಿ ಪ್ರಸಾರಕರು, ಸಂಸ್ಥೆಯ ಪತ್ರಕರ್ತರು ಮತ್ತು ಅಧಿಕಾರಿಗಳು ಯಾವುದೇ ಹಣ ಅಥವಾ ಬೆಲೆಬಾಳುವ ಉಡುಗೊರೆ ಅಥವಾ ಪ್ರಭಾವ ಬೀರುವ ಅಥವಾ ಪ್ರಭಾವ ಬೀರುವ ಏನನ್ನೂ ಸ್ವೀಕರಿಸಬಾರದು. ಆ ರೀತಿ ನಡೆದರೆ ಹಿತಾಸಕ್ತಿ ಸಂಘರ್ಷ ಅಥವಾ ಸಂಸ್ಥೆ ಮತ್ತು ವೈಯಕ್ತಿಕ ವಿಶ್ವಾಸಾರ್ಹತೆಗೆ ಚ್ಯುತಿ ಬರುವಂತಿರಬಾರದು.
 
11. ಚುನಾವಣಾ ನಿಯಮಗಳಡಿ ಕೋಮು ಅಥವಾ ಜಾತಿಯ ಅಂಶಗಳ ಆಧಾರದ ಮೇಲೆ ಚುನಾವಣಾ ಪ್ರಚಾರ ನಿಷೇಧವಾಗಿರುವುದರಿಂದ ಹಿಂಸೆಗೆ ಪ್ರಚೋದಿಸುವ ಅಥವಾ ಸಾರ್ವಜನಿಕ ಅಶಾಂತಿಗೆ ಪ್ರೇರೇಪಿಸುವ ಯಾವುದೇ ರೀತಿಯ 'ದ್ವೇಷ ಭಾಷಣ' ಅಥವಾ ಇತರೆ ಅಸಹ್ಯಕರ ವಿಷಯವನ್ನು ಪ್ರಸಾರ ಮಾಡುವಂತಿಲ್ಲ. ಧರ್ಮ, ಜನಾಂಗ, ಜಾತಿ, ಸಮುದಾಯ, ಪ್ರದೇಶ ಅಥವಾ ಭಾಷೆಯ ಆಧಾರದ ಮೇಲೆ ಜನರ ಮಧ್ಯೆ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸುವ ವರದಿ ಪ್ರಸಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು.
 
12. ಸುದ್ದಿ ಮತ್ತು ಕಾಸಿಗಾಗಿ ಸುದ್ದಿ ನಡುವಿನ ಅಂತರವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಶುಲ್ಕ ಪಾವತಿಸಿದ ವರದಿಗಳಿಗೆ ಸಂಬಂಧಪಟ್ಟಂತೆ ʼಪಾವತಿಸಿ ಜಾಹೀರಾತುʼ ಅಥವಾ ʼಹಣ ಪಾವತಿಸಿದ ವಿಷಯʼ ಎಂದು ಸ್ಪಷ್ಟವಾಗಿ ಉಲ್ಲೇಖಿಸಬೇಕು. ʼಪಾವತಿಸಿದ ವಿಷಯʼವು ಎನ್‌ಬಿಎ 24.11.2011ರಂದು ಹೊರಡಿಸಿರುವ "ಕಾಸಿಗಾಗಿ ಸುದ್ದಿ ನಿಯಮಾವಳಿಗಳು ಹಾಗೂ ಮಾರ್ಗಸೂಚಿʼ ಅಂಶಗಳಿಗೆ ಪೂರಕವಾಗಿರಬೇಕು
 
13.  ಅಭಿಪ್ರಾಯ ಸಂಗ್ರಹಣೆ ಮತ್ತು ಪ್ರಸಾರಕ್ಕೆ ಸಂಬಂಧಪಟ್ಟಂತೆ ಆ ಕಾರ್ಯಕ್ಕೆ ನಿಯೋಜನೆಗೊಂಡವರು, ಆ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು, ಹಣ ಪಾವತಿಸಿದ ವಿವರಗಳನ್ನು ವೀಕ್ಷಕರಿಗೆ ಬಹಿರಂಗಪಡಿಸುವ ಮೂಲಕ ಅಭಿಪ್ರಾಯ ಸಂಗ್ರಹಗಳನ್ನು ನಿಖರ ಮತ್ತು ನ್ಯಾಯಸಮ್ಮತವಾಗಿ ಪ್ರಸಾರ ಮಾಡಲು ಗಮನ ಹರಿಸಬೇಕು. ಅಭಿಪ್ರಾಯ ಸಂಗ್ರಹ ಅಥವಾ ಇತರೆ ಚುನಾವಣಾ ಫಲಿತಾಂಶದ ಅಂದಾಜಿನ ಅಂಶಗಳನ್ನು ಹೊಂದಿದ್ದರೆ, ಆ ಸಂದರ್ಭ ಮತ್ತು ಅಂತಹ ಸಮೀಕ್ಷೆಗಳ ವ್ಯಾಪ್ತಿ ಹಾಗೂ ಅದರ ಮಿತಿಗಳನ್ನು ಸಹ ವಿವರಿಸಬೇಕು. ಅಭಿಪ್ರಾಯ ಸಂಗ್ರಹಗಳ ವರದಿ ಪ್ರಸಾರವು ಸಮೀಕ್ಷೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ವೀಕ್ಷಕರಿಗೆ ನೆರವಾಗುವ ಎಲ್ಲ ಮಾಹಿತಿ ಹೊಂದಿರುವಬೇಕು. ಉದಾಹರಣೆಗೆ ಅಭಿಪ್ರಾಯ ಸಂಗ್ರಹಕ್ಕೆ ಬಳಸಿದ ವಿಧಾನ, ಸಮೀಕ್ಷೆ ಮಾದರಿಯ ಗಾತ್ರ, ತಪ್ಪಾಗಿರಬಹುದಾದ ಅಂಶಗಳು, ದಿನಾಂಕ ಸಹಿತ ಕ್ಷೇತ್ರಕಾರ್ಯ ವಿವರ ಹಾಗೂ ಬಳಸಿದ ದತ್ತಾಂಶ, ಮತ ಹಂಚಿಕೆಗಳನ್ನು ಸೀಟು ಹಂಚಿಕೆಗಳಾಗಿ ಹೇಗೆ ಪರಿವರ್ತಿಸಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಬೇಕು.
 
14. 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 126(1)(ಬಿ) ಉಲ್ಲಂಘಿಸಿ ಮತದಾನ ಮುಕ್ತಾಯಕ್ಕೆ ಗೊತ್ತುಪಡಿಸಿದ ಗಂಟೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ  ಯಾವುದೇ ʼಚುನಾವಣಾ ವಿಷಯʼ ಅಂದರೆ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಅಥವಾ ಪರಿಣಾಮ ಬೀರುವಂತಹ ಉದ್ದೇಶದ ಅಥವಾ ಲೆಕ್ಕಾಚಾರವಿರುವ ವಿಷಯವನ್ನು ಪ್ರಸಾರ ಮಾಡುವಂತಿಲ್ಲ.
 
15. ಕೇಂದ್ರ ಚುನಾವಣಾ ಆಯೋಗವು (ಇಸಿಐ) ಚುನಾವಣೆ ಘೋಷಣೆಯಾದ ಸಮಯದಿಂದ ಚುನಾವಣಾ ಫಲಿತಾಂಶಗಳ ಮುಕ್ತಾಯ ಮತ್ತು ಘೋಷಣೆಯವರೆಗೆ ಪ್ರಸಾರವಾಗುವ ಸುದ್ದಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಲಿದೆ. ಚುನಾವಣಾ ಆಯೋಗವು ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್‌ಬಿಎಸ್‌ಎ) ಮಾನದಂಡವನ್ನು ಉಲ್ಲಂಘಿಸಿದೆ ಎಂದು ವರದಿ ಮಾಡಿದರೆ ಆ ವಿಚಾರವನ್ನು ಎನ್‌ಬಿಎಸ್‌ಎ ನಿಯಂತ್ರಣ ಕ್ರಮಗಳಡಿ ಪರಿಶೀಲಿಸಲಾಗುತ್ತದೆ.
 
14. ಸುದ್ದಿ ಪ್ರಸಾರಕರು ಮತದಾನ ಪ್ರಕ್ರಿಯೆ, ಮತದಾನದ ಮಹತ್ವ, ಮತದಾನ ದಿನಾಂಕ, ಮತದಾನದ ಹಕ್ಕು ಚಲಾವಣೆ ವಿಧಾನ, ಗೌಪ್ಯ ಮತದಾನ, ಮತದಾರರ ಪಟ್ಟಿಯಲ್ಲಿ ನೋಂದಣಿ ಇತರೆ ಮಾಹಿತಿ ಮತದಾರರ ನೀಡಲು ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮ ನಡೆಸಬೇಕು.
 
15. ಕೇಂದ್ರ ಚುನಾವಣಾ ಆಯೋಗವು ಅಧಿಕೃತವಾಗಿ ಘೋಷಿಸುವ ಮೊದಲೇ ಅಂತಿಮ, ಔಪಚಾರಿಕ ಹಾಗೂ ನಿರ್ದಿಷ್ಟ ಫಲಿತಾಂಶವನ್ನು ಪ್ರಸಾರ ಮಾಡುವಂತಿಲ್ಲ. ಅನಧಿಕೃತ, ಅಪೂರ್ಣ ಅಥವಾ ಭಾಗಶಃ ಫಲಿತಾಂಶ ಎಂಬ ವಿವರದೊಂದಿಗೆ ಪ್ರಸಾರ ಮಾಡಬಹುದಾಗಿದೆ.
 
ಸ್ವಯಂಪ್ರೇರಿತ ನೀತಿಸಂಹಿತೆ ದಿನಾಂಕ 20ನೇ ಮಾರ್ಚ್‌, 2019:
 
1. ಅಭಿವ್ಯಕ್ತಿ ಸ್ವಾತಂತ್ರ್ಯದ ತತ್ವಗಳು, ನೀತಿಗಳ ಸಮರ್ಪಕ ಪಾಲನೆ ಹಾಗೂ ಚುನಾವಣಾ ಸಂಬಂಧಿತ ವಿಷಯಗಳ ಮಾಹಿತಿಯನ್ನು ಒದಗಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವವರು  ತಮ್ಮ ಉತ್ಪನ್ನ ಅಥವಾ ಸೇವೆಗಳ ಮೂಲಕ ತಿಳಿಸಬಹುದು
 
2. ಚುನಾವಣಾ ಕಾನೂನುಗಳು ಮತ್ತು ಇತರೆ ಸಂಬಂಧಪಟ್ಟ ಸೂಚನೆಗಳನ್ನು ಒಳಗೊಂಡಂತೆ ಜಾಗೃತಿ ಮೂಡಿಸಲು ಅಗತ್ಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನಗಳನ್ನು ಸ್ವಯಂಪ್ರೇರಣೆಯಿಂದ ಕೈಗೊಳ್ಳಲು ಭಾಗವಹಿಸುವವರು ಪ್ರಯತ್ನಿಸಬೇಕು. ಕೇಂದ್ರ ಚುನಾವಣಾ ಆಯೋಗದ ನೋಡಲ್ ಅಧಿಕಾರಿಗೆ ತಮ್ಮ ಉತ್ಪನ್ನಗಳು/ ಸೇವೆಗಳ ಕುರಿತು ತರಬೇತಿಯನ್ನು ನೀಡಬಹುದು. 
 
3. ಭಾಗವಹಿಸುವವರು ಮತ್ತು ಕೇಂದ್ರ ಚುನಾವಣಾ ಆಯೋಗವು (ಇಸಿಐ) ಜಂಟಿಯಾಗಿ ಅಧಿಸೂಚನೆ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿವೆ. ಆ ಮೂಲಕ ಆಯೋಗವು ಗೊತ್ತುಪಡಿಸಿದ ಕಾರ್ಯವಿಧಾನಗಳಿಗೆ ಪೂರಕವಾಗಿ 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 126 ಮತ್ತು ಇತರೆ ಸಂಬಂಧಿತ ಚುನಾವಣಾ ಕಾನೂನುಗಳ ಸಂಭಾವ್ಯ ಉಲ್ಲಂಘನೆ ಕುರಿತಂತೆ ಸೂಕ್ತ ವೇದಿಕೆಗಳಿಗೆ ಸೂಚಿಸಬಹುದು. ಸಿನ್ಹಾ ಸಮಿತಿಯ ಶಿಫಾರಸುಗಳ ಪ್ರಕಾರ ಸೆಕ್ಷನ್ 126ರ ಅಡಿ ವರದಿ ಮಾಡಲಾದ ಉಲ್ಲಂಘನೆಗೆ ಸಂಬಂಧ ಮನವಿಯನ್ನು 3 ಗಂಟೆಯೊಳಗೆ ಅಂಗೀಕರಿಸಲಾಗುತ್ತದೆ ಮತ್ತು/ ಅಥವಾ ಪ್ರಕ್ರಿಯೆಗೆ ಕ್ರಮ ವಹಿಸಲಾಗುತ್ತದೆ. ವರದಿಯಾದ ಉಲ್ಲಂಘನೆಯ ಸ್ವರೂಪದ ಆಧಾರದ ಮೇಲೆ ಭಾಗವಹಿಸುವವರಿಂದ ಎಲ್ಲ ಇತರೆ ಕೋರಿಕೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲಾಗುತ್ತದೆ.
 
4. ಭಾಗವಹಿಸುವವರು ಕೇಂದ್ರ ಚುನಾವಣಾ ಆಯೋಗಕ್ಕಾಗಿ ಆದ್ಯತೆಯ ವಿಷಯಗಳ ಬಗ್ಗೆ ವರದಿ ಮಾಡಿಕೊಳ್ಳಬಹುದಾದ ವ್ಯವಸ್ಥೆಯನ್ನು ರೂಪಿಸಿ ಅದಕ್ಕೆಂದೇ ನಿರ್ದಿಷ್ಟ ವ್ಯಕ್ತಿ ಇಲ್ಲವೇ ತಂಡವನ್ನು ರಚಿಸಿಕೊಂಡಿರುತ್ತಾರೆ. ಸಾರ್ವತ್ರಿಕ ಚುನಾವಣೆ ಅವಧಿಯಲ್ಲಿ ಕಾನೂನಾತ್ಮಕ ಮನವಿಯನ್ನು ತ್ವರಿತಗತಿಯಲ್ಲಿ ಮುಂದಿನ ಕಾನೂನಾತ್ಮಕ ಪ್ರಕ್ರಿಯೆಗೆ ಅಣಿಗೊಳಿಸಲು ಈ ನಿರ್ದಿಷ್ಟ ವ್ಯಕ್ತಿ ಇಲ್ಲವೇ ತಂಡವು ಕಾರ್ಯ ನಿರ್ವಹಿಸಲಿದೆ. 
 
5. ಭಾಗವಹಿಸುವವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳು, ಅಭ್ಯಥಿಗಳ ಹೆಸರನ್ನು ಒಳಗೊಂಡಿರುವ ಚುನಾವಣಾ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಅಥವಾ ಎಂಸಿಎಂಸಿ ನೀಡಿದ ಪೂರ್ವ ಪ್ರಮಾಣೀಕರಣವನ್ನು ಸಲ್ಲಿಸಲು ಕಾನೂನಿನಡಿ ಅವರ ಜವಾಬ್ದಾರಿಗಳಿಗೆ ಅನುಗುಣವಾಗಿ ಕಾರ್ಯವಿಧಾನವನ್ನು ಒದಗಿಸುತ್ತಾರೆ. ಜತೆಗೆ ಪೂರ್ವ ಪ್ರಮಾಣೀಕರಣವನ್ನು ಒಳಗೊಂಡಿರದ ಆಯೋಗದಿಂದ ಭಾಗವಹಿಸುವವರಿಗೆ ಕಾನೂನುಬದ್ಧವಾಗಿ ಸೂಚಿಸಲಾದ ಪಾವತಿಸಿದ ರಾಜಕೀಯ ಜಾಹೀರಾತುಗಳ ಸಂಬಂಧ ತ್ವರಿತವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
 
6. ಭಾಗವಹಿಸುವವರು ತಮ್ಮ ಪೂರ್ವ ಅಸ್ತಿತ್ವದಲ್ಲಿರುವ ಲೇಬಲ್‌ಗಳನ್ನು/ ಬಹಿರಂಗಪಡಿಸುವ ತಂತ್ರಜ್ಞಾನವನ್ನು ರಾಜಕೀಯ ಜಾಹೀರಾತುಗಳಿಗೆ ಬಳಸಿಕೊಳ್ಳುವುದು ಸೇರಿದಂತೆ ಪಾವತಿಸಿದ ರಾಜಕೀಯ ಜಾಹೀರಾತುಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಬದ್ಧರಾಗಿರುತ್ತಾರೆ.
 
7. ಮೇಲ್ಕಂಡ ವೇದಿಕೆಗಳಲ್ಲಿ ಯಾವುದೇ ರೀತಿಯ ದುರ್ಬಳಕೆಗೆ ಸಂಬಂಧಪಟ್ಟಂತೆ ಕೇಂದ್ರ ಚುನಾವಣಾ ಆಯೋಗವು ಐಎಎಂಎಐ ಮೂಲಕ ಸಲ್ಲಿಸುವ ಕೋರಿಕೆಯನ್ನು ಪಾಲುದಾರರು ಸೂಕ್ತ ರೀತಿಯಲ್ಲಿ ಮಾಹಿತಿ ಒದಗಿಸಬೇಕು.
 
8. ಐಎಎಂಎಐಯು ಭಾಗವಹಿಸುವ ತನ್ನ ಸದಸ್ಯರೊಂದಿಗೆ ನೀತಿಸಂಹಿತೆಯ ಅಡಿ ಕೈಗೊಳ್ಳಲಾದ ಹಂತಗಳ ಕುರಿತು ಸಮನ್ವಯ ನಡೆಸಲಿದೆ. ಹಾಗೆಯೇ ಐಎಎಂಎಐ ಹಾಗೂ ಭಾಗವಹಿಸುವವರು ಚುನಾವಣಾ ಅವಧಿಯಲ್ಲಿ ಕೇಂದ್ರ ಚುನಾವಣಾ ಆಯೋಗದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.
 
ಮುಕ್ತಾಯ...................

******



(Release ID: 1894383) Visitor Counter : 222