ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

2023 ರ ಜನವರಿ 1 ರಿಂದ ಪ್ರಾರಂಭಿಸಲಾದ ಹೊಸ ಸಮಗ್ರ ಆಹಾರ ಭದ್ರತಾ ಯೋಜನೆಯನ್ನು ಕೇಂದ್ರವು "ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)" ಎಂದು ಹೆಸರಿಸಿದೆ.

Posted On: 11 JAN 2023 2:24PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸಚಿವ ಸಂಪುಟವು  2023 ರ ಜನವರಿ 1 ರಿಂದ ಜಾರಿಗೆ ಬರಲಿರುವ ಅನ್ನ ಯೋಜನೆ  (AAY) ಮತ್ತು ಮನೆಯ ಪ್ರಧಾನ (PHH) ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಹೊಸ ಸಮಗ್ರ ಆಹಾರ ಭದ್ರತಾ ಯೋಜನೆಯನ್ನು ಅನುಮೋದಿಸಿದೆ. ಹೊಸ ಯೋಜನೆಯನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್  ಅನ್ನ ಯೋಜನೆ (PMGKAY) ಎಂದು ಹೆಸರಿಸಲಾಗಿದೆ. ಹೊಸ ಯೋಜನೆಯ ಅನುಷ್ಠಾನವು 2023 ರ ಜನವರಿ 1 ರಿಂದ ಪ್ರಾರಂಭವಾಗಿದೆ, ಇದು 80 ಕೋಟಿಗೂ ಹೆಚ್ಚು ಬಡವರು ಮತ್ತು ಕಡು ಬಡವರಿಗೆ ಪ್ರಯೋಜನವನ್ನು ಒದಗಿಸಲಿದೆ .

ಫಲಾನುಭವಿಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳಾದ್ಯಂತ ಏಕರೂಪತೆಯನ್ನು ಕಾಯ್ದುಕೊಳ್ಳಲು, ಎನ್‌ಎಫ್‌ಎಸ್‌ಎ ಅಡಿಯಲ್ಲಿ ಅರ್ಹತೆಗನುಸಾರ, 2023 ರ ಎಲ್ಲಾ PHH ಮತ್ತು AAY ಫಲಾನುಭವಿಗಳಿಗೆ PMGKAY ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತದೆ. ಒದಗುವಿಕೆ, ಕೈಗೆಟುಕುವಿಕೆ ಮತ್ತು ಬಡವರಿಗೆ ಆಹಾರ ಧಾನ್ಯಗಳ ಲಭ್ಯತೆಯ ವಿಷಯದಲ್ಲಿ ಈ ಸಮಗ್ರ ಯೋಜನೆಯು 2013 ರ ಎನ್‌ಎಫ್‌ಎಸ್‌ಎ, ನಿಬಂಧನೆಗಳಿಗೆ ಪುಷ್ಟಿ ನೀಡುತ್ತದೆ.

2013 ರ ಎನ್‌ಎಫ್‌ಎಸ್‌ಎ ಯ ಏಕರೂಪ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಎರಡು ಸಬ್ಸಿಡಿ ಯೋಜನೆಗಳನ್ನು PMGKAY ಒಳಗೊಂಡಿರುತ್ತದೆ. (a) ಎಫ್ ಸಿ ಐ ಗೆ ಆಹಾರ ಸಬ್ಸಿಡಿ (b)  NFSA ಅಡಿಯಲ್ಲಿ ರಾಜ್ಯಗಳಿಗಾಗಿ ಸಂಗ್ರಹಣೆ, ಹಂಚಿಕೆ ಮತ್ತು ಉಚಿತ ಆಹಾರ ಧಾನ್ಯಗಳ ವಿತರಣೆಯೊಂದಿಗೆ ವ್ಯವಹರಿಸುತ್ತಿರುವ ವಿಕೇಂದ್ರೀಕೃತ ಖರೀದಿ ರಾಜ್ಯಗಳಿಗೆ ಆಹಾರ ಸಬ್ಸಿಡಿ. 

 PMGKAY ನ ಸುಗಮ ಅನುಷ್ಠಾನಕ್ಕಾಗಿ ಈಗಾಗಲೇ ಆಯಾ ಕ್ಷೇತ್ರದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಅಂದರೆ ನ್ಯಾಯಬೆಲೆ ಅಂಗಡಿಗಳಲ್ಲಿ ತಾಂತ್ರಿಕ ಸಮಸ್ಯೆಗಳ ಪರಿಹಾರ ಮತ್ತು AAY ಮತ್ತು PHH ಫಲಾನುಭವಿಗಳಿಗೆ ಶುಲ್ಕರಹಿತ ಆಹಾರ ವಿತರಣೆಗೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ನಿಗದಿಪಡಿಸಿದ  ಮಿತಿ, ಫಲಾನುಭವಿಗಳಿಗೆ ನೀಡಿದ ಮುದ್ರಿತ ರಸೀದಿಗಳಲ್ಲಿ ಶೂನ್ಯ ಬೆಲೆ ನಮೂದಿಸುವುದು ಇತ್ಯಾದಿ ಅಗತ್ಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. 

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮತ್ತು ಎಫ್‌ಸಿಐ ಅಧಿಕಾರಿಗಳು ಈ ಕ್ಷೇತ್ರದಲ್ಲಿ ಹೊಸ ಯೋಜನೆಯನ್ನು ಸುಗಮವಾಗಿ ಹೊರತರಲು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸುತ್ತಿದ್ದಾರೆ.

ಬಡವರು ಮತ್ತು ಕಡು ಬಡವರ ಆರ್ಥಿಕ ಹೊರೆಯನ್ನು ತೊಡೆದುಹಾಕಲು ಕೇಂದ್ರ ಸರ್ಕಾರವು 2023 ರಲ್ಲಿ ಎನ್‌ಎಫ್‌ಎಸ್‌ಎ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಆಹಾರ ಸಬ್ಸಿಡಿ ರೂಪದಲ್ಲಿ  2 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡುತ್ತಿದೆ.

*****



(Release ID: 1890390) Visitor Counter : 428