ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಜನವರಿ 12 ರಂದು ಕರ್ನಾಟಕದ ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿಯವರು ಈ ವರ್ಷದ ರಾಷ್ಟ್ರೀಯ ಯುವ ಉತ್ಸವವನ್ನು ಉದ್ಘಾಟಿಸಲಿದ್ದಾರೆ: ಶ್ರೀ ಅನುರಾಗ್ ಸಿಂಗ್ ಠಾಕೂರ್
Posted On:
10 JAN 2023 3:55PM by PIB Bengaluru
ಪ್ರಮುಖ ಮುಖ್ಯಾಂಶಗಳು:
• 26ನೇ ರಾಷ್ಟ್ರೀಯ ಯುವಜನೋತ್ಸವವನ್ನು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಜನವರಿ 12 ರಿಂದ 16 ರವರೆಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಕರ್ನಾಟಕದ ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಿದೆ.
• ಈ ವರ್ಷದ ಉತ್ಸವದ ವಿಷಯ 'ವಿಕಸಿತ ಯುವಜನತೆ ವಿಕಸಿತ ಭಾರತ'.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಜನ್ಮದಿನದ ಸಂದರ್ಭದಲ್ಲಿ ಜನವರಿ 12ರಂದು ಹುಬ್ಬಳ್ಳಿಯಲ್ಲಿ ಈ ವರ್ಷದ ರಾಷ್ಟ್ರೀಯ ಯುವ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಎಂದು ಇಂದು ನವದೆಹಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇದನ್ನು ಘೋಷಿಸಿದರು. 26ನೇ ರಾಷ್ಟ್ರೀಯ ಯುವ ಉತ್ಸವವು ಜನವರಿ 12 ರಿಂದ 16 ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿದೆ ಮತ್ತು ಇದನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸುತ್ತಿದೆ.
ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಂತೆಯೇ, ಅಮೃತ ಕಾಲದ ಸಮಯದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಹೆಚ್ಚಿಸುವ ಗುರಿಯನ್ನು ಈ ಉತ್ಸವವು ಹೊಂದಿದೆ ಎಂದು ಶ್ರೀ ಅನುರಾಗ್ ಠಾಕೂರ್ ಹೇಳಿದರು. ಆದ್ದರಿಂದ ಪ್ರಧಾನಮಂತ್ರಿಯವರು ಪ್ರತಿಪಾದಿಸುವ ‘ಪಂಚಪ್ರಾಣ’ ಸಂದೇಶವನ್ನು ಯುವಜನರಲ್ಲಿ ಬಿತ್ತರಿಸುವ ಪ್ರಯತ್ನ ಇದಾಗಿದೆ ಎಂದು ಸಚಿವರು ಹೇಳಿದರು. ಹೆಚ್ಚಿನ ವಿವರಗಳನ್ನು ನೀಡುತ್ತಾ ಶ್ರೀ ಅನುರಾಗ್ ಠಾಕೂರ್ ಅವರು , ಭಾರತವು ಈ ವರ್ಷ ಜಿ20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದು, ಇದು ಪ್ರತಿಯೊಬ್ಬ ಭಾರತೀಯನಿಗೂ ಬಹಳ ಹೆಮ್ಮೆಯ ವಿಷಯವಾಗಿದೆ. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಜಿ-20ರ ವೈ(ಯುವ)-20 ಚಟುವಟಿಕೆಗಳಿಗಾಗಿ ದೇಶಾದ್ಯಂತ 'ವೈ ಟಾಕ್ಸ್' (ಯುವ ಚರ್ಚೆ) ಅನ್ನು ಆಯೋಜಿಸುತ್ತಿದೆ. ರಾಷ್ಟ್ರೀಯ ಯುವಜನೋತ್ಸವವು ವೈ-20 ವಿಷಯಗಳ ಬಗ್ಗೆ ಯುವಜನರನ್ನು ಜಾಗೃತಗೊಳಿಸುವ ಮೂಲಕ ದೇಶಾದ್ಯಂತ ವೈ-20 ಕಾರ್ಯಕ್ರಮಕ್ಕೆ ವೇಗವನ್ನು ನೀಡುತ್ತದೆ. ಭಾಗವಹಿಸುವವರು ವೈ-20 ರ ಸಂದೇಶ ಮತ್ತು ವಿಷಯಗಳನ್ನು ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯುತ್ತಾರೆ ಎಂದು ಅವರು ವಿವರಿಸಿದರು. ಶ್ರೀ ಅನುರಾಗ್ ಠಾಕೂರ್ ಮಾತನಾಡಿ, ಜೈವಿಕವಾಗಿ ಕೊಳೆಯುವ ವಸ್ತುಗಳನ್ನು ಮಾತ್ರ ಬಳಸಿ ಯುವಜನೋತ್ಸವವನ್ನು ಹಸಿರು ಹಬ್ಬವಾಗಿ ಆಚರಿಸಲಾಗುತ್ತಿದೆ. ಪ್ರಧಾನ ಮಂತ್ರಿಯವರ ಮಿಷನ್ ಲೈಫ್ (ಎಲ್ ಐಎಫ್ಇ) ಮತ್ತು ಗ್ರೀನ್ ಎನರ್ಜಿ ಮೇಲೆ ಕೇಂದ್ರೀಕರಿಸಲಾಗುವುದು ಎಂದು ಸಚಿವರು ಹೇಳಿದರು.
ಉತ್ಸವದ ಕುರಿತು ವಿವರಗಳನ್ನು ನೀಡಿದ ಯುವ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀಮತಿ ಮೀತಾ ಆರ್.ಲೋಚನ್ ಅವರು 26ನೇ ರಾಷ್ಟ್ರೀಯ ಯುವ ಉತ್ಸವವನ್ನು ಹುಬ್ಬಳ್ಳಿ-ಧಾರವಾಡ, ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಿದೆ ಎಂದು ಹೇಳಿದರು. ಉದ್ಘಾಟನಾ ಸಮಾರಂಭದಲ್ಲಿ 30,000ಕ್ಕೂ ಹೆಚ್ಚು ಯುವಕರು ಭಾಗವಹಿಸಲಿದ್ದಾರೆ, ಅಲ್ಲಿ ಪ್ರಧಾನಮಂತ್ರಿಯವರು ತಮ್ಮ ದೂರದೃಷ್ಟಿಯನ್ನು ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ವಿಶಿಷ್ಟ ಐದು ದಿನಗಳ ಕಾರ್ಯಕ್ರಮದಲ್ಲಿ, ಭಾರತದಾದ್ಯಂತದ 7500 ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು, ಗುರುತಿಸಲ್ಪಟ್ಟ ಮತ್ತು ತಮ್ಮದೇ ಆದ ಚಟುವಟಿಕೆಯ ಕ್ಷೇತ್ರದಲ್ಲಿ ನಾಯಕರು, ವಿಭಿನ್ನ ಕಲಿಕೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸೇರುತ್ತಾರೆ. ಈ ವರ್ಷದ ಉತ್ಸವದ ವಿಷಯ 'ವಿಕಸಿತ ಯುವಜನ ವಿಕಸಿತ ಭಾರತ'.
ಉತ್ಸವದಲ್ಲಿನ ಚಟುವಟಿಕೆಗಳು (1) ವಿದ್ಯಾರ್ಥಿ ಕೇಂದ್ರಿತ ಆಡಳಿತ ಮತ್ತು ಡಿಜಿಟಲ್ ಇಂಡಿಯಾದಂತಹ ಸಂಬಂಧಿತ ವಿಷಯಗಳ ಕುರಿತು ಚರ್ಚೆಗಳನ್ನು ಒಳಗೊಂಡಿವೆ. ಕ್ಷೇತ್ರದ ಮುಖಂಡರು ಮತ್ತು ಇತರ ತಜ್ಞರು ವಿದ್ಯಾರ್ಥಿ ಕೇಂದ್ರಿತ ಆಡಳಿತವನ್ನು ಹೇಗೆ ಸುಗಮಗೊಳಿಸುವುದು ಎಂಬುದರ ಕುರಿತು ಚುನಾಯಿತ ಪ್ರತಿನಿಧಿಗಳೊಂದಿಗೆ ಉತ್ಸಾಹಭರಿತ ಚರ್ಚೆಗಳಲ್ಲಿ ತೊಡಗುತ್ತಾರೆ. (2) ಸ್ಕೂಬಾ ಡೈವಿಂಗ್ನಂತಹ ಸಾಹಸ ಕ್ರೀಡೆಗಳನ್ನು ಸೇರಿಸಲಾಗಿದೆ. (3) ಕಳರಿಪಯಟು (ಕೇರಳ), ಸಿಲಂಬಮ್ (ತಮಿಳುನಾಡು), ಗಟ್ಕಾ (ಪಂಜಾಬ್), ಮಲ್ಲಕಂಬ (ಮಹಾರಾಷ್ಟ್ರ) ಮುಂತಾದ ಸಾಂಪ್ರದಾಯಿಕ ಕ್ರೀಡೆಗಳ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. (4)ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುವ ಜಾನಪದ ನೃತ್ಯ ಮತ್ತು ಜಾನಪದ ಹಾಡುಗಳಂತಹ ಸ್ಪರ್ಧಾತ್ಮಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಸಕ್ತಿದಾಯಕ ಸ್ಪರ್ಧಾತ್ಮಕವಲ್ಲದ ಘಟನೆಗಳು ಸಾಮಾಜಿಕ ಅಭಿವೃದ್ಧಿ ಮೇಳ 'ಯುವ ಕೃತಿ' ಅನ್ನು ಒಳಗೊಂಡಿವೆ. ‘ಸಾಹಸೋತ್ಸವ’, ‘ಸುವಿಚಾರ’, ‘ಯುವ ಕಲಾವಿದರ ಶಿಬಿರ’ ಇತರವುಗಳಲ್ಲಿ ಸೇರಿವೆ.
ಯುವ ಶೃಂಗಸಭೆಯು ಈ ಕೆಳಗಿನ ವಿಷಯಗಳ ಮೇಲೆ ಎರಡು ರೀತಿಯಲ್ಲಿ ಚರ್ಚೆಗಳನ್ನು ಒಳಗೊಂಡಿರುತ್ತದೆ: i) ಕೆಲಸದ ಭವಿಷ್ಯ, ಕೈಗಾರಿಕೆ, ನಾವೀನ್ಯತೆ ಮತ್ತು 21 ನೇ ಶತಮಾನದ ಕೌಶಲ್ಯಗಳು, ii) ಹವಾಮಾನ ಬದಲಾವಣೆ ಮತ್ತು ವಿಪತ್ತಿನ ಅಪಾಯದ ಕಡಿತ, iii) ಶಾಂತಿ ನಿರ್ಮಾಣ ಮತ್ತು ಸಮನ್ವಯ, iv) ಪ್ರಜಾಪ್ರಭುತ್ವದಲ್ಲಿ ಭವಿಷ್ಯದ-ಯುವಶಕ್ತಿಯ ಹಂಚಿಕೆ ಮತ್ತು ಆಡಳಿತ, v) ಆರೋಗ್ಯ ಮತ್ತು ಯೋಗಕ್ಷೇಮ
ಉತ್ಸವದಲ್ಲಿ ಅನೇಕ ಕಾರ್ಯಕ್ರಮಗಳನ್ನು ರಾಷ್ಟ್ರದಾದ್ಯಂತ ನೇರ ಪ್ರಸಾರ ಮಾಡಲಾಗುತ್ತದೆ, ಇದರಿಂದಾಗಿ ಕೋಟ್ಯಂತರ ಯುವಜನರು ಇಡೀ ಉತ್ಸವದಲ್ಲಿ ಭಾಗವಹಿಸಬಹುದು.
ಈ ವರ್ಷ ಹಬ್ಬವನ್ನು ʼಗ್ರೀನ್ ಯೂತ್ ಫೆಸ್ಟಿವಲ್ʼ ಎಂದು ಆಚರಿಸಲಾಗುತ್ತಿದ್ದು ಇಲ್ಲಿ ಮರುಬಳಕೆ ಮಾಡಬಹುದಾದ ಕಟ್ಲರಿ, ನ್ಯಾಪ್ಕಿನ್ ಇತ್ಯಾದಿಗಳನ್ನು ಮಾತ್ರ ಬಳಸಲಾಗುತ್ತಿದೆ. ಎಲ್ಲಾ ಸ್ಮರಣಿಕೆಗಳು, ಪದಕಗಳು, ಲೇಖನ ಸಾಮಗ್ರಿಗಳು ಮರುಬಳಕೆ ಮಾಡಬಹುದಾದ ವಸ್ತುಗಳಾಗಿವೆ. ಬಿಸಾಡಬಹುದಾದ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಲು ನೀರು ಮರುಪೂರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಜನವರಿ 15 ರಂದು, ಕರ್ನಾಟಕದ 31 ಜಿಲ್ಲೆಗಳಿಂದ 5 ಲಕ್ಷ ಜನರನ್ನು ಸಜ್ಜುಗೊಳಿಸುವ ಮೂಲಕ ಬೆಳಿಗ್ಗೆ 6 ರಿಂದ 8 ರವರೆಗೆ ಯೋಗಥಾನ್ ಅನ್ನು ಯೋಜಿಸಲಾಗಿದೆ.
ದೇಶದಾದ್ಯಂತ ಉತ್ಸವದ ಅವಧಿಯಲ್ಲಿ ಯುವಕರ ಭಾಗವಹಿಸುವಿಕೆಯೊಂದಿಗೆ ಹೆಚ್ಚಿನ ಸಂಖ್ಯೆಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
*****
(Release ID: 1890063)
Visitor Counter : 194