ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಯುನಿಸ್ಫಾದ ಅಬೈಯಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಮಹಿಳಾ ಶಾಂತಿಪಾಲಕ ಪಡೆಯ ಅತಿದೊಡ್ಡ ತುಕಡಿಯನ್ನು ನಿಯೋಜಿಸಿರುವುದನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು

Posted On: 06 JAN 2023 5:18PM by PIB Bengaluru

ಭಾರತೀಯ ಸೇನೆಯು ತನ್ನ ಅತಿದೊಡ್ಡ ಮಹಿಳಾ ಶಾಂತಿಪಾಲಕರ ತುಕಡಿಯನ್ನು ಯುನಿಸ್ಫಾದ ಅಬಿಯಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಯಲ್ಲಿ ನಿಯೋಜಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾರತವು ಸಕ್ರಿಯವಾಗಿ ಭಾಗವಹಿಸುವ ಸಂಪ್ರದಾಯವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಎಡಿಜಿ, ಪಿಐ - ಭಾರತೀಯ ಸೇನೆ, ಇವರ ಟ್ವೀಟ್‌ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಈ ರೀತಿ ಮರು ಟ್ವೀಟ್ ಮಾಡಿದ್ದಾರೆ;

“ಇದನ್ನು ನೋಡಿ ಹೆಮ್ಮೆಯಾಗುತ್ತದೆ.

ಭಾರತವು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಂಪ್ರದಾಯವನ್ನು ಹೊಂದಿದೆ. ನಮ್ಮ ನಾರಿ ಶಕ್ತಿಯ ಭಾಗವಹಿಸುವಿಕೆ ಇನ್ನಷ್ಟು ಸಂತೋಷದಾಯಕವಾಗಿದೆ.”

*******


(Release ID: 1889294) Visitor Counter : 162