ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

​​​​​​​ಸಾರ್ವಜನಿಕ ಸೇವಾ ಪ್ರಸಾರಕ್ಕೆ ಪ್ರಮುಖ ಉತ್ತೇಜನ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕೇಂದ್ರ ವಲಯದ  ‘ಪ್ರಸಾರ ಮೂಲಸೌಕರ್ಯ ಮತ್ತು ಜಾಲ ಅಭಿವೃದ್ದಿʼ (ಬಿ ಐ ಎನ್‌ ಡಿ) ಯೋಜನೆಯನ್ನು 2025-26 ರವರೆಗೆ 2,539.61 ಕೋಟಿ ರೂ. ವೆಚ್ಚದಲ್ಲಿ ಅನುಮೋದಿಸಿದೆ.


ಆಕಾಶವಾಣಿಯ ಎಫ್‌ ಎಂ ವ್ಯಾಪ್ತಿಯನ್ನು ದೇಶದ ಜನಸಂಖ್ಯೆಯ ಶೇಕಡಾ 80 ಕ್ಕಿಂತ ಹೆಚ್ಚು ಜನರಿಗೆ ತಲುಪಿಸಲು ಹೆಚ್ಚಿಸಲಾಗುವುದು

ದೂರ ಪ್ರದೇಶಗಳು, ಬುಡಕಟ್ಟು ಪ್ರದೇಶಗಳು, ಎಡಪಂಥೀಯ ಉಗ್ರವಾದ ಪ್ರದೇಶಗಳು (ಎಲ್‌ ಡಬ್ಲ್ಯು ಇ), ಗಡಿ ಪ್ರದೇಶಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ವಾಸಿಸುವ ಜನರಿಗೆ 8 ಲಕ್ಷ ಉಚಿತ ಡಿಡಿ ಡಿಶ್ ಡಿಟಿಹೆಚ್‌ ಸೆಟ್ ಟಾಪ್ ಬಾಕ್ಸ್‌ಗಳನ್ನು (ಎಸ್‌ಟಿಬಿ) ವಿತರಿಸಲಾಗುವುದು.

Posted On: 04 JAN 2023 4:07PM by PIB Bengaluru

ಪ್ರಸಾರ ಭಾರತಿಯ ಆಕಾಶವಾಣಿ (ಎಐಆರ್) ಮತ್ತು ದೂರದರ್ಶನ (ಡಿಡಿ) ಮೂಲಸೌಕರ್ಯ ಅಭಿವೃದ್ಧಿಗಾಗಿ 2,539.61 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ವಲಯದ ಯೋಜನೆ “ಪ್ರಸಾರ ಮೂಲಸೌಕರ್ಯ ಮತ್ತು ಜಾಲ ಅಭಿವೃದ್ಧಿ” (ಬಿ ಐ ಎನ್‌ ಡಿ) ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಅನುಮೋದಿಸಿದೆ. ಸಚಿವಾಲಯದ “ಪ್ರಸಾರ ಮೂಲಸೌಕರ್ಯ ಮತ್ತು ಜಾಲ ಅಭಿವೃದ್ಧಿ”ಯೋಜನೆಯು ಪ್ರಸಾರ ಭಾರತಿಗೆ ಅದರ ಪ್ರಸಾರ ಮೂಲಸೌಕರ್ಯ, ವಿಷಯ (ಕಂಟೆಂಟ್)‌ ಅಭಿವೃದ್ಧಿ ಮತ್ತು ಸಂಸ್ಥೆಗೆ ಸಂಬಂಧಿಸಿದ ಸಿವಿಲ್‌ ಕಾಮಗಾರಿಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ಸಂಬಂಧಿಸಿದ ವೆಚ್ಚಗಳಿಗೆ ಹಣಕಾಸಿನ ನೆರವು ನೀಡಲಿದೆ.

ಪ್ರಸಾರ ಭಾರತಿ, ದೇಶದ ಸಾರ್ವಜನಿಕ ಪ್ರಸಾರ ಸಂಸ್ಥೆಯಾಗಿ, ದೂರದರ್ಶನ ಮತ್ತು ಆಕಾಶವಾಣಿಯ ಮೂಲಕ ದೇಶದ ದೂರದ ಪ್ರದೇಶಗಳಲ್ಲಿ ಜನರಿಗೆ ಮಾಹಿತಿ, ಶಿಕ್ಷಣ, ಮನರಂಜನೆ ನೀಡುವ ಪ್ರಮುಖ ಸಾಧನವಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕರಿಗೆ ಸಾರ್ವಜನಿಕ ಆರೋಗ್ಯ ಸಂದೇಶಗಳನ್ನು ತಲುಪಿಸುವಲ್ಲಿ ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಪ್ರಸಾರ ಭಾರತಿ ಪ್ರಮುಖ ಪಾತ್ರವನ್ನು ವಹಿಸಿತು.

ಬಿ ಐ ಎನ್‌ ಡಿ ಯೋಜನೆಯು ಎಡಪಂಥೀಯ ಉಗ್ರವಾದ, ಗಡಿ ಮತ್ತು ಕಾರ್ಯತಂತ್ರದ ಪ್ರದೇಶಗಳನ್ನು ಒಳಗೊಂಡಂತೆ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ವೀಕ್ಷಕರಿಗೆ ಉತ್ತಮ ಗುಣಮಟ್ಟದ ವಿಷಯವನ್ನು ಒದಗಿಸುವ ಉತ್ತಮ ಮೂಲಸೌಕರ್ಯದೊಂದಿಗೆ ತನ್ನ ಸೌಲಭ್ಯಗಳ ನವೀಕರಣವನ್ನು ಕೈಗೊಳ್ಳಲು ಸಾರ್ವಜನಿಕ ಪ್ರಸಾರ ಸಂಸ್ಥೆಗೆ ಅನುವು ಮಾಡಿಕೊಡುತ್ತದೆ. ಯೋಜನೆಯ ಮತ್ತೊಂದು ಪ್ರಮುಖ ಆದ್ಯತೆಯ ಕ್ಷೇತ್ರವೆಂದರೆ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಉತ್ತಮ ಗುಣಮಟ್ಟದ ವಿಷಯವನ್ನು ಅಭಿವೃದ್ಧಿಪಡಿಸುವುದು ಮತ್ತು ಹೆಚ್ಚಿನ ಚಾನಲ್‌ಗಳಿಗೆ ಅವಕಾಶ ಕಲ್ಪಿಸಲು ಡಿಟಿಹೆಚ್ ಪ್ಲಾಟ್‌ಫಾರ್ಮ್‌ನ ಸಾಮರ್ಥ್ಯವನ್ನು ನವೀಕರಿಸುವ ಮೂಲಕ ವೀಕ್ಷಕರಿಗೆ ವೈವಿಧ್ಯಮಯ ವಿಷಯದ ಲಭ್ಯತೆಯನ್ನು ಖಾತ್ರಿಪಡಿಸುವುದಾಗಿದೆ. ಒಬಿ ವ್ಯಾನ್‌ಗಳ ಖರೀದಿ ಮತ್ತು ದೂರದರ್ಶನ ಮತ್ತು ಆಕಾಶವಾಣಿ ಸ್ಟುಡಿಯೋಗಳನ್ನು ಎಚ್‌ಡಿ ಗುಣಮಟ್ಟಕ್ಕೆ ಸಿದ್ಧಗೊಳಿಸಲು ಡಿಜಿಟಲ್ ಮೇಲ್ದರ್ಜೆಗೇರಿಸುವ ಕೆಲಸವನ್ನು ಸಹ ಯೋಜನೆಯ ಭಾಗವಾಗಿ ಕೈಗೊಳ್ಳಲಾಗುತ್ತದೆ.

ಪ್ರಸ್ತುತ, ದೂರದರ್ಶನ 28 ಪ್ರಾದೇಶಿಕ ಚಾನೆಲ್‌ಗಳು ಸೇರಿದಂತೆ 36 ಟಿವಿ ಚಾನೆಲ್‌ಗಳನ್ನು ನಿರ್ವಹಿಸುತ್ತಿದೆ ಮತ್ತು ಆಕಾಶವಾಣಿಯು 500 ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳನ್ನು ನಿರ್ವಹಿಸುತ್ತಿದೆ. ಈ ಯೋಜನೆಯು ದೇಶದಲ್ಲಿ ಆಕಾಶವಾಣಿ ಎಫ್‌ ಎಂ ಟ್ರಾನ್ಸ್‌ಮಿಟರ್‌ಗಳ ವ್ಯಾಪ್ತಿಯನ್ನು ಭೌಗೋಳಿಕ ಪ್ರದೇಶದ ಪ್ರಕಾರ ಶೇ.66 ಕ್ಕೆ ಮತ್ತು ಜನಸಂಖ್ಯೆಯ ಪ್ರಕಾರ ಶೇ.80 ಕ್ಕೆ ಹೆಚ್ಚಿಸುತ್ತದೆ. ಇದು ಈಗ ಕ್ರಮವಾಗಿ ಶೇ.59 ಮತ್ತು ಶೇ.68 ಇದೆ. ಯೋಜನೆಯಡಿ ದೂರಪ್ರದೇಶದ, ಬುಡಕಟ್ಟು, ಎಲ್‌ಡಬ್ಲ್ಯೂಇ ಮತ್ತು ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ 8 ಲಕ್ಷಕ್ಕೂ ಹೆಚ್ಚು ಉಚಿತ ಡಿಡಿ ಡಿಶ್ ಎಸ್‌ಟಿಬಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.

ಸಾರ್ವಜನಿಕ ಪ್ರಸಾರದ ವ್ಯಾಪ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಪ್ರಸಾರದ ಮೂಲಸೌಕರ್ಯಗಳ ಆಧುನೀಕರಣ ಮತ್ತು ವರ್ಧನೆಗಾಗಿ ಯೋಜನೆಯು ಪ್ರಸಾರ ಉಪಕರಣಗಳ ಪೂರೈಕೆ ಮತ್ತು ಸ್ಥಾಪನೆಗೆ ಸಂಬಂಧಿಸಿದ ಉತ್ಪಾದನೆ ಮತ್ತು ಸೇವೆಗಳ ಮೂಲಕ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಆಕಾಶವಾಣಿ ಮತ್ತು ದೂರದರ್ಶನಕ್ಕಾಗಿ ವಿಷಯ (ಕಂಟೆಂಟ್)‌ ರಚನೆ ಮತ್ತು ವಿಷಯದ ಆವಿಷ್ಕಾರವು ಟಿವಿ/ರೇಡಿಯೊ ಕಾರ್ಯಕ್ರಮ ನಿರ್ಮಾಣ, ಪ್ರಸರಣ ಮತ್ತು ಸಂಬಂಧಿತ ಮಾಧ್ಯಮ ಸಂಬಂಧಿತ ಸೇವೆಗಳು ಸೇರಿದಂತೆ ವಿಷಯ ಉತ್ಪಾದನಾ ವಲಯದಲ್ಲಿ ವಿವಿಧ ಮಾಧ್ಯಮ ಕ್ಷೇತ್ರಗಳ ವಿವಿಧ ಅನುಭವ ಹೊಂದಿರುವ ವ್ಯಕ್ತಿಗಳಿಗೆ ಪರೋಕ್ಷ ಉದ್ಯೋಗ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಡಿಡಿ ಉಚಿತ ಡಿಶ್‌ನ ವ್ಯಾಪ್ತಿಯ ವಿಸ್ತರಣಾ ಯೋಜನೆಯು ಡಿಡಿ ಉಚಿತ ಡಿಶ್ ಡಿಟಿಎಚ್ ಬಾಕ್ಸ್‌ಗಳ ತಯಾರಿಕೆಯಲ್ಲಿಯೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಭಾರತ ಸರ್ಕಾರವು ದೂರದರ್ಶನ ಮತ್ತು ಆಕಾಶವಾಣಿ (ಪ್ರಸಾರ ಭಾರತಿ) ಮೂಲಸೌಕರ್ಯ ಮತ್ತು ಸೇವೆಗಳ ಅಭಿವೃದ್ಧಿ, ಆಧುನೀಕರಣ ಮತ್ತು ಬಲವರ್ಧನೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ, ಇದು ನಿರಂತರ ಪ್ರಕ್ರಿಯೆಯಾಗಿದೆ.

*****(Release ID: 1888573) Visitor Counter : 207