ಸಂಸ್ಕೃತಿ ಸಚಿವಾಲಯ

ಎನ್.ಎಂ.ಎಂ.ಎಲ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪ್ರಧಾನಮಂತ್ರಿ


ಭಾರತದ ಗತಕಾಲದ ಬಗ್ಗೆ ಜನರಲ್ಲಿ ಉತ್ತಮ ಜಾಗೃತಿ ಮೂಡಿಸಲು ಆಧುನಿಕ ಭಾರತೀಯ ಇತಿಹಾಸದ ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ

ಯುವಜನರ ನಡುವೆ ಪ್ರಧಾನಮಂತ್ರಿ ಸಂಗ್ರಾಹಾಲಯ ಜನಪ್ರಿಯಗೊಳಿಸಲು ಅದರ  ವಸ್ತುವಿಷಯದ ಬಗ್ಗೆ ಸ್ಪರ್ಧೆಗಳನ್ನು ದೇಶಾದ್ಯಂತದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸುವ ಅಗತ್ಯದ ಕುರಿತು ಮಾತನಾಡಿದ ಪ್ರಧಾನಮಂತ್ರಿ

ಸ್ವಾಮಿ ದಯಾನಂದ ಸರಸ್ವತಿ ಅವರ ಮುಂಬರುವ 200 ನೇ ಜನ್ಮ ಜಯಂತಿ ಪ್ರಯುಕ್ತ, ಅವರ ಕೊಡುಗೆಗಳ ಬಗ್ಗೆ ಸಂಶೋಧನೆ ನಡೆಸುವಂತೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಕರೆ ನೀಡಿದ ಪ್ರಧಾನಮಂತ್ರಿ

Posted On: 02 JAN 2023 6:40PM by PIB Bengaluru

ಎನ್.ಎಂ.ಎಂ.ಎಂ.ಎಲ್ ಸೊಸೈಟಿಯ ಅಧ್ಯಕ್ಷರಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 7ನೇ ಲೋಕ ಕಲ್ಯಾಣ ಮಾರ್ಗ್ ನಲ್ಲಿ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, ಭಾರತದ ಗತಕಾಲದ ಬಗ್ಗೆ ಜನರಲ್ಲಿ ಉತ್ತಮ ಜಾಗೃತಿ ಮೂಡಿಸಲು, ವ್ಯಕ್ತಿಗಳು, ಸಂಸ್ಥೆಗಳು ಮತ್ತು ವಿಷಯಗಳಲ್ಲೂ ಆಧುನಿಕ ಭಾರತದ ಇತಿಹಾಸದ ಮೇಲಿನ ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಪ್ರಸಕ್ತ ಮತ್ತು ಭವಿಷ್ಯದ ಪೀಳಿಗೆಯ ಅನುಕೂಲಕ್ಕಾಗಿ ದೇಶದ ಸಂಸ್ಥೆಗಳು ತಮ್ಮ ಉತ್ತಮ ಪರಿಶೋಧಿತ ಮತ್ತು ಸಂಶೋಧನೆ ದಾಖಲಿಸಿ ಸ್ಮರಣೆಯಲ್ಲಿ ಉಳಿಯುವಂತೆ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು.

ಪ್ರಧಾನಮಂತ್ರಿ ಸಂಗ್ರಾಹಾಲಯದ ವಿನ್ಯಾಸ ಮತ್ತು ವಸ್ತುವಿಷಯದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಈ ವಸ್ತುಸಂಗ್ರಹಾಲಯವು ನಿಜವಾಗಿಯೂ ವಸ್ತುನಿಷ್ಠ ಮತ್ತು ರಾಷ್ಟ್ರ-ಕೇಂದ್ರಿತವಾಗಿದೆಯೋ ಹೊರತು, ವ್ಯಕ್ತಿ ಕೇಂದ್ರಿತವಲ್ಲ ಎಂಬ ಪ್ರಮುಖ ಅಂಶವನ್ನು ಒತ್ತಿ ಹೇಳಿ, ಇದು ಅನಗತ್ಯ ಪ್ರಭಾವದಿಂದಲಾಗಲೀ ಅಥವಾ ಯಾವುದೇ ಅಗತ್ಯ ಸಂಗತಿಗಳ ಅನಗತ್ಯ ಅನುಪಸ್ಥಿತಿಯಿಂದ ಬಳಲುತ್ತಿಲ್ಲ ಎಂದು ಒತ್ತಿ ಹೇಳಿದರು. ಭಾರತದ ಎಲ್ಲಾ ಪ್ರಧಾನಮಂತ್ರಿಗಳು ಮಾಡಿದ ಸಾಧನೆಗಳು ಮತ್ತು ಕೊಡುಗೆಗಳನ್ನು ಎತ್ತಿ ತೋರಿಸುವ ಸಂಗ್ರಾಹಾಲಯದ ಸಂದೇಶವನ್ನು  ಜನರ ಬಳಿಗೆ ತೆಗೆದುಕೊಂಡು ಹೋಗುವ ಸಲುವಾಗಿ, ದೇಶಾದ್ಯಂತದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅದರ ವಸ್ತುವಿಷಯದ ಬಗ್ಗೆ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಯುವಜನರಲ್ಲಿ ಸಂಗ್ರಾಹಾಲಯವನ್ನು ಜನಪ್ರಿಯಗೊಳಿಸುವ ಅಗತ್ಯದ ಬಗ್ಗೆ ಶ್ರೀ ಮೋದಿ ಅವರು ಮಾತನಾಡಿದರು.

ಭಾರತ ಮತ್ತು ಪ್ರಪಂಚದಿಂದ ದೆಹಲಿಗೆ ಭೇಟಿ ನೀಡುವವರಿಗೆ ಮುಂದಿನ ದಿನಗಳಲ್ಲಿ ಸಂಗ್ರಾಹಾಲಯವು ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.  1875ರಲ್ಲಿ ಆರ್ಯ ಸಮಾಜ ಸ್ಥಾಪಿಸಿದ ಮತ್ತು ಆಧುನಿಕ ಭಾರತದ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಕ್ತಿಗಳಲ್ಲಿ ಒಬ್ಬರಾದ ಸ್ವಾಮಿ ದಯಾನಂದ ಸರಸ್ವತಿ ಅವರ 200 ನೇ ಜನ್ಮ ಜಯಂತಿ 2024 ರಲ್ಲಿ ಬರಲಿದೆ ಎಂದು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ ಅವರು, ದೇಶದ ಈ ಮಹಾನ್ ದಾರ್ಶನಿಕ ಮತ್ತು ಸಮಾಜ ಸುಧಾರಕನ ಕೊಡುಗೆಗಳ ಬಗ್ಗೆ ಮತ್ತು 2025ರಲ್ಲಿ 150 ವರ್ಷ ಪೂರೈಸುತ್ತಿರುವ ಆರ್ಯ ಸಮಾಜದ ಬಗ್ಗೆ  ಉತ್ತಮ ಸಂಶೋಧನಾ ಜ್ಞಾನವನ್ನು ರೂಪಿಸುವಂತೆ ದೇಶಾದ್ಯಂತದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಕರೆ ನೀಡಿದರು.

ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾದ ಶ್ರೀ ನೃಪೇಂದ್ರ ಮಿಶ್ರಾ ಅವರು ಸೊಸೈಟಿಯ ಪ್ರಸ್ತುತ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ಭವಿಷ್ಯದ ದೃಷ್ಟಿಕೋನವನ್ನು ವಿವರಿಸಿದರು. ವಿಶೇಷವಾಗಿ, ಆಧುನಿಕ ಮತ್ತು ಸಮಕಾಲೀನ ಭಾರತೀಯ ಇತಿಹಾಸದ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಗ್ರಂಥಾಲಯ ಮತ್ತು ಕಳೆದ ವರ್ಷ ಏಪ್ರಿಲ್ ನಲ್ಲಿ ತೆರೆಯಲಾದ ಪ್ರಧಾನಮಂತ್ರಿ ಸಂಗ್ರಹಾಲಯದ ಯೋಜನೆಗಳನ್ನು ಅವರು ಒತ್ತಿ ಹೇಳಿದರು.

ಎನ್.ಎಂ.ಎಂ.ಎಲ್ ಸೊಸೈಟಿ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು, ಇದರಲ್ಲಿ ಸಂಸ್ಥೆಯ ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕಪತ್ರಗಳನ್ನು ಅಂಗೀಕರಿಸಲಾಯಿತು.

*****



(Release ID: 1888139) Visitor Counter : 150