ರಾಷ್ಟ್ರಪತಿಗಳ ಕಾರ್ಯಾಲಯ

ಹೊಸ ವರ್ಷದ ಪ್ರಯುಕ್ತ ಭಾರತದ ರಾಷ್ಟ್ರಪತಿಗಳ ಶುಭಾಶಯ

Posted On: 31 DEC 2022 6:27PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2023 ರ ಹೊಸ ವರ್ಷದ ಪ್ರಯುಕ್ತ ದೇಶದ ಎಲ್ಲಾ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ.

"ಹೊಸ ವರ್ಷದ ಸಂದರ್ಭದಲ್ಲಿ, ನಾನು ಎಲ್ಲಾ ಸಹ ನಾಗರಿಕರಿಗೆ ಮತ್ತು ವಿದೇಶದಲ್ಲಿರುವ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ  ಶುಭಾಶಯಗಳನ್ನು ಕೋರುತ್ತೇನೆ." 

"ಹೊಸ ಚೈತನ್ಯದೊಂದಿಗೆ ತುಂಬಿದ ಹೊಸ ವರ್ಷದ ಉದಯವು ನಮ್ಮ ಜೀವನದಲ್ಲಿ ಹೊಸ ಸಂತೋಷ, ಗುರಿಗಳು, ಸ್ಫೂರ್ತಿ ಮತ್ತು ಹೆಚ್ಚಿನ ಸಾಧನೆಗಳನ್ನು ತರಲಿ. ಈ ಸಂದರ್ಭದಲ್ಲಿ, ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮನ್ನು ನಾವು ಪುನಃ ಸಮರ್ಪಣೆ‌ ಮಾಡಿಕೊಳ್ಳುವ ಸಂಕಲ್ಪ ಮಾಡೋಣ".

"2023ರಲ್ಲಿ ನಮ್ಮ ಭವ್ಯ ರಾಷ್ಟ್ರ ಹಾಗೂ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ‌ ನಾನು ಹಾರೈಸುತ್ತೇನೆ," ಎಂದು ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಷ್ಟ್ರಪತಿಯವರ ಸಂದೇಶವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

*****



(Release ID: 1887775) Visitor Counter : 201